Home / ಜಿಲ್ಲೆ (page 1000)

ಜಿಲ್ಲೆ

ಕೊರೋನಾ ವಾರಿಯರ್ಸ್ ಸನ್ಮಾನ ಸಮಾರಂಭಗಳು ನಡೆಯುತ್ತಿವೆ. ಈ ಸಮಾರಂಭಕ್ಕೆ ನೇಕಾರರ ಬಳಿ ಸೀರೆಗಳನ್ನು:

ಬೆಳಗಾವಿ :ಕೊರೋನಾ ವೈರಸ್ ಮಾಹಾಮಾರಿಯಿಂದ ಇಡೀ ದೇಶವನ್ನು ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಲಾಕ್ ಡೌನ್ ನಿಂದ ಬಹುತೇಕ ಎಲ್ಲಾ ಉದ್ಯಮಗಳ ಮೇಲೆ ಎಫೆಕ್ಟ್ ತಟ್ಟಿದೆ. ಅತಿ ಹೆಚ್ಚು ಬೆಳಗಾವಿಯ ನೇಕಾರರಿಗೆ ಇದರಿಂದ ತೊಂದರೆಯಾಗಿದ್ದು, ಇನ್ನಿಲ್ಲದ ಸಂಕಷ್ಟ ಎದುರಾಗಿದೆ. ಕಷ್ಟದಲ್ಲಿ ಇರುವ ನೇಕಾರರಿಗೆ ನೆರವಾಗಲು ಎಲ್ಲಾ ಶಾಸಕರಿಗೆ ಬೆಳಗಾವಿ ದಕ್ಷಿಣ ಕ್ಷೇತ್ರ ಶಾಸಕ ಅಭಯ ಪಾಟೀಲ್ ಪತ್ರ ಬರೆದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 50 ಸಾವಿರಕ್ಕೂ ಹೆಚ್ಚು ಕುಟುಂಬಗಳು ನೇಕಾರಿಕೆ ನಂಬಿಕೊಂಡು …

Read More »

ಬದುಕು ಬರುಡಾದ ನೇಕಾರನ ಕುಟುಂಬ – ಮನೆಯ ಆಧಾರಸ್ಥಂಭ ಅನಾರೋಗ್ಯಕ್ಕೆ ತುತ್ತಾದ ಮೇಲೆ ಜಿಡ್ಡುಗಟ್ಟಿದ ಕೈಮಗ್ಗ

ಗದಗ(ಜೂ.08): ಗದಗನ ಬೆಟಗೇರಿನಲ್ಲಿ ಸುಮಾರು 51 ವರ್ಷದ ದುರವಾಸಪ್ಪ ಶ್ಯಾಗಾವಿ ಎಂಬ ನೇಕಾರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮನೆಗೆ ಆಧಾರವಾಗಿದ್ದ ವ್ಯಕ್ತಿ ಹಾಸಿಗೆ ಹಿಡಿದ ಮೇಲೆ ಜೀವನವೆಂಬ ಚಕ್ಕಡಿ ಚಕ್ರವೊಂದು ಮುರಿದು ಬಿದ್ದಂತಾಗಿದೆ. ಲಾಕ್‌ಡೌನ್ ವೇಳೆ ಈ ವ್ಯಕ್ತಿ ತನ್ನ ಎರಡು ಕಿಡ್ನಿ ಹಾಗೂ ಹೃದಯ ರೋಗ ಕಾಯಿಲೆಯಿಂದ ಬಳಲುತ್ತಾ ನೆಲಕಚ್ಚಿದ್ದಾನೆ. ಈ ಕುಟುಂಬದಲ್ಲಿ ಒಟ್ಟು 7 ಜನ ಸದಸ್ಯರಿದ್ದು, ಮನೆಗೆ ಇವರೇ ಆಧಾರ. ದುಡಿಯುವ ಕೈ ಕಟ್ ಆದಮೇಲೆ ಯಾರಾದ್ರೂ …

Read More »

ಕೋವಿಡ್​​-19 ವಿರುದ್ದ ಹೋರಾಟ: ಸಿಎಂ ಪರಿಹಾರ ನಿಧಿಗೆ ಹರಿದು ಬಂದ ಒಟ್ಟು ಹಣವೆಷ್ಟು ಗೊತ್ತೇ?

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ವೈರಸ್​ ಆರ್ಭಟ ಮುಂದುವರಿದಿದೆ. ಇದರ ವಿರುದ್ಧ ಹೋರಾಡಲು ಇಡೀ ರಾಜ್ಯ ಹೆಣಗುತ್ತಿದೆ. ವೈದ್ಯರು, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಹಲವರು ಹಗಲು ರಾತ್ರಿಯೆನ್ನದೇ ಕೊರೋನಾ ವೈರಸ್​​ ತಡೆಗೆ ಹೋರಾಡುತ್ತಿದ್ದಾರೆ. ಹೀಗೆಯೇ ಕೋವಿಡ್​​​-19 ನಿಯಂತ್ರಣಕ್ಕೆ ತರಲು ಉದ್ಯಮಿಗಳು, ಸಿನಿಮಾ ನಟರು ತಮ್ಮ ಕೈಲಾದ ಆರ್ಥಿಕ ನೆರವು ನೀಡುತ್ತಿದ್ದಾರೆ. ಹೀಗೆ ಇದುವರೆಗೂ ರಾಜ್ಯದ ಸಿಎಂ ಪರಿಹಾರ ನಿಧಿಗೆ 267 ಕೋಟಿ ರೂ. ಹರಿದು ಬಂದಿದೆ. ಸಿಎಂ ಪರಿಹಾರ …

Read More »

ಮನುಷ್ಯನ ಹುಟ್ಟು ಆಕಸ್ಮಿಕವಾದದ್ದು, ಸಾವು ಅನಿವಾರ್ಯ.: ಡಿಕೆ ಶಿವಕುಮಾರ್ ಕಂಬನಿ

ಬೆಂಗಳೂರು: ಮನುಷ್ಯನ ಹುಟ್ಟು ಆಕಸ್ಮಿಕವಾದದ್ದು, ಸಾವು ಅನಿವಾರ್ಯ. ಈ ಮರಣ ಎಂಬುದು ಯಾರ ಕೈಯಲ್ಲೂ ಇಲ್ಲ. ಯಮ ನಮಗೆ ಯಾವ ಕಾರಣಕ್ಕೂ ಕರುಣೆ ತೋರಿಸಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದು ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅಕಾಲಿಕ ಮರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಂಬನಿ ಮಿಡಿದಿದ್ದಾರೆ. ಭಾನುವಾರ ರಾತ್ರಿಯೇ ಚಿರು ಅಂತಿಮ ದರ್ಶನ ಪಡೆದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರೋಗ್ಯವಾಗಿರುವಂತಹ ಒಬ್ಬ ಯುವಕ ಇಂದು ನಮ್ಮೊಂದಿಗಿಲ್ಲ …

Read More »

‘ಅಣ್ಣ ಸದಾ ನನ್ನ ಜೊತೆಗಿರಬೇಕು, `ನನ್ನ ಫಾರ್ಮ್ ಹೌಸ್‍ನಲ್ಲೇ ಅಣ್ಣನ ಅಂತ್ಯಕ್ರಿಯೆಯಾಗ್ಲಿ’”ದೃವ ಸರ್ಜಾ

ಬೆಂಗಳೂರು: ಹೃದಯಾಘಾತದಿಂದ ಮೃತಪಟ್ಟ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 1 ಗಂಟೆಗೆ ಕನಕಪುರ ರಸ್ತೆ ಬಳಿಯಿರೋ ಫಾರ್ಮ್ ಹೌಸ್‍ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ‘ಅಣ್ಣ ಸದಾ ನನ್ನ ಜೊತೆಗಿರಬೇಕು, `ನನ್ನ ಫಾರ್ಮ್ ಹೌಸ್‍ನಲ್ಲೇ ಅಣ್ಣನ ಅಂತ್ಯಕ್ರಿಯೆಯಾಗ್ಲಿ’ ಎಂದು ಸಹೋದರ ದೃವ ಸರ್ಜಾ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕನಕಪುರ ರಸ್ತೆ ಬಳಿಯಿ ನೆಲಗೂಳಿ ಗ್ರಾಮದಲ್ಲಿ ತಮ್ಮ ಧ್ರುವ ಸರ್ಜಾರ ಫಾರ್ಮ್ ಹೌಸ್‍ನಲ್ಲಿ ಅಂತ್ಯಕ್ರಿಯೆ …

Read More »

ಚಿರು ಕೊರೊನಾ ಟೆಸ್ಟ್ ನೆಗೆಟಿವ್ – ಅಪೋಲೋ ವೈದ್ಯರಿಂದ ಮಾಹಿತಿ

ಬೆಂಗಳೂರು: ಇಂದು ಸಾವನ್ನಪ್ಪಿದ ನಟ ಚಿರಂಜೀವಿ ಸರ್ಜಾ ಅವರಿಗೆ ಕೊರೊನಾ ಸೋಂಕು ನೆಗಟಿವ್ ಬಂದಿದೆ ಎಂದು ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಇಂದು ಮಧ್ಯಾಹ್ನ 3.48ರ ಸುಮಾರಿಗೆ ಚಿರಂಜೀವಿ ಸರ್ಜಾ ಅವರು ಬೆಂಗಳುರಿನ ಅಪೊಲೋ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಈಗ ಈ ವಿಚಾರವಾಗಿ ಅಪೊಲೋ ಆಸ್ಪತ್ರೆ ವೈದ್ಯರು ಮೆಡಿಕಲ್ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಮೂರು ಬಾರಿ ಸಿಪಿಆರ್ ಚಿಕಿತ್ಸೆಯಲ್ಲಿ ಯಶಸ್ವಿಯಾದರೂ ಚಿರು ಅವರಿಂದ ಸ್ಪಂದನೆ ಸಿಗಲಿಲ್ಲ …

Read More »

ಆಸ್ಪತ್ರೆಯಲ್ಲಿಯೇ ರೋಗಿ ನೇಣಿಗೆ ಶರಣು- ವೈದ್ಯರ ವಿರುದ್ಧ ನಿಷ್ಕಾಳಜಿ ಆರೋಪ

ಗದಗ: ಲಿವರ್ ಸಮಸ್ಯೆ ಹಾಗೂ ಇತರೆ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ನಗರದ ಕಣ್ಯಾಳ ಅಗಸಿ ನಿವಾಸಿ ರಾಘವೇಂದ್ರ ಗೋಕಾಕ್ (34) ಆತ್ಮಹತ್ಯೆಗೆ ಶರಣಾದ ರೋಗಿ. ರಾಘವೇಂದ್ರ ಅನೇಕ ವರ್ಷಗಳಿಂದ ಲಿವರ್ ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದರು. ಕಳೆದ ಹತ್ತಾರು ದಿನಗಳಿಂದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮಾನಸಿಕ ಅಸ್ವಸ್ಥ ಎಂದುಕೊಂಡು ರಾಘವೇಂದ್ರ ಅವರಿಗೆ ಆಸ್ಪತ್ರೆಯ ಸಿಬ್ಬಂದಿ ಸರಿಯಾಗಿ ಚಿಕಿತ್ಸೆ ನೀಡುತ್ತಿರಲಿಲ್ಲ. ಇದರಿಂದ ಮನನೊಂದು …

Read More »

ಮಂಡ್ಯ : ರಾತ್ರಿ ಮನೆಗೆ ಕಲ್ಲು ತೂರಾಟ ನಡೆಸಿ, ಮನೆಯೊಳಗಿದ್ದ ಯುವತಿಗೆ ಹಲ್ಲೆ ನಡಿಸಿ

ಮಂಡ್ಯ : ರಾತ್ರಿ ಮನೆಗೆ ಕಲ್ಲು ತೂರಾಟ ನಡೆಸಿ, ಮನೆಯೊಳಗಿದ್ದ ಯುವತಿಗೆ ಹಲ್ಲೆ ನಡಿಸಿ ಮಾನಭಂಗಕ್ಕೆ ಯತ್ನಿಸಿದ 6ಮಂದಿ ಆರೋಪಿಗಳ ಮೇಲೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವ ಘಟನೆ ತಾಲೂಕಿನ ಚುಜ್ಜಲಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚುಜ್ಜಲಕ್ಯಾತನಹಳ್ಳಿ ನಿವಾಸಿಗಳಾದ ರವೀಶ ಬಿನ್ ಲೇಟ್ ನಿಂಗರಾಜು, ಮಹೇಶ ಬಿನ್ ಬಸವರಾಜು, ಸತೀಶ ಬಿನ್ ಮಲ್ಲೇಶ, ಸತೀಶ ಬಿನ್ ಕಾಳೇಗೌಡ, ಬಸವರಾಜು ಬಿನ್ ಲೇಟ್ ಸಣ್ಣಕಾಳಪ್ಪನ ದೇವರಾಜು, ಪವನ್ ಬಿನ್ ದೇವರಾಜು, ವಾಸು …

Read More »

ಸೋಮವಾರದಿಂದ ಪ್ರವಾಸಿಗ ವೀಕ್ಷಣೆಗೆ ಮೈಸೂರು ಅರಮನೆ ಲಭ್ಯ……….

ಮೈಸೂರು: ಕೊರೊನಾ ಹಿನ್ನೆಲೆಯ ಲಾಕ್‍ಡೌನ್ 5.0 ಸಡಿಲಿಕೆಯಾಗಿದ್ದು, ಸೋಮವಾರದಿಂದ ದೇವಸ್ಥಾನ, ಮಸೀದಿ ಮತ್ತು ಚರ್ಚ್ ತೆರೆಯುತ್ತಿವೆ. ಇದೀಗ ಮೈಸೂರಿನ ಪ್ರಮುಖ ಪ್ರವಾಸಿ ಕೇಂದ್ರವಾದ ಅರಮನೆ ಪುನರಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಂದರೆ ನಾಳೆಯಿಂದ ವಿಶ್ವವಿಖ್ಯಾತ ಮೈಸೂರು ಅರಮನೆ ರೀ ಓಪನ್ ಆಗಲಿದೆ. ಸೋಮವಾರದಿಂದ ಪ್ರವಾಸಿಗ ವೀಕ್ಷಣೆಗೆ ಮೈಸೂರು ಅರಮನೆ ಲಭ್ಯವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸೋದು ಕಡ್ಡಾಯವಾಗಿದೆ. ಇನ್ನೂ 10 …

Read More »

ರಾಜ್ಯ ಪೊಲೀಸ್ ಮಹಾನಿರ್ದೇಶಕ(DGP) ಪ್ರವೀಣ್ ಸೂದ್‍ಗೆ ಇದೀಗ ಕೊರೊನಾ ಭೀತಿ ಎದುರಾಗಿದೆ.

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ(DGP) ಪ್ರವೀಣ್ ಸೂದ್‍ಗೆ ಇದೀಗ ಕೊರೊನಾ ಭೀತಿ ಎದುರಾಗಿದೆ. ಬಳ್ಳಾರಿಯ ಪೊಲೀಸ್ ಸಿಬ್ಬಂದಿಗೆ ಶನಿವಾರ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇದರಿಂದಾಗಿ ಪ್ರವೀಣ್ ಸೂದ್ ಅವರಿಗೂ ಕೊರೊನಾ ಭೀತಿ ಎದುರಾಗಿದೆ. ಜಿಲ್ಲೆಯ ಹೊಸಪೇಟೆಯ ಮೂವರು ಪೊಲೀಸರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಎರಡು ದಿನಗಳ ಹಿಂದೆ ಪ್ರವೀಣ್ ಸೂದ್ ಬಳ್ಳಾರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. 40ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಇವರ …

Read More »