ಮೆಜೆಸ್ಟಿಕ್ ಹಾಗೂ ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ 4100 ಜನ ಪ್ರಯಾಣ
ಬೇರೆ ಬೇರೆ ಜಿಲ್ಲೆ ಗಳಿಗೆ ಪ್ರಯಾಣ ಮಾಡಿರೋ ಪ್ರಯಾಣಿಕರು
ಮೆಜೆಸ್ಟಿಕ್ ನಿಂದ 2900 ಹಾಗೂ ಸ್ಯಾಟ್ ಲೈಟ್ ನಿಂದ 1200 ಜನರ ಪ್ರಯಾಣ
ಮಧ್ಯಾಹ್ನದ ವೇಳೆಗೆ ಪ್ರಯಾಣಿಕರೇ ಇಲ್ಲದೆ ಸುಮ್ಮನೆ ನಿಲ್ಲಿಸಿರೋ ಬಸ್ ಗಳು
ಶೇ80% ರಷ್ಟು ಬಸ್ ಗಳನ್ನು ನಿಲ್ಲಿಸಿರೋ ಕೆಎಸ್ ಆರ್ ಟಿಸಿ
ಇನ್ನು ಕೇವಲ ಹತ್ತಿರದ ಜಿಲ್ಲೆಗಳಿಗೆ ಮಾತ್ರ ಬಸ್ ಗಳ ಸೌಲಭ್ಯ
ಕೊಡಗಿನ ಪ್ರತೀ ಗ್ರಾಮೀಣ ಭಾಗದ ಸಂಪರ್ಕ ಸೇತುವೆಯಾಗಿರುವ ಖಾಸಗೀ ಬಸ್ಸುಗಳ ಸಂಚಾರ ಸದ್ಯಕ್ಕೆ ಆರಂಭವಾಗುವಂತೆ ಕಾಣಿಸುತ್ತಿಲ್ಲ. ಕೊಡಗಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಂದ್ ಮಾಡಿ 60 ದಿನಗಳೇ ಕಳೆದಿವೆ. ಇದೀಗ ಸರ್ಕಾರವೇ ಸಾರಿಗೆ ಸಂಚಾರಕ್ಕೆ ಅವಕಾಶ ನೀಡಿದ್ದರೂ ಕೊಡಗಿನಲ್ಲಿ ಖಾಸಗೀ ಬಸ್ಸುಗಳ ಸಂಚಾರ ಮಾತ್ರ ಆರಂಭವಾಗಿಲ್ಲ. ಒಂದು ಬಸ್ಸಿನಲ್ಲಿ ಕೇವಲ 30 ಜನರ ಓಡಾಟಕ್ಕೆ ಮಾತ್ರವೇ ಅವಕಾಶ ನೀಡಿರುವುದರಿಂದ ಇದರಿಂದ ನಮ್ಮಗೆ ನಷ್ಟವಾಗುವುದೆಂದು ಖಾಸಗೀ ಬಸ್ಸ್ ಮಾಲಿಕರ ಸಂಘ ಜೂನ್ 1 ರವೆಗೆ ಬಸ್ಸುಗಳನ್ನು ಓಡಿಸುವುದಿಲ್ಲೆ ಂದು ನಿರ್ಧರಿಸಿದೆ. ಕನಿಷ್ಠ ಆರು ತಿಂಗಳವರೆಗೆ ಟ್ಯಾಕ್ಸ್ ವಿನಾಯಿತಿ ನೀಡಬೇಕು ಎಂದು ಖಾಸಗೀ ಬಸ್ ಮಾಲೀಕರ ಸಂಘ ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ. ಇದರಿಂದ ಖಾಸಗೀ ಬಸ್ಸುಗಳನ್ನೇ ಅವಲಂಬಿಸಿ ಬದುಕು ನಡೆಸುತ್ತಿದ್ದ ನೂರಾರು ಕುಟುಂಬಗಳು ಅತಂತ್ರವಾಗಿವೆ. ಮತ್ತೊಂದೆಡೆ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸಂಚಾರವಿಲ್ಲದೆ ಜನರು ಪರದಾಡುವ ಸ್ಥಿತಿ ಎದುರಾಗಿದೆ.
ಮೈಸೂರಿನಿಂದ ಬೆಂಗಳೂರಿಗೆ ಹೊರಡುವ ಬಸ್ 4 ಗಂಟೆಗೆ ಬಂದ್.
ಸಂಜೆ 7 ಗಂಟೆ ಒಳಗಾಗಿ ಬೆಂಗಳೂರು ಸೇರಿಕೊಳ್ಳುವ ಉದ್ದೇಶದಿಂದ 4 ಗಂಟೆಗೆ ಕೊನೆ ಬಸ್ ಸೇವೆ.
ಮೈಸೂರು KSRTC ಗ್ರಾಮಾಂತರ ಡಿಸಿ ಅಶೋಕ್‌ಕುಮಾರ್ ಮಾಹಿತಿ.
ಮೈಸೂರಿನಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಗೆ ಸಮಯದ ಆಧಾರದ ಮೇಲೆ ಬಸ್ ಸೇವೆ.
ಎಲ್ಲ ಜಿಲ್ಲೆಗಳಿಗು ಸಂಜೆ 7 ಗಂಟೆ ಒಳಗಾಗಿ ಬಸ್ ತಲುಪಬೇಕು.
ಆಯಾ ಜಿಲ್ಲೆಯ ಪ್ರಯಾಣ ಸಮಯದ ಅಂದಾಜಿಸಿ ಬಸ್ ಸೇವೆ ಸ್ಥಗಿತ.
ಮತ್ತೆ ನಾಳೆ ಬೆಳಗ್ಗೆ 7 ಗಂಟೆಯಿಂದ ಬಸ್ ಸೇವೆ ಆರಂಭ.
ಇಂದು 100 ಬಸ್‌ಗಳಲ್ಲು ಸಂಚಾರ ಆರಂಭ.
ಅಗತ್ಯಕ್ಕೆ ತಕ್ಕಂತೆ ಬಸ್ ಸಂಖ್ಯೆ ಹೆಚ್ಚಳ ಇಳಿಕೆಗೆ ನಿರ್ಧಾರ.
ಕೆ ಎಸ್ ಆರ್ ಟಿಸಿಯಿಂದ ಬೇರೆ ಜಿಲ್ಲೆಗೆ ಹೋಗುವ ಲಾಸ್ಟ್ ಬಸ್ ಗಳು
ಸಂಜೆ ಏಳು ಗಂಟೆ ಒಳಗೆ ತಲುಪಬೇಕಾದ ಹಿನ್ನಲೆ
ಕೆ ಎಸ್ ಆರ್ ಟಿಸಿ ಇಂದ ಕೊನೆ ಬಸ್ ಗಳ ಪಟ್ಟಿ
ದಾವಣಗೆರೆ ಮಧ್ಯಾಹ್ನ 1-00 ಗಂಟೆಗೆ ಲಾಸ್ಟ್ ಬಸ್
ಹಾಸನ ಸಂಜೆ -3-30 ಕ್ಕೆ ಲಾಸ್ಟ್ ಬಸ್
ಮೈಸೂರು ಸಂಜೆ 4-00 ಗಂಟೆಗೆ ಲಾಸ್ಟ್ ಬಸ್
ಮಂಗಳೂರಿಗೆ ಬೆಳಗ್ಗೆ 11-30 ಲಾಸ್ಟ್ ಬಸ್
ಪ್ರಯಾಣಿಕರು ಕೆಸ್ಆರ್ ಟಿಸಿ ನಿಗದಿ ಪಡಿಸಿದ ಸಮಯದೊಳಗೆ ತೆರಳಲು ಮನವಿ
ತಾಯಿಯ ಶವದ ಜೊತೆ ಐದು ದಿನ ಮನೆಯಲ್ಲೇ ಕಳೆದ ಮಗಳು.
ಶಿವಮೊಗ್ಗದ ಬಸವನಗುಡಿ ಬಡಾವಣೆಯಲ್ಲಿ ಘಟನೆ.
ರಾಜೇಶ್ವರಿ ಕಳೆದ ಐದು ದಿನಗಳ ಹಿಂದೆ ಮೃತಪಟ್ಟಿದ್ದ ಮಹಿಳೆ.
ರಾಜೇಶ್ವರಿ 64 ವರ್ಷ , ನಿವೃತ್ತ ಶಾಲಾ ಶಿಕ್ಷಕಿ.
ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಾಜೇಶ್ವರಿ.
ಕಳೆದ ನಾಲ್ಕೈದು ದಿನಗಳ ಹಿಂದೆ, ಸಾವನಪ್ಪಿರುವ ರಾಜೇಶ್ವರಿ.
ಔಷಧದ ಡೋಸ್, ಹೆಚ್ಚಾಗಿ ಸಾವನಪ್ಪಿರುವ ಶಂಕೆ.
ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿರುವ ಮೃತ ಮಹಿಳೆಯ ಮಗಳು ಶಾಂಭವಿ.
ಶವ ಕೊಳೆತ ವಾಸನೆ ಬರುತ್ತಿದ್ದರಿಂದ ಅಕ್ಕಪಕ್ಕದ ನಿವಾಸಿಗಳಿಂದ ಜಯನಗರ ಠಾಣೆ ಪೊಲೀಸರಿಗೆ ಮಾಹಿತಿ.
ಶವವನ್ನು ಶವಾಗಾರಕ್ಕೆ ಸಾಗಿಸಿದ ಪೊಲೀಸರು.