ಬೆಂಗಳೂರು, ಮೇ 20- ನಾಳೆಯಿಂದ ದ್ವಿತೀಯ ಪಿಯುಸಿಯ ಉತ್ತರಪತ್ರಿಕೆಗಳ ಮೌಲ್ಯಮಾಪನವು ಆಯ್ದ ಕೇಂದ್ರಗಳಲ್ಲಿ ಆರಂಭವಾಗಲಿದೆ. ಮೌಲ್ಯಮಾಪನಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿದ್ದು, ಇಂಗ್ಲೀಷ್ ಹೊರತುಪಡಿಸಿ ಇತರ ಪತ್ರಿಕೆಗಳ ಮೌಲ್ಯಮಾಪನವನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಮುಂದಾಗಿದೆ.
ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೆಯ ದಿನಾಂಕ ಜೂನ್ 18ಕ್ಕೆ ನಿಗದಿಪಡಿಸಲಾಗಿದ್ದು, ಪರೀಕ್ಷೆಗೂ ಮುನ್ನವೇ ಮೌಲ್ಯಮಾಪನ ಪೂರ್ಣಗೊಳಿಸಲು ಇಲಾಖೆ ಉದ್ದೇಶಿಸಿದೆ ಎಂದು ತಿಳಿದುಬಂದಿದೆ.
ಆದರೆ, ಶಿಕ್ಷಣ ಇಲಾಖೆ ಅಧಿಕೃತವಾಗಿ ಮೌಲ್ಯಮಾಪನಕ್ಕೆ ಯಾವುದೇ ರೀತಿಯ ಗಡುವು ನೀಡಿಲ್ಲ. ಮೌಲ್ಯಮಾಪನ ವಿಚಾರಕ್ಕೆ ಸಂಬಂಧಿಸಿದಂತೆ ಡಿಪಿಯುಇ, ಮËಲ್ಯಮಾಪನ ಕೇಂದ್ರದ ಉಸ್ತುವಾರಿ ಅಧಿಕಾರಿಗಳೊಂದಿಗೆ ಮೇಲ್ವಿಚಾರಕರನ್ನು ನೇಮಕ ಮಾಡಿದ್ದು, ಈಗಾಗಲೇ ಕಳೆದ ಶನಿವಾರವೇ ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿ, ಮಂಗಳೂರು, ಮೈಸೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಮೌಲ್ಯಮಾಪಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಉತ್ತರ ಪತ್ರಿಕೆಗಳ ಸಂಖ್ಯೆಯ ಆಧಾರದ ಮೇಲೆ ಮೌಲ್ಯಮಾಪನಕ್ಕೆ ಗಡುವು ನೀಡಲು ಇಲಾಖೆ ನಿರ್ಧರಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಈ ನಡುವೆ ಮËಲ್ಯಮಾಪನ ಮಾಡುವ ಶಿಕ್ಷಕರಿಗೂ ಕೆಲ ನಿಯಮಗಳನ್ನು ವಿಧಿಸಲಾಗಿದೆ.
ಒಂದು ದಿನಕ್ಕೆ ಶಿಕ್ಷಕರು 124 ಉತ್ತರಪತ್ರಿಕೆಗಳಿಗಿಂತಲೂ ಹೆಚ್ಚು ಮೌಲ್ಯಮಾಪನ ಮಾಡುವಂತಿಲ್ಲ. ಇಲಾಖೆ ಈಗಾಗಲೇ ಪರೀಕ್ಷಾ ಕೇಂದ್ರಗಳನ್ನೂ ಕೂಡ ವಿಕೇಂದ್ರೀಕರಿಸಿದೆ. ಈ ಹಿಂದೆ ಶಿಕ್ಷಕರು ತಮ್ಮ ವಿಷಯಗಳ ಪತ್ರಿಕೆಗಳನ್ನು ಸರಿಪಡಿಸಲು ನಿರ್ದಿಷ್ಟ ಜಿಲ್ಲೆಗಳಿಗೆ ತೆರಳಬೇಕಿತ್ತು.
ಉದಾಹರಣೆಗೆ ಅರ್ಥಶಾಸ್ತ್ರ ವಿಷಯದ ಮೌಲ್ಯಮಾಪನ ಮಾಡುವ ಕೇಂದ್ರ ಮೈಸೂರು ಆಗಿದ್ದರೆ, ಮೌಲ್ಯಮಾಪನದ ಸಮಯದಲ್ಲಿ ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಿಗೆ ಉಪನ್ಯಾಸಕರು ಪ್ರಯಾಣಿಸಬೇಕಿತ್ತು. ಇದೀಗ ಶಿಕ್ಷಕರಿಗೆ ತಮ್ಮ ಜಿಲ್ಲೆಗಳಲ್ಲಿಯೇ ಮೌಲ್ಯಮಾಪನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಮËಲ್ಯಮಾಪನ ಪೂರ್ಣಗೊಂಡ ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿ ಅಂಕಗಳನ್ನು ಕಂಪ್ಯೂಟರ್ ಗಳಲ್ಲಿ ದಾಖಲು ಮಾಡುತ್ತಾರೆಂದು ತಿಳಿದುಬಂದಿದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಇನ್ನು ಮೌಲ್ಯಮಾಪನ ಮಾಡುವ ಉಪನ್ಯಾಸಕರಿಗೂ ಇಲಾಖೆ ಕೆಲ ಮಾರ್ಗದರ್ಶನಗಳನ್ನು ನೀಡಲಗಿದೆ.
ಮೌಲ್ಯಮಾಪನಕ್ಕೆ ಬರುವ ಉಪನ್ಯಾಸಕರು ತಾವೇ ಮಾಸ್ಕ್, ಸ್ಯಾನಿಟೈಸರ್, ನೀರಿನ ಬಾಟಲಿಗಳನ್ನು ತರಬೇಕು. ಮೌಲ್ಯಮಾಪನದ ವೇಳೆ ಆಗಾಗ ಕೈಗಳಿಗೆ ಸ್ಯಾನಿಟೈಸರ್ ಗಳನ್ನು ಹಾಕಿಕೊಳ್ಳಬೇಕು.
ಒಂದೇ ವೇಳೆ ತಾವಿರುವ ಪ್ರದೇಶಗಳು ಕಂಟೋನ್ಮೆಂಟ್ ಝೋನ್ ಗಳಾಗಿದ್ದರೆ, ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಹೋಮ್ ಕ್ವಾರಂಟೈನ್ ಹಾಗೂ ಕುಟುಂಬ ಸದಸ್ಯರು ಕ್ವಾರಂಟೈನ್‍ನಲ್ಲಿದ್ದರೆ, ಅವರಿಗೆ ಮೌಲ್ಯಮಾಪನದಿಂದ ವಿನಾಯಿತಿ ನೀಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.