Breaking News

ಸಾಹುಕಾರ್‌ಗಾಗಿ ನಿಯಮವನ್ನೇ ಗಾಳಿಗೆ ತೂರಿದ ಸಿಎಂ ಬಿಎಸ್‍ವೈ?

Spread the love

ಬೆಂಗಳೂರು: ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೋಳಿಯವರಿಂದ ಬಿಜೆಪಿ ಸರ್ಕಾರ ಬಂತು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಸರ್ಕಾರ ಬರಲು ಕಾರಣರಾದ 17 ಜನರ ಮೇಲೆ ಸಿಎಂ ಯಡಿಯೂರಪ್ಪ ಅತಿ ಹೆಚ್ಚು ಪ್ರೀತಿ ಇಟ್ಟುಕೊಂಡಿದ್ದಾರೆ. 17 ಜನರು ಏನೇ ಕೇಳಿದರೂ ತಕ್ಷಣ ಗ್ರೀನ್ ಸಿಗ್ನಲ್ ಕೊಟ್ಟು ಕೆಲಸ ಮಾಡಿಕೊಡ್ತಾರೆ. ಹೀಗೆ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೋಳಿಯ ಒಂದು ಡಿಮ್ಯಾಂಡ್ ಪೂರೈಸಲು ಸಿಎಂ ಯಡಿಯೂರಪ್ಪ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ಅವರಿಗೆ ನೂತನವಾಗಿ ವಿಶೇಷ ಕರ್ತವ್ಯಾಧಿಕಾರಿಯಾಗಿ ನಿವೃತ್ತ ಮುಖ್ಯ ಎಂಜಿನಿಯರ್ ರುದ್ರಯ್ಯ ಅವರನ್ನು ನೇಮಕ ಮಾಡುವಂತೆ ಸಿಎಂ ಯಡಿಯೂರಪ್ಪಗೆ ಆದೇಶ ಹೊರಡಿಸಿದ್ದಾರೆ. ರುದ್ರಯ್ಯ ಬೇಕು ಅಂತ ರಮೇಶ್ ಜಾರಕಿಹೋಳಿ ಮನವಿಗೆ ತಥಾಸ್ತು ಅಂದಿರೋ ಸಿಎಂ ವಿಶೇಷ ಕರ್ತವ್ಯಾಧಿಕಾರಿ ನೇಮಕಕ್ಕೆ ಸಹಿ ಹಾಕಿದ್ದಾರೆ. ಯಡಿಯೂರಪ್ಪರ ಈ ನಿರ್ಧಾರವೇ ಈಗ ವಿವಾದಕ್ಕೆ ಕಾರಣವಾಗಿದೆ.

ನಿಯಮಗಳ ಪ್ರಕಾರ ಯಾವುದೇ ನಿವೃತ್ತ ಅಧಿಕಾರಿಗಳನ್ನ ನೇಮಕ ಮಾಡಿಕೊಳ್ಳಬೇಕಾದ್ರು ಸಚಿವ ಸಂಪುಟ ಸಭೆಯಲ್ಲಿ ಅನುಮತಿ ಪಡೆಯಬೇಕು. ಸಂಪುಟ ಅನುಮತಿ ಪಡೆಯೋದು ಕಡ್ಡಾಯ. ಆದರೆ ಈ ನಿಯಮವನ್ನೇ ಮೀರಿರೋ ಸಿಎಂ ಸಂಪುಟ ಒಪ್ಪಿಗೆ ಆಗದೇ ಇದ್ದರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಗುತ್ತಿಗೆ ಆಧಾರದಲ್ಲಿ ರುದ್ರಯ್ಯ ಅವರನ್ನು ರಮೇಶ್ ಜಾರಕಿಹೋಳಿ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ ಮಾಡಿದ್ದಾರೆ. ಸಿಎಂ ಈ ನಡೆ ಮತ್ತೆ ರಮೇಶ್ ಜಾರಕಿಹೋಳಿ ಪವರ್ ಫುಲ್ ಅನ್ನೋ ಸಂದೇಶವನ್ನು ತೋರಿಸ್ತಿದೆ.


Spread the love

About Laxminews 24x7

Check Also

ವಸತಿ ಯೋಜನೆ ಫಲಾನುಭವಿಗಳಿಗೆ 1 ಲಕ್ಷ ರೂ.ನೆರವು ಘೋಷಣೆ

Spread the loveವಸತಿ ಯೋಜನೆ ಫಲಾನುಭವಿಗಳಿಗೆ 1 ಲಕ್ಷ ರೂ.ನೆರವು ಘೋಷಣೆ   ಬೆಂಗಳೂರು : ವಸತಿ ರಹಿತರಿಗೆ ರಾಜ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ