Home / ಜಿಲ್ಲೆ / ಗದಗ / ಬದುಕು ಬರುಡಾದ ನೇಕಾರನ ಕುಟುಂಬ – ಮನೆಯ ಆಧಾರಸ್ಥಂಭ ಅನಾರೋಗ್ಯಕ್ಕೆ ತುತ್ತಾದ ಮೇಲೆ ಜಿಡ್ಡುಗಟ್ಟಿದ ಕೈಮಗ್ಗ

ಬದುಕು ಬರುಡಾದ ನೇಕಾರನ ಕುಟುಂಬ – ಮನೆಯ ಆಧಾರಸ್ಥಂಭ ಅನಾರೋಗ್ಯಕ್ಕೆ ತುತ್ತಾದ ಮೇಲೆ ಜಿಡ್ಡುಗಟ್ಟಿದ ಕೈಮಗ್ಗ

Spread the love

ಗದಗ(ಜೂ.08): ಗದಗನ ಬೆಟಗೇರಿನಲ್ಲಿ ಸುಮಾರು 51 ವರ್ಷದ ದುರವಾಸಪ್ಪ ಶ್ಯಾಗಾವಿ ಎಂಬ ನೇಕಾರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮನೆಗೆ ಆಧಾರವಾಗಿದ್ದ ವ್ಯಕ್ತಿ ಹಾಸಿಗೆ ಹಿಡಿದ ಮೇಲೆ ಜೀವನವೆಂಬ ಚಕ್ಕಡಿ ಚಕ್ರವೊಂದು ಮುರಿದು ಬಿದ್ದಂತಾಗಿದೆ. ಲಾಕ್‌ಡೌನ್ ವೇಳೆ ಈ ವ್ಯಕ್ತಿ ತನ್ನ ಎರಡು ಕಿಡ್ನಿ ಹಾಗೂ ಹೃದಯ ರೋಗ ಕಾಯಿಲೆಯಿಂದ ಬಳಲುತ್ತಾ ನೆಲಕಚ್ಚಿದ್ದಾನೆ.

ಈ ಕುಟುಂಬದಲ್ಲಿ ಒಟ್ಟು 7 ಜನ ಸದಸ್ಯರಿದ್ದು, ಮನೆಗೆ ಇವರೇ ಆಧಾರ. ದುಡಿಯುವ ಕೈ ಕಟ್ ಆದಮೇಲೆ ಯಾರಾದ್ರೂ ಸಹಾಯ ಮಾಡಿ ಅಂತ ಕಣ್ಣೀರಿಡುತ್ತಿದೆ ನೊಂದ ಕುಟುಂಬ. ಒಂದುಕಡೆ ಲಾಕ್‌ಡೌನ್ ಇನ್ನೊಂದಡೆ ಅನಾರೋಗ್ಯದಿಂದ ಬಳಲುತ್ತಿರುವ ಮನೆಯ ಯಜಮಾನ. ಈ ನೊಂದ ನೇಕಾರರ ಕುಟುಂಬಕ್ಕೆ ಸರ್ಕಾರ ಘೋಷಣೆ ಮಾಡಿದ್ದ ಪರಿಹಾರ ಧನವೂ ಬಂದಿಲ್ಲ.

ಬದುಕು ಬರುಡಾದ ನೇಕಾರನ ಕುಟುಂಬ - ಮನೆಯ ಆಧಾರಸ್ಥಂಭ ಅನಾರೋಗ್ಯಕ್ಕೆ ತುತ್ತಾದ ಮೇಲೆ ಜಿಡ್ಡುಗಟ್ಟಿದ ಕೈಮಗ್ಗ

ಒಟ್ಟು 7 ಜನರ ಕುಟುಂಬ ಸದಸ್ಯರಲ್ಲಿ 5 ಜನ ಚಿಕ್ಕಪುಟ್ಟ ಹೆಣ್ಣು ಮಕ್ಕಳು. ಕೈಮಗ್ಗದಿಂದ ಬಟ್ಟೆನೆಯಿದು ನಿತ್ಯ ಜೀವನ ನಡೆಸುತ್ತಿದ್ದರು. ಈ ದುರವಾಸಪ್ಪ ಮಧ್ಯೆ ವಯಸ್ಸಿನಲ್ಲಿಯೇ ಅನಾರೋಗ್ಯದಿಂದ ನರಳುತ್ತಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಿಡಿಕಾಸಿಲ್ಲದಂತಾಗಿದೆ. ಎರಡು ತಿಂಗಳಿಂದ ಸಂಪೂರ್ಣ ಹಾಸಿಗೆ ಹಿಡಿದಾಗಿಂದ ಕೈಮಗ್ಗ ಬಳಿ ತಂದೆಯನ್ನು ಮಲಗಿಸಿ ಕುಟುಂಬ ಕಣ್ಣೀರಿಡುತ್ತಿದೆ. ಈ ಕುಟುಂಬದ ಪರಸ್ಥಿತಿ ನೋಡಿ ಸ್ಥಳಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾರಾದ್ರೂ ದಾನಿಗಳು, ಸಂಘಸಂಸ್ಥೆ ಅಥವಾ ಸರ್ಕಾರ ಈ ಬಡಕುಟುಂಬ

ಒಂದುಕಡೆ ಲಾಕ್‌ಡೌನ್ ಮತ್ತೊಂದು ಕಡೆ ನೇಕಾರಿಕೆಯನ್ನೆ ನಂಬಿಕೊಂಡು ದುಡಿಯುವ ಕೈಗಳಿಗ ಕಣ್ಣೀರಲ್ಲಿ ಕೈ ತೊಳೆಯುತ್ತಿವೆ. ಆ ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾದ ಮೇಲೆ ಜೀವನವೆಂಬ ಚಕ್ಕಡಿ ಚಕ್ರವೊಂದು ಮುರಿದು ಬಿದ್ದಂತಾಗಿದೆ. ಕುಟುಂಬ ಹೊತ್ತಿನ ಊಟಕ್ಕೂ ಪರಿತಪಿಸುತ್ತಿದೆ. ಲಾಕ್‌ಡೌನ್ ವೇಳೆ ಸರ್ಕಾರ ಘೋಷಿಸಿದ್ದ ಪರಿಹಾರ ನಯಾಪೈಸೆ ಬಂದಿಲ್ಲ. ಹೊತ್ತಿನ ಊಟ, ಮಕ್ಕಳ ಶಿಕ್ಷಣ, ಜೀವನೋಪಾಯಕ್ಕಾಗಿ ಸಹಾಯ ಬೇಡುತ್ತಾ ಕಣ್ಣೀರಿಡುತ್ತಿರುವ ಗದಗ ಜಿಲ್ಲೆಯ ನೇಕಾರನ ಕುಟುಂಬದ ಕರುನಾಜನಕ ಕಥೆಯ ಇದು.

ನಿತ್ಯ ಕೈಮಗ್ಗದ ಮೂಲಕ ಬಟ್ಟೆ ನೆಯಿದು ದುಡಿದು ತಿನ್ನುವ ಬಡಕುಟುಂಬ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಚಿಕಿತ್ಸೆ ನೀಡಿದ್ರೂ ಗುಣಮುಖವಾಗಿಲ್ಲ. ಈಗ ಲಾಕ್‌ಡೌನ್ ವೇಳೆ ಹಣವೂ ಇಲ್ಲದೇ ಕಂಗಾಲಾಗಿದೆ. ಚಿಕ್ಕಮನೆಯಲ್ಲಿ ಕೈ ಮಗ್ಗದ ಮೇಲೆ 7 ಜನ ಅವಲಂಭಿತರಾಗಿದ್ದಾರೆ. ಸದ್ಯದ ಹೊತ್ತಿನ ಚೀಲ ತುಂಬಿಸಿಕೊಳ್ಳಲು ಪರಿತಪಿಸುತ್ತಿದೆ. ಬಡಮಕ್ಕಳ ಶಿಕ್ಷಣ, ವ್ಯಕ್ತಿಯ ಚಿಕಿತ್ಸೆ ವೆಚ್ಚ, ಆರ್ಥಿಕ ಸಹಾಯಕ್ಕಾಗಿ ಕೈಚಾಚಿ ಅಂಗಾಚಿ ಬೇಡಿಕೊಳ್ಳುತ್ತಿದೆ ನೇಕಾರನ ನೊಂದ ಕುಟುಂಬ. ಹೃದಯವಂತ ದಾನಿಗಳು ನೊಂದಕುಟುಂಬಕ್ಕೆ ನೇರವಾಗಲಿ ಎಂಬುದು ನಮ್ಮ ಆಶಯ.


Spread the love

About Laxminews 24x7

Check Also

ಲೈಂಗಿಕ ಕಿರುಕುಳ ; ಕ್ಷೇತ್ರ ಶಿಕ್ಷಣಾಧಿಕಾರಿಗೆ 5 ವರ್ಷ ಜೈಲು, ದಂಡ ವಿಧಿಸಿದ ಕೋರ್ಟ್.!

Spread the loveಗದಗ : ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕೇಸ್ ಗೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ