Breaking News
Home / ಜಿಲ್ಲೆ / ಮೈಸೂರ್ (page 12)

ಮೈಸೂರ್

ಕೊರೊನಾದಿಂದ ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದ ವೃದ್ಧ ಸಾವು….

ಮೈಸೂರು: ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ 72 ವರ್ಷದ ವೃದ್ಧ ಇಂದು ಸಾವನ್ನಪ್ಪಿದ್ದಾರೆ. ಮೈಸೂರಿನ ನಜರ್‍ಬಾದ್ ನಿವಾಸಿಯಾಗಿದ್ದ 72 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ತಗುಲಿತ್ತು. 17 ದಿನಗಳ ಹಿಂದೆ ಕೊರೊನಾದಿಂದ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದರು. ಆದ್ರೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧ ಸಾವನ್ನಪ್ಪಿದ್ದಾರೆ. ಮೃತ ವೃದ್ಧನ ಅಂತ್ಯಕ್ರಿಯೆ ಶುಕ್ರವಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೈಸೂರಿನ 90 ಕೊರೊನಾ ಸೋಂಕಿತರಲ್ಲಿ 88 ಮಂದಿ ಗುಣಮುಖವಾಗಿ …

Read More »

ರೈತರಿಗೆ ಹಣ ಕೊಡಲು ಕೈ ಸಾಲ ಸಿಗದೆ ಆಸ್ತಿ ಅಡ ಇಟ್ರು – ಜನರಿಗೆ ದಿನಸಿ ಕಿಟ್, ತರಕಾರಿ ವಿತರಿಸಲು 5.5 ಕೋಟಿ ಖರ್ಚು

ಮೈಸೂರು: ಮಾಜಿ ಸಚಿವ ಸಾರಾ ಮಹೇಶ್ ಕೊರೊನಾ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದ ಜನರಿಗೆ ದಿನಸಿ ಕಿಟ್ ವಿತರಿಸಲು ಪೆಟ್ರೋಲ್ ಬಂಕ್ ಹಾಗೂ ಪ್ರೀತಿಯಿಂದ ಕಟ್ಟಿಸಿದ ಮನೆಯನ್ನು ಬ್ಯಾಂಕಿನಲ್ಲಿ ಅಡ ಇಟ್ಟಿದ್ದಾರೆ. ತಮ್ಮ ಕ್ಷೇತ್ರದ ಜನರಿಗೆ 5.5 ಕೋಟಿ ರೂಪಾಯಿ ವೆಚ್ಚದಲ್ಲಿ ಪಡಿತರ ಕಿಟ್ ಹಾಗೂ ತರಕಾರಿ ವಿತರಿಸಿದ್ದಾರೆ. ರೈತರಿಂದ ಒಂದೂವರೆ ಕೋಟಿ ರೂಪಾಯಿಯಷ್ಟು ತರಕಾರಿ ಖರೀದಿ ಮಾಡಿದ್ದಾರೆ. ರೈತರಿಗೆ ಈ ತಿಂಗಳ 18ರ ಒಳಗೆ ಹಣ ಕೊಡುವ ಮಾತು ಕೊಟ್ಟಿದ್ದಾರೆ. …

Read More »

ಮೈಸೂರಿನ 90 ಕೊರೊನಾ ಸೋಂಕಿತರಲ್ಲಿ 88 ಮಂದಿ ಗುಣಮುಖರಾಗಿ ಡಿಸ್ಚಾರ್ಜ್…….

ಮೈಸೂರು: ಇಂದು ಕೋವಿಡ್-19 ಆಸ್ಪತ್ರೆಯಿಂದ ಗುಣಮುಖರಾಗಿ ಇಬ್ಬರು ಡಿಸ್ಚಾರ್ಜ್ ಆಗಿದ್ದು, ಮೈಸೂರು ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಒಟ್ಟು 90 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈಗಾಗಲೇ 86 ಜನರು ಗುಣಮುಖರಾಗಿ ಮನೆ ತಲುಪಿದ್ದಾರೆ. ಇಂದು ಸಂಜೆ ರೋಗಿ 395 ಮತ್ತು 204 ಸಂಪೂರ್ಣ ಗುಣಮುಖವಾದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ …

Read More »

ಮೈಸೂರಿನಲ್ಲಿ ವ್ಯಾಪಾರ ವಹಿವಾಟಿಗೆ ಮುಕ್ತ ಅವಕಾಶ- ಷರತ್ತುಗಳು ಅನ್ವಯ………..

ಮೈಸೂರು: ನಗರದಲ್ಲಿ (ಗುರುವಾರ) ಎಲ್ಲ ರೀತಿಯ ವ್ಯಾಪಾರ ವಹಿವಾಟಿಗೆ ಮುಕ್ತ ಅವಕಾಶ ನೀಡಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆಯಿಂದ ಆದೇಶ ಹೊರಡಿಸಿದೆ. 14 ದಿನದಿಂದ ಕೊರೊನಾ ಪ್ರಕರಣಗಳು ಬಾರದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕೊರೊನಾ ಭೀತಿ ಕಡಿಮೆಯಾದ ಹಿನ್ನೆಲೆಯಲ್ಲಿ ಪಾಲಿಕೆ ಗುರುತಿಸಿದ್ದ 91 ರಸ್ತೆಗಳ ಮೇಲಿನ ನಿರ್ಬಂಧ ತೆರವು ಮಾಡಲಾಗಿದೆ. ನಗರದ 91 ರಸ್ತೆಗಳಲ್ಲಿ ಅಗತ್ಯ ವಸ್ತುಗಳ ಮಾರಾಟ ಮಾತ್ರ ಅವಕಾಶ ನೀಡಲಾಗಿತ್ತು. ಗುರುವಾರದಿಂದ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದ್ದು, ವ್ಯಾಪಾರಕ್ಕೆ ಮುಕ್ತ ಅವಕಾಶ …

Read More »

ಮೈಸೂರಲ್ಲಿ ಅನಗತ್ಯವಾಗಿ ತಿರುಗಾಡಿದರೆ ಬೀಳುತ್ತೆ ದಂಡ; ಹೊರಗಿನಿಂದ ಬಂದವರಿಗೆ ಕಡ್ಡಾಯ ಕ್ವಾರಂಟೈನ್

ಮೈಸೂರು: ಮೈಸೂರಿನಲ್ಲಿ ಕೊರೋನಾ ಭೀತಿ ಕಡಿಮೆಯಾದ ಹಿನ್ನೆಲೆಯಲ್ಲಿ  ವಾಹನ ಸಂಚಾರ ಹೆಚ್ಚಾಗಿದ್ದು, ಅನಗತ್ಯವಾಗಿ ರಸ್ತೆಗೀಳಿದವರಿಗೆ ಜಿಲ್ಲಾಡಳಿತ ದಂಡ ವಿಧಿಸುತ್ತಿದೆ. ಮಧ್ಯಾಹ್ನ 12 ಗಂಟೆಯ ನಂತರ ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತ ದಂಡ ವಿಧಿಸಲು ತೀರ್ಮಾನಿಸಿದೆ. ಆಸ್ಪತ್ರೆ, ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ ಉಳಿದ ವ್ಯವಹಾರಗಳಿಗೆ ನಿರ್ಬಂಧ ಹೇರಲಾಗಿದೆ. ನಿಯಮ ಉಲ್ಲಂಘಿಸಿ ವಾಹನ ಸಂಚಾರ ಮಾಡಿದರೆ 2 ಸಾವಿರ ದಂಡ ವಿಧಿಸಲಾಗುತ್ತಿದೆ. ಈಗಾಗಲೇ 5 ಸಾವಿರ ವಾಹನಗಳನ್ನು ಸೀಜ್ ಮಾಡಿರುವ ಮೈಸೂರು ನಗರ …

Read More »

ಮೈಸೂರಿನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಸಿಕ್ಕಿ ಹಾಕಿಕೊಂಡಿದ್ದಾರೆ.

ಮೈಸೂರು: ಇಡೀ ದೇಶವೇ ಕೊರೊನಾ ವೈರಸ್ ಎಂಬ ಮಹಾಮಾರಿಯನ್ನು ಎದುರಿಸುತ್ತಿದೆ. ಈ ಮಧ್ಯೆ ಮೈಸೂರಿನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಸಿಕ್ಕಿ ಹಾಕಿಕೊಂಡಿದ್ದಾರೆ. ಹೌದು. ಗುರುವಾರ ರಾತ್ರಿ ಖದೀಮರು ಸರಗಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಮೂವರು ಯುವಕರನ್ನು ಬಂಧಿಸಲಾಗಿದೆ. ಮಹದೇಶ್ವರ ಬಡಾವಣೆಯಲ್ಲಿ ಮಹಿಳೆಯಿಂದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ. ನಂತರ ರಿಂಗ್‍ರಸ್ತೆ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಬಳಿಯೂ ಸರಗಳ್ಳತನ ಮಾಡಿ ಪಲ್ಸರ್ ಬೈಕಿನಲ್ಲಿ ಕಳ್ಳರು ಪರಾರಿಯಾಗುತ್ತಿದ್ದರು. …

Read More »

ಮಹಾಮಾರಿ ಕೊರೊನಾ ಗೆದ್ದ ಮೈಸೂರು- 90ರಲ್ಲಿ 83 ಮಂದಿ ಡಿಸ್ಚಾರ್ಜ್………

ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಏರುತ್ತಿದ್ದದ್ದು ನೋಡಿದಾಗ ಮೈಸೂರು ಇಡೀ ರಾಜ್ಯದಲ್ಲಿ ನಂಬರ್ ಒನ್ ಆಗಿ ಬಿಡುತ್ತೋ ಎಂಬ ಆತಂಕ ಇತ್ತು. ಮೈಸೂರಲ್ಲಿ ಒಟ್ಟು 90 ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಅದರಲ್ಲಿ ಜ್ಯೂಬಿಲಿಯೆಂಟ್ ಕಾರ್ಖಾನೆಯ ಪಾತ್ರವೇ ಅತಿ ದೊಡ್ಡದಾಗಿತ್ತು. ರೋಗಿ ನಂಬರ್ 52 ಸೃಷ್ಟಿಸಿದ ಆತಂಕಕ್ಕೆ ಇಡೀ ಮೈಸೂರೇ ಆತಂಕಕ್ಕೀಡಾಗಿತ್ತು. ಈತನೊಬ್ಬನಿಂದಲೇ 75 ಜನರಿಗೆ ಕೊರೊನಾ ಬಂದಿತ್ತು. ಆದರೆ ಈಗ ಮೈಸೂರು ಮಹಾಮಾರಿ ಕೊರೊನಾವನ್ನ ಗೆದ್ದಿದೆ. ಹೌದು. ಬರೋಬ್ಬರಿ …

Read More »

ಸೀಲ್‍ಡೌನ್ ಮುಕ್ತ ಹಳ್ಳಿಗಳಲ್ಲಿ ಗ್ರಾಮಸ್ಥರಿಗೆ ಕೃತಜ್ಞತಾ ಸಲ್ಲಿಕೆ ಕಾರ್ಯಕ್ರಮ………

ಮೈಸೂರು: 28 ದಿನಗಳಿಂದ ಸೀಲ್‍ಡೌನ್ ಆಗಿದ್ದ ಮೈಸೂರು ತಾಲೂಕಿನ ಗ್ರಾಮಗಳನ್ನು ಇವತ್ತು ಸೀಲ್‍ಡೌನ್ ನಿಂದ ಮುಕ್ತ ಮಾಡಲಾಯಿತು. ವರುಣಾ ಕ್ಷೇತ್ರದ ಸೋಮೇಶ್ವರಪುರ ಹಾಗೂ ಹೆಬ್ಯಾ ಗ್ರಾಮಗಳು ಸೀಲ್‍ಡೌನ್ ಮುಕ್ತವಾಗಿ ಇಂದಿನಿಂದ ಸಹಜ ಸ್ಥಿತಿಗೆ ಮರಳಿದವು. ಸೀಲ್‍ಡೌನ್ ಆಗಿದ್ದ ಗ್ರಾಮದ ಗ್ರಾಮಸ್ಥರಿಗೆ ಕೃತಜ್ಞತಾ ಸಲ್ಲಿಕೆ ಕಾರ್ಯಕ್ರಮ ಸೋಮೇಶ್ವರಪುರ ಗ್ರಾಮದಲ್ಲಿ ನಡೆಯಿತು. ಸಿಎಂ ಪುತ್ರ ವಿಜಯೇಂದ್ರ ಸೂಚನೆಯಂತೆ ಗ್ರಾಮದ ಜನರು ಹಾಗೂ ಗ್ರಾಮದಲ್ಲಿ ಕೆಲಸ ಮಾಡಿದ ಅಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು. ಸೀಲ್‍ಡೌನ್ ಆಗಿದ್ದ …

Read More »

ಮದ್ಯದ ನಶೆಯಲ್ಲಿ ಚಾಲನೆ- ರಸ್ತೆ ಬಿಟ್ಟು ಗದ್ದೆಗೆ ಹಾರಿದ ಕಾರು………..

ಮೈಸೂರು: ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಹೇರಲಾಗಿದ್ದ ಲಾಕ್ ಡೌನ್ ಅನ್ನು ಸಡಿಲಿಕೆ ಮಾಡಲಾಗಿದ್ದು, ರಾಜ್ಯದಲ್ಲಿ ನಿನ್ನೆಯಿಂದಲೇ ಮದ್ಯದಂಗಡಿಗಳು ಓಪನ್ ಆಗಿವೆ. ಮದ್ಯದ ನಶೆಯಲ್ಲಿ ನಿನ್ನೆಯೇ ಕೆಲವೊಂದು ಅನಾಹುತಗಳು ನಡೆದುಹೋಗಿವೆ. ಇದಕ್ಕೆ ಮೈಸೂರಿನ ಘಟನೆ ಕೂಡ ಸೇರಿಕೊಂಡಿದೆ. ಹೌದು. ಮದ್ಯದ ಅಂಗಡಿ ಆರಂಭವಾದ ಪರಿಣಾಮದಿಂದ ಕುಡಿದ ಮತ್ತಿನಲ್ಲಿದ್ದ ಯುವಕ ಪ್ರಾಣಾಪಾಯದಿಂದ ಪಾರಾದ ಘಟನೆ ಮೈಸೂರು ಜಿಲ್ಲೆಯ ಹುಲ್ಲಹಳ್ಳಿ ನಂಜನಗೂಡು ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹುಲ್ಲಹಳ್ಳಿಯ ಯೋಗಿ ಕಾರು …

Read More »

ಎಣ್ಣೆ ಪಾರ್ಟಿಯಲ್ಲಿ ಲವ್ ಮ್ಯಾಟರ್- ಚಾಕುವಿನಿಂದ ಇರಿದು ಸ್ನೇಹಿತನನ್ನೇ ಕೊಂದ್ರು

ಮೈಸೂರು: ಎಣ್ಣೆ ಪಾರ್ಟಿಯಲ್ಲಿ ಲವ್ ವಿಚಾರದಿಂದ ಮೂವರು ಸ್ನೇಹಿತರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಜಿಲ್ಲೆಯ ಕ್ಯಾತಮಾರನಹಳ್ಳಿಯಲ್ಲಿ ಕೊಲೆ ನಡೆದಿದೆ. ಸೋಮವಾರ ಮದ್ಯ ಸಿಕ್ಕ ಖುಷಿಯಲ್ಲಿ ಯುವಕರು ಪಾರ್ಟಿ ಮಾಡಿದ್ದರು. ಕ್ಯಾರಮಾರನಹಳ್ಳಿಯ ಮಧು, ಕಿರಣ್ ಮತ್ತು ಸತೀಶ್ ಮೂವರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಪಾರ್ಟಿ ವೇಳೆ ಗೆಳೆಯರ ಮಧ್ಯೆ ಪ್ರೇಮ ವಿಷಯಗಳು ಪ್ರಸ್ತಾಪವಾಗಿ ಜಗಳ ಉಂಟಾಗಿದೆ. ನಶೆಯಲ್ಲಿದ್ದ ಮಧು ಮತ್ತು ಕಿರಣ್ ಇಬ್ಬರು ಚಾಕುವಿನಿಂದ ಇರಿದು ಸತೀಶ್ ನನ್ನು …

Read More »