ಸಂಕೇಶ್ವರ : ಕಳೆದ ಹಲವು ದಿನಗಳಿಂದ ಅಕ್ರಮವಾಗಿ ದೇಶಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಸಂಕೇಶ್ವರ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ವ್ಯಕ್ತಿಯಿಂದ ೧೪ ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಠಾಣೆ ವ್ಯಾಪ್ತಿಯ ಕರಜಗಾ ಗ್ರಾಮದಲ್ಲಿ ಲಾಕಡೌನ್ ಆರಂಭದಿಂದಲೂ ದೇಶಿ ಮದ್ಯ ಪೂರೈಸುತ್ತಿದ್ದ ಕರಜಗಾ ಗ್ರಾಮದ ಫಕ್ರುದ್ದೀನ ಸಯ್ಯದ ಸೊಲ್ಲಾಪೂರೆ ಬಂಧಿತ ಆರೋಪಿ. ಡಿವೈಎಸ್‌ಪಿ ಡಿ.ಟಿ. ಪ್ರಭು, ಸಿಪಿಐ ಗಣಪತಿ ಕಲ್ಯಾಣಶೆಟ್ಟಿ, ಪಿಎಸ್‌ಐ ಗಣಪತಿ ಕೊಗನೊಳ್ಳಿ ಮಾರ್ಗದರ್ಶನದಲ್ಲಿ ಪ್ರೊಬೆಷನರಿ ಪಿಎಸ್‌ಐ ಶಿವರಾಜ ನಾಯಿಕವಾಡಿ, ಸಿಬ್ಬಂದಿಗಳಾದ ವೈ.ಬಿ.ಭಜಂತ್ರಿ, ಭೀಮಪ್ಪಾ ನಾಗನೂರಿ, ರಮೇಶ ರಾಜಾಪೂರೆ, ಎಸ್.ವಿ.ಕಮಕೇರಿ, ಬಿ.ಎಸ್. ಕಪರಟ್ಟಿ ದಾಳಿ ನಡೆಸಿ ಬಂಧಿಸಿದ್ದಾರೆ.