Home / ಜಿಲ್ಲೆ / ರಾಯಚೂರು (page 13)

ರಾಯಚೂರು

ರಾಯಚೂರಿನಲ್ಲಿ ಸಂಡೇ ಲಾಕ್‍ಡೌನ್‍ಗೆ ಎಲ್ಲಾ ಬಂದ್: ಹೊರಬಂದವರಿಗೆ ಲಾಠಿ ಏಟು

ರಾಯಚೂರು: ಸಂಡೇ ಲಾಕ್‍ಡೌನ್ ಉಲ್ಲಂಘಿಸಿ ಓಡಾಡುವವರಿಗೆ ರಾಯಚೂರು ಪೊಲೀಸರು ಲಾಠಿ ರುಚಿ ತೋರಿಸಿ ವಾಪಸ್ ಕಳುಹಿಸುತ್ತಿದ್ದಾರೆ. ಭಾನುವಾರ ಲಾಕ್ ಡೌನ್ ಇರುವುದು ತಿಳಿದಿದ್ದರೂ ಜನ ಅನಾವಶ್ಯಕವಾಗಿ ರಸ್ತೆಗೆ ಇಳಿಯುವುದನ್ನ ಮುಂದುವರಿಸಿದ್ದಾರೆ. ಹೀಗಾಗಿ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.ಬೈಕ್, ಕಾರ್ ಗಳನ್ನ ಜಪ್ತಿಮಾಡಿ ದಂಡ ವಸೂಲಿ ಮಾಡುತ್ತಿದ್ದಾರೆ. ಇನ್ನೂ ಬೀದಿ ಬದಿಯಲ್ಲಿ ಟೀ, ತರಕಾರಿ ಮಾರುವವರು ಸಾಮಾಜಿಕ ಅಂತರವಿಲ್ಲದೆ ಮಾಸ್ಕ್ ಇಲ್ಲದೆ ವ್ಯಾಪಾರ ಮಾಡುತ್ತಿದ್ದಾರೆ. ರಸ್ತೆ ಬದಿಯ ವ್ಯಾಪಾರಿಗಳನ್ನ ಪೊಲೀಸರು ಚದುರಿಸಿ ಕಳುಹಿಸುತ್ತಿದ್ದಾರೆ. …

Read More »

ದೇವದುರ್ಗದಲ್ಲಿ ಗುಡ್ಡ ಕುಸಿತ- ಇಬ್ಬರು ಬಾಲಕರು ಸಾವು………

ರಾಯಚೂರು: ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ದೇವದುರ್ಗ ಪಟ್ಟಣದ ಗೌರಂಪೇಟೆ ಕಾಲೋನಿ ಬಳಿ ಗುಡ್ಡ ಕುಸಿದು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಇನ್ನೋರ್ವ ಬಾಲಕನ ಕಾಲು ಮುರಿದಿದೆ. 13 ವರ್ಷದ ವಿರೇಶ್, 10 ವರ್ಷದ ರಮೇಶ್ ಮೃತ ಬಾಲಕರು. ಇನ್ನೋರ್ವ ಬಾಲಕ ಮೌನೇಶ್‍ಗೆ ಕಾಲು ಮುರಿದಿದ್ದು, ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.ನಿರಂತರ ಮಳೆಯಿಂದಾಗಿ ಗುಡ್ಡದ ಮಣ್ಣು ಸಡಿಲವಾಗಿದ್ದು, ಬಂಡೆ ಕೆಳೆಗೆ ಉರುಳಿದೆ. ಗುಡ್ಡದ ಪಕ್ಕದಲ್ಲೇ ಮನೆಗಳಿದ್ದು, ಬಾಲಕರು ಆಟವಾಡುತ್ತಿದ್ದ ವೇಳೆ ಬಂಡೆ …

Read More »

ಅಮವಾಸ್ಯೆ ಹೂ, ಹಣ್ಣಿಗೆ ಮುಗಿಬಿದ್ದ ಜನ- ಲಾಕ್‍ಡೌನ್ ಮಧ್ಯೆ ಭಕ್ತರಿಂದ ತುಂಬಿದ ದೇವಾಲಯ

ರಾಯಚೂರು: ಭೀಮನ ಅಮವಾಸ್ಯೆ ಹಾಗೂ ಶ್ರಾವಣ ಆರಂಭ ಹಿನ್ನೆಲೆ ರಾಯಚೂರಿನಲ್ಲಿ ಕೊರೊನಾ ಹರಡುವಿಕೆ ಭೀತಿ ಮರೆತು ಭಕ್ತರು ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ನಗರದ ಉರುಕುಂದಿ ಈರಣ್ಣ ದೇವಾಲಯದಲ್ಲಿ ಭಕ್ತರ ದಂಡು ಹರಿದು ಬಂದಿದೆ. ಲಾಕ್‍ಡೌನ್ ಮಧ್ಯೆ ಅಮವಾಸ್ಯೆ ಹಿನ್ನೆಲೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು, ಇದರಿಂದ ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದರು. ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಎಲ್ಲವನ್ನೂ ಮರೆತು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ಮುನ್ನೆಚ್ಚರಿಕೆಯಾಗಿ ಕೆಲ …

Read More »

ರಾಯಚೂರಿನಲ್ಲಿ ಲಾಕ್‍ಡೌನ್ ಬಿಗಿ- ಶಾಸಕರ ಕಾರನ್ನೂ ವಾಪಸ್ ಕಳುಹಿಸಿದ ಪೊಲೀಸರು

ರಾಯಚೂರು: ಜಿಲ್ಲೆಯ ರಾಯಚೂರು ಹಾಗೂ ಸಿಂಧನೂರು ನಗರಗಳ 3ನೇ ದಿನದ ಲಾಕ್‍ಡೌನ್‍ನಲ್ಲೂ ಜನ ಯಾವುದೇ ಭೀತಿಯಿಲ್ಲದೆ ರಸ್ತೆಗಿಳಿಯುತ್ತಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಎರಡು ನಗರಗಳನ್ನು ಒಂದು ವಾರ ಕಾಲ ಲಾಕ್‍ಡೌನ್ ಮಾಡಲಾಗಿದೆ. ಅನಗತ್ಯವಾಗಿ ಜನ ರಸ್ತೆಗೆ ಇಳಿಯುತ್ತಲೇ ಇದ್ದಾರೆ. ಹೀಗಾಗಿ ಲಾಕ್‍ಡೌನ್ ಬಿಗಿಗೊಳಿಸಲು ಪೋಲಿಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಶಾಸಕರ ಕಾರನ್ನು ಸಹ ವಾಪಸ್ ಕಳುಹಿಸಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿಷ್ಠೆ …

Read More »

ಲಾಕ್‍ಡೌನ್ ಎಫೆಕ್ಟ್- ಮಳೆಯನ್ನೂ ಲೆಕ್ಕಿಸದೆ ಮದ್ಯದಂಗಡಿ ಮುಂದೆ ಕುಡುಕರ ಕ್ಯೂ

ರಾಯಚೂರು: ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆ ನಾಳೆಯಿಂದ ಜಿಲ್ಲೆಯ ರಾಯಚೂರು ಹಾಗೂ ಸಿಂಧನೂರು ನಗರಗಳಲ್ಲಿ ಒಂದು ವಾರ ಸಂಪೂರ್ಣ ಲಾಕ್‍ಡೌನ್ ಮಾಡಲಾಗುತ್ತಿದೆ. ಹೀಗಾಗಿ ಕುಡುಕರು ಮಳೆಯನ್ನೂ ಲೆಕ್ಕಿಸದೆ ಒಂದು ವಾರಕ್ಕಾಗುವಷ್ಟು ಮದ್ಯ ಖರೀದಿಸಲು ಸರತಿಯಲ್ಲಿ ನಿಂತಿದ್ದಾರೆ. ಒಂದು ವಾರ ಮದ್ಯದಂಗಡಿಗಳು ಸಹ ಬಂದ್ ಆಗುವ ಹಿನ್ನೆಲೆ ಮದ್ಯ ಪ್ರೀಯರಿಗೆ ಕಷ್ಟವಾಗಿದ್ದು, ಮಳೆಯನ್ನೂ ಲೆಕ್ಕಿಸದೆ ಮದ್ಯದ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದಾರೆ. ನಗರದ ಗಂಜ್ ರಸ್ತೆಯ ಎಂಎಸ್‍ಐಎಲ್ …

Read More »

ನಾಳೆಯಿಂದ ರಾಯಚೂರು ಜಿಲ್ಲೆಯ ಎರಡು ನಗರ ಲಾಕ್‍ಡೌನ್

ರಾಯಚೂರು: ನಾಳೆಯಿಂದ ಜುಲೈ 22 ರವರೆಗೆ ರಾಯಚೂರು ನಗರ ಮತ್ತು ಸಿಂಧನೂರು ನಗರಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತಿದೆ. ತುರ್ತು ಹಾಗೂ ಅಗತ್ಯ ಸೇವೆಗಳಾದ ಕಿರಾಣಿ , ಔಷಧಿ ಅಂಗಡಿ, ಆಸ್ಪತ್ರೆ, ಪೆಟ್ರೋಲ್ ಬಂಕ್ ಹೊರತು ಪಡಿಸಿ ಉಳಿದೆಲ್ಲಾ ಕಾರ್ಯಚಟುವಟಿಕೆ ಸಂಪೂರ್ಣ ಬಂದ್ ಇರುತ್ತದೆ. ಜಿಲ್ಲೆಯ ಉಳಿದ ತಾಲೂಕುಗಳಾದ ದೇವದುರ್ಗ, ಲಿಂಗಸುಗೂರು, ಸಿರವಾರ, ಮಸ್ಕಿ ಹಾಗೂ ಮಾನ್ವಿಯಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಎಲ್ಲದಕ್ಕೂ ಅವಕಾಶ ಇದ್ದು …

Read More »

ರಾಯಚೂರು, ಸಿಂಧನೂರು ಒಂದು ವಾರ ಸಂಪೂರ್ಣ ಲಾಕ್‍ಡೌನ್……….

ರಾಯಚೂರು: ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ 250 ಪಾಸಿಟಿವ್ ಪ್ರಕರಣ ದಾಖಲಾದ ಹಿನ್ನೆಲೆ ಒಂದು ವಾರ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ರಾಯಚೂರು ಹಾಗೂ ಸಿಂಧನೂರು ನಗರಗಳನ್ನ ಮಾತ್ರ ಜುಲೈ 15 ರಿಂದ 22 ರವರೆಗೆ ಸಂಪೂರ್ಣ ಲಾಕ್‍ಡೌನ್ ಮಾಡಲಾಗುತ್ತಿದೆ ಅಂತ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಹೇಳಿದ್ದಾರೆ. ಇನ್ನುಳಿದ ತಾಲೂಕು ಪ್ರದೇಶಗಳಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಬಳಿಕ …

Read More »

ಕೋವಿಡ್-19 ಸೋಂಕು ಆರ್ಭಟ ಮುಂದುವರಿದಿದ್ದು,

ರಾಯಚೂರು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಆರ್ಭಟ ಮುಂದುವರಿದಿದ್ದು, ಶುಕ್ರವಾರ ಓರ್ವ ವೃದ್ಧ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಲಿಂಗಸಗೂರು ಮೂಲದ ವೃದ್ಧನಿಗೆ ಕೋವಿಡ್-19 ಸೋಂಕು ಪಾಸಿಟಿವ್ ಎಂದು ದೃಡಪಟ್ಟಿತ್ತು. ಗುರುವಾರ ಬೆಳಗ್ಗೆ ಓಪೆಕ್ ಆಸ್ಪತ್ರೆಯ ಐಸೊಲೇಶನ್ ವಾರ್ಡ್ ಗೆ ದಾಖಲಿಸಲಾಗಿತ್ತು. ಈತ ಹೈಪರ್ ಟೆನ್ಶನ್, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಇಂದು ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಕೋವಿಡ್-19 ನಿಯಮಾನುಸಾರ ಅಂತ್ಯಕ್ರಿಯೆ …

Read More »

ರಾಯಚೂರಿನ ಸರ್ಕಾರಿ ಕಚೇರಿಗಳಿಗೆ ಎದುರಾದ ಕೊರೊನಾ ಭೀತಿ

ರಾಯಚೂರು: ನಗರದ ಜಿಲ್ಲಾ ಪಂಚಾಯತ್ ಕಚೇರಿಗೆ ಕೊರೊನಾ ಸೋಂಕಿನ ಭೀತಿ ಎದುರಾಗಿದೆ. ಕೊರೊನಾ ಸೋಂಕಿತನ ಸಂಪರ್ಕಿತನೋರ್ವ ಕಚೇರಿ ತುಂಬಾ ಓಡಾಡಿರುವ ವಿಷಯ ತಿಳಿದ ಬಳಿಕ ಕಚೇರಿ ಸಿಬ್ಬಂದಿ ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಪಂಚಾಯತಿ ಕಚೇರಿ ಹಾಗೂ ಆವರಣವನ್ನ ಡಿಸ್ ಇನ್ಫೆಕ್ಷನ್ ಮಾಡಲಾಗಿದೆ. ಸೋಂಕಿತನ ಸಂಪರ್ಕಿತ ಬಂದು ಹೋದಮೇಲೆ ರಾಸಾಯನಿಕ ಸಿಂಪಡಣೆ ಮೂಲಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಚೇರಿಯ ಎಲ್ಲಾ ಕೊಠಡಿ, ಸಭಾಂಗಣದಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ಅಗ್ನಿಶಾಮಕ …

Read More »

ಪ್ರತಾಪಗೌಡ ಪಾಟೀಲ ಅವರನ್ನು ಚುನಾವಣೆಯಲ್ಲಿ ಆಯ್ಕೆಗೊಳಿಸುವುದಾಗಿ ಮಾತುಕೊಟ್ಟರೆ, 5- ಎ ಕಾಲುವೆ ಕಾಮಗಾರಿಯನ್ನು ಮಾಡಿಕೊಡುತ್ತೇನೆ’

ರಾಯಚೂರು: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರತಾಪಗೌಡ ಕೂಡಾ ಕಾರಣಿಕರ್ತರು. ‘ಮಸ್ಕಿ ಕ್ಷೇತ್ರದ ರೈತರು ಪ್ರತಾಪಗೌಡ ಪಾಟೀಲ ಅವರನ್ನು ಚುನಾವಣೆಯಲ್ಲಿ ಆಯ್ಕೆಗೊಳಿಸುವುದಾಗಿ ಮಾತುಕೊಟ್ಟರೆ, 5- ಎ ಕಾಲುವೆ ಕಾಮಗಾರಿಯನ್ನು ಮಾಡಿಕೊಡುತ್ತೇನೆ’ ಎಂದು ಜಲಸಂಪನ್ಮೂಲ‌ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಜಿಲ್ಲೆಯ ಮಸ್ಕಿ ತಾಲ್ಲೂಕು ಬುದ್ದಿನ್ನಿ ಗ್ರಾಮದಲ್ಲಿ ಬುಧವಾರ ಕೃಷ್ಣಾ ಜಲಭಾಗ್ಯ ನಿಗಮ ನಿಯಮಿತದ ನಂದವಾಡಗಿ ಏತ ನೀರಾವರಿ ಯೋಜನೆಯ ಹನಿ ನೀರಾವರಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.  5-ಎ ಕಾಲುವೆಯು …

Read More »