ನೆಲಮಂಗಲ: 2013ರ ಕೊಲೆ ಆರೋಪಿಗೆ 55 ಸಾವಿರ ದಂಡದ ಜೊತೆಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿ ನ್ಯಾಯಾಲಯ ತೀರ್ಪುಕೊಟ್ಟಿದೆ. ಕಾಂತರಾಜು ಅಲಿಯಾಸ್ ರಾಜು (31) ಶಿಕ್ಷೆಗೆ ಒಳಪಟ್ಟ ಅಪರಾಧಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಗೊಲ್ಲಹಳ್ಳಿ ಗ್ರಾಮದಲ್ಲಿ ಹಸುಗಳನ್ನ ಸಾಕುವ ಕೆಲಸವನ್ನ ಅಪರಾಧಿ ಕಾಂತರಾಜು ಹಾಗೂ ಆತನ ಹೆಂಡತಿ ಮೃತೆ ಲಲಿತಾಬಾಯಿ ಮಾಡುತ್ತಿದ್ದರು. ಮೂಲತಃ ಚಿತ್ರದುರ್ಗ ಜಿಲ್ಲೆ ಕಾಟನಾಯಕನಹಳ್ಳಿಯವರಾದ ಇಬ್ಬರು ಜೀವನಾಧಾರಕ್ಕಾಗಿ ನೆಲಮಂಗಲದ ಗೊಲ್ಲಹಳ್ಳಿಗೆ ಬಂದಿದ್ದು, ಅಪರಾಧಿ ಕಾಂತರಾಜ್ ತನಗಿಂತ …
Read More »ನಮ್ಮ ಪೊಲೀಸರು ಕೆ.ಕಲ್ಯಾಣ್ರ ಪತ್ನಿ, ಅತ್ತೆ-ಮಾವ ಅವರನ್ನ ರಕ್ಷಿಸಿದ್ದಾರೆ -DCP ವಿಕ್ರಂ
ಬೆಳಗಾವಿ: ಚಿತ್ರಸಾಹಿತಿ ಕೆ. ಕಲ್ಯಾಣ ದಾಂಪತ್ಯದಲ್ಲಿ ಕಲಹ ಪ್ರಕರಣಕ್ಕೆ ಸಂಬಂಧಿಸಿ ನಗರದಲ್ಲಿ ಇಂದು ಡಿಸಿಪಿ ವಿಕ್ರಂ ಆಮ್ಟೆ ಸುದ್ದಿಗೋಷ್ಠಿ ನಡೆಸಿದರು. ನಮ್ಮ ಪೊಲೀಸರು ಕೆ.ಕಲ್ಯಾಣ್ ಅವರ ಪತ್ನಿ ಹಾಗೂ ಅತ್ತೆ, ಮಾವ ಅವರನ್ನ ರಕ್ಷಿಸಿದ್ದಾರೆ. ಜೊತೆಗೆ, ಆರೋಪಿ ಶಿವಾನಂದ ವಾಲಿನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಬಂಧಿತನ ಬಳಿಯಿದ್ದ 9 ಮ್ಯಾಕ್ಸಿ ಕ್ಯಾಬ್, 350 ಗ್ರಾಂ ಚಿನ್ನ, 6 ಕೆಜಿ ಬೆಳ್ಳಿ ಜಪ್ತಿ ಮಾಡಿಕೊಂಡಿದ್ದೇವೆ ಎಂದು ಡಿಸಿಪಿ ವಿಕ್ರಂ ಆಮ್ಟೆ ಹೇಳಿದ್ದಾರೆ. …
Read More »ಹಿರಿಯ ರಾಜಕಾರಣಿ, ಮಾಜಿ ಶಾಸಕ ಕೆ ಮಲ್ಲಪ್ಪ ನಿಧನ
ದಾವಣಗೆರೆ: ಹಿರಿಯ ರಾಜಕಾರಣಿ ಹಾಗೂ ಮಾಜಿ ಶಾಸಕ ಕೆ.ಮಲ್ಲಪ್ಪ (92) ನಿಧನರಾಗಿದ್ದಾರೆ. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ಬೆಳಿಗ್ಗೆ ದಾವಣಗೆರೆ ನಗರದ ಆಂಜನೇಯ ಬಡಾವಣೆಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆ.ಮಲ್ಲಪ್ಪನವರು ಜಿಲ್ಲೆಯ ಮಾಯಕೊಂಡ ಹಾಗೂ ಹರಿಹರ ಕ್ಷೇತ್ರದಿಂದ ಎರಡು ಸಲ ಶಾಸಕ ಹಾಗೂ ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕುಸ್ತಿ ಜೀರ್ಣೋದ್ಧಾರಕ ಸಂಘದ ಅಧ್ಯಕ್ಷರಾಗಿ ಹೆಸರು ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರಾಗಿದ್ದ ಕೆ.ಮಲ್ಲಪ್ಪ ಅಹಿಂದಾ …
Read More »ಐಟಿ ಸಿಟಿ ಬೆಂಗಳೂರು.. ಟೆರರಿಸ್ಟ್ ಸಿಟಿಯಾಗಿ ಬದಲು! ರಾಜಧಾನಿಯಲ್ಲಿ ಉಗ್ರರಿಗೆ ತರಬೇತಿ
ಬೆಂಗಳೂರು: ರಾಜಧಾನಿ ಜನರು ಬೆಚ್ಚಿಬೀಳುವಂತಹ ಅತ್ಯಂತ ಭಯಾನಕ ಸುದ್ದಿಯೊಂದು ಹೊರ ಬಿದ್ದಿದೆ. ನಗರದ ಹೊರವಲಯದಲ್ಲೇ ಐಸಿಸ್ ಉಗ್ರರ ಕ್ಯಾಂಪ್ಗಳಿವೆಯಂತೆ. ಈ ಕ್ರಿಮಿಗಳು ಕ್ಯಾಂಪ್ ಮಾಡಿ ವಿಧ್ವಂಸಕ ಕೃತ್ಯ ಸಂಚು ರೂಪಿಸುತ್ತಿದ್ರಂತೆ. ಓಲ್ಡ್ ಮದ್ರಾಸ್ ರಸ್ತೆಯ ಸುತ್ತಮುತ್ತ ಉಗ್ರರಿಗೆ ಟ್ರೇನಿಂಗ್ ನೀಡಲಾಗುತ್ತಿದೆಯಂತೆ. ಕುರಾನ್ ಸರ್ಕಲ್ ಗ್ರೂಪ್ ಮಾಡಿ ಯುವಕರನ್ನ ಕರೆಸಿಕೊಳ್ತಿದ್ರು ನಂತರ ಅವರಿಗೆ ಟ್ರೇನಿಂಗ್ ಕೊಟ್ಟು ಉಗ್ರರನ್ನಾಗಿ ಮಾಡ್ತಿದ್ರು ಎಂಬ ಭಯಾನಕ ಸುದ್ದಿ ಬಹಿರಂಗಗೊಂಡಿದೆ. ಮೇಕಿಂಗ್ ಆಫ್ ಫ್ಯೂಚರ್ ಇಸ್ಲಾಮಿಕ್ ಸ್ಟೇಟ್: ಇಕ್ಬಾಲ್ …
Read More »ಮಳೆ ಅವಾಂತರಕ್ಕೆ ವ್ಯಕ್ತಿ ಬಲಿ.. ಧರೆಗುರುಳಿದವು ಮನೆ, ಮರಗಳು
ಬೆಳಗಾವಿ: ಜಿಲ್ಲೆಯಲ್ಲಿ ವರ್ಷಧಾರೆ ನರ್ತನ ಜೋರಾಗಿದ್ದು, ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ರಣಭೀಕರ ಮಳೆಗೆ ಹುಕ್ಕೇರಿಯಲ್ಲಿ ವ್ಯಕ್ತಿ ಬಲಿಯಾಗಿದ್ದಾರೆ. ಹಾಗೂ ಅನೇಕ ಮನೆಗಳು ಕುಸಿದಿವೆ. ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ಗ್ಯಾರೇಜ್ ಛಾವಣಿ ಕುಸಿದು ಅಸ್ಲಂ ಅಲ್ಲಾಖಾನ (52) ಎಂಬುವವರು ಮೃತಪಟ್ಟಿದ್ದಾರೆ. ಹುಕ್ಕೇರಿ ಪಟ್ಟಣದಲ್ಲಿ ಮಳೆಯ ಅವಾಂತರಕ್ಕೆ ರಸ್ತೆಗಳು ಕೊಚ್ಚಿ ಹೋಗಿವೆ. 5 ಮನೆಗಳು ಧರೆಗುರುಳಿದ್ದು, ಪಿಡಬ್ಲ್ಯುಡಿ ಇಲಾಖೆಯ ಕಚೇರಿ ಕಾಂಪೌಂಡ್ ಗೋಡೆ ಸೇರಿದಂತೆ 10ಕ್ಕೂ ಹೆಚ್ಚು ಮನೆಗೋಡೆ …
Read More »ಅಮ್ಮ ಏಳಮ್ಮ, ಮಾತಾಡಮ್ಮ.. ಮೃತ ತಾಯಿಯನ್ನು ಎಬ್ಬಿಸಲು ಮರಿ ಕೋತಿ ಯತ್ನ
ಬೆಳಗಾವಿ: ವಿದ್ಯುತ್ ಸ್ಪರ್ಶಿಸಿ ತಾಯಿ ಕೋತಿ ಮೃತಪಟ್ಟಿದ್ದು, ಅದರ ಮುಂದೆ ಕೂತು ಮರಿ ಮಂಗ ರೋದಿಸುತ್ತಿರುವ ಹೃದಯ ವಿದ್ರಾವಕ ಘಟನೆ ಕೊಣ್ಣೂರು ಗ್ರಾಮದಲ್ಲಿ ನಡೆದಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಾಗ ವಿದ್ಯುತ್ ಸ್ಪರ್ಶಿಸಿ ತಾಯಿ ಕೋತಿ ಸಾವನ್ನಪ್ಪಿದೆ. ಅಮ್ಮನನ್ನು ಕಳೆದು ಕೊಂಡು ಮರಿ ಕೋತಿ ರೋದಿಸುತ್ತಿರುವ ದೃಶ್ಯ ಕರುಳು ಸಹ ಕಿತ್ತು ಬರುವ ಹಾಗಿದೆ. ತಾಯಿ ಪ್ರೀತಿಯೇ ಅಂತಹದ್ದು. ಅದು ಮನುಷ್ಯರಾಗಲಿ ಅಥವಾ ಪ್ರಾಣಿಗಳಾಗಲಿ. ತಾಯಿಯ ಆಶ್ರಯದಲ್ಲಿದ್ದ ಮರಿ …
Read More »ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಮೇಲೆ ಪೊಲೀಸ್ ಫೈರಿಂಗ್
ಬೆಂಗಳೂರು: ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ದಿನೇಶ್ ಮೇಲೆ ಗುಂಡು ಹಾರಿಸಿ ಪೊಲೀಸರು ಬಂಧಿಸಿರುವ ಘಟನೆ ಶ್ರೀರಾಮಪುರದಲ್ಲಿ ನಡೆದಿದೆ. 2 ದಿನದ ಹಿಂದೆ 4 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿತ್ತು. ಕಳೆದ ಎರಡು ದಿನದಿಂದ ಉತ್ತರ ವಿಭಾಗದ ಪೊಲೀಸರು ಹುಡುಕಾಟ ನಡೆಸಿದ್ದರು. ಸದ್ಯ ಇಂದು ಬೆಳಗಿನ ಜಾವ ಶ್ರೀರಾಮಪುರ ಇನ್ಸ್ಪೆಕ್ಟರ್ಗೆ ಆರೋಪಿ ದಿನೇಶ್ ಕಾಣಿಸಿಕೊಂಡಿದ್ದ. ಹೀಗಾಗಿ ಆರೋಪಿಯನ್ನು ಅರೆಸ್ಟ್ ಮಾಡಲು ತೆರಳಿದ್ದ ವೇಳೆ RRK ಕಲ್ಯಾಣ ಮಂಟಪದ ಬಳಿ …
Read More »ATM ನಿಂದ ದೋಚಿದ ಹಣ.. ಬ್ಯಾಂಕ್‌ನಲ್ಲಿ ಡೆಪಾಸಿಟ್ -ಇದು ಕಿಲಾಡಿ ಖದೀಮರ ಇಂಟರೆಸ್ಟಿಂಗ್ ಕಹಾನಿ
ಮೈಸೂರು: ಸಾಮಾನ್ಯವಾಗಿ ಕಳ್ಳರು ಕಳ್ಳತನ ಮಾಡಿ ಬಂದ ಹಣವನ್ನು ಬೇರೆ ಬೇರೆ ಕಾರಣಗಳಿಗೆ ಖರ್ಚು ಮಾಡುವುದನ್ನು ನೋಡಿರುತ್ತೇವೆ. ಆದ್ರೆ ಅಂತರರಾಜ್ಯ ಕಳ್ಳರ ಖತರ್ನಾಕ್ ಗ್ಯಾಂಗ್ ಒಂದು ATMನಲ್ಲಿ ಲೂಟಿ ಮಾಡಿದ ಹಣವನ್ನು ಬ್ಯಾಂಕ್‌ನಲ್ಲಿ ಡೆಪಾಸಿಟ್ ಮಾಡಿರುವ ಸ್ವಾರಸ್ಯಕರ ಪ್ರಸಂಗ ನಗರದಲ್ಲಿ ನಡೆದಿದೆ. ಅಂದ ಹಾಗೆ, ಈ ದರೋಡೆಕೋರರು ಈಗ ಕಂಬಿ ಎಣಿಸುತ್ತಿದ್ದಾರೆ. ಇದು ನಂಬಲು ಸ್ವಲ್ಪ ಕಷ್ಟವಾದರೂ ರಿಯಲ್ ಸ್ಟೋರಿ. ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯ ಹೂಟಗಳ್ಳಿ ಕೈಗಾರಿಕಾ …
Read More »ಮಕ್ಕಳ ಪಾಲಿನ ಕ್ಷೀರಭಾಗ್ಯಕ್ಕೂ ಕನ್ನ
ಬೆಳಗಾವಿ: ಕ್ಷೀರಭಾಗ್ಯದ ಹಾಲಿನ ಪೌಡರ್ನ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವೊಂದನ್ನು ಜಿಲ್ಲೆಯ ಬೈಲಹೊಂಗಲ ಪೊಲೀಸರು ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ. ಹಾಲಿನ ಪೌಡರ್ನ ಮುಂಬೈನ ಕಾಳಸಂತೆಯಲ್ಲಿ ಮಾರಾಟಕ್ಕೆ ಅಕ್ರಮ ಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಜಿಲ್ಲೆಯ ಹೊಸಕುರಗುಂದ ಗ್ರಾಮದ ಬಳಿ ‘ಕ್ಷೀರಭಾಗ್ಯ’ದ ನಂದಿನಿ ಹಾಲಿನ ಪುಡಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕ್ಯಾಂಟರ್ ವಾಹನವನ್ನು ಜಪ್ತಿ ಮಾಡಲಾಗಿದೆ. ವಾಹನದಲ್ಲಿದ್ದ 25 ಕೆ.ಜಿ ತೂಕದ 240ಕ್ಕೂ ಹೆಚ್ಚು ಹಾಲಿನ ಪೌಡರ್ ಚೀಲಗಳನ್ನ ವಶಕ್ಕೆ ಪಡೆಯಲಾಗಿದೆ. ಜಪ್ತಿ …
Read More »ವಿಧಾನಸಭೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ.
ಬೆಂಗಳೂರು: ವಿಧಾನಸಭೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಗೋಡು ತಿಮ್ಮಪ್ಪ ಅವರಿಗೆ ಪರೀಕ್ಷೆ ಒಳಪಡಿಸಲಾಗಿತ್ತು. ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ವರದಿಯಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ಕೂಡಲೇ ಅವರನ್ನು ಸಾಗರಿದಿಂದ ಬೆಂಗಳೂರಿಗೆ ಕರೆ ತರಲಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Read More »
Laxmi News 24×7