Breaking News
Home / ಜಿಲ್ಲೆ / ಬೆಂಗಳೂರು (page 452)

ಬೆಂಗಳೂರು

ಕಾಫೀ ಡೇ ಮಾದರಿಯಲ್ಲಿ ನಂದಿನಿ ಕೆಫೆ ಮೂ ಹೈಟೆಕ್ ಪಾರ್ಲರ್: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ…

ಬೆಂಗಳೂರು : ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಯ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ನಂದಿನಿಯಿಂದ ಯುವ ಪೀಳಿಗೆಯ ಗ್ರಾಹಕರನ್ನು ಸೆಳೆಯಲು ನಂದಿನಿ ಕೆಫೆ ಮೂ ಹೆಸರಿನ ಹವಾನಿಯಂತ್ರಿತ ಹೈಟೆಕ್ ನಂದಿನಿ ಐಸ್‍ಕ್ರೀಮ್ ಸ್ಕೂಪಿಂಗ್ ಕಮ್ ಪಾರ್ಲರ್‍ನ್ನು ತೆರೆಯಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಶುಕ್ರವಾರದಂದು ಮಹಾನಗರದ ಜಯನಗರ ಬಡಾವಣೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ನಂದಿನಿ ಕೆಫೆ ಮೂ ಹೈಟೆಕ್ ಪಾರ್ಲರ್‍ನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರಿಗೆ ತಕ್ಕಂತೆ ನಮ್ಮ …

Read More »

ಸಚಿವ ವಿಸ್ತರಣೆ ಹಿನ್ನೆಲೆಯಲ್ಲಿ ಹಾಲಿ ಮೂವರು ಸಚಿವರೂ ಸೇಫ್

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಾ? ಪುನಾರಚನೆಯಾ ಅನ್ನೋ ಗೊಂದಲ ಬಗೆಹರಿದಿದೆ. ಗುರುವಾರ ನಡೆಯೋದು ವಿಸ್ತರಣೆ ಮಾತ್ರ, ಪುನಾರಚನೆಯಲ್ಲ. ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಪೂರ್ಣ ಒಪ್ಪಿಗೆ ಕೊಟ್ಟಿದೆ. ಸಂಪುಟದಿಂದ ಯಾರನ್ನೂ ಕೈಬಿಡದೇ ವಿಸ್ತರಣೆ ನಡೆಸಲು ಹೈಕಮಾಂಡ್ ಸೂಚನೆ ಕೊಟ್ಟಿದೆ. ಸಚಿವ ವಿಸ್ತರಣೆ ಹಿನ್ನೆಲೆಯಲ್ಲಿ ಹಾಲಿ ಮೂವರು ಸಚಿವರೂ ಸೇಫ್ ಆಗಿದ್ದಾರೆ. ಸಚಿವ ಸಂಪುಟ ಸಂಕಷ್ಟಗಳ ಮಧ್ಯೆಯೂ ಹಾಲಿ ಮೂವರು ಸಚಿವರಿಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಚಿವರಾದ ಕೋಟಾ …

Read More »

ಜೂ.ಜಯಲಲಿತಾರಂತೆ ಕಾಣಿಸಿಕೊಂಡ ಕಂಗನಾ ರಣಾವತ್

ಬೆಂಗಳೂರು: ತಮಿಳು ನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಜೀವನಾಧಾರಿತ ಚಿತ್ರ ಮಾಡುತ್ತಿರುವುದು ತಿಳಿದೇ ಇದೆ. ಅಲ್ಲದೆ ಅವರ ಬಯೋಪಿಕ್ ‘ತಲೈವಿ’ ಚಿತ್ರ ಘೋಷಣೆಯಾದಾಗಿನಿಂದ ಭಾರೀ ಚರ್ಚೆ ನಡೆಯುತ್ತಿದೆ. ಆರಂಭದಲ್ಲಿ ಜಯಾ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಚರ್ಚೆ ನಡೆದರೆ. ನಂತರ ಚಿತ್ರ ಯಾವ ರೀತಿ ಇರುತ್ತೆ, ಪಾತ್ರವಾರ್ಗದಲ್ಲಿ ಯಾರಿರುತ್ತಾರೆ ಎಂಬೆಲ್ಲದರ ಕುರಿತು ತುಂಬಾ ಕುತೂಹಲ ಮೂಡಿತ್ತು. ಇದೀಗ ಚಿತ್ರ ತಂಡ ಮತ್ತೊಂದು ಫೋಟೊ ಬಿಡುಗಡೆ ಮಾಡಿದ್ದು, ಕ್ಯೂರಿಯಾಸಿಟಿ ಇನ್ನೂ ಹೆಚ್ಚಾಗಿದೆ. ಫೆಬ್ರವರಿ 24ರಂದು …

Read More »

ಬಜೆಟ್‍ನಲ್ಲೂ ಹೆಚ್ಚಿನ ಅನುದಾನಕ್ಕೆ ಮಿತ್ರಮಂಡಳಿ ಪಟ್ಟು- ಮೂಲ ಸಚಿವರು ಗರಂ

ಬೆಂಗಳೂರು: ರಾಜ್ಯ ಸರ್ಕಾರದ ಪ್ರಸಕ್ತ ಹಣಕಾಸು ಸ್ಥಿತಿ ಚೆನ್ನಾಗಿಲ್ಲ. ಹೀಗಾಗಿ ಈ ಸಲದ ಬಜೆಟ್ ಸಿದ್ಧಪಡಿಸುತ್ತಿರುವ ಸಿಎಂ ಯಡಿಯೂರಪ್ಪ ಇತಿಮಿತಿಯಲ್ಲೇ ರಾಜ್ಯ ಬಜೆಟ್ ಕೊಡಲು ಮುಂದಾಗಿದ್ದಾರೆ. ಬಿಜೆಪಿ ಸರ್ಕಾರ ಬಂದ ಆರಂಭದಲ್ಲಿ ನೆರೆ, ಅತಿವೃಷ್ಟಿ ಪರಿಹಾರ ಕಾಮಗಾರಿಗಳಿಗೆ ಹಣ ಕ್ರೋಢೀಕರಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು. ಬಳಿಕ ಕಾಂಗ್ರೆಸ್, ಜೆಡಿಎಸ್ ನಿಂದ ವಲಸೆ ಬಂದವರ ಕ್ಷೇತ್ರಗಳಿಗೆ ಸಾಕಷ್ಟು ಅನುದಾನವನ್ನೂ ಕೊಡಲಾಯ್ತು. ಇದರಿಂದ ಸರ್ಕಾರ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಹೀಗಾಗಿ ಸರ್ಕಾರದ ಮಟ್ಟದಲ್ಲಿ …

Read More »

ಸಿದ್ದರಾಮಯ್ಯ ಸಾಹೇಬ್ರಿಗೆ ಏನ್ ಗೊತ್ತು, ಎಲ್ಲವನ್ನ ಕಾಮಾಲೆ ಕಣ್ಣಿನಲ್ಲಿ ನೋಡೋದು ಬಿಡಿ: ಸೋಮಣ್ಣ ಟಾಂಗ್

ಬೆಂಗಳೂರು: ಇಂದು ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ವಸತಿ ಸಚಿವ ವಿ.ಸೋಮಣ್ಣ ಗೇಲಿ ಮಾಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಅಗ್ರಹಾರ ಪಾಳ್ಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತಕ್ಕೆ ಡೊನಾಲ್ಡ್ ಟ್ರಂಪ್ ಭೇಟಿಯಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ತಿರುಗೇಟು ನೀಡಿದರು. ಈ ವಿಚಾರದಲ್ಲಿ ಸಿದ್ದರಾಮಯ್ಯ ಸಾಹೇಬ್ರಿಗೆ ಏನ್ ಗೊತ್ತು ಟ್ರಂಪ್ ಎಲ್ಲಿ, ಸಿದ್ದರಾಮಯ್ಯ ಎಲ್ಲಿ. ಅಮೆರಿಕ …

Read More »

ಮಾರ್ಚ್ ಮೊದಲ ವಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ: ಮಾಜಿ ಸ್ಪೀಕರ್. ಕೆ.ಬಿ.ಕೋಳಿವಾಡ ಅಭಿಪ್ರಾಯ

ಬೆಂಗಳೂರು, ಫೆ.24-ಮಾರ್ಚ್ ಮೊದಲ ವಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ. ಆದಷ್ಟು ಬೇಗ ನೇಮಕ ಮಾಡದಿದ್ದರೆ ಪಕ್ಷ ಸೊರಗಿ ಹೋಗುತ್ತದೆ ಎಂದು ಮಾಜಿ ಸ್ಪೀಕರ್. ಕೆ.ಬಿ.ಕೋಳಿವಾಡ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧ್ಯಕ್ಷರ ನೇಮಕ ತಡ ಮಾಡಿದಷ್ಟು ಪಕ್ಷಕ್ಕೆ ಹಾನಿಕಾರಕ. ಹೈಕಮಾಂಡ್ ಗಮನಕ್ಕೂ ತರುವ ಪ್ರಯತ್ನ ನಾನು ಮಾಡುತ್ತೇನೆ. ಕೆಪಿಸಿಸಿ ಪದಾಧಿಕಾರಿಗಳ ನೇಮಕ ಕೂಡ ಆಗಬೇಕಾಗಿದೆ. ಹೈಕಮಾಂಡ್ ಬಳಿಯೂ ಸ್ವಲ್ಪ ಗೊಂದಲವಿದೆ. ಅಲ್ಲಿ ಎಐಸಿಸಿ ಅಧ್ಯಕ್ಷರು ಯಾರು ಆಗಬೇಕು …

Read More »

ಸಾಹುಕಾರ್‌ಗಾಗಿ ನಿಯಮವನ್ನೇ ಗಾಳಿಗೆ ತೂರಿದ ಸಿಎಂ ಬಿಎಸ್‍ವೈ?

ಬೆಂಗಳೂರು: ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೋಳಿಯವರಿಂದ ಬಿಜೆಪಿ ಸರ್ಕಾರ ಬಂತು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಸರ್ಕಾರ ಬರಲು ಕಾರಣರಾದ 17 ಜನರ ಮೇಲೆ ಸಿಎಂ ಯಡಿಯೂರಪ್ಪ ಅತಿ ಹೆಚ್ಚು ಪ್ರೀತಿ ಇಟ್ಟುಕೊಂಡಿದ್ದಾರೆ. 17 ಜನರು ಏನೇ ಕೇಳಿದರೂ ತಕ್ಷಣ ಗ್ರೀನ್ ಸಿಗ್ನಲ್ ಕೊಟ್ಟು ಕೆಲಸ ಮಾಡಿಕೊಡ್ತಾರೆ. ಹೀಗೆ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೋಳಿಯ ಒಂದು ಡಿಮ್ಯಾಂಡ್ ಪೂರೈಸಲು ಸಿಎಂ ಯಡಿಯೂರಪ್ಪ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ …

Read More »

ಭೂಗತ ಪಾತಕಿ ರವಿ ಪೂಜಾರಿಯನ್ನು ಬೆಂಗಳೂರಿಗೆ ಕರೆತಂದ ಪೊಲೀಸರು

ಬೆಂಗಳೂರು,ಫೆ.24- ಹಫ್ತಾ ವಸೂಲಿ, ಸುಲಿಗೆ, ಬೆದರಿಕೆ ಸೇರಿದಂತೆ ಭೂಗತ ಚಟುವಟಿಕೆಗಳಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ನಟೋರಿಯಸ್ ರವಿ ಪೂಜಾರಿಯನ್ನು ಸ್ವದೇಶಕ್ಕೆ ಕರೆತಂದು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಮುಂಜಾನೆ ಸೆನೆಗಲ್‍ನಿಂದ ಬೆಂಗಳೂರಿಗೆ ರವಿ ಪೂಜಾರಿಯನ್ನು ಕರೆತರಲಾಗಿದ್ದು, ಮಡಿವಾಳದಲ್ಲಿರುವ ಇಂಟರಾಗೇಷನ್ ಕಚೇರಿಯಲ್ಲಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಾಗಿದೆ. ಎಡಿಜಿಪಿ ಅಮರ್‍ಕುಮಾರ್ ಪಾಂಡೆ ನೇತೃತ್ವದ ತಂಡ ರವಿ ಪೂಜಾರಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಕರ್ನಾಟಕದಲ್ಲಿ ರವಿಪೂಜಾರಿ ವಿರುದ್ಧ 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರಾಜಕಾರಣಿಗಳಿಗೆ …

Read More »

ದ್ವಿತೀಯ PUC ಪರೀಕ್ಷೆ: ಅಕ್ರಮ ತಡೆಗಟ್ಟಲು ಹೊಸ ರೂಲ್ಸ್ , ಹುಷಾರಾಗಿರಿ…!

ಬೆಂಗಳೂರು, [ಫೆ.23]: ದ್ವಿತೀಯ ಪಿಯುಸಿ ಪರೀಕ್ಷೆಗೆ ದಿನಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 4 ರಿಂದ ಪಿಯುಸಿ ಪರೀಕ್ಷೆಗಳು ಶುರುವಾಗಲಿವೆ. 2020-201ನೇ ಸಾಲಿನ ದ್ವಿತೀಯ PUC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಇದಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಕಲ ಸಿದ್ದತೆಗಳನ್ನ ಮಾಡಿಕೊಂಡಿದ್ದು, ಪರೀಕ್ಷೆಯಲ್ಲಿ ಆಗುವ ಅಕ್ರಮಗಳನ್ನ ತಡೆಗಟ್ಟಲು ಶಿಕ್ಷಣ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಈ ಬಗ್ಗೆ 11 ಅಂಶಗಳ ನಿಯಮಗಳನ್ನ ಜಾರಿಗೆ ತಂದು ಸುತ್ತೋಲೆ ಹೊರಡಿಸಿದೆ. 100ಕ್ಕೆ 100 ಅಂಕ ಪಡೆದ …

Read More »

“ನೋಡುಗನ ಹಿಡಿತಕ್ಕೆ ಸಿಗದ ಪಾಪಕಾರ್ನ್ ಮಂಕಿ ಟೈಗರ್ !”

“ನೋಡುಗನ ಹಿಡಿತಕ್ಕೆ ಸಿಗದ ಮಂಕಿ!” ಸಿನಿಮಾ ಎಂದರೆ ಐದು ಹಾಡು,‌ನಾಲ್ಕು ಫೈಟು, ಬಿಲ್ಡಪ್ ಕೊಡೋ ಡೈಲಾಗ್ಸು, ಕಾಮಿಡಿ, ರೋಮ್ಯಾನ್ಸ್ ಮಾತ್ರ ಅಂದುಕೊಂಡವರಿಗೆ ಪಾಪಕಾರ್ನ್ ಮಂಕಿ ಟೈಗರ್ ಸಿನಿಮಾ ರುಚಿಸುವುದಿಲ್ಲ. ಸಿನಿಮಾ ಆರಂಭವಾಗಿ ಪ್ರಥಮಾರ್ಧ ಮುಗಿಯುಷ್ಟರಲ್ಲಿ ಅಂಥವರ ತಾಳ್ಮೆ ಸತ್ತು ಹೋಗಿರುತ್ತದೆ. ಅದು ಸಿನಿಮಾದ ಮಿತಿಯೂ ಹೌದು, ತಾಕತ್ತೂ ಹೌದು. ಈವರೆಗೆ ಸುಕ್ಕಾ ಸೂರಿ ನಿರ್ದೇಶನದ ಬಹುತೇಕ ಚಿತ್ರಗಳಲ್ಲಿರುವಂತೆ ಈ ಸಿನಿಮಾದಲ್ಲಿ ಹೇರಳವಾಗಿ ಹೆಂಡ, ಹೆಣ್ಣು, ಸಿಗರೇಟಿನ ಘಾಟು, ಪೇಟಿಂಗನಂತೆ ಕಾಣುವ …

Read More »