Breaking News
Home / ಜಿಲ್ಲೆ / ರಾಯಚೂರು (page 12)

ರಾಯಚೂರು

ರಾಯಚೂರಿನಲ್ಲಿ ನಾಲ್ಕು ದಿನಗಳಿಂದ ಸತತ ಮಳೆ: ಮನೆ ಕುಸಿದು ಮಹಿಳೆ ಸಾವು

ರಾಯಚೂರು: ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿ ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದಾಗಿ ಮನೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ.ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ದೇವದುರ್ಗ ತಾಲೂಕಿನ ರಾಮದುರ್ಗ ಗ್ರಾಮದಲ್ಲಿ ಮಣ್ಣಿನ ಮನೆ ಕುಸಿದು ಬಿದ್ದಿದ್ದು, 32 ವರ್ಷದ ಮಹಿಳೆ ಶಕುಂತಲಾ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾತ್ರಿ ಮನೆಯಲ್ಲಿ ಐದು ಜನ ಮಲಗಿದ್ದರು. ಈ ವೇಳೆ ಸತತ …

Read More »

ಸೋಂಕಿತರಿಗೆ ಊಟ ನೀಡುವ ಸ್ಥಳದಲ್ಲಿಯೇ ಮೃತದೇಹವನ್ನ ಪ್ಯಾಕ್ ಮಾಡಿ ಇಡಲಾಗಿತ್ತು

ರಾಯಚೂರು: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನ ಕೂಡಲೇ ಶವಾಗಾರಕ್ಕೆ ಸಾಗಿಸಬೇಕು. ಆದರೆ ರಾಯಚೂರಿನ ಕೋವಿಡ್ ಆಸ್ಪತ್ರೆಯಲ್ಲಿ ಸುಮಾರು ಗಂಟೆಗಳ ಕಾಲ ಸೋಂಕಿತರ ಪಕ್ಕದಲ್ಲೇ ಶವವನ್ನು ಇಡಲಾಗಿತ್ತು. ಸೋಂಕಿತರಿಗೆ ಊಟ ನೀಡುವ ಸ್ಥಳದಲ್ಲಿಯೇ ಮೃತದೇಹವನ್ನ ಪ್ಯಾಕ್ ಮಾಡಿ ಇಡಲಾಗಿತ್ತು. ಹೀಗಾಗಿ ಊಟ ತೆಗೆದುಕೊಂಡು ಹೋಗಲು, ಬರುವ ಪ್ರತಿಯೊಬ್ಬರು ಮೃತದೇಹದ ಪಕ್ಕದಲ್ಲೇ ನಿಂತುಕೊಂಡು ಊಟ ತೆಗೆದುಕೊಳ್ಳಬೇಕಾದ ಅವ್ಯವಸ್ಥೆಗೆ ಜನರನ್ನು ಹೈರಾಣಾಗಿಸಿದೆ.   ಸಾಮಾಜಿಕ ಅಂತರ ಕಾಪಾಡಲು ಹೇಳುವ ವೈದ್ಯರೇ ಈ ರೀತಿಯ …

Read More »

ಮುಗ್ಧರು, ಅಮಾಯಕರು ಮಧ್ಯರಾತ್ರಿ ದೊಂಬಿ ಮಾಡುವುದಿಲ್ಲ: ಡಿಸಿಎಂ ತಿರುಗೇಟು

ರಾಯಚೂರು: ಅಖಂಡ ಶ್ರೀನಿವಾಸ್ ಮನೆ ಮೇಲಿನ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದವರು ಮುಗ್ಧ ಹಾಗೂ ಅಮಾಯಕರು ಎಂಬ ಶಾಸಕ ಜಮೀರ್ ಹೇಳಿಕೆಗೆ ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಒಳ್ಳೆಯವರು ಮಧ್ಯರಾತ್ರಿ ಬಂದು ದೊಂಬಿ ಮಾಡುವುದಿಲ್ಲ. ನವೀನ್ ಎಂಬಾತ ಡಿಕೆಶಿ ನಮ್ಮ ಬಾಸ್, ರಾಹುಲ್, ಪ್ರಿಯಾಂಕ ನಮ್ಮ ನಾಯಕರು ಎಂದು ಪೋಸ್ಟ್ ಹಾಕುತ್ತಿದ್ದ. ಕಾಂಗ್ರೆಸ್ ತಮ್ಮ ಹುಳುಕು ಮುಚ್ಚಿಕೊಳ್ಳಲು ನವೀನ್ ಬಿಜೆಪಿಯವನು ಎಂದು ಬಿಂಬಿಸುತ್ತಿದೆ. ಚುನಾವಣೆ …

Read More »

ಬೆಂಗಳೂರು ಗಲಭೆ ರಾಜಕೀಯ ಲಾಭಕ್ಕಾಗಿ ನಡೆದಿರುವ ಘಟನೆ: ಲಕ್ಷ್ಮಣ ಸವದಿ

ರಾಯಚೂರು: ಬೆಂಗಳೂರಿನ ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯ ಘಟನೆ ಪೂರ್ವ ನಿಯೋಜಿತ, ಇದು ರಾಜಕೀಯ ಲಾಭಕ್ಕಾಗಿ ನಡೆದಿರುವ ಘಟನೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ರಾಯಚೂರಿನಲ್ಲಿ ಹೇಳಿದ್ದಾರೆ. ನಗರದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಬೆಂಗಳೂರು ಗಲಭೆಗೆ ಕಾರಣವಾದ ನವೀನ್ ಅನ್ನೋ ವ್ಯಕ್ತಿ ಕಟ್ಟಾ ಕಾಂಗ್ರೆಸ್ ಬೆಂಬಲಿಗ. ನವೀನ್‍ಗೂ ಬಿಜೆಪಿಗೂ ಯಾವುದೇ …

Read More »

ವಿದ್ಯುತ್ ತಗುಲಿ ತಂದೆ ಮಗ ಸಾವನ್ನಪ್ಪಿದ ದಾರುಣ ಘಟನೆ ನಿನ್ನೆ ರಾತ್ರಿ ನಡೆದಿದೆ. 

ರಾಯಚೂರು:  ವಿದ್ಯುತ್ ತಗುಲಿ ತಂದೆ ಮಗ ಸಾವನ್ನಪ್ಪಿದ ದಾರುಣ ಘಟನೆ ನಿನ್ನೆ ರಾತ್ರಿ ರಾಯಚೂರಿನ ದಿನ್ನಿ ಗ್ರಾಮದಲ್ಲಿ ನಡೆದಿದೆ.  ಮಹೇಶ (47), ನವೀನ್ (16) ಮೃತರು. ಮನೆ ಪಕ್ಕದಲ್ಲಿದ್ದ ಮರಕ್ಕೆ ವಿದ್ಯುತ್ ವೈರ್ ತಾಕಿದೆ. ಇದೇ ಮರಕ್ಕೆ ಬಟ್ಟೆ ನೇತಾಕಲು ವೈರ್ ಕಟ್ಟಲಾಗಿತ್ತು. ಜಿಟಿ ಜಿಟಿ ಮಳೆ ಸುರಿಯುತ್ತಿರುವ ಪರಿಣಾಮ ಮರಕ್ಕೆ ವಿದ್ಯುತ್ ಪ್ರವಹಿಸಿ ತಂತಿಗೂ ಅರ್ಥಿಂಗ್ ಆಗಿದೆ. ಬಟ್ಟೆ ತೆಗೆಯಲು ಹೋದ ತಂದೆ ಶಾಕ್ ನಿಂದ ಮೃತಪಟ್ಟಿದ್ದಾನೆ. ತಂದೆ …

Read More »

ರಾಯಚೂರಿನಲ್ಲಿ ಊಟ, ನೀರಿಗಾಗಿ ಹೊರಬರುತ್ತಿರುವ ಕೊರೊನಾ ಸೋಂಕಿತರು

ರಾಯಚೂರು: ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಾದ ರಿಮ್ಸ್ ಹಾಗೂ ಓಪೆಕ್ ನಲ್ಲಿನ ಸಮಸ್ಯೆಗಳು ಬಗೆಹರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಸ್ವಚ್ಛತೆ ಕೊರತೆ, ಊಟ, ನೀರಿನ ಸೌಲಭ್ಯ ಸರಿಯಾಗಿ ಇಲ್ಲದಿರುವುದು, ಮುಖ್ಯವಾಗಿ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಅನ್ನೋ ಸೋಂಕಿತರ ಆರೋಪ ಈಗಲೂ ಮುಂದುವರೆದಿದೆ.ಊಟ, ತಿಂಡಿ, ನೀರಿಗಾಗಿ ರೋಗಿಗಳ ಜೊತೆಗೆ ಇರುವವರು ಹಾಗೂ ರೋಗಿಗಳು ಸಹ ಹೊರಗೆ ಬಂದು ಹೋಟೆಲ್‍ಗಳಲ್ಲಿ ತೆಗೆದುಕೊಂಡು ಆಸ್ಪತ್ರೆಗೆ ವಾಪಸ್ ಮರಳುತ್ತಿದ್ದಾರೆ. ಟೀ ಕೊಡುತ್ತಿಲ್ಲ, ಕುಡಿಯುವ ನೀರಿನ ಸೌಲಭ್ಯವಿಲ್ಲ, ಹೊರಗಡೆಯಿಂದಲೇ ನೀರು …

Read More »

ದೇವದುರ್ಗದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಮುಳುಗಡೆ ಭೀತಿ

ರಾಯಚೂರು: ಕಳೆದ ವರ್ಷದ ಪ್ರವಾಹಕ್ಕೆ ಮುಳುಗಡೆಯಾಗಿದ್ದ ರಾಯಚೂರಿನ ದೇವದುರ್ಗದ ಐತಿಹಾಸಿಕ ಕೊಪ್ಪರ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಈ ಬಾರಿಯೂ ಮುಳುಗಡೆ ಭೀತಿ ಎದುರಿಸುತ್ತಿದೆ ಈಗಾಗಲೇ ದೇವಾಲಯದ ಆಧಾರ ಸ್ಥಂಬಗಳು ಜಲಾವೃತವಾಗಿವೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಭಕ್ತರ ಸಂಖ್ಯೆಯೂ ಕಡಿಮೆಯಾಗಿದೆ. ಕಳೆದ ವರ್ಷ ದೇವಾಲಯ ಪಕ್ಕದಲ್ಲಿರುವ ಅರ್ಚಕರು ಹಾಗೂ ಗ್ರಾಮದ ಹಲವಾರು ಕುಟುಂಬಗಳು ಪ್ರವಾಹದ ಹೊಡೆತಕ್ಕೆ ನಲುಗಿದ್ದವು. ಈ ಬಾರಿ ನಾರಾಯಣಪುರ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದ …

Read More »

ಕೋವಿಡ್ ಕೇರ್ ಸೆಂಟರ್ ನಲ್ಲಿ ಇರಲು ಸಾಧ್ಯವಾಗುತ್ತಿಲ್ಲ ನಮ್ಮನ್ನ ಮನೆಗೆ ಬಿಡಿ

ರಾಯಚೂರು: ನಗರದ ಹೊರವಲಯದ ಯರಮರಸ್ ಬಳಿಯ ಕೋವಿಡ್ ಕೇರ್ ಸೆಂಟರ್ ನಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದ್ದು ಕೊರೊನಾ ಸೊಂಕಿತರು ಕತ್ತಲಲ್ಲೇ ಕಾಲ ಕಳೆಯಬೇಕಾಗಿದೆ. ವಿದ್ಯುತ್ ಇಲ್ಲದಿರುವುದರಿಂದ ನಾನಾ ಸಮಸ್ಯೆಗಳ ಕೊರೋನಾ ಸೋಂಕಿತರು ಎದುರಿಸುತ್ತಿದ್ದಾರೆ. ಮುಖ್ಯವಾಗಿ ನೀರಿನ ಸಮಸ್ಯೆ ಎದುರಾಗಿದ್ದು ಶೌಚಕ್ಕೂ ಹೋಗಲು ಆಗದೇ ಪರದಾಡುವಂತಾಗಿದೆ. ಸೊಳ್ಳೆ ಕಾಟದಿಂದ ನಿದ್ದೆ ಮಾಡಲು ಆಗದ ಪರಸ್ಥಿತಿಗೆ ಸೋಂಕಿತರು ಹೆದರಿದ್ದಾರೆ. ನಿನ್ನೆಯಿಂದಲೂ ವಿದ್ಯುತ್ ಸಮಸ್ಯೆಯಿದ್ದು ಜೆಸ್ಕಾಂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ಇಲ್ಲಿ ಇರಲು …

Read More »

ಕೊರೊನಾ ಭೀತಿ ನಡುವೆಯೂ ಜನ ಸಾಮಾಜಿಕ ಅಂತರ ಮರೆತು ವ್ಯಾಪಾರ ಜೋರಾಗಿ ನಡೆಸಿದ್ದಾರೆ.

ರಾಯಚೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ರಾಯಚೂರಿನಲ್ಲಿ ಹಣ್ಣು, ಹೂ ವ್ಯಾಪಾರ ಜೋರಾಗಿದೆ. ಕೊರೊನಾ ಭೀತಿ ನಡುವೆಯೂ ಜನ ಸಾಮಾಜಿಕ ಅಂತರ ಮರೆತು ವ್ಯಾಪಾರ ಜೋರಾಗಿ ನಡೆಸಿದ್ದಾರೆ. ಮಾಸ್ಕ್ ಸಹ ಧರಿಸದೆ ಜನ ಬಾಳೆದಿಂಡು, ಹಸಿರು ಬಳೆ, ಹಣ್ಣು ಖರೀದಿ ಮಾಡುತ್ತಿದ್ದಾರೆ. ಮಾರ್ಕೆಟ್ ತುಂಬಾ ಮಹಿಳೆಯರೇ ವ್ಯಾಪಾರ ನಡೆಸಿದ್ದು ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಆದ್ರೆ ವ್ಯಾಪಾರಿಗಳು ಮಾತ್ರ ಈ ವರ್ಷ ವ್ಯಾಪಾರವೇ ಇಲ್ಲಾ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಬೆಲೆಯಲ್ಲೂ ವ್ಯತ್ಯಾಸವಾಗಿದ್ದು ಮಳೆ …

Read More »

ರಾಯಚೂರು :ಕೋವಿಡ್ 19 ದೃಢ ಹೆಡ್ ಕಾನ್‌ಸ್ಟೇಬಲ್‌ ರಾಘವೇಂದ್ರ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತ

ರಾಯಚೂರು: ಕೋವಿಡ್ ದೃಢವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಗ್ರಾಮೀಣ ಠಾಣೆಯ ಹೆಡ್ ಕಾನ್‌ಸ್ಟೇಬಲ್‌ ರಾಘವೇಂದ್ರ ಅವರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಗ್ರಾಮೀಣ ಠಾಣೆಗೆ ಭೇಟಿಕೊಟ್ಟರು. ಇದೇ ವೇಳೆ ರಾಘವೇಂದ್ರ ಅವರಿಗೆ ಪೊಲೀಸರು ಶ್ರದ್ಧಾಂಜಲಿ ಸಲ್ಲಿಸಿದರು. ‘ರಾಘವೇಂದ್ರ ಅವರು ಸಹೃದಯಿ. ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಕರ್ತವ್ಯದಲ್ಲಿ ಪ್ರಾಮಾಣಿಕತೆ, ನಿಷ್ಠೆಯಿಂದ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಇಂತಹ ವ್ಯಕ್ತಿಯ ಮರಣ ನಿಜಕ್ಕೂ ಇಲಾಖೆಗೆ ನೋವುಂಟು ಮಾಡಿದೆ’ …

Read More »