Breaking News
Home / ಜಿಲ್ಲೆ / ಬೆಂಗಳೂರು (page 412)

ಬೆಂಗಳೂರು

ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುತ್ತಿಲ್ಲ,ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆ

– ಬೆಂಗ್ಳೂರಿನ 11 ಮಂದಿ, ಬೆಳಗಾವಿಯ 9 ಜನರಿಗೆ – ಬಿಹಾರ ಕಾರ್ಮಿಕನಿಂದ 9 ಜನರಿಗೆ ಕೊರೊನಾ – ಬೆಳಗಾವಿಯಲ್ಲೂ ಒಬ್ಬನಿಂದ 9 ಮಂದಿಗೆ ಸೋಂಕು ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಕಳೆದ 24 ಗಂಟೆಯಲ್ಲಿ ರಾಜ್ಯದ 26 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆ ಕಂಡಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು 11 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಅದರಲ್ಲೂ ಬಿಹಾರ ಕಾರ್ಮಿಕನಿಂದಲೇ …

Read More »

ಬಡವರಿಗೆ 3 ಸಾವಿರ ದಿನಸಿ, ತರಕಾರಿ ಕಿಟ್ ವಿತರಿಸಿದ ಗ್ರಾ.ಪಂ.ಸದಸ್ಯ…….

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿವರಿಗೆ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಸುಮಾರು 3000 ದಿನಸಿ ಹಾಗೂ ತರಕಾರಿ ಇರುವ ಕಿಟ್‍ಗಳನ್ನ ಪ್ರತಿ ಮನೆ ಮನೆಗೂ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವಾಜರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ವಿ.ಕೆ.ಎಸ್.ಕೆಂಪರಾಜು ಬಡವರಿಗೆ ಕಿಟ್‍ಗಳನ್ನ ವಿತರಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ತಾಂಡವವಾಡುತ್ತಿದೆ. ಈ ಅಪಾಯಕಾರಿ ವೈರಸ್ ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಮುಂಜಾಗ್ರತೆಯನ್ನ ವಹಿಸಿ ಲಾಕ್‍ಡೌನ್ ಜಾರಿಗೆ …

Read More »

ನೌಕರರನ್ನು ವಜಾ ಮಾಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ​ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ನವದೆಹಲಿ: ಮಹಾಮಾರಿ ಕೊರೊನಾ ವೈರಸ್‌ ನಿಂದಾಗಿ ಖಾಸಗಿ ಸಂಸ್ಥೆಗಳು ತಮ್ಮ ನೌಕರರನ್ನು ಯಾವುದೇ ಕಾರಣ ನೀಡದೆ ಸಾಮೂಹಿಕವಾಗಿ ಕೆಲಸದಿಂದ ವಜಾ ಮಾಡುವ ಆರೋಪ ಕೇಳಿಬಂದಿದೆ. ನೌಕರರನ್ನು ವಜಾ ಮಾಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ​ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಲಾಕ್‌ಡೌನ್‌ನಿಂದಾಗಿ ಖಾಸಗಿ ಕಂಪನಿಗಳು ತಮ್ಮ ನೌಕರರಿಗೆ ಜೀವನಾಧಾರವಾಗಿ ಕನಿಷ್ಠ ವೇತನ ನೀಡಬೇಕು. ತಮ್ಮ ವ್ಯವಹಾರವನ್ನು ನಿಲ್ಲಿಸಿದರೆ, ಕೆಲಸ ಕಳೆದುಕೊಂಡ ನೌಕರರಿಗೆ ಹಣಕಾಸಿನ ನೆರವು ನೀಡಬೇಕೆಂದು ಸರ್ಕಾರ …

Read More »

SSLC ಪರೀಕ್ಷೆ ಖಂಡಿತಾ ನಡೆಯುತ್ತೆ.ಸುರೇಶ್ ಕುಮಾರ್…

ಬೆಂಗಳೂರು: ಲಾಕ್ ಡೌನ್ ಮುಂದುವರೆದಿದ್ದು, ವೈರಸ್ ವಿಚಾರವಾಗಿ ಜನ ಭಯಗೊಂಡಿದ್ದಾರೆ. ಪರೀಕ್ಷೆಗಳಿಗೂ ವೈರಸ್ ಕಾಟ ತಪ್ಪಿಲ್ಲ. ಇಷ್ಟೊತ್ತಿಗೆ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳು ನಡೆದಿರಬೇಕಿತ್ತು. ಆದ್ರೆ ಲಾಕ್ ಡೌನ್ ಮುಂದುವರಿಕೆಯಿಂದಾಗಿ ಪರೀಕ್ಷೆ ಹೇಗೆ ಮಾಡ್ತಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ಮಧ್ಯೆ ಪರೀಕ್ಷೆ ನಡೆಯದೆ 1-9 ಪಾಸ್ ಮಾಡಿದ ಹಾಗೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುತ್ತೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ವದಂತಿಗಳಿಗೆ ಸಚಿವ ಸುರೇಶ್ ಕುಮಾರ್ ಬ್ರೇಕ್ ಹಾಕಿದ್ದಾರೆ. ಬೆಂಗಳೂರಿನಲ್ಲಿ …

Read More »

ಕೊರೊನಾಗೆ ರಾಮಬಾಣವಾಗಿ ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಇಂದು ಅಧಿಕೃತ ಚಾಲನೆ

ಬೆಂಗಳೂರು: ಕೊರೊನಾಗೆ ರಾಮಬಾಣವಾಗಿ ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಇಂದು ಅಧಿಕೃತ ಚಾಲನೆ ನೀಡಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಚಲನೆ ನೀಡಿದರು. ಕರೊನಾ ಮಹಾಮಾರಿ ಗುಣಪಡಿಸುವ ಮಹತ್ವದ ಚಿಕಿತ್ಸೆ ಇದಾಗಿದೆ. ಕೇಂದ್ರ ಸರಕಾರದ ಅನುಮತಿಯೊಂದಿಗೆ ಕರ್ನಾಟಕದಲ್ಲಿ ಈಗ ಪ್ರಾಯೋಗಿಕವಾಗಿ ಈ ಚಿಕಿತ್ಸೆ ಆರಂಭವಾಗಿದ್ದು, ಕೊರೊನಾಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡವರ ದೇಹದಿಂದ …

Read More »

ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ಅನುಮತಿ ….

ಬೆಂಗಳೂರು : ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಕೇಂದ್ರ ಸರಕಾರವು ರಾಜ್ಯಕ್ಕೆ ಅನುಮತಿ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ. ಶುಕ್ರವಾರ ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ್​ರೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸುಧಾಕರ್, ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ನಡೆಯಲಿದೆ ಎಂದರು. ಕೊರೊನಾ ಸೋಂಕು ಕಾಣಿಸಿಕೊಂಡರೆ ಆತಂಕ ಪಡುವ ಅಗತ್ಯ ಇಲ್ಲ. ಬಹಳ ಜನ ಕೊರೊನಾ ಸೋಂಕು ದೃಢಪಟ್ಟರೆ …

Read More »

ಕೈಲಾದಷ್ಟು ದೇಣಿಗೆ ನೀಡಿ ಕೊರೋನಾ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಿ

ಬೆಂಗಳೂರು : ಕೋವಿಡ್ 19 ಸೋಂಕು ನಿಯಂತ್ರಣ, ಮುನ್ನೆಚ್ಚರಿಕೆ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಜೊತೆಗೆ ಸಂಕಷ್ಟದಲ್ಲಿ ಸಿಲುಕಿರುವ ಬಡವರು ಹಾಗೂ ಕಾರ್ಮಿಕರಿಗೂ ನೆರವಿನ ಹಸ್ತ ಚಾಚಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ದಾನಿಗಳು ಸಾಧ್ಯವಾದಷ್ಟು ಆನ್ ಲೈನ್ ಮೂಲಕವೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮನವಿ ಮಾಡಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವೀಯ …

Read More »

ಭಜರಂಗ ದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ಹೃದಯಾಘಾತದಿಂದ ನಿಧನ ……..

ಬೆಂಗಳೂರು, ಏ. 25 : ಭಜರಂಗ ದಳದ ಮಾಜಿ ಸಂಚಾಲಕ, ಸಾಮಾಜಿಕ ಕಾರ್ಯಕರ್ತ, ವಾಗ್ಮಿ ಮಹೇಂದ್ರ ಕುಮಾರ್ (47)ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಹೃದಯಾಘಾತದಿಂದ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮಹೇಂದ್ರ ಕುಮಾರ್ ವಿಧಿವಶರಾಗಿದ್ದಾರೆ. ಭಜರಂಗ ದಳದ ರಾಜ್ಯ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್, 2008 ರಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಿದ ಸಂಬಂಧ ಬಂಧನಕ್ಕೊಳಗಾಗಿದ್ದರು. ಬಳಿಕ ಅದೇ ಪ್ರಕರಣದಲ್ಲಿ ಅವರನ್ನು ದೋಷಮುಕ್ತಗೊಳಿಸಲಾಗಿತ್ತು. 2008 ರ …

Read More »

ಲಾಕ್‍ಡೌನ್ ಸಮಯದಲ್ಲಿ ಗಮನಿಸಿದ ಒಳ್ಳೆ ವಿಚಾರವನ್ನ ರಿವೀಲ್ ಮಾಡಿದ ರಾಧಿಕಾ…….

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಒಂದಿಲ್ಲೊಂದು ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಲಾಕ್‍ಡೌನ್ ಸಮಯದಲ್ಲಿ ತಾವು ಗಮನಿಸಿದ ಒಳ್ಳೆಯ ವಿಷಯವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಯಾರೂ ಕೂಡ ಮನೆಯಿಂದ ಹೊರಬರುತ್ತಿಲ್ಲ. ಇನ್ನೂ ಸ್ಟಾರ್ ನಟ-ನಟಿಯರು ಕೂಡ ತಮ್ಮ ಕುಟುಂಬದವರ ಜೊತೆ ಸಮಯ ಕಳೆಯುತ್ತಿದ್ದಾರೆ. ಹೀಗಾಗಿ ಜನರು ಕೂಡ ಮನೆಯಲ್ಲಿದ್ದು ಬೇಸರವಾದಾಗ ಮನೆಯ ಟೆರೇಸ್ ಮತ್ತು …

Read More »

ವಲಸೆ, ಕೂಲಿ ಕಾರ್ಮಿಕರು ಸ್ಥಳಾಂತರಕ್ಕೆ ಅವಕಾಶ – ಷರತ್ತುಗಳು ಅನ್ವಯ

ಬೆಂಗಳೂರು: ವಲಸೆ ಮತ್ತು ಕೂಲಿ ಕಾರ್ಮಿಕರ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಕೆಎಸ್‍ಆರ್‍ ಟಿಸಿ ಬಸ್ ಗಳ ಮೂಲಕ ಕಾರ್ಮಿಕರನ್ನು ಸ್ಥಳಾಂತರ ಮಾಡಬಹುದಾಗಿದೆ. ಸ್ಥಳಾಂತರ ಮಾಡುವಾದ ಶೇ.40ರಷ್ಟು ಜನರನ್ನು ಮಾತ್ರ ಬಸ್ ನಲ್ಲಿ ಕರೆದುಕೊಂಡ ಹೋಗವುದರ ಜೊತೆಗೆ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಾರ್ಮಿಕರನ್ನು ಹೊರ ರಾಜ್ಯಗಳಿಗೆ ಸ್ಥಳಾಂತರ ಮಾಡುವಂತಿಲ್ಲ. ರಾಜ್ಯದ ಜಿಲ್ಲೆಗಳಲ್ಲಿ ಮಾತ್ರ ಸ್ಥಳಾಂತರ ಅವಕಾಶ ನೀಡಲಾಗಿದೆ. ಕೂಲಿ …

Read More »