ಗೋಕಾಕ :ಸಚಿವರಾದ ರಮೇಶ ಜಾರಕಿಹೊಳಿ ಅವರು ವಯಕ್ತಿಕವಾಗಿ ನೀಡಿದ ಆಹಾರದ ಕಿಟಗಳನ್ನು ಇನ್ನೇರೆಡು ದಿನಗಳಲ್ಲಿ ಗೋಕಾಕ ಮತಕ್ಷೇತ್ರದ ಪ್ರತಿ ಮನೆಗಳಿಗೆ ತಲುಪಿಸಲಾಗುವದೆಂದು ನಗರಸಭೆ ಸದಸ್ಯ ಎಸ್.ಎ ಕೊತವಾಲ ಹೇಳಿದರು
ಬುಧವಾರದಂದು ನಗರದ ಸಚಿವರ ಕಾರ್ಯಾಲಯದಲ್ಲಿ ಕರೆದ ಆಹಾರ ಕಿಟ ವಿತರಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ಮಹಾಮಾರಿ ಕೊರೋನಾ ವೈರಸ್ ನಿಂದ ಸಂಕಷ್ಟಗೋಳಲಾದ ಕ್ಷೇತ್ರದ ಜನರಿಗೆ ಸಚಿವರು ವಯಕ್ತಿಕವಾಗಿ ಆಹಾರ ಕಿಟಗಳನ್ನು ನೀಡುತ್ತಿದ್ದಾರೆ ಜನಪ್ರತಿನಿಧಿಗಳು , ಕಾರ್ಯಕರ್ತರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಯವರು ಈ ವಿತರಣಾ ಕಾರ್ಯದಲ್ಲಿ ಪಾಲ್ಗೊಂಡು ಪ್ರತಿ ಮನೆಮನೆಗಳಲ್ಲಿ ಕಿಟ್ಟುಗಳನ್ನು ವಿತರಿಸುವಂತೆ ಕೋರಿದರು
ಈ ಸಂದರ್ಭದಲ್ಲಿ ಎಸ್.ವ್ಹಿ ದೆಮಶೆಟ್ಟ , ಪ್ರಮೋದ ಜೋಶಿ , ಎಲ್.ಟಿ ತಪಸಿ , ಭೀಮಗೌಡ ಪೊಲೀಸ ಗೌಡರ , ಮಡೆಪ್ಪ ತೋಳಿನವರ ಸೇರಿದಂತೆ ಅಂಗನವಾಡಿ , ಆಶಾ ಕಾರ್ಯಕರ್ತರೆಯರು , ಬಿ ಎಲ್ ಒ ಹಾಗೂ ನಗರಸಭೆ ಸದಸ್ಯರು ಸೇರಿದಂತೆ ಅನೇಕರು ಇದ್ದರು