Breaking News
Home / ಜಿಲ್ಲೆ / ರಾಯಚೂರು (page 14)

ರಾಯಚೂರು

ಸ್‍ಎಸ್‍ಎಲ್‍ಸಿ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಗೊಂದಲ…………ಮರು ಪರೀಕ್ಷೆ ನಡೆಸುವಂತೆ ವಿದ್ಯಾರ್ಥಿಗಳ ಪೋಷಕರು ಒತ್ತಾಯ

ರಾಯಚೂರು: ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಗೊಂದಲ ಉಂಟಾಗಿದ್ದು, ಮರು ಪರೀಕ್ಷೆ ನಡೆಸುವಂತೆ ವಿದ್ಯಾರ್ಥಿಗಳ ಪೋಷಕರು ಒತ್ತಾಯ ಮಾಡಿದ್ದಾರೆ. ಸಿಂಧನೂರಿನ ಶ್ರೀಕೃಷ್ಣದೇವರಾಯ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿಯಿಂದಾಗಿ ಈ ಗೊಂದಲ ಉಂಟಾಗಿದೆ. ಪರೀಕ್ಷಾ ಕೇಂದ್ರದ 1,2,3ನೇ ಕೊಠಡಿಯ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ವಿತರಣೆ ಮಾಡಲಾಗಿದ್ದು, ಹಳೆಯ ಪಠ್ಯ ಕ್ರಮದ ಪ್ರಶ್ನೆ ಪತ್ರಿಕೆಯಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಬಿದ್ದಿದ್ದರು. ಪರೀಕ್ಷೆ ಆರಂಭವಾಗಿ ಅರ್ಧಗಂಟೆ ಬಳಿಕ ಪ್ರಶ್ನೆ ಪತ್ರಿಕೆ …

Read More »

ಬೈಕ್ ಕದ್ದು ಹುಚ್ಚನಂತೆ ನಟಿಸಿ ತಪ್ಪಿಸಿಕೊಳ್ಳುತ್ತಿದ್ದಕುಖ್ಯಾತ ಬೈಕ್ ಕಳ್ಳ

ರಾಯಚೂರು: ಬೈಕ್ ಕದ್ದು ಹುಚ್ಚನಂತೆ ನಟಿಸಿ ತಪ್ಪಿಸಿಕೊಳ್ಳುತ್ತಿದ್ದ ವಿಲಕ್ಷಣ ವರ್ತನೆಯ ಕುಖ್ಯಾತ ಬೈಕ್ ಕಳ್ಳನನ್ನು ನಗರದ ನೇತಾಜಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 3.40 ಲಕ್ಷ ರೂ. ಬೆಲೆ ಬಾಳುವ 15 ಬೈಕ್‍ಗಳನ್ನು ಜಪ್ತಿ ಮಾಡಲಾಗಿದೆ. ಮಾನ್ವಿ ತಾಲೂಕಿನ ಹರವಿ ಗ್ರಾಮದ ತಾಯಪ್ಪ ಬಂಧಿತ ಆರೋಪಿ. ನೇತಾಜಿ ನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಆರೋಪಿ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.   ಬೈಕ್ ಕದಿಯುವ ವೇಳೆ ಹುಚ್ಚನ ರೀತಿಯಲ್ಲಿ ವರ್ತನೆ …

Read More »

ಕಾಲುವೆ ಕಾಮಗಾರಿ ಬಗ್ಗೆ ರೈತರಲ್ಲಿ ಆತಂಕ,ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ರೈತರು ಹೋರಾಟ……

ರಾಯಚೂರು: ಜಿಲ್ಲೆಯ ಸಾವಿರಾರು ರೈತರ ಜೀವನಾಡಿ ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಭರದಿಂದ ಸಾಗಿದೆ. ಆದರೆ ಕಾಲುವೆ ಕಾಮಗಾರಿ ಬಗ್ಗೆ ರೈತರಲ್ಲಿ ಆತಂಕ ಎದುರಾಗಿದೆ. ನೂರಾರು ಕೋಟಿ ರೂಪಾಯಿ ಖರ್ಚುಮಾಡಿ ಅಧುನೀಕರಣ ಮಾಡಲಾಗುತ್ತಿದೆ. ಆದರೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ರೈತರು ಹೋರಾಟಕ್ಕೆ ಮುಂದಾಗಿದ್ದಾರೆ. ರಾಯಚೂರಿನ ದೇವದುರ್ಗ, ಲಿಂಗಸುಗೂರು ತಾಲೂಕುಗಳ ರೈತರ ಬದುಕಿನ ಚಿತ್ರಣವನ್ನೇ ಬದಲಿಸಿದ ನೀರಾವರಿಯ ಜೀವನಾಡಿಯಾದ ಕಾಲುವೆ ಇದಾಗಿದ್ದು, ಆಧುನೀಕರಣ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿಯಾಗುತ್ತಿದೆ. …

Read More »

ರಾಯಚೂರಿನಲ್ಲಿ ಸೂರ್ಯಗ್ರಹಣ ವೀಕ್ಷಣೆ: ಬಿಸ್ಕೆಟ್ ತಿಂದು ಮೌಢ್ಯಕ್ಕೆ ಬ್ರೇಕ್……..

ರಾಯಚೂರು: ನಗರದ ಅಂಬೇಡ್ಕರ್ ವೃತ್ತದಲ್ಲಿ ಸಾರ್ವಜನಿಕರಿಗಾಗಿ ಚೂಡಾಮಣಿ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಭಾರತ ಜ್ಞಾನ ವಿಜ್ಞಾನ ಸಮಿತಿ, ಶಿಕ್ಷಣ ಕಿರಣ ಸಂಸ್ಥೆ, ಸೂರ್ಯ ಕಿರಣ ಸಂಸ್ಥೆಯಿಂದ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಸೂರ್ಯಗ್ರಹಣ ವೇಳೆ ಮೂಢನಂಬಿಕೆ ಹಾಗೂ ಮೂಢ ಆಚರಣೆಗಳ ಬಗ್ಗೆ ಅರಿವು ಮೂಡಿಸಲು ಸಾರ್ವಜನಿಕರಿಗೆ ಬಿಸ್ಕೆಟ್ ನೀಡಲಾಗಿದೆ. ಗ್ರಹಣ ಕುರಿತ ವೈಜ್ಞಾನಿಕ ವಿಚಾರಗಳ ಮಾಹಿತಿ ನೀಡಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ನೀಡುವ ಮೂಲಕ ಸೂರ್ಯಗ್ರಹಣ …

Read More »

ರಾಯಚೂರಿನ ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿ ವಸೂಲಿ ದಂಧೆ- ಹಣ ಕೊಟ್ರೆ ಎಲ್ಲರಿಗೂ ಎಂಟ್ರಿ……

ರಾಯಚೂರು: ಜಿಲ್ಲೆಯಲ್ಲಿ 50, 100 ರೂಪಾಯಿ ಆಸೆಗೆ ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿನ ಸಿಬ್ಬಂದಿ ಕೊರೊನಾ ವೈರಸ್ ಹರಡಿಸುತ್ತಿದ್ದಾರಾ ಎನ್ನುವ ಆತಂಕ ಮೂಡಿದೆ. ಆಂಧ್ರ ಪ್ರದೇಶದಿಂದ ಬರುವವರು ಚೆಕ್‌ಪೋಸ್ಟ್‌ನಲ್ಲಿನ ಪೊಲೀಸರಿಗೆ 100 ರೂ. ಕೊಟ್ಟರೆ ಸಾಕು ಹೋಂ ಕ್ವಾರಂಟೈನ್ ಭೀತಿಯೇ ಇಲ್ಲ. ಕೊರೊನಾ ಹರಡುವಿಕೆ ತಡೆಗಾಗಿ ಮಾಡಿರುವ ಚೆಕ್‍ಪೋಸ್ಟ್ ಸಿಬ್ಬಂದಿಯೇ ರಾಯಚೂರಿನಲ್ಲಿ ಕೊರೊನಾ ಹರಡುವುದಕ್ಕೆ ಕಾರಣರಾಗುತ್ತಿದ್ದಾರೆ. ಜಿಲ್ಲೆಯ ಗಿಲ್ಲೆಸುಗೂರು ಚೆಕ್‍ಪೋಸ್ಟ್‍ನಲ್ಲಿ ಪೋಲೀಸರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿ ಕೃತ್ಯ ಈಗ ಬಟಾಬಯಲಾಗಿದೆ. …

Read More »

ಜೂನ್ 17ರಿಂದ ರಾಯಚೂರಿನಿಂದ ಮಂತ್ರಾಲಯಕ್ಕೆ ಬಸ್‍ಗಳ ಓಡಾಟ ಆರಂಭ

ರಾಯಚೂರು: ಜಿಲ್ಲೆಗೆ ಇಂದು ಸಹ ಕೊರೊನಾಘಾತವಾಗಿದ್ದು ಜಿಲ್ಲೆಯಲ್ಲಿ ಒಂದೇ ದಿನ 18 ಕೊರೊನಾ ಪಾಸಿಟಿವ್ ಪ್ರಕರಗಳು ದೃಢವಾಗಿವೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 403ಕ್ಕೆ ಏರಿದೆ. ಇಂದು ಟ್ರಾವೆಲ್ ಹಿಸ್ಟರಿ ಇಲ್ಲದ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಕಂಟೈನ್ಮೆಂಟ್ ಝೋನ್ ನಿಂದ ಒಂದು ಪ್ರಕರಣ ದಾಖಲಾಗಿದೆ. ತೆಲಂಗಾಣದಿಂದ ಬಂದಿರುವ ಇಬ್ಬರು ಹಾಗೂ ತಮಿಳುನಾಡಿನಿಂದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಬಂದಿರುವ 10 ಜನರಲ್ಲಿ ಪಾಸಿಟಿವ್ ದೃಢವಾಗಿದೆ. ಮಹಾರಾಷ್ಟ್ರದಿಂದ ಬಂದಿರುವ 10 …

Read More »

ವೈದ್ಯರ ನಿರ್ಲಕ್ಷ ಕೊರಾನ್ ಸೋಂಕಿತ ಗರ್ಭಿಣಿಗೆ ಗರ್ಭ ಪಾತ..

ರಾಯಚೂರು: ಕೊರೊನಾ ಸೋಂಕಿತ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ನೀಡದ ಹಿನ್ನಲೆಯಲ್ಲಿ ತೀವ್ರ ರಕ್ತಸ್ರಾವವಾಗಿ ಮಗು ಹೊಟ್ಟೆಯಲ್ಲೇ ಮೃತಪಟ್ಟ ಘಟನೆ ರಾಯಚೂರಿನ ಕೊವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ಮೂರು ತಿಂಗಳ ಗರ್ಭಿಣಿ ಒಪೆಕ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿದ್ದರು. ಸೋಮವಾರ ರಾತ್ರಿ ತೀವ್ರ ತಕ್ತಸ್ರಾವವಾಗಿ ಗರ್ಭಿಣಿ ನರಳಾಡಿದ್ದರು. ಭಾನುವಾರ ರಾತ್ರಿಯಿಂದಲೇ ರಕ್ತಸ್ರಾವವಾಗುತ್ತಿದ್ದರೂ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಗರ್ಭಿಣಿಗೆ ಚಿಕಿತ್ಸೆ ನೀಡುವಂತೆ ಕೋವಿಡ್ ವಾರ್ಡ್ ನಲ್ಲಿದ್ದ ಇತರ ರೋಗಿಗಳು ನಿನ್ನೆ ಮಧ್ಯಾಹ್ನದಿಂದ …

Read More »

ಮಂತ್ರಾಲಯದಲ್ಲಿ ಇಂದು ತೆರೆಯದ ದ್ವಾರ ಬಾಗಿಲು- ನಿರಾಸೆಯಿಂದ ಮರಳಿದ ಭಕ್ತರು

ರಾಯಚೂರು: 75 ದಿನಗಳ ಬಳಿಕ ರಾಜ್ಯದಲ್ಲಿ ಧಾರ್ಮಿಕ ಸ್ಥಳಗಳ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಆದರೆ ರಾಯಚೂರಿನಲ್ಲಿ ದೇವಾಲಯಗಳಲ್ಲಿ ಪ್ರವೇಶ ಮುಕ್ತವಾಗಿದ್ದರೂ ಭಕ್ತರ ಸಂಖ್ಯೆ ಅತ್ಯಂತ ವಿರಳವಾಗಿದೆ. ಇತ್ತ ಮಂತ್ರಾಲಯದಲ್ಲಿ ಅಗತ್ಯ ಸಿದ್ಧತೆಯ ಕೊರತೆ ಹಿನ್ನೆಲೆ ಮಠ ಮಹಾದ್ವಾರವನ್ನ ತೆರೆದಿಲ್ಲ. ಮಂತ್ರಾಲಯ ಮಠದ ಮಹಾದ್ವಾರವನ್ನು ತೆರೆಯದೆ ಇರುವುದರಿಂದ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಭಾಗ್ಯ ಇಂದು ಭಕ್ತರಿಗೆ ಸಿಕ್ಕಿಲ್ಲ. ಕೇಂದ್ರ ಹಾಗೂ ಆಂಧ್ರ ಸರ್ಕಾರದ ಸೂಚನೆ ಹಿನ್ನೆಲೆ ಇಂದಿನಿಂದ ದರ್ಶನಕ್ಕೆ …

Read More »

ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಆಗ್ರಹ- ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆಯರು

ರಾಯಚೂರು: ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ನಮ್ಮ ಕುಟುಂಬಗಳು ಹಾಳಾಗುತ್ತಿವೆ ಎಂದು ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನ ಬಾಗೂರು ಗ್ರಾಮದ ಮಹಿಳೆಯರು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ದೂರು ನೀಡಿದ್ದಾರೆ. ಈ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಕ್ಕೆ ಮದ್ಯ ಮಾರಾಟ ನಿಂತಿತ್ತು. ಆದರೆ ಕಳೆದ ಆರು ತಿಂಗಳಿಂದ ಮತ್ತೆ ಅಕ್ರಮವಾಗಿ ಮದ್ಯ ಮಾರಾಟ ಶುರುವಾಗಿದೆ. ಇದರಿಂದ ನಮ್ಮ ಗಂಡಂದಿರು …

Read More »

ಮೊಳಕೆ ಒಡೆಯದ ಕಳಪೆ ಬೀಜ – ಉತ್ತಮ ಮಳೆಯಾದ್ರೂ ಮಂಕಾದ ರೈತರು…….

ರಾಯಚೂರು: ರೈತರು ದೇಶದ ಬೆನ್ನೆಲುಬು ಅನ್ನೋದು ಕೇವಲ ಮಾತಿಗೆ ಸೀಮಿತವಾಗಿದೆ. ರೈತರಿಗೆ ಮಾತ್ರ ಅನ್ಯಾಯವಾಗುತ್ತಲೇ ಇದೆ. ಸಾಲಸೂಲ ಮಾಡಿ ಜಮೀನಿನಲ್ಲಿ ಬಿತ್ತನೆ ಮಾಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಅನ್ನದಾತರು ಇರುತ್ತಾರೆ. ಆದರೆ ರೈತರಿಗೆ ಮೋಸ ಮಾಡಲೆಂದೇ ಇರುವ ಕಳಪೆ ಬೀಜ ತಯಾರಿಕಾ ಕಂಪನಿಗಳು ಮಾತ್ರ ರೈತರ ಬದುಕನ್ನೇ ಮುಳುಗಿಸುತ್ತಿವೆ. ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಖುಷಿಯಾಗಿದ್ದ ರಾಯಚೂರಿನ ಸಿಂಧನೂರು, ಮಸ್ಕಿ ತಾಲೂಕಿನ ಈ ರೈತರು ಈಗ ಮೋಸಹೊಗಿದ್ದಾರೆ. ಸೂರ್ಯಕಾಂತಿ ಬೀಜ ಬಿತ್ತಿ …

Read More »