Breaking News
Home / ಜಿಲ್ಲೆ / ಬೆಳಗಾವಿ (page 180)

ಬೆಳಗಾವಿ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನಾಳೆ ಬೆಳಗಾವಿಗೆ

ಬೆಳಗಾವಿ: ವಿಧಾನ ಪರಿಷತ್ತಿನ ಶಿಕ್ಷಕರ ಪದವೀಧರರ ಕ್ಷೇತ್ರಗಳ ಚುನಾವಣೆ ಪ್ರಚಾರ ನಿಮಿತ್ತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನಾಳೆ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಜೂನ್‌ 07 ರಂದು ಬೆಳಗ್ಗೆ 10:30ಕ್ಕೆ ಬೆಳಗಾವಿಯ ರಾಮದೇವ್ ಹೋಟೆಲ್ ಹಿಂಭಾಗದಲ್ಲಿರುವ ಮರಾಠಾ ಮಂಡಲ ಶಿಕ್ಷಣ ಸಂಸ್ಥೆ ಕಾಲೇಜಿನಲ್ಲಿ ಪ್ರಚಾರ ಸಭೆ ಏರ್ಪಡಿಸಲಾಗಿದ್ದು, ಸಭೆಯಲ್ಲಿ ಭಾಗವಹಿಸುವವರು. ನಂತರ 12:30 ಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದ ಹತ್ತಿರ ಇರುವ ಕಾಂಗ್ರೆಸ್ ಭವನದಲ್ಲಿ ಮೂರು ಜಿಲ್ಲೆಗಳ, ಬೆಳಗಾವಿ ನಗರ, ಬೆಳಗಾವಿ …

Read More »

ರೈತರಿಗೆ ಬಿತ್ತನೆ ಬೀಜ ಗೊಬ್ಬರ ಪೂರೈಸುವಂತೆ ಡಿಸಿಗೆ ಮನವಿ

ರಾಜ್ಯದಲ್ಲಿ ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಬಿತ್ತನೆ ಮಾಡುವ ಈ ಸಂದರ್ಭದಲ್ಲಿ ರೈತರಿಗೆ ರಾಸಾಯನಿಕ ಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೊರತೆಯಾಗುತ್ತಿದ್ದು ಸರಕಾರ ಈ ಕುರಿತಂತೆ ಯಾವುದೇ ಕ್ರಮ ಕೈಗೊಳ್ಳುತ್ತಿ ಎಂದು ಆಕ್ರೋಶಗೊಂಡ ನೇಗಿಲಯೋಗಿ ರೈತ ಸಂಘಟನೆಯ ಕಾರ್ಯಕರ್ತರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ರಾಜ್ಯದಲ್ಲಿ ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದೆ ರಾಜ್ಯಾದ್ಯಂತ ರೈತರು ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಆದರೆ ಇಲ್ಲಿಯವರೆಗೂ ರೈತರಿಗೆ ಬಿತ್ತನೆ ಮಾಡಲು ಸಮರ್ಪಕ ಬೀಜ ಹಾಗೂ ಗೊಬ್ಬರಗಳನ್ನು …

Read More »

ವಾಘವಾಡೆ ಗ್ರಾಮದ ಶ್ರೀ ರವಳನಾಥ ಮಂದಿರದ ಜೀರ್ಣೋದ್ಧಾರದ ಕಾಮಗಾರಿಗಳಿಗೆ ಭೂಮಿ ಪೂಜೆ

ಬೆಳಗಾವಿ ಗ್ರಾಮೀಣ ಪದೇಶದ ವಾಘವಾಡೆ ಗ್ರಾಮದ ಶ್ರೀ ರವಳನಾಥ ಮಂದಿರದ ಜೀರ್ಣೋದ್ಧಾರದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಕೈಗೊಳ್ಳುವ ಮೂಲಕ ಸಹೋದರ ವಿಧಾನ ಪರಿಷತ್ ಸದಸ್ಯ Channaraj Hattiholi ಜೊತೆ ಸೇರಿ ಚಾಲನೆಯನ್ನು ನೀಡಲಾಯಿತು. ಈ ಜೀರ್ಣೋದ್ಧಾರದ ಕಾಮಗಾರಿಗಳ ಮೂಲಕ ದೇವಸ್ಥಾನಕ್ಕೆ ಹೊಸ ಹೊಳಪು ಬರಲಿದ್ದು, ಇದರಿಂದಾಗಿ ಗ್ರಾಮದ ಮನೆ ಮನಗಳಿಗೆ ಆಧ್ಯಾತ್ಮಿಕವಾಗಿ ಶಾಂತಿ, ನೆಮ್ಮದಿ ದೊರಯಲಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ್ಯಾಂತ ಶಿಥಿಲಾವಸ್ಥೆಯಲ್ಲಿರುವ ಎಲ್ಲ ದೇವಸ್ಥಾನ ಮಾಹಿತಿಯನ್ನು ಕಲೆಹಾಕಿ ದೇವಸ್ಥಾನಗಳ ನಿರ್ಮಾಣ …

Read More »

ಪತ್ರಕರ್ತ ರಾಘವೇಂದ್ರ ಐಹೊಳೆ ಇವರ ಕುಟುಂಬದ ಹಲ್ಲೆ ಖಂಡಿಸಿ ರಾಯಬಾಗ ಸಿಪಿಐ ಮೂಲಕ ಗೃಹ ಮಂತ್ರಿ ಅವರಿಗೆ ಮನವಿ

ಪತ್ರಕರ್ತ ರಾಘವೇಂದ್ರ ಐಹೊಳೆ ಇವರ ಕುಟುಂಬದ ಹಲ್ಲೆ ಖಂಡಿಸಿ ರಾಯಬಾಗ ಸಿಪಿಐ ಮೂಲಕ ಗೃಹ ಮಂತ್ರಿ ಅವರಿಗೆ ಮನವಿ ಹಾಗು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಭಿಯಂತರರ ಮೂಲಕ ಜಿಲ್ಲಾ ಪಂಚಾಯತ ಬೆಳಗಾವಿ ಇವರಿಗೆ ಪಂಚಾಯತ ಸದಸ್ಯನ ಸದಸ್ಯತ್ವ ರದ್ದುಗೋಳಿಸ ಬೇಕೆಂದು ಮನವಿ ದಲಿತ ಪರ ಸಂಘಟನೆ ಇಂದ ದಲಿತರ ಮೇಲೆ ನಿರಂತರ ಹಲ್ಲೆ ಹಾಗು ಜಾತಿ ನಿಂದನೆ ಖಂಡಿಸಿ ಪ್ರತಿಭಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಸವಸುದ್ದಿ ಗ್ರಾಮ ಪಂಚಾಯತ …

Read More »

ಲಾರಿ ಚಕ್ರಕ್ಕೆ ಸಿಲುಕಿ ಮಹಿಳೆ ದೇಹ ಛಿದ್ರ ಛಿದ್ರ

ಚಿಕ್ಕೋಡಿ (ಬೆಳಗಾವಿ ) :ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಸಾವು ಕಂಡ ಘಟನೆ ಚಿಕ್ಕೋಡಿ ಬೆಳಗಾವಿ ರಸ್ತೆಯ ಜೈನಾಪುರ ಬಳಿ ನಡೆದಿದೆ. ಸದ್ಯ ಮೃತ ಮಹಿಳೆಯ ಹೆಸರು ತಿಳಿದು ಬಂದಿಲ್ಲ.ಅಲ್ಲದೆ,ಇದೇ ಅಪಘಾತದಲ್ಲಿ ದ್ವಿಚಕ್ರ ವಾಹನದ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.   ಅಂದ ಹಾಗೇ ಚಿಕ್ಕೋಡಿ ಬೆಳಗಾವಿ ರಸ್ತೆಯ ಜೈನಾಪುರ ಬಳಿ ದ್ವಿಚಕ್ರ ವಾಹನದ …

Read More »

ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರಗಳ ಚುನಾವಣೆಗೆ ಜಿಲ್ಲೆಯ 95 ಮತಗಟ್ಟೆಗಳ ನಿಗದಿ

ಬೆಳಗಾವಿ: ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರಗಳ ಚುನಾವಣೆಗೆ ಜಿಲ್ಲೆಯ 95 ಮತಗಟ್ಟೆಗಳನ್ನು ನಿಗದಿ ಮಾಡಲಾಗಿದೆ.   ಗುರುತಿಸಿದ ಮತಗಟ್ಟೆಗಳ ಪಟ್ಟಿಯನ್ನು ಜಿಲ್ಲಾಧಿಕಾರಿ ಕಚೇರಿ, ಉಪವಿಭಾಗಾಧಿಕಾರಿ ಕಚೇರಿ, ಎಲ್ಲ ತಹಶೀಲ್ದಾರರ ಕಚೇರಿ, ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಶಿಕ್ಷಣ ಇಲಾಖೆಯ ಕಚೇರಿಗಳ ಸೂಚನೆ ಫಲಕದಲ್ಲಿಯೂ ಪ್ರಕಟಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

Read More »

ಜೆಲ್ಲೆಯ ಸವದತ್ತಿ, ಬೈಲಹೊಂಗಲ, ಯರಗಟ್ಟಿ ತಾಲ್ಲೂಕಿನ ಬಹುಪಾಲು ಹಳ್ಳಿಗಳಲ್ಲಿ ಭಾನುವಾರ ಮಧ್ಯಾಹ್ನ ಧಾರಾಕಾರ ಮಳೆ

ಬೆಳಗಾವಿ: ಜೆಲ್ಲೆಯ ಸವದತ್ತಿ, ಬೈಲಹೊಂಗಲ, ಯರಗಟ್ಟಿ ತಾಲ್ಲೂಕಿನ ಬಹುಪಾಲು ಹಳ್ಳಿಗಳಲ್ಲಿ ಭಾನುವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿಯಿತು. ಮಧ್ಯಾಹ್ನ 3.30ರ ಸುಮಾರಿಗೆ ಆರಂಭವಾದ ಮಳೆ, ಒಂದು ತಾಸಿಗೂ ಹೆಚ್ಚು ಸಮಯ ನಿರಂತರವಾಗಿ ಸುರಿಯಿತು. ಯರಗಟ್ಟಿಯಿಂದ ಬೈಲಹೊಂಗಲ ತಾಲ್ಲೂಕಿನ ನೇಸರಗಿವರೆಗೆ ಬಿರುಗಾಳಿ, ಗುಡುಗಿನ ಸದ್ದು ಜೋರಾಗಿತ್ತು. ಮಳೆಯ ಆರ್ಭಟದಿಂದಾಗಿ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯ ಮೇಲೆ ವಾಹನ ಸವಾರರು ವಾಹನಗಳ ಹೆಡ್‌ಲೈಟ್‌ ಆನ್‌ ಮಾಡಿ ಸಂಚರಿಸಿದರು.

Read More »

ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ’: H.D.K.

ಬೆಳಗಾವಿ: ‘ಉಂಡ ಮನೆಗೆ ಹೇಗೆ ದ್ರೋಹ ಬಗೆಯಬೇಕು ಎಂಬುದನ್ನು ಅವರನ್ನು ನೋಡಿ ಕಲಿಯಬೇಕು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.   ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ನನಗೊಬ್ಬನಿಗೇ ಅಲ್ಲ. ಬಹಳ ಜನರಿಗೆ ಅನುಭವವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರಂಥ ಮಹಾನ್ ನಾಯಕರನ್ನು ಬದಿಗಿಟ್ಟು ಕಾಂಗ್ರೆಸ್‌ ಸಿದ್ದರಾಮಯ್ಯ ಅವರಿಗೆ ನಾಯಕತ್ವ ನೀಡಿತು. ಐದು ವರ್ಷ ಮುಖ್ಯಮಂತ್ರಿಯಾಗಿ …

Read More »

ವಿಷಕಾರಿ ಹಾವು ಕಚ್ಚಿ ನಾಲ್ಕು ವರ್ಷದ ಮಗು ಸಾವು

ಚಿಕ್ಕೋಡಿ(ಬೆಳಗಾವಿ): ವಿಷಕಾರಿ ಹಾವು ಕಚ್ಚಿ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದಲ್ಲಿ ನಡೆದಿದೆ.   ಇಶಾಂತ್ ರಾಘವೇಂದ್ರ ಕಾಂಬಳೆ (04) ಮೃತ ಮಗು. ಯರನಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ಮಗು ಮನೆಯಲ್ಲಿ ಮಲಗಿದ್ದಾಗ ವಿಷಪೂರಿತ ಹಾವು ಕಚ್ಚಿದ ಪರಿಣಾಮ ಮಗು ಸಾವನ್ನಪ್ಪಿದೆ. ಹಾವು ಕಚ್ಚಿದ ಪರಿಣಾಮ ಮಗು ಅಳಲು ಆರಂಭಿಸಿದಾಗ ಮಗುವನ್ನು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ …

Read More »

ಪತ್ನಿಯ ಸೀಮಂತಕ್ಕೆಂದು ರಜೆ ಮೇಲೆ ಊರಿಗೆ ತೆರಳುತ್ತಿದ್ದ ಯೋಧ ರಸ್ತೆ ಅಪಘಾತದಲ್ಲಿ ಸಾವು

ಬೆಳಗಾವಿ: ಪತ್ನಿಯ ಸೀಮಂತಕ್ಕೆಂದು ರಜೆ ಮೇಲೆ ಊರಿಗೆ ತೆರಳುತ್ತಿದ್ದ ಯೋಧ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ. ಸವದತ್ತಿ ತಾಲೂಕಿನ ಹೊಸೂರು ಗ್ರಾಮದ ಯೋಧ ಪ್ರಕಾಶ ಸಂಗೊಳ್ಳಿ (29) ಮೃತರು. ಬೆಳಗಾವಿಯ ಎಂಎಲ್‌ಐಆರ್​ಸಿಯಲ್ಲಿ ಪ್ರಕಾಶ ಅವರು ಕೆಲಸ ಮಾಡುತ್ತಿದ್ದರು. ಜೂ.5ರಂದು ಪತ್ನಿಯ ಸೀಮಂತ ಕಾರ್ಯಕ್ರಮ ನಿಗದಿಯಾಗಿತ್ತು. ಹಾಗಾಗಿ ರಜೆ ಹಾಕಿ ಗುರುವಾರ ರಾತ್ರಿ ಊರಿಗೆ ಬೈಕ್​ನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು …

Read More »