Breaking News
Home / ಜಿಲ್ಲೆ / ರಾಯಚೂರು (page 11)

ರಾಯಚೂರು

ಕೋವಿಡ್ ವಾರ್ಡ್ ಗಳಿಗೆ ವೈದ್ಯರ ಭೇಟಿ ಅಪರೂಪವಾಗಿರುವುದರಿಂದ ರೋಗಿಗಳು ಚಿಕಿತ್ಸೆಯಿಲ್ಲದೆ ಪರದಾಡುತ್ತಿದ್ದಾರೆ.

ರಾಯಚೂರು: ಜಿಲ್ಲೆಯ ಕೋವಿಡ್ ಆಸ್ಪತ್ರೆ ಓಪೆಕ್ ನಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದ ಹಂದಿಗಳನ್ನ ಕೊನೆಗೂ ಜಿಲ್ಲಾಡಳಿತ ಎಚ್ಚೆತ್ತು ಹಿಡಿದಿದೆ. ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಪಬ್ಲಿಕ್ ಟಿವಿ ವರದಿಯನ್ನ ಪ್ರಸಾರ ಮಾಡಿತ್ತು. ಕೋವಿಡ್ ಸೋಂಕಿತ ರೋಗಿಗಳಿರುವ ವಾರ್ಡ್ ಪಕ್ಕದಲ್ಲೇ ಹಂದಿಗಳು ಬಂದು ಹೋಗುತ್ತಿದ್ದರೂ ನೋಡುವವರಿರಲಿಲ್ಲ. ಇಡೀ ಆಸ್ಪತ್ರೆಯೇ ಹಂದಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದ್ದರೂ ಆಸ್ಪತ್ರೆ ಹಿರಿಯ ಅಧಿಕಾರಿಗಳು ತಲೆಕೆಡಿಸಿಕೊಂಡಿರಲಿಲ್ಲ. ಈಗ ಕೊನೆಗೂ ಎಚ್ಚೆತ್ತು ಹಂದಿಗಳನ್ನ ಹಿಡಿಯಲಾಗಿದೆ. ಹಂದಿಗಳ ಮಾಲೀಕರ ವಿರುದ್ದ ಕ್ರಮಕ್ಕೆ ಅಧಿಕಾರಿಗಳು …

Read More »

ಅಂಬ್ಯುಲೆನ್ಸ್ ನಲ್ಲಿ ಚಿನ್ನದ ಗಣಿ ಕಾರ್ಮಿಕರ ಓಡಾಟ

ರಾಯಚೂರು: ಲಿಂಗಸುಗೂರಿನ ಹಟ್ಟಿ ಚಿನ್ನದ ಗಣಿಯಿಂದ ದೇವದುರ್ಗದ ಊಟಿ ಚಿನ್ನದ ಗಣಿಗೆ ಕೆಲಸಕ್ಕಾಗಿ ಕಾರ್ಮಿಕರನ್ನ ಅಂಬ್ಯುಲೆನ್ಸ್‍ನಲ್ಲಿ ನಿತ್ಯ ಕರೆದ್ಯೊಯ್ಯಲಾಗುತ್ತಿದೆ. ಅಂಬ್ಯುಲೆನ್ಸ್ ಪದೇ ಪದೇ ಓಡಾಡುವುದನ್ನ ಗಮನಿಸಿ ಅನುಮಾನಗೊಂಡ ದೇವದುರ್ಗ ತಾಲೂಕಿನ ವಂದಲಿ ಗ್ರಾಮಧ ಜನ ಅಂಬ್ಯುಲೆನ್ಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಗಿಗಳನ್ನ ಸಾಗಿಸಲು ಎಷ್ಟು ಬಾರಿ ನಿಲ್ಲಿಸಲು ಯತ್ನಿಸಿದರು ನಿಲ್ಲದ ಅಂಬ್ಯುಲೆನ್ಸ್ ನಿಯಮ ಬಾಹಿರವಾಗಿ ಕಾರ್ಮಿಕರನ್ನ ಸಾಗಣೆ ಮಾಡುತ್ತಿರುವುದಕ್ಕೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಗ್ರಾಮೀಣ ರಸ್ತೆಯಲ್ಲಿ ಸೈರನ್ ಹಾಕಿಕೊಂಡು ಅತೀ ವೇಗವಾಗಿ …

Read More »

ಚಿನ್ನಕ್ಕಾಗಿ ಭೂಮಿ ನೀಡಿ, ನಿತ್ಯ ಮನೆಗಳನ್ನು ಕಳೆದುಕೊಳ್ಳುತ್ತಿರುವ ಗ್ರಾಮಸ್ಥರು

ರಾಯಚೂರು  : ಆಭರಣಕ್ಕಾಗಿ ಚಿನ್ನವನ್ನು ಗಣಿಯಿಂದ ತೆಗೆಯಬೇಕು, ಈ ಚಿನ್ನವನ್ನು ತೆಗೆಯುವುದರಿಂದಾಗಿ ಈ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ ಇವರ ಮನೆಗಳು ಸಂಪೂರ್ಣವಾಗಿ ಬಿರುಕು ಬಿಟ್ಟಿವೆ. ಇವರ ಭೂಮಿಯಲ್ಲಿಯ ನೀರು ವಿಷವಾಗಿದೆ, ಈ ಮಧ್ಯೆ ಚಿನ್ನಕ್ಕಾಗಿ ಭೂಮಿ ನೀಡಿದ ಗ್ರಾಮದ ಎಲ್ಲರಿಗೂ ಉದ್ಯೋಗ ನೀಡಿ ಎಂದು ಆಗ್ರಹಿಸಿ ಕಳೆದ ಆರು ದಿನಗಳಿಂದ ಧರಣಿ ಆರಂಭಿಸಿದ್ದಾರೆ. ರಾಜ್ಯದಲ್ಲಿ ಚಿನ್ನವನ್ನು ಹೊರತೆಗೆಯುವ ಗಣಿಗಾರಿಕೆ ಇರುವುದು ಈಗ ಕೇವಲ ಹಟ್ಟಿ ಚಿನ್ನದ ಗಣಿಯಲ್ಲಿ ಮಾತ್ರ, ಹಟ್ಟಿ …

Read More »

ಕೃಷ್ಣಾ ನದಿಯಲ್ಲಿ ನಾಪತ್ತೆಯಾಗಿದ್ದ ನಾಲ್ವರು ಶವವಾಗಿ ಪತ್ತೆ……….

ರಾಯಚೂರು: ಆಗಸ್ಟ್ 17ರಂದು ಕೃಷ್ಣ ನದಿಯಲ್ಲಿ ತೆಪ್ಪ ಮುಳುಗಿ ನಾಪತ್ತೆಯಾಗಿದ್ದ ರಾಯಚೂರಿನ ನಡುಗಡ್ಡೆ ಗ್ರಾಮ ಕುರ್ವಕಲಾದ ನಾಲ್ಕು ಜನ ಕೊನೆಗೆ ಶವವಾಗಿ ಪತ್ತೆಯಾಗಿದ್ದಾರೆ.ತೆಲಂಗಾಣದ ಪಂಚದೇವಪಾಡಗೆ ದಿನಸಿ ತರಲು ಹೋಗಿದ್ದವರು ಕುರ್ವಾಕುಲಕ್ಕೆ ಮರಳುವಾಗ ತೆಪ್ಪ ಮುಳುಗಿತ್ತು. ಮೊದಲಿಗೆ ಇಬ್ಬರು, ಬಳಿಕ ಒಬ್ಬರು ಒಟ್ಟು ಮೂರು ಜನ ತೆಲಂಗಾಣದ ಜುರಾಲಾ ಇಂದಿರಾ ಪ್ರಿಯದರ್ಶಿನಿ ಜಲಾಶಯದ ಬಳಿ ಶವವಾಗಿ ಪತ್ತೆಯಾಗಿದ್ದರು. ಇಂದು ಬಾಲಕಿ ರೋಜಾ ಸಹ ಜಲಾಶಯ ಬಳಿ ಶವವಾಗಿ ದೊರಕಿದ್ದಾಳೆ. ಸುಮಲತಾ, ನರಸಮ್ಮ, …

Read More »

ಪರಿಸರ ಸ್ನೇಹಿ ಗೋಪಿಚಂದನದ ವಿಶೇಷ ಗಣೇಶ ಮೂರ್ತಿಗೆ ಈ ಬಾರಿ ಎಲ್ಲೆಡೆಯಿಂದ ಭಾರೀ ಬೇಡಿಕೆ

ರಾಯಚೂರು: ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಹಬ್ಬ ಬಂದಿದೆ. ಆದರೆ ಈ ಬಾರಿ ಸಾರ್ವಜನಿಕವಾಗಿ ಅದ್ಧೂರಿ ಗಣೇಶೋತ್ಸವ ಆಚರಿಸುವುದಕ್ಕೆ ಅವಕಾಶ ಇಲ್ಲ. ಕೊರೊನಾ ಮಹಾಮಾರಿ ಹಿನ್ನೆಲೆ ಬಹುತೇಕರು ಮನೆಯಲ್ಲಿ ಗಣೇಶನ ಪ್ರತಿಷ್ಠಾಪಿಸುತ್ತಾರೆ. ಹೀಗಾಗಿ ರಾಯಚೂರಿನ ಪರಿಸರ ಸ್ನೇಹಿ ಗೋಪಿಚಂದನದ ವಿಶೇಷ ಗಣೇಶ ಮೂರ್ತಿಗೆ ಈ ಬಾರಿ ಎಲ್ಲೆಡೆಯಿಂದ ಭಾರೀ ಬೇಡಿಕೆ ಬಂದಿದೆ. ನಗರದ ಜಯತೀರ್ಥದಾಸರ ಕುಟುಂಬ ಗೋಪಿ ಚಂದನದಿಂದ ಪರಿಸರ ಸ್ನೇಹಿ, ಸಾಂಪ್ರದಾಯಿಕ ಗಣೇಶನನ್ನ ಮಾಡಿ ಮಾರಾಟ ಮಾಡುತ್ತಿದ್ದಾರೆ. …

Read More »

ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ6 ವರ್ಷದ ಬಾಲಕಿ ರೋಜಾಳಿಗಾಗಿ ಶೋಧ ಕಾರ್ಯ

ರಾಯಚೂರು: ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಪತ್ತೆಯಾಗಿದ್ದ ನಾಲ್ವರ ಪೈಕಿ ಮೂವರು ಮಹಿಳೆಯರ ಶವ ಪತ್ತೆಯಾಗಿದ್ದು, 6 ವರ್ಷದ ಬಾಲಕಿ ರೋಜಾಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಆ.17 ದಿನಸಿ ತರಲು ರಾಯಚೂರು ಜಿಲ್ಲೆಯ  ಕುರ್ವಕುಲಾ ಗ್ರಾಮದಿಂದ ತೆಲಂಗಾಣದ ಪಂಚದೇವಪಾಡಕ್ಕೆ ಹೋಗಿದ್ದ ನಾಲ್ವರು ಮರಳಿ  ಬರುವಾಗ ತೆಪ್ಪ ಮುಗುಚಿ ನೀರು ಪಾಲಾಗಿದ್ದರು. ನಿನ್ನೆ ಇಬ್ಬರ ಮಹಿಳೆಯರ ಶವ ಪತ್ತೆಯಾಗಿದ್ದು, ಇಂದು ಬೆಳಗ್ಗೆ ಮತ್ತೊಬ್ಬ ಮಹಿಳೆ ಮೃತದೇಹ ತೊರೆತಿದೆ.  ಜುರುಲಾ ಜಲಾಶಯದ ಬಳಿ …

Read More »

ಶ್ರೀರಾಮನ ಬಗ್ಗೆ ಅವಹೇಳನಕಾರಿ ಪೋಸ್ಟ್ – ಆರೋಪಿ ಬಂಧನದಿಂದ ಶಾಂತವಾದ ದೇವದುರ್ಗ

ರಾಯಚೂರು: ಶ್ರೀ ರಾಮಚಂದ್ರನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಿನ್ನೆಲೆ ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಉಂಟಾಗಿದ್ದ ಬಿಗುವಿನ ವಾತಾವರಣ ಆರೋಪಿಯ ಬಂಧನ ಹಿನ್ನೆಲೆ ಸದ್ಯ ಶಾಂತವಾಗಿದೆ. ಜಹೀರ್ ಎಂಬ ಯುವಕ ಶ್ರೀರಾಮನ ಬಗ್ಗೆ ಅವಹೇಳನಕಾರಿ ವಾಟ್ಸಪ್ ಸ್ಟೇಟಸ್ ಹಾಕಿದ್ದ. ಇದರಿಂದ ಆಕ್ರೋಶಗೊಂಡ ನೂರಾರು ಜನ ಹಿಂದೂ ಪರ ಸಂಘಟನೆ ಕಾರ್ಯಕರ್ತರು ರಾತ್ರೋ ರಾತ್ರಿ ದೇವದುರ್ಗ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು. ಆರೋಪಿಯನ್ನ ಕೂಡಲೇ ಬಂಧಿಸುವಂತೆ ಆಗ್ರಹಿಸಿ ಹೆಚ್ಚು ಜನ ಸೇರಿದ್ದರಿಂದ ಬಿಗುವಿನ …

Read More »

ರಸ್ತೆ ರಿಪೇರಿ ಮಾಡಿ, ಮನೆ ಪೂರ್ಣಗೊಳಿಸಿ- ಶೌರ್ಯ ಪ್ರಶಸ್ತಿ ಪಡೆದ ಬಾಲಕನ ಮನವಿ

ರಾಯಚೂರು: ಕಳೆದ ವರ್ಷ ಕೃಷ್ಣಾ ಪ್ರವಾಹಕ್ಕೆ ರಾಯಚೂರಿನ ದೇವದುರ್ಗದ ಹಿರೇರಾಯಕುಂಪಿ ಸೇತುವೆ ಮುಳುಗಡೆಯಾಗಿದ್ದಾಗ ಅಂಬುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಮೆರೆದಿದ್ದ ಗ್ರಾಮದ ಬಾಲಕ ವೆಂಕಟೇಶ್‍ಗೆ ರಾಷ್ಟ್ರಮಟ್ಟದ ಶೌರ್ಯ ಪ್ರಶಸ್ತಿಯೂ ಬಂತು. ಆದರೆ ಗ್ರಾಮದ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಗೂಗಲ್ ಮಾರ್ಗದ ಹಿರೇರಾಯಕುಂಪಿ ಸೇತುವೆ ಎರಡು ಕಡೆ ಬಿರುಕು ಬಿಟ್ಟಿದೆ. ಸೇತುವೆ ನಿರ್ಮಾಣವಾಗಿ ಐದಾರು ವರ್ಷಗಳಷ್ಟೇ ಕಳೆದಿದ್ದರೂ ಸೇತುವೆ ಮೇಲಿನ ರಸ್ತೆ ಹದಗೆಟ್ಟಿದೆ. ಸೇತುವೆ ಬಳಿ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ. …

Read More »

ಕೃಷ್ಣಾ ನದಿಯಲ್ಲಿ ನಾಪತ್ತೆಯಾದ ನಾಲ್ವರಿಗಾಗಿ ಶೋಧ ಕಾರ್ಯ ಆರಂಭ

ರಾಯಚೂರು: ಕೃಷ್ಣಾ ನದಿಯಲ್ಲಿ ನಾಪತ್ತೆಯಾಗಿರುವ ರಾಯಚೂರಿನ ಕುರ್ವಕಲಾ ನಡುಗಡ್ಡೆ ಗ್ರಾಮದ ನಾಲ್ವರಿಗಾಗಿ ಶೋಧ ಕಾರ್ಯ ಬೆಳಗ್ಗೆಯಿಂದ ಆರಂಭವಾಗಿದೆ. ತೆಲಂಗಾಣದ ಪಂಚಮಪಾಡ್ ಬಳಿ ಕೃಷ್ಣಾ ನದಿಯಲ್ಲಿ ಮುಳುಗಿದ್ದ ತೆಪ್ಪದಲ್ಲಿನ 9 ಜನರನ್ನ ಸೋಮವಾರ ರಕ್ಷಿಸಲಾಗಿತ್ತು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ. ಇಂದು ಬೆಳಗ್ಗೆ ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳ ನಾಪತ್ತೆಯಾಗಿರುವ ನಾಲ್ವರ ಶೋಧಕಾರ್ಯವನ್ನು ತೆಲಂಗಾಣದ ಪಂಚಮಪಾಡ್ ಬಳಿ ಆರಂಭಿಸಿದೆ. ತೆಲಂಗಾಣದ ಪಂಚಮಪಾಡ್ ಬಳಿ ಕೃಷ್ಣಾ ನದಿಯಲ್ಲಿ ಮುಳುಗಿದ್ದ ತೆಪ್ಪದಲ್ಲಿನ 9 ಜನರನ್ನ ಸೋಮವಾರ …

Read More »

ದಿನಸಿ ಖರೀದಿಗೆ ಹೋಗಿದ್ದ ನಾಲ್ವರು ಅಗತ್ಯ ವಸ್ತುಗಳನ್ನ ಖರೀದಿಸಿ ಮರಳುವಾಗ ನಾಲ್ವರು ನಾಪತ್ತೆ

ರಾಯಚೂರು: ದಿನಸಿ ತರಲು ತೆಲಂಗಾಣಕ್ಕೆ ತೆರಳಿದ್ದ ರಾಯಚೂರು ತಾಲೂಕಿನ ಕುರ್ವಕಲಾ ನಡುಗಡ್ಡೆ ಗ್ರಾಮದ 13 ಜನ ಮರಳಿ ಬರುವಾಗ ತೆಪ್ಪ ಮುಗುಚಿ ಬಿದ್ದು ನಾಲ್ವರು ನಾಪತ್ತೆಯಾಗಿದ್ದಾರೆ. ಕುರ್ವಾಕಲಾ ಗ್ರಾಮದ ಪಾರ್ವತಿ (55) ನರಸಮ್ಮ (36) ಸುಮಲತಾ (32) ಪೂಜಾ (10) ನಾಪತ್ತೆಯಾದವರು. ತೆಲಂಗಾಣದ ಪಂಚಪಾಡಕ್ಕೆ ದಿನಸಿ ಖರೀದಿಗೆ ಹೋಗಿದ್ದ ನಾಲ್ವರು ಅಗತ್ಯ ವಸ್ತುಗಳನ್ನ ಖರೀದಿಸಿ ಮರಳುವಾಗ ಘಟನೆ ನಡೆದಿದೆ. 13 ಜನರಲ್ಲಿ 9 ಜನ ಈಜಿ ದಡ ಸೇರಲು ಹರಸಾಹಸ …

Read More »