ಮೈಸೂರು: ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಹೇರಲಾಗಿದ್ದ ಲಾಕ್ ಡೌನ್ ಅನ್ನು ಸಡಿಲಿಕೆ ಮಾಡಲಾಗಿದ್ದು, ರಾಜ್ಯದಲ್ಲಿ ನಿನ್ನೆಯಿಂದಲೇ ಮದ್ಯದಂಗಡಿಗಳು ಓಪನ್ ಆಗಿವೆ. ಮದ್ಯದ ನಶೆಯಲ್ಲಿ ನಿನ್ನೆಯೇ ಕೆಲವೊಂದು ಅನಾಹುತಗಳು ನಡೆದುಹೋಗಿವೆ. ಇದಕ್ಕೆ ಮೈಸೂರಿನ ಘಟನೆ ಕೂಡ ಸೇರಿಕೊಂಡಿದೆ.
ಹೌದು. ಮದ್ಯದ ಅಂಗಡಿ ಆರಂಭವಾದ ಪರಿಣಾಮದಿಂದ ಕುಡಿದ ಮತ್ತಿನಲ್ಲಿದ್ದ ಯುವಕ ಪ್ರಾಣಾಪಾಯದಿಂದ ಪಾರಾದ ಘಟನೆ ಮೈಸೂರು ಜಿಲ್ಲೆಯ ಹುಲ್ಲಹಳ್ಳಿ ನಂಜನಗೂಡು ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಹುಲ್ಲಹಳ್ಳಿಯ ಯೋಗಿ ಕಾರು ಓಡಿಸುತ್ತಿದ್ದು ಮದ್ಯದ ನಶೆಯಲ್ಲಿದ್ದನು. ಈ ವೇಳೆ ಕಾರು ನಿಯಂತ್ರಣಕ್ಕೆ ಸಿಗದೆ ರಸ್ತೆ ಬಿಟ್ಟು ಗದ್ದೆಗೆ ಹಾರಿದೆ. ಪರಿಣಾಮ ಕಾರು ಪಲ್ಟಿಯಾದರೂ ಯುವಕನಿಗೆ ಮದ್ಯದ ನಶೆ ಇಳಿದಿಲ್ಲ. ಘಟನೆಯಿಂದ ಮಾರುತಿ ಓಮ್ನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನಾ ಸ್ಥಳಕ್ಕೆ ನಂಜನಗೂಡು ಸಂಚಾರಿ ಪೊಲೀಸರು ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಕಾರನ್ನು ವಶಕ್ಕೆ ಪಡೆದಿದ್ದಾರೆ.