Breaking News
Home / ಜಿಲ್ಲೆ / ಮೈಸೂರ್ (page 11)

ಮೈಸೂರ್

ಮೊಬೈಲ್ ಗಾಗಿ ಆತ್ಮಹತ್ಯೆ ಮಾಡಿಕೊಂಡ ಬಾಲಕ…..?

ಮೈಸೂರು: ಪೋಷಕರು ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಬಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ಬೆಳಗನಹಳ್ಳಿ ಕಾವಲ್ ಗ್ರಾಮದಲ್ಲಿ ನಡೆದಿದೆ. ಆದಿತ್ಯ(15 )ವರ್ಷದ ಆತ್ಮಹತ್ಯೆಗೆ ಶರಣಾದ ಬಾಲಕ. ಪೋಷಕರು ಆತನ ಅಕ್ಕನಿಗೆ ಹೆಚ್ಚಿನ ಬೆಲೆ ಮೊಬೈಲ್ ಕೊಡಿಸಿದ್ರು. ಇದರಿಂದ ಕೋಪಗೊಂಡ ಆದಿತ್ಯ, ನನಗೂ ಹೊಸ ಪೋನ್ ಕೊಡಿಸುವಂತೆ ಹಠ ಮಾಡಿದ್ದನು. ಪೋಷಕರು ಕೊಡಿಸುವುದಕ್ಕೆ ಹಿಂದೇಟು ಹಾಕಿರುವುದರಿಂದ ವಿಷ ಸೇವಿಸಿದ್ದಾನೆ. ಬಾಲಕನನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ …

Read More »

ಪೊಲೀಸ್ ಠಾಣೆಯಲ್ಲಿ ಬುಲೆಟ್ ನಾಪತ್ತೆ ಪ್ರಕರಣ- ಕಪಿಲಾ ನದಿಯಲ್ಲಿ 20 ಗುಂಡುಗಳು ಪತ್ತೆ…

ಮೈಸೂರು: ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ 50 ಸಜೀವ ಗುಂಡುಗಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡಿನ ಕಪಿಲಾ ನದಿಯಲ್ಲಿ 20 ಗುಂಡುಗಳು ಪತ್ತೆಯಾಗಿವೆ. ಜಿಲ್ಲೆಯ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ 50 ಗುಂಡುಗಳು ನಾಪತ್ತೆಯಾಗಿದ್ದವು. 303 ಮಾದರಿ ಬಂದೂಕಿನ ಗುಂಡುಗಳು ನಾಪತ್ತೆಯಾಗಿದ್ದವು. ಗುಂಡುಗಳು ಹೇಗೆ ನಾಪತ್ತೆಯಾಗಿವೆ ಎಂಬುದು ಪತ್ತೆಯಾಗಿಲ್ಲ. ಈ ಸಂಬಂಧ ಎಸ್‍ಪಿ ಸಿ.ಬಿ.ರಿಷ್ಯಂತ್ ಇಬ್ಬರನ್ನು ಅಮಾನತುಗೊಳಿಸಿದ್ದರು. ಇದೀಗ ಕಪಿಲಾ ನದಿಯಲ್ಲಿ ಗುಂಡುಗಳು ಪತ್ತೆಯಾಗಿದೆ. ಮಾಹಿತಿ ಆಧಾರದ ಮೇರೆಗೆ ಕಪಿಲಾ ನದಿಯಲ್ಲಿ ಎಎಸ್‍ಪಿ …

Read More »

ಸೋಮವಾರದಿಂದ ಪ್ರವಾಸಿಗ ವೀಕ್ಷಣೆಗೆ ಮೈಸೂರು ಅರಮನೆ ಲಭ್ಯ……….

ಮೈಸೂರು: ಕೊರೊನಾ ಹಿನ್ನೆಲೆಯ ಲಾಕ್‍ಡೌನ್ 5.0 ಸಡಿಲಿಕೆಯಾಗಿದ್ದು, ಸೋಮವಾರದಿಂದ ದೇವಸ್ಥಾನ, ಮಸೀದಿ ಮತ್ತು ಚರ್ಚ್ ತೆರೆಯುತ್ತಿವೆ. ಇದೀಗ ಮೈಸೂರಿನ ಪ್ರಮುಖ ಪ್ರವಾಸಿ ಕೇಂದ್ರವಾದ ಅರಮನೆ ಪುನರಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಂದರೆ ನಾಳೆಯಿಂದ ವಿಶ್ವವಿಖ್ಯಾತ ಮೈಸೂರು ಅರಮನೆ ರೀ ಓಪನ್ ಆಗಲಿದೆ. ಸೋಮವಾರದಿಂದ ಪ್ರವಾಸಿಗ ವೀಕ್ಷಣೆಗೆ ಮೈಸೂರು ಅರಮನೆ ಲಭ್ಯವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸೋದು ಕಡ್ಡಾಯವಾಗಿದೆ. ಇನ್ನೂ 10 …

Read More »

ಮೈಸೂರು ಮೃಗಾಲಯ, ಬಂಡೀಪುರ ಸಫಾರಿಗೆ ಅನುಮತಿ…………..

ಮೈಸೂರು/ಚಾಮರಾಜನಗರ: ದೇವಸ್ಥಾನಗಳು ತೆರೆಯುತ್ತಿರುವ ಬೆನ್ನಲ್ಲೇ ಪ್ರವಾಸಿಗರಿಗೆ ಮತ್ತೊಂದು ಸಿಹಿ ಸುದ್ದಿ ಲಭ್ಯವಾಗಿದೆ. ಜೂನ್ 8ರಿಂದ ಮೈಸೂರು ಮೃಗಾಲಯ ಹಾಗೂ ಬಂಡೀಪುರ ಸಫಾರಿಯನ್ನು ಆರಂಭಿಸಲು ಅನುಮತಿ ನೀಡಿದ್ದು, ಈ ಕುರಿತು ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ರಾಜ್ಯ ಸರ್ಕಾರ ಅನುಮತಿ ಸೂಚಿಸಿದ್ದು, ಇದಕ್ಕಾಗಿ ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ. ಈ ಹಿನ್ನೆಲೆ ಮೈಸೂರು ಮೃಗಾಲಯ ಹಾಗೂ ಬಂಡೀಪುರ ಸಫಾರಿ ಪುನರಾರಂಭಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ಎರಡೂ ಪ್ರವಾಸಿ ತಾಣಗಳಲ್ಲಿ ಸಿದ್ಧತೆ ಮಾಡಲಾಗುತ್ತಿದೆ. …

Read More »

ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿಯ ನಿರೀಕ್ಷೆಯಲ್ಲಿದ್ದ ಬಸವವಿಧಿವಶವಾಗಿದೆ.

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿಯ ನಿರೀಕ್ಷೆಯಲ್ಲಿದ್ದ ಬಸವ ಇಂದು ವಿಧಿವಶವಾಗಿದೆ. ಮೈಸೂರು ಸಮೀಪದ ಕೆ.ಆರ್.ನಗರ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ಬಸವನ ಅನಾರೋಗ್ಯದಿಂದ ನರಳುತ್ತಿತ್ತು. ಬಸವ ಬೇಗ ಚೇತರಿಸಿಕೊಳ್ಳಲಿ ಎಂದು ಗ್ರಾಮಸ್ಥರು ನಿತ್ಯ ಪೂಜೆ, ಪುನಸ್ಕಾರಗಳಲ್ಲಿ ತೊಡಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದೆ. ಕಾಳಮ್ಮನಕೊಪ್ಪಲು ಗ್ರಾಮಸ್ಥರಿಗೆ ಊರ ದೈವವೇ ಆಗಿದ್ದ ಬಸವ ಅನಾರೋಗ್ಯಕ್ಕೆ ತುತ್ತಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಬಸವನನ್ನು ಭೇಟಿ ಮಾಡಿದ್ದರು. ಗ್ರಾಮಸ್ಥರೆಲ್ಲರೂ ದರ್ಶನ್ ಅವರು ಪುನಃ …

Read More »

ಶಾಸಕರ ಪ್ರತ್ಯೇಕ ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ : ಸುರೇಶ್ ಕುಮಾರ್

ಮೈಸೂರು,ಮೇ.29- ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಶಿಕ್ಷಣ ಸಚಿವ ಎಸ ಸುರೇಶ ಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಸಭೆ ನಡೆದಿದೆ ಎಂದು ನನಗೆ ಅನಿಸುವುದಿಲ್ಲ ಎಂದರು. ರಾಜ್ಯ ಸಭೆ ಹಾಗೂ ವಿಧಾನಪರಿಷತ್ ಚುನಾವಣೆ ವಿಚಾರ ದಲ್ಲಿ ಅಭ್ಯರ್ಥಿ ಆಯ್ಕೆ ಸಿಎಂ ಯಡಿಯೋರಪ್ಪ ಅವರಿಗೆ ಬಿಟ್ಟ ವಿಚಾರ ಎಂದು ಸ್ವಷ್ಟ ಪಡಿಸಿದರು. ಪರಿಷತ ಚುನಾವಣೆ ಇನ್ನು ಘೋಷಣೆಯಾಗಿಲ್ಲ. ಈಗ ಏನಿದ್ದರೂ ಕೊರೊನಾ …

Read More »

ಶಾಸಕ ಉಮೇಶ್ ಕತ್ತಿ ಏನೇನೋ ಆಡ್ತಾನೆ. ಆದರೆ ಪಕ್ಷ ಬಿಡುವುದಿಲ್ಲ:ರಮೇಶ್ ಜಾರಕಿಹೊಳಿ

ಮೈಸೂರು: ಶಾಸಕ ಉಮೇಶ್ ಕತ್ತಿ ಏನೇನೋ ಆಡ್ತಾನೆ. ಆದರೆ ಪಕ್ಷ ಬಿಡುವುದಿಲ್ಲ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಯ ಕೆಲ ಶಾಸಕರಿಂದ ರಹಸ್ಯ ಸಭೆ ವಿಚಾರ ಸಂಬಂಧ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಫಿ, ತಿಂಡಿಗೆ ಸೇರುವುದೆಲ್ಲ ತಪ್ಪಲ್ಲ ಎಂದರು. ಕೊರೊನಾ ಲಾಕ್‍ಡೌನ್ ಕಾರಣದಿಂದ ಯಾರೂ ಪರಸ್ಪರ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬಹಳ ದಿನಗಳ ನಂತರ ಎಲ್ಲರೂ ಕೂಡಿದ್ದಾರೆ. …

Read More »

ಪರಿವಾರ ಮತ್ತು ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರ ಅಧಿಸೂಚ‌ನೆ: ರಮೇಶ್ ಲ. ಜಾರಕಿಹೊಳಿ

ಮೈಸೂರು: ಪರಿವಾರ ಮತ್ತು ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರ ಅಧಿಸೂಚ‌ನೆ ಹೊರಡಿಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಬಿ‌.ಎಸ್. ಯಡಿಯೂರಪ್ಪ ಅವರೊಂದಿಗೆ ಮುಂದಿನ ಶನಿವಾರ ಸಭೆ ನಡೆಸಿ, ಕರ್ನಾಟಕದಲ್ಲಿ ಈ ಅಧಿಸೂಚನೆ ಜಾರಿಗೊಳಿಸಲು ಕ್ರಮವಹಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವರಾದ ರಮೇಶ್ ಲ. ಜಾರಕಿಹೊಳಿ ಅವರು ತಿಳಿಸಿದರು.  ಗುರುವಾರ ಮೈಸೂರಿನ ಜಲದರ್ಶಿನಿಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನಾಯಕ ಸಮಾಜದ ಮುಖಂಡರು ಹಾಗೂ ವಿವಿಧ ಗ್ರಾಮದ ಯಜಮಾನರೊಂದಿಗೆ …

Read More »

ಲಾಕ್‍ಡೌನ್‍ನಿಂದ ಒಂದಾದ ತಂದೆ, ಮಗ ………….

ಮೈಸೂರು: ಕೊರೊನಾದಿಂದ ಸೃಷ್ಟಿಯಾದ ಲಾಕ್‍ಡೌನ್ ಅದೆಷ್ಟೊ ಜನರ ಬದುಕನ್ನೆ ಕಸಿದುಕೊಂಡಿದೆ. ಆದರೆ ಒಬ್ಬ ವೃದ್ಧನ ಬಾಳಿಗೆ ಮಾತ್ರ ಹೊಸ ಬೆಳಕು ಮೂಡಿಸಿದೆ. ತಂದೆಯನ್ನು ಕಳೆದುಕೊಂಡ ಮಕ್ಕಳಿಗೆ ಈ ಲಾಕ್‍ಡೌನ್ ನಿಂದ ಮೂರು ವರ್ಷದ ಹಿಂದೆ ಕಳೆದುಕೊಂಡಿದ್ದ ಅಪ್ಪ ಸಿಕ್ಕಿದ್ದಾರೆ. ಉತ್ತರ ಪ್ರದೇಶದ ರಾಜ್‍ಪುರ್ ನಿವಾಸಿ ಕರಮ್ ಸಿಂಗ್ ತನ್ನ ಕಿರಿಯ ಪುತ್ರನ ಮದುವೆಗೆ ಹಣ ಹೊಂದಿಸಬೇಕೆಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದರು. ನಂತರ ಮೈಸೂರಿಗೆ ಬಂದು ಕಳೆದ ಮೂರು ವರ್ಷದಿಂದ ಬೀದಿ …

Read More »

ಕೊರೊನಾ ಮುಕ್ತವಾಯ್ತು ಮೈಸೂರು – ನಿಟ್ಟುಸಿರು ಬಿಟ್ಟ ಜನತೆ

ಮೈಸೂರು: ನಂಜನಗೂಡು ಮೂಲಕ ದೇಶವ್ಯಾಪಿ ಸುದ್ದಿಯಾಗಿದ್ದ ಮೈಸೂರು ಈಗ ಕೊರೊನಾ ಮುಕ್ತ ಜಿಲ್ಲೆಯಾಗಿದೆ. ಪತ್ತೆಯಾಗಿದ್ದ 90 ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಎಲ್ಲರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಅತೀವ ಟೆನ್ಷನ್ ನಲ್ಲಿದ್ದ ಮೈಸೂರು ರಿಲ್ಯಾಕ್ಸ್ ಮೂಡ್ ಗೆ ಬಂದಿದೆ. ಇಬ್ಬರು ಕೊರೊನಾ ಸೋಂಕಿತರು ಇಂದು ಡಿಜ್ಚಾರ್ಜ್ ಆಗಿದ್ದಾರೆ. ಆ ಮೂಲಕ ನಾವು ಕೊರೊನಾ ಮುಕ್ತ ಮೈಸೂರು ಆಗಿದ್ದೇವೆ. ಮಾರ್ಚ್ 21 ರಿಂದ ಇಲ್ಲಿಯವರೆಗೆ ಇದ್ದ ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ …

Read More »