ಚಿಕ್ಕೋಡಿ : ರಾಯಬಾಗ ಹಾಗೂ ಚಿಕ್ಕೋಡಿ ವಲಯಗಳ ವ್ಯಾಪ್ತಿಯಲ್ಲಿ ಕಳ್ಳಭಟ್ಟಿ ಮಾರಾಟ ಸ್ಥಳಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ದ್ವಿಚಕ್ರದ ವಾಹನ, ಟಾಟಾ ಇಂಡಿಗೋ ಕಾರ್,ಕಳ್ಳಭಟ್ಟಿ ಸರಾಯಿ ಸೇರಿ ಸುಮಾರು 4 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಗುರುವಾರ ವಶ ಪಡಿಸಿಕೊಂಡಿದ್ದಾರೆ.
ಚಿಕ್ಕೋಡಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ವಿಜಯಕುಮಾರ್ ಹಿರೇಮಠರವರ ನೇತೃತ್ವದಲ್ಲಿ ಅಬಕಾರಿ ಉಪ ಆಯುಕ್ತ ಬಸವರಾಜ್ ಸಂದಿಗವಾಡ್, ಅಬಕಾರಿ ಇನ್ಸ್ಪೆಕ್ಟರ್ ಬಸವರಾಜ್ ಕರಾಮಣ್ಣವರ್ ಇವರು ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಒಂದು ದ್ವಿಚಕ್ರ ವಾಹನ, ೧೦ ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ ಟಾಟಾ ಇಂಡಿಗೋ ಕಾರ್ ಹಾಗೂ ೧೧೬ ಬಾಟ್ಲ ದೇಸಿ ಸರಾಯಿ ವಶಕ್ಕೆ ಪಡೆದಿದ್ದಾರೆ. ಸಬ್ ಇನ್ಸ್ಪೆಕ್ಟರ್ ಗಳಾದ ಸುನಿಲಕುಮಾರ್, ಪ್ರವೀಣ್ ರಂಗಸುಬೆ, ಸಿಬ್ಬಂದಿಗಳಾದ ಹಸನ್ ಸಾಬ್, ವಿಜಯ್ ,ಅಂಬಾರಿ, ಸೈಯದ್,ಮಂಜುನಾಥ್ ದಾಳಿಯಲ್ಲಿ ಬಾಗವಹಿಸಿದ್ದರು.