Breaking News
Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ / ಮದ್ಯ ಸಾಗಾಟ ಮಾಡುತ್ತಿದ್ದಕುಡಚಿ ಶಾಸಕ ಪಿ. ರಾಜೀವ್‌ನ ವಾಹನ ಚಾಲಕ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಮದ್ಯ ಸಾಗಾಟ ಮಾಡುತ್ತಿದ್ದಕುಡಚಿ ಶಾಸಕ ಪಿ. ರಾಜೀವ್‌ನ ವಾಹನ ಚಾಲಕ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

Spread the love

ಮುಗಳಖೋಡ: ಲಾಕಡೌನ ಹಿನ್ನೆಲೆಯಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಕುಡಚಿ ಶಾಸಕ ಪಿ. ರಾಜೀವ್‌ನ ವಾಹನ ಚಾಲಕ ಸೇರಿ ಐವರನ್ನು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಪ್ರತ್ಯೇಕ ದಾಳಿಯಲ್ಲಿ ಬಂಧಿಸಿದ್ದಾರೆ.

ಶಾಸಕ ಕಾರ್ ಚಾಲಕ ಪಾಲಬಾಂವಿ ಗ್ರಾಮದ ಬಾಳೇಶ ಭರಮಪ್ಪ ತಳವಾರ (30) ಸೇರಿದಂತೆ ಇತರೆ ಐವರು ಆರೋಪಿಗಳಿಂದ ಒಟ್ಟು ರೂ 15.635 ಮೌಲ್ಯದ ಮಧ್ಯ ಹಾಗೂ ಎರಡು ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಕಿಣೆಯ ಗ್ರಾಮದ ಬಳಿ ಬೋಲೆರೋ ಗೂಡ್ಸ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬೆಳಗಾವಿ ತಾಲೂಕಿನ ಬಸರಿಕಟ್ಟಿಯ ಪ್ರಮೋದ ಸಿದ್ದರಾಯಿ ನಾಗರೋಳಿ(20), ಅಮೋಲ್ ರಾಜು ಪೂಜೇರಿ(28) ಎಂಬುವರನ್ನು ಬಂದಿಸಿದ ಪೋಲಿಸರು ಅವರಿಂದ ರೂ.4655. ಮೌಲ್ಯದ ವಿವಿಧ ಕಂಪನಿಯ ಮಧ್ಯ ಹಾಗೂ ವಾಹನವನ್ನು ಜಪ್ತಿ ಮಾಡಲಾಗಿದೆ.

ಅದರಂತೆ ಪಿರನವಾಡಿ ನಾಕಾಬಳಿ ವಾಹನದಲ್ಲಿ ಅಕ್ರಮವಾಗಿ ಮಧ್ಯ ಸಾಗಿಸುತಿದ್ದ ರಾಯಬಾಗ ತಾಲೂಕಿನ ಹಾರೂಗೇರಿಯ ಮಹಾದೇವ ಮಾರುತಿ ಗಾಣಿಗೇರ(32), ಪಾಲಬಾಂವಿ ಗ್ರಾಮದ ಬಾಳೇಶ ಭರಮಪ್ಪ ತಳವಾರ (30) ಅಳಗವಾಡಿಯ ಶಾನೂರ ರಾಜು ಗಾಡಿವಡ್ಡರ ಬಂದಿತ ಆರೋಪಿಗಳು ಇವರಿಂದ 10.980 ರೂ ಮೌಲ್ಯದ ವಿವಿಧ ಕಂಪನಿ ಮಧ್ಯದ ಬಾಟಲಿಗಳನ್ನು ಹಾಗೂ ವಾಹನ ಜಪ್ತಿ ಮಾಡಲಾಗಿದೆ.

ಬೆಳಗಾವಿ ಗ್ರಾಮೀಣ ಪೋಲಿಸ ಠಾಣೆ ಇನ್ಸ್ಪೆಕ್ಟರ ಸುನೀಲಕುಮಾರ ನಂದೇಶ್ವರ ನೇತೃತ್ವದಲ್ಲಿ ದಾಳಿಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರತ್ಯೆಕ ಪ್ರಕರಣಗಳು ದಾಖಲಾಗಿವೆ.


Spread the love

About Laxminews 24x7

Check Also

ತುಳಿತಕ್ಕೆ ಒಳಗಾದವನ್ನು ಒಡೆಯುವ ಕೆಲಸ ಆಗಬಾರದು ಎಂದ ಬಿ.ಕೆ ಹರಿಪ್ರಸಾದ್

Spread the love ಬೆಳಗಾವಿ : ತುಳಿತಕ್ಕೆ ಒಳಗಾದವನ್ನು ಒಡೆಯುವ ಕೆಲಸ ಆಗಬಾರದು ಎಂದು ವಿಧಾನ ಪರಿಷತ್​ ಸದಸ್ಯ ಬಿ.ಕೆ ಹರಿಪ್ರಸಾದ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ