Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಪತ್ರಕರ್ತ ರಾಘವೇಂದ್ರ ಐಹೊಳೆ ಇವರ ಕುಟುಂಬದ ಹಲ್ಲೆ ಖಂಡಿಸಿ ರಾಯಬಾಗ ಸಿಪಿಐ ಮೂಲಕ ಗೃಹ ಮಂತ್ರಿ ಅವರಿಗೆ ಮನವಿ

ಪತ್ರಕರ್ತ ರಾಘವೇಂದ್ರ ಐಹೊಳೆ ಇವರ ಕುಟುಂಬದ ಹಲ್ಲೆ ಖಂಡಿಸಿ ರಾಯಬಾಗ ಸಿಪಿಐ ಮೂಲಕ ಗೃಹ ಮಂತ್ರಿ ಅವರಿಗೆ ಮನವಿ

Spread the love

ಪತ್ರಕರ್ತ ರಾಘವೇಂದ್ರ ಐಹೊಳೆ ಇವರ ಕುಟುಂಬದ ಹಲ್ಲೆ ಖಂಡಿಸಿ ರಾಯಬಾಗ ಸಿಪಿಐ ಮೂಲಕ ಗೃಹ ಮಂತ್ರಿ ಅವರಿಗೆ ಮನವಿ ಹಾಗು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಭಿಯಂತರರ ಮೂಲಕ ಜಿಲ್ಲಾ ಪಂಚಾಯತ ಬೆಳಗಾವಿ ಇವರಿಗೆ ಪಂಚಾಯತ ಸದಸ್ಯನ ಸದಸ್ಯತ್ವ ರದ್ದುಗೋಳಿಸ ಬೇಕೆಂದು ಮನವಿ ದಲಿತ ಪರ ಸಂಘಟನೆ ಇಂದ ದಲಿತರ ಮೇಲೆ ನಿರಂತರ ಹಲ್ಲೆ ಹಾಗು ಜಾತಿ ನಿಂದನೆ
ಖಂಡಿಸಿ ಪ್ರತಿಭಟನೆ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಸವಸುದ್ದಿ ಗ್ರಾಮ ಪಂಚಾಯತ ಪ್ರಕರಣ ಹಿನ್ನೆಲೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವಾರ್ಡಿ ನಂ 1ರಲ್ಲಿ ಚರಂಡಿ (ಗಟರ) ಕಾಮಗಾರಿ ಪ್ರಾರಂಭವಾಗಿರುತ್ತದೆ ಕಾಮಗಾರಿಯನ್ನು ಕಿರಣಗೌಡ ರಾವಸಾಬಗೌಡ ಪಾಟೀಲ ಇವರು ಕೆಲಸವನ್ನು ತಡೇಯಿಡಿದಿರುತ್ತಾರೆ ಇದನ್ನು ರಾಘವೇಂದ್ರ ಐಹೊಳೆ ಜೀವನ ಪತ್ರಿಕೆಯ ಸಂಪಾದಕರು ಕಾಮಗಾರಿಯನ್ನು ಪ್ರಾರಂಭಸಿರಿ ಎಂದು ಪ್ರಶ್ನೆ ಮಾಡಿದಕ್ಕೆ ಸವಸುದ್ದಿ ಗ್ರಾಮ ಪಂಚಾಯತ ಸದಸ್ಯರಾದ ಕಿರಣಗೌಡ ರಾವಸಾಬಗೌಡ ಪಾಟೀಲ ಇವರು ಸುಮಾರು 150ಜನರನ್ನು ಕರೆದುಕೊಂಡು ಬಂದು ಮನೆಯ ಗೇಟ ಮುರಿದು ಹೂವಿನ ಟಬಗಳನ್ನು ಒಡೆದು ರಾಘವೇಂದ್ರ ಪತ್ನಿ ಮೇಲೆ ಹಲ್ಲೆ ಮಾಡಿ ಕೈ ಹಿಡಿದು ಎಳೆದಾಡಿ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿ ಈತನ ಸಂಘಡಿಗರು ಗುಂಡಾಗಳಂತ್ತೇ ವರ್ತಿಸಿ ಇವತ್ತು ನಿಮ್ಮನ್ನ ಬಿಡುವುದಿಲ್ಲ ಕಲಾಸ ಮಾಡುತ್ತೇನೆ ಎಂದು ಹೇಳಿ ಪ್ರಕರಣ ಹಾರೋಗೆರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಗಿದೆ ಆರೋಪಿಗಳ 3ಜನ ಬಂದನ ಆಗಿದ್ದಾರೆ ಆದರೇ ಇನ್ನು 7 ಜನರನ್ನ ಹುಡುಕಾಟ ನಡೆಸಲಾಗುತ್ತಿದೆ ಅಂತ ಹೇಳಿದ್ದಾರೆ

ಈ ಸಂದರ್ಭದಲ್ಲಿ ಯುವ ದಲಿತ ಮುಖಂಡ ಈಶ್ವರ ಗುಡಜ ಮಾತನಾಡಿ ರಾಘವೇಂದ್ರ ಐಹೊಳೆ ಅವರ ಮೇಲೆ ಹಾಗು ಕುಟುಂಬದ ಮೇಲೆ ಹಲ್ಲೆ ಮಾಡಿದ್ದು ಖಂಡನಿಯ ಇದನ್ನು ನಾವು ಖಂಡನೆ ಮಾಡುತ್ತೇವೆ ಹಾಗು ಒಂದು ಗ್ರಾಮ ಪಂಚಾಯತ ಸದಸ್ಯನಾಗಿ ಈ ರೀತಿ ಮಾಡಿರುವುದು ಇದು ನಾಚಿಕೆಗೇಡಿನ ಸಂಘತಿ ಜನ ಪ್ರತಿನಿಧಿ ಆಗಿ ಜನರ ಸಮಸ್ಯೆಯನ್ನು ಬಗೆ ಹರೀಸ ಬೇಕಾದ ಸದಸ್ಯ ಅದೇ ಸದಸ್ಯ ಕಾನೂನು ಬಾಹಿರ ಚಟುವಟಿಕೆಗೆ ಬಾಗಿ ಆಗಿದ್ದು ಇದು ಖಂಡನಿಯ ಆದ್ದರಿಂದ ಅವರು ಸ್ವಯಂ ಪ್ರೇರಿತವಾಗಿ ಗುಂಡಾ ಕಾಯ್ದೆಯಡಿಯಲ್ಲಿ ಬಂದಿಸಿಬೇಕು ಹಾಗು ಸದಸ್ಯತ್ವ ರದ್ದುಗೊಳಿಸ ಬೇಕು ಕುಟುಂಬಕ್ಕೆ ರಕ್ಷಣೆ ನೀಡಬೇಕು ಹಾಗು ಇನ್ನುಳಿದ ಆರೋಪಿಗಳನ್ನು ಕೊಡಲೆ ಬಂಧನ ವಾಗಬೇಕು ಇಲ್ಲದಿದ್ದರೆ ಜಿಲ್ಲೆತುಂಬಾ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು

ಈ ಸಂದರ್ಭದಲ್ಲಿ ಮಂಜುಳಾ ರಾಮಗಾನಟ್ಟಿ. ಡಿ.ಎಸ.ಎಸ.ರಾಜ್ಯಾಧ್ಯಕ್ಷರು.ರಾಘವೇಂದ್ರ ಐಹೊಳೆ.
ರವಿ ಹಕ್ಯಾಗೋಳ.ಜಾಂಭವ ಯುವ ಸೇನೆ ಜಿಲ್ಲಾ ಅಧ್ಯಕ್ಷರು.ಮೌಸಾಲಿ ನಧಾಪ ವರದಿಗಾರರು.
ಪ್ರವೀಣ.ಪೂಜೇರಿ.ರಾಯಬಾಗ ದರ್ಶನ ಪತ್ರಿಕೆ ಸಂಪಾದಕರು.
ರವಿ ಕೋಟಭಾಗಿ.ಸುವರ್ಣ ಬೆಳಗಾವಿ ಪತ್ರಿಕೆ ಸಂಪಾದಕರು.ಶ್ರೀಕಾಂತ ಅಸೋದೆ.ಖಡ್ಗ ಕ್ರಾಂತಿ ಪತ್ರಿಕೆ ಸಂಪಾದಕರು.ದೇವಾನಂದ ದೊಡಮನಿ.ಅರ್ಜುನ ಪೂಜೇರಿ.


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ