Breaking News

SSLC ಪರೀಕ್ಷೆ ಖಂಡಿತಾ ನಡೆಯುತ್ತೆ.ಸುರೇಶ್ ಕುಮಾರ್…

Spread the love

ಬೆಂಗಳೂರು: ಲಾಕ್ ಡೌನ್ ಮುಂದುವರೆದಿದ್ದು, ವೈರಸ್ ವಿಚಾರವಾಗಿ ಜನ ಭಯಗೊಂಡಿದ್ದಾರೆ. ಪರೀಕ್ಷೆಗಳಿಗೂ ವೈರಸ್ ಕಾಟ ತಪ್ಪಿಲ್ಲ. ಇಷ್ಟೊತ್ತಿಗೆ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳು ನಡೆದಿರಬೇಕಿತ್ತು. ಆದ್ರೆ ಲಾಕ್ ಡೌನ್ ಮುಂದುವರಿಕೆಯಿಂದಾಗಿ ಪರೀಕ್ಷೆ ಹೇಗೆ ಮಾಡ್ತಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಈ ಮಧ್ಯೆ ಪರೀಕ್ಷೆ ನಡೆಯದೆ 1-9 ಪಾಸ್ ಮಾಡಿದ ಹಾಗೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುತ್ತೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ವದಂತಿಗಳಿಗೆ ಸಚಿವ ಸುರೇಶ್ ಕುಮಾರ್ ಬ್ರೇಕ್ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸುರೇಶ್ ಕುಮಾರ್, SSLC ಪರೀಕ್ಷೆ ಖಂಡಿತಾ ನಡೆಯುತ್ತೆ. ಮೇ 3ರ ಬಳಿಕ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಕೆಲವರು ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಪರೀಕ್ಷೆ ನಡೆಸುತ್ತೇವೆ ಎಂದಿದ್ದಾರೆ


Spread the love

About Laxminews 24x7

Check Also

ಬ್ರೇಕ್ ಫೆಲ್ಯೂರ್ ಆಗಿ ಬೈಕ್ – ಕಾರಿಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್

Spread the loveಬೆಂಗಳೂರು : ಬ್ರೇಕ್ ಫೆಲ್ಯೂರ್ ಆಗಿ ಶಾಲಾ ಬಸ್​ವೊಂದು ನಿಯಂತ್ರಣ ತಪ್ಪಿ ಕಾರು ಹಾಗೂ ಬೈಕ್​ಗೆ ಡಿಕ್ಕಿ ಹೊಡೆದಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ