ಬೆಂಗಳೂರು: ಇಂದು ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ವಸತಿ ಸಚಿವ ವಿ.ಸೋಮಣ್ಣ ಗೇಲಿ ಮಾಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಅಗ್ರಹಾರ ಪಾಳ್ಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತಕ್ಕೆ ಡೊನಾಲ್ಡ್ ಟ್ರಂಪ್ ಭೇಟಿಯಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ತಿರುಗೇಟು ನೀಡಿದರು. ಈ ವಿಚಾರದಲ್ಲಿ ಸಿದ್ದರಾಮಯ್ಯ ಸಾಹೇಬ್ರಿಗೆ ಏನ್ ಗೊತ್ತು ಟ್ರಂಪ್ ಎಲ್ಲಿ, ಸಿದ್ದರಾಮಯ್ಯ ಎಲ್ಲಿ. ಅಮೆರಿಕ ದೇಶ ಎಲ್ಲಿ, ಸಿದ್ದರಾಮಯ್ಯ ಎಲ್ಲಿ. ಸಿದ್ದರಾಮಯ್ಯ ಸಿದ್ದರಾಮಯ್ಯನೇ, ಟ್ರಂಪ್ ಟ್ರಂಪ್ ಅವರೇ, ಮೋದಿ ಮೋದಿಯವರೇ ಎಂದು ಟೀಕೆಗೆ ತಿರುಗೇಟು ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ, ಚಿಂತನೆಯಿಂದ ಅವರ ರಾಷ್ಟ್ರಕ್ಕೆ ಕೊಡಬೇಕಾದ ದೊಡ್ಡ ಸಂದೇಶ ಕೊಡುತ್ತಾರೆ. ಆದರೆ ಟ್ರಂಪ್ ಏನು ಮಾಡುತ್ತಾರೆ ಅನ್ನೊದಕ್ಕಿಂತ ಅವರು ಹಿರಿಯಣ್ಣ. ನಮ್ನ ಭಾರತಕ್ಕೆ ಬಂದಿರುವುದು ನಮಗೆ ಸಂತೋಷ ಉಂಟುಮಾಡಿದೆ. ಆದರೆ ಸಿದ್ದರಾಮಯ್ಯ ಎಲ್ಲವನ್ನ ಕಾಮಾಲೆ ಕಣ್ಣಿನಲ್ಲಿ ನೋಡೋದನ್ನ ಬಿಡಬೇಕು ಎಂದು ಸೋಮಣ್ಣ ಅವರು ಕಿಡಿಕಾರಿದರು
ಅಲ್ಲದೇ ತಾವು ದೂರ ದೃಷ್ಟಿಯಲ್ಲಿ ನೋಡಬೇಕು. ರಾಜ್ಯದ 5 ವರ್ಷ ಮುಖ್ಯಮಂತ್ರಿಯಾಗಿದ್ದವರು ನೀವು, ಈ ರೀತಿಯಲ್ಲಿ ಮಾತನಾಡೋದು ಬೇಡ. ನೀವು ಎತ್ತರಕ್ಕೆ ಬೆಳೆದ ವ್ಯಕ್ತಿ ಎಂದು ನಗುಮುಖದಲ್ಲಿಯೇ ಸಿದ್ದರಾಮಯ್ಯರ ವಿರುದ್ಧ ಸೋಮಣ್ಣ ಮಾತಿನ ಚಾಟಿ ಬೀಸಿದರು.