Breaking News
Home / ಜಿಲ್ಲೆ / ಬೆಳಗಾವಿ (page 480)

ಬೆಳಗಾವಿ

ನೋಂದಣಿಗೊಂಡ ಫಲಾನುಭವಿಗಳ ಕುಟುಂಬದ ಸದಸ್ಯರುಗಳಿಗೆ ಅಪಘಾತ ಮರಣದ ಧನ ಸಹಾಯದ ಚೆಕ್ ತಲಾ ೫ ಲಕ್ಷ ಮತ್ತು ಅಂತ್ಯಕ್ರಿಯೆ & ಅನುಗ್ರಹರಾಶಿ ರೂ.೫೪,೦೦೦ ಗಳ ಚೆಕ್‌ಗಳನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶಂಕರಗೌಡ ಪಾಟೀಲ್ ಅವರು ಫಲಾನುಭವಿಗಳಿಗೆ ವಿತರಿಸಿದರು.

ಬೆಳಗಾವಿ -: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಗೊಂಡ ಫಲಾನುಭವಿಗಳ ಕುಟುಂಬದ ಸದಸ್ಯರುಗಳಿಗೆ ಅಪಘಾತ ಮರಣದ ಧನ ಸಹಾಯದ ಚೆಕ್ ತಲಾ ೫ ಲಕ್ಷ ಮತ್ತು ಅಂತ್ಯಕ್ರಿಯೆ & ಅನುಗ್ರಹರಾಶಿ ರೂ.೫೪,೦೦೦ ಗಳ ಚೆಕ್‌ಗಳನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶಂಕರಗೌಡ ಪಾಟೀಲ್ ಅವರು ಫಲಾನುಭವಿಗಳಿಗೆ ವಿತರಿಸಿದರು. ಉಪ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶುಕ್ರವಾರ (ಏ.೧೭) ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ಕಟ್ಟಡ ಮತ್ತು …

Read More »

ಒಗ್ಗೂಡಿ ಹೋರಾಡೋಣ , ಕೊರೋನಾ ಓಡಿಸೋಣ” ಸೌ. ಶಶಿಕಲಾ ಜೊಲ್ಲೆ

ನಿಪ್ಪಾಣಿಯ ಬುದಲಮುಖ ಗ್ರಾಮಕ್ಕೆ ಭೇಟಿ ನೀಡಿ, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮದ ಮುಖಂಡರೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಸಭೆ ನಡೆಸಿ, ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಯಿತು ಹಾಗೂ ಕೊರೋನಾ ಮುನ್ನೆಚ್ಚರಿಕೆ ಕುರಿತಾದ ಮಾಹಿತಿ ಜನರಿಗೆ ತಲುಪಿಸುವಂತೆ …

Read More »

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ನಾಗರಮುನ್ನೊಳ್ಳಿ, ಬೆಳಕುಡ, ಹಾಗೂ ಕಬ್ಬೂರ ಗ್ರಾಮಗಳಿಗೆ ಭೇಟಿ

ನಾಗರಮುನ್ನೊಳ್ಳಿ, ಬೆಳಕುಡ, ಕಬ್ಬೂರ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ನಾಗರಮುನ್ನೊಳ್ಳಿ, ಬೆಳಕುಡ, ಹಾಗೂ ಕಬ್ಬೂರ ಗ್ರಾಮಗಳಿಗೆ ಭೇಟಿ ನೀಡಿ, ವಿವಿಧ ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಚಿಕ್ಕೋಡಿ ಲೋಕಸಭೆಯ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಸಭೆ ನಡೆಸಿ, ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಮಾಹಿತಿ ಪಡೆದು, ಸಭೆ ಉದ್ದೇಶಿಸಿ ಮಾತನಾಡಿದರು. ಇಂದು ಇಡೀ ವಿಶ್ವ ಮಹಾಮಾರಿ ಕೊರೋನಾದಿಂದ ಬಳಲುತ್ತಿದೆ, ಈ ಹಿನ್ನೆಲೆಯಲ್ಲಿ …

Read More »

ರಾಯಬಾಗ: ಕ್ವಾರಂಟೈನ್ ಗೆ ಚಿಂಚಲಿ ಜನ ವಿರೋಧ!

ರಾಯಬಾಗ: ಕರೋನಾ ಶಂಕಿತರನ್ನು ತಾಲೂಕಾಡಳಿತ ಕ್ವಾರಂಟೈನ್‌ಗಾಗಿ ಸಮೀಪದ ಚಿಂಚಲಿ ಪಟ್ಟಣದ ಮಾಯಕ್ಕಾದೇವಿ ಧರ್ಮಶಾಲೆ ವಸತಿ ನಿಲಯದಲ್ಲಿ ಇಡುವುದಕ್ಕೆ ಚಿಂಚಲಿ ಪಟ್ಟಣದ ಸಾರ್ವಜನಿಕರು, ಮುಖಂಡರು ವಿರೋಧ ವ್ಯಕ್ತಪಡಿಸಿದರು. ಶುಕ್ರವಾರ ಬೆಳಿಗ್ಗೆ ಚಿಂಚಲಿ ಪಟ್ಟಣದ ಹೃದಯಭಾಗದಲ್ಲಿರುವ ಮಾಯಕ್ಕಾದೇವಿ ಧರ್ಮಶಾಲೆ ವಸತಿ ನಿಲಯಕ್ಕೆ ಕೊರೋನಾ ಶಂಕಿತ ಕುಟುಂಬಗಳನ್ನು ಕ್ವಾರಂಟೈನ್‌ಗಾಗಿ ಕರೆದು ತರುವ ಸುದ್ದಿ ತಿಳಿದು ವಸತಿ ನಿಲಯದ ಮುಂದೆ ನೂರಾರು ಸಾರ್ವಜನಿಕರು, ಮಹಿಳೆಯರು ಮುಖಂಡರು ಜಮಾವಣೆಗೊಂಡು ಯಾವುದೇ ಕಾರಣಕ್ಕೂ ಕೊರೋನಾ ಶಂಕಿತ ವ್ಯಕ್ತಿಗಳನ್ನು ಹಾಗೂ …

Read More »

ಯರಗಟ್ಟಿ –ಕೊರೋನಾ ವಾರಿಯರ್ಸ್‌ ಗೆ ಮಾಸ್ಕ್ ಮತ್ತು ಸೆನಿಟೈಸರ್ ವಿತರಣೆ:

ಯರಗಟ್ಟಿ – ಪಟ್ಟಣದಲ್ಲಿ ಕೊರೋನಾ ವಾರಿಯರ್ಸ್‌ ಗೆ ಮಾಸ್ಕ್ ಮತ್ತು ಸೆನಿಟೈಸರ್ ವಿತರಣೆ ಮಾಡಲಾಯಿತು.          ಸೃಷ್ಟಿ ಸೊಲ್ಯೂಷನ್ಸ್ ಸೋಲಾರ್ ಎನರ್ಜಿ ಬೆಳಗಾವಿ ಮತ್ತು ಯರಗಟ್ಟಿ ವತಿಯಿಂದ ಹಗಲು ರಾತ್ರಿ ಎನ್ನದೇ ಕೊರೋನಾ ವಿರುದ್ಧ ಜಾಗೃತಿ ಮೂಡಿಸುವ ಕಾಯಕದಲ್ಲಿ ನಿರತರಾಗಿರುವ ಮುರಗೋಡ ಪೊಲೀಸ್ ಠಾಣೆ ಹಾಗೂ ಯರಗಟ್ಟಿ ಉಪ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮತ್ತು ಪೊಲೀಸ್ ಸಿಬ್ಬಂದಿಗೆ  ಮಾಸ್ಕ್ ಮತ್ತು ಸೆನಿಟೈಸರ್ ವಿತರಣೆ ಮಾಡಲಾಯಿತು. ಈ …

Read More »

ಬೆಳಗಾವಿ ಡಿಸಿಸಿ ಬ್ಯಾಂಕಿನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ.- ಮಾಜಿ ಸಂಸದ ರಮೇಶ ಕತ್ತಿ

ಬೆಳಗಾವಿ -: ಕೊರೋನ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಜನರನ್ನು ರಕ್ಷಿಸಲು ಸರಕಾರಕ್ಕೆ ಎಲ್ಲರ ಸಹಾಯ ಸಹಕಾರ ಅವಶ್ಯವಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕಿನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ. ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ತಿಳಿಸಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ದೇಶದಿಂದ ಕೊರೋನ ರೋಗ ಹೊಡೆದೋಡಿಸಲು ಸರಕಾರಗಳಿಗೆ ನೆರವು …

Read More »

ಬೆಳಗಾವಿ ಕರೊನಾ ಸೈನಿಕರಿಗೆ ಮಾಸ್ಕ್, ಟಿಷರ್ಟ್, ಸ್ಯಾನಿಟೈಸರ್ ವಿತರಣೆ

ಬೆಳಗಾವಿ ಕರೊನಾ ಸೈನಿಕರಿಗೆ ಮಾಸ್ಕ್, ಟಿಷರ್ಟ್, ಸ್ಯಾನಿಟೈಸರ್ ವಿತರಣೆ ಆಹಾರ, ಔಷಧಿ ವಿತರಣೆ ಮತ್ತು ತುರ್ತು ಸೇವೆಗೆ ಸಜ್ಜಾಗಲು ಕರೆ ಬೆಳಗಾವಿ, ಎಪ್ರಿಲ್ 16(ಕರ್ನಾಟಕ ವಾರ್ತೆ) ಕೋವಿಡ್-೧೯ ಕುರಿತು ಜನಜಾಗೃತಿ ಮೂಡಿಸುವುದರ ಜತೆಗೆ ತುರ್ತು ಸಂದರ್ಭದಲ್ಲಿ ಅಗತ್ಯ ನೆರವು ನೀಡಲು ಸಜ್ಜಾಗಿರುವ “ಕರೊನಾ ಸೈನಿಕರಿಗೆ” (ಸ್ವಯಂಸೇವಕರು) ಗುರುವಾರ ನಗರದ ವಾರ್ತಾಭವನದಲ್ಲಿ ಟಿ-ಶರ್ಟ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ …

Read More »

ಸರ್ಕಿಟ್ ಹೌಸ್ ನಲ್ಲಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ಕ್ರಮಗಳನ್ನು ಕೈಗೊಂಡು ಸಭೆ

ಇಂದು ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ಕ್ರಮಗಳನ್ನು ಕೈಗೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಚರ್ಚಿಸಿ, ಸಭೆ ಉದ್ದೇಶಿಸಿ ಮಾತನಾಡಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಅಭಯ ಪಾಟೀಲ, ಶ್ರೀ ಅನಿಲ ಬೆನಕೆ, ಜಿಲ್ಲಾಧಿಕಾರಿಗಳಾದ ಶ್ರೀ ಡಾ. ಎಸ್.ಬಿ. ಬೊಮ್ಮನಹಳ್ಳಿ, ಪೊಲೀಸ ಆಯುಕ್ತರಾದ ಶ್ರೀ ಲೋಕೇಶ ಕುಮಾರ್, …

Read More »

Big breaking”ಬೆಳಗಾವಿಯಲ್ಲಿ ನಾಳೆಯಿಂದ ಕರೋನಾ ವೈರಸ್ ತಪಾಸಣಾ ಪ್ರಯೋಗಾಲಯ ಪ್ರಾರಂಭ

“ಬೆಳಗಾವಿಯಲ್ಲಿ ನಾಳೆಯಿಂದ ಕರೋನಾ ವೈರಸ್ ತಪಾಸಣಾ ಪ್ರಯೋಗಾಲಯ ಪ್ರಾರಂಭ” ಮಹಾಮಾರಿ ಕೊರೋನಾ ವೈರಸ್‌ ಪರೀಕ್ಷೆ ಬೆಳಗಾವಿಯ ಪಾರಂಪರಿಕ ಚಿಕಿತ್ಸಾ ವಿದ್ಯಾಲಯದಲ್ಲಿ ನಾಳೆಯಿಂದ ನಡೆಯಲಿದ್ದು, 3- 4 ದಿನಗಳ ಕಾಲ ವರದಿಗಾಗಿ ಕಾಯುವ ಸಂದಿಗ್ಧತೆ ತಪ್ಪಲಿದೆ. ಇಂಡಿಯನ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರಿಸರ್ಚ್‌ (ಐಸಿಎಂಆರ್‌) ಕೊರೋನಾ ಪರೀಕ್ಷೆಗೆ ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಈವರೆಗೆ ಬೆಂಗಳೂರು ಮತ್ತು ಶಿವಮೊಗ್ಗಕ್ಕೆ ರಕ್ತ, ಗಂಟಲು ದ್ರವವನ್ನು ಕಳಿಸಿ ಪರೀಕ್ಷೆ ವರದಿ ಪಡೆಯಲಾಗುತ್ತಿತ್ತು, ಜಿಲ್ಲಾಧಿಕಾರಿಗಳು ಹಾಗೂ …

Read More »

ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಹೋಟೆಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ: ಬೊಮ್ಮನಹಳ್ಳಿ

ಬೆಳಗಾವಿ : ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹೋಟೆಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಕ್ವಾರಂಟೈನ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾಗಿರುತ್ತದೆ. ಎಲ್ಲ ಕ್ವಾರಂಟೈನ್ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ವೈಯಕ್ತಿಕ ಸ್ವಚ್ಛತೆ ಸೇರಿದಂತೆ ಎಲ್ಲ ಬಗೆಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಕ್ವಾರಂಟೈನ್ …

Read More »