Breaking News
Home / ಜಿಲ್ಲೆ / ಬೆಳಗಾವಿ (page 470)

ಬೆಳಗಾವಿ

ದೇಶಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಸಂಕೇಶ್ವರ ಪೊಲೀಸರು ಯಶಸ್ವಿ

ಸಂಕೇಶ್ವರ : ಕಳೆದ ಹಲವು ದಿನಗಳಿಂದ ಅಕ್ರಮವಾಗಿ ದೇಶಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಸಂಕೇಶ್ವರ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ವ್ಯಕ್ತಿಯಿಂದ ೧೪ ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಠಾಣೆ ವ್ಯಾಪ್ತಿಯ ಕರಜಗಾ ಗ್ರಾಮದಲ್ಲಿ ಲಾಕಡೌನ್ ಆರಂಭದಿಂದಲೂ ದೇಶಿ ಮದ್ಯ ಪೂರೈಸುತ್ತಿದ್ದ ಕರಜಗಾ ಗ್ರಾಮದ ಫಕ್ರುದ್ದೀನ ಸಯ್ಯದ ಸೊಲ್ಲಾಪೂರೆ ಬಂಧಿತ ಆರೋಪಿ. ಡಿವೈಎಸ್‌ಪಿ ಡಿ.ಟಿ. ಪ್ರಭು, ಸಿಪಿಐ ಗಣಪತಿ ಕಲ್ಯಾಣಶೆಟ್ಟಿ,  ಪಿಎಸ್‌ಐ ಗಣಪತಿ ಕೊಗನೊಳ್ಳಿ ಮಾರ್ಗದರ್ಶನದಲ್ಲಿ ಪ್ರೊಬೆಷನರಿ ಪಿಎಸ್‌ಐ …

Read More »

ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ಚೆಕ್ ಸ್ವೀಕರಿಸಿದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಗೋಕಾಕ: ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ಇಂದು 75 ಸಾವಿರ ರೂ. ಚೆಕ್ ಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ವೀಕರಿಸಿದರು. ಧುಳಗೌಡ ಪಾಟೀಲ ಅವರು ವ್ಯಯಕ್ತಿಕವಾಗಿ 50 ಮತ್ತು ರಾಯಬಾಗ ತಾಲೂಕಿನ‌ ಕಾಂಗ್ರೆಸ್ ಮುಖಂಡರಾದ ಮಹಾವೀರ ಮೊಹಿತೆ ಅವರು 25 ಸಾವಿರ ರೂ. ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಲಕ್ಷ್ಮಣರಾವ ಚಿಂಗಳೆ ಸೇರಿ ಇತರರು ಇದ್ದರು

Read More »

ಪ್ರಚಾರಕ್ಕಾಗಿ ಅಲ್ಲ,ಮಾನವೀಯ ಸೇವೆಗೆ ಮುಂದಾದ ಮೇದಾರ ಸಮಾಜದ ಹಿತೈಸಿ ಪಕ್ಕಿರಪ್ಪ ಮುರಗೋಡ..!

ಬೆಳಗಾವಿ : ಪ್ರಚಾರಕ್ಕಾಗಿ ಆಸೆಪಡದೆ ಮೇದಾರ ಸಮಾಜದ ಶ್ರೇಯೊಭಿವೃದ್ದಿಗಾಗಿ ಸದಾಕಾಲ ತಮ್ಮ ಕೈಯಿಂದ ಸಾಧ್ಯವಾದಷ್ಟು ನೆರವು ನೀಡುತ್ತಾ ಮೇದಾರ ಸಮಾಜದ ಏಳಿಗೆಗೆ ಸದಾಕಾಲ ಶ್ರಮಿಸುತ್ತಿರುವ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಸಮಾಜದ ಹಿತೈಸಿಗಳಾದ ಪಕ್ಕಿರಪ್ಪ ಮುರಗೋಡ ಅವರು ತಮ್ಮ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ವಾಸಿಸುವ ಸುಮಾರು100 ಕ್ಕೂ ಹೆಚ್ಚು ಮೇದಾರ ಸಮಾಜದ ಕುಲಬಾಂಧವರ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ‌. ಲಾಕ್ ಡೌನ್ ಹಿನ್ನಲೆಯಲ್ಲಿ ಕುಲ ಕಸುಬು ಹಾಗೂ …

Read More »

ಅಖಿಲ ಕರ್ನಾಟಕ ವಿಶ್ವ ಕರ್ಮ ಹೋರಾಟಗಾರರ ಸಮಿತಿ ವತಿಯಿಂದ ಬಡ ಕುಟುಂಬದವರಿಗೆ ದಿನ ಬಳಕೆಗೆ ಬೇಕಾದ ದಿನಸಿ ಸಾಮಗ್ರಿಗಳ ವಿತರಣೆ

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕುಟುರನಟ್ಟಿ ಗ್ರಾಮದಲ್ಲಿ 300 ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಬೇಕಾದ ಆಹಾರ ಕಿಟ್ ಗಳನ್ನು ಅಖಿಲ ಕರ್ನಾಟಕ ವಿಶ್ವ ಕರ್ಮ ಸಮಿತಿಯ ರಾಜ್ಯ ಪ್ರದಾನ ಕಾರ್ಯದರ್ಶಿಯಾದ ಸುರೇಶ ಪತ್ತಾರ ರವರು ವಿತರಿದರು. ಮಾತನಾಡಿ ನಮ್ಮ ಸಮಿತಿಯಿಂದ ಪ್ರತಿ ಹಳ್ಳಿ ಹಳ್ಳಿಗೂ ವಿಷಯ ತಿಳಿದು ಕೊಂಡು ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳು ಪೂರೈಸಲು ಮುಂದಾಗಿದ್ದು. ಕುಟುರನಟ್ಟಿ ಗ್ರಾಮಸ್ಥರಿಗೆ ಸರ್ಕಾರದಿಂದ ಸರಿಯಾಗಿ ಸೌಲಭ್ಯಗಳು ದೊರೆತಾಯಿಲ್ಲ.ಆದುದರಿಂದ ದಯಮಾಡಿ ಈ …

Read More »

ರೈತರ ಸಂಕಷ್ಟಕ್ಕಿಡಾಗಲು ಅಧಿಕಾರಿಗಳೇ ಕಾರಣ: ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ

ಚಿಕ್ಕೋಡಿ : ತಾಲೂಕಿನ ರೈತರು ಯಾವ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆಂಬ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಿಲ್ಲ. ಒಂದು ವಾರದ ಹಿಂದೆ ಕೇಳಿದ ಮಾಹಿತಿ ಈವರೆಗೆ ತಯಾರಿಸಿಲ್ಲ. ಇದರಿಂದಾಗಿಯೇ ರೈತರು ಹಾಳಾಗುತ್ತಿದ್ದಾರೆಂದು ತೋಟಗಾರಿಕೆ ಇಲಾಖೆ ಅಧಿಕಾರಿ ಎಂ.ಎಸ್.ಹಿಂಡಿಹೊಳಿ ಅವರನ್ನು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ತೀವೃ ತರಾಟೆಗೆ ತೆಗೆದುಕೊಂಡರು. ಪಟ್ಟಣದ ಲೋಕೊಪಯೋಗಿ ಇಲಾಖೆ ಸಭಾಭವನದಲ್ಲಿ ಶುಕ್ರವಾರ ನಡೆದ ಕೊರೊನಾ ಮುಂಜಾಗೃತ ಕ್ರಮಗಳ ಕುರಿತಾದ ತಾಲೂಕ ಮಟ್ಟದ ಅಧಿಕಾರಿಗಳ ಸಭೆಯಲ್ಲಿ …

Read More »

ಬೆಳಗಾವಿಯಲ್ಲಿ ಈವರೆಗೆ 45 ಜನರಿಗೆ ಸೋಂಕು ದೃಢಪಟ್ಟಿದ್ದು, ಓರ್ವ ವೃದ್ದೆ ಸಾವಿಗೀಡಾಗಿದ್ದಾಳೆ

ಬೆಳಗಾವಿ – ಇಂದು ಕುಡಚಿಯ ಕೊರೋನಾ ಸೋಂಕಿತನೋರ್ವನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 4ಕ್ಕೇರಿದೆ. ಬೆಳಗಾವಿಯಲ್ಲಿ ಈವರೆಗೆ 45 ಜನರಿಗೆ ಸೋಂಕು ದೃಢಪಟ್ಟಿದ್ದು, ಓರ್ವ ವೃದ್ದೆ ಸಾವಿಗೀಡಾಗಿದ್ದಾಳೆ. ಈವರೆಗೆ ಒಟ್ಟೂ 2697 ಜನರ ಮೇಲೆ ಜಿಲ್ಲಾಡಳಿತ ನಿಗಾ ಇಟ್ಟಿದೆ. ಇವರಲ್ಲಿ 681 ಜನರು ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ. 41 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 865 ಜನರು 14 ದಿನದ ಮತ್ತು 1110 ಜನರು 28 ದಿನದ …

Read More »

ಜನ ಅನವಶ್ಯಕವಾಗಿ ಸುತ್ತಾಡುವದನ್ನು ನಿಯಂತ್ರಿಸಲು ಶಾಸಕ ಅಭಯ ಪಾಟೀಲ ಹೊಸ ಐಡಿಯಾ

ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವಿಕೆಯನ್ನು ಸಮರ್ಪಕವಾಗಿ ತಡೆಗಟ್ಟಲು,ಬೆಳಗಾವಿ ನಗರದ ಜನ ಅನವಶ್ಯಕವಾಗಿ ಸುತ್ತಾಡುವದನ್ನು ನಿಯಂತ್ರಿಸಲು ಶಾಸಕ ಅಭಯ ಪಾಟೀಲ ಹೊಸ ಐಡಿಯಾ ಹುಡಕಿದ್ದಾರೆ . ಅತ್ಯಂತ ವಿಶಾಲವಾಗಿರುವ ಬೆಳಗಾವಿ ನಗರದಲ್ಲಿ ಹೊರಗಡೆ ಸುತ್ತಾಡುವ ಜನರನ್ನು ತಡೆಯಲು ಪೋಲೀಸರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.ಅನವಶ್ಯಕವಾಗಿ ಸುತ್ತಾಡುವ ಜನರನ್ನು ಸರಳವಾಗಿ ಗುರುತಿಸಿ ಅವರನ್ನು ದಂಡಿಸಲು ಶಾಸಕ ಅಭಯ ಪಾಟೀಲ ಬೆಳಗಾವಿ ನಗರದಲ್ಲಿ ಹದಿನಾಲ್ಕು ದ್ರೋಣ ಕ್ಯಾಮರಾಗಳನ್ನು ಬೆಳಗಾವಿಯ ಬಾನಂಗಳದಲ್ಲಿ ಹಾರಿ …

Read More »

ಜಲಾಶಯದ ನೀರಿನ ಮಟ್ಟವನ್ನು ಪರಿಶೀಲನೆ :ರಮೇಶ ಜಾರಕಿಹೊಳಿ

  ಬೆಳಗಾವಿ ಜಿಲ್ಲೆಯ ಶಿರೂರು ಗ್ರಾಮದ ಬಳಿ ಇರುವ ಮಾರ್ಕಂಡೇಯ ಜಲಾಶಯ ಕ್ಕೆ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿಯವರು ಇಂದು ಭೇಟಿ ನೀಡಿದರು. ಜಲಾಶಯದ ನೀರಿನ ಮಟ್ಟವನ್ನು ಪರಿಶೀಲನೆ ಮಾಡಿದರು. ಈ ಭಾಗದ ಕುಡಿಯುವ ನೀರಿನ ಸರಬರಾಜು ಕುರಿತಂತೆ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಚಿವರು ‌ಸಭೆ ನಡೆಸಿ‌ ಚರ್ಚಿಸಿದರು

Read More »

ರಾಯಬಾಗ ,ಚಿಕ್ಕೋಡಿ ವಲಯಗಳ ವ್ಯಾಪ್ತಿಯಲ್ಲಿ ಕಳ್ಳಭಟ್ಟಿ ಮಾರಾಟ ಸ್ಥಳಗಳ ಮೇಲೆಅಬಕಾರಿ ಇಲಾಖೆ ದಾಳಿ….

ಚಿಕ್ಕೋಡಿ : ರಾಯಬಾಗ ಹಾಗೂ ಚಿಕ್ಕೋಡಿ ವಲಯಗಳ ವ್ಯಾಪ್ತಿಯಲ್ಲಿ ಕಳ್ಳಭಟ್ಟಿ ಮಾರಾಟ ಸ್ಥಳಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ದ್ವಿಚಕ್ರದ ವಾಹನ, ಟಾಟಾ ಇಂಡಿಗೋ ಕಾರ್,ಕಳ್ಳಭಟ್ಟಿ ಸರಾಯಿ ಸೇರಿ ಸುಮಾರು 4 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಗುರುವಾರ ವಶ ಪಡಿಸಿಕೊಂಡಿದ್ದಾರೆ. ಚಿಕ್ಕೋಡಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ವಿಜಯಕುಮಾರ್ ಹಿರೇಮಠರವರ ನೇತೃತ್ವದಲ್ಲಿ ಅಬಕಾರಿ ಉಪ ಆಯುಕ್ತ ಬಸವರಾಜ್ ಸಂದಿಗವಾಡ್, ಅಬಕಾರಿ ಇನ್ಸ್ಪೆಕ್ಟರ್ ಬಸವರಾಜ್ ಕರಾಮಣ್ಣವರ್ ಇವರು …

Read More »

ಮದ್ಯ ಸಾಗಾಟ ಮಾಡುತ್ತಿದ್ದಕುಡಚಿ ಶಾಸಕ ಪಿ. ರಾಜೀವ್‌ನ ವಾಹನ ಚಾಲಕ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಮುಗಳಖೋಡ: ಲಾಕಡೌನ ಹಿನ್ನೆಲೆಯಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಕುಡಚಿ ಶಾಸಕ ಪಿ. ರಾಜೀವ್‌ನ ವಾಹನ ಚಾಲಕ ಸೇರಿ ಐವರನ್ನು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಪ್ರತ್ಯೇಕ ದಾಳಿಯಲ್ಲಿ ಬಂಧಿಸಿದ್ದಾರೆ. ಶಾಸಕ ಕಾರ್ ಚಾಲಕ ಪಾಲಬಾಂವಿ ಗ್ರಾಮದ ಬಾಳೇಶ ಭರಮಪ್ಪ ತಳವಾರ (30) ಸೇರಿದಂತೆ ಇತರೆ ಐವರು ಆರೋಪಿಗಳಿಂದ ಒಟ್ಟು ರೂ 15.635 ಮೌಲ್ಯದ ಮಧ್ಯ ಹಾಗೂ ಎರಡು ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಕಿಣೆಯ ಗ್ರಾಮದ ಬಳಿ ಬೋಲೆರೋ …

Read More »