Breaking News
Home / ಜಿಲ್ಲೆ / ಉತ್ತರಕನ್ನಡ (page 3)

ಉತ್ತರಕನ್ನಡ

ಕೊರೊನಾದಿಂದ ಮುಕ್ತಗೊಂಡ ಉತ್ತರ ಕನ್ನಡ- ಕೊನೆಯ ಸೋಂಕಿತ ಡಿಸ್ಚಾರ್ಜ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ಕೊನೆಯ ಸೋಂಕಿತ ವ್ಯಕ್ತಿ ಕಾರವಾರದ ಪತಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 36 ವರ್ಷದ ಭಟ್ಕಳ ಮೂಲದ ಸೋಂಕಿತ ಸಂಖ್ಯೆ 260 ಪತಂಜಲಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ. ಸದ್ಯ ಆತನ ಕೋವಿಡ್‍ನಿಂದ ಗುಣಮುಖರಾಗಿದ್ದು, ಇಂದು ರಾತ್ರಿ ಆತನ ಡಿಸ್ಚಾರ್ಜ್ ನೊಂದಿಗೆ ಜಿಲ್ಲೆ ಈಗ ಕೊರೊನಾ ಪ್ರಕರಣದಿಂದ ಮುಕ್ತವಾಗಿದೆ. ಮಾರ್ಚ್ 17ರಂದು ದುಬೈನಿಂದ ವಾಪಸ್ಸಾಗಿದ್ದ 36 ವರ್ಷದ ವ್ಯಕ್ತಿಯಲ್ಲಿ …

Read More »

ಮೇ 3ರವರೆಗೆ ಭಟ್ಕಳದಲ್ಲಿ ನಿಯಮ ಸಡಿಲಿಕೆ ಇಲ್ಲ: ಶಿವರಾಮ್ ಹೆಬ್ಬಾರ್

ಕಾರವಾರ: ಮೇ 3ರ ತನಕ ಭಟ್ಕಳದಲ್ಲಿ ಕಟ್ಟುನಿಟ್ಟಿನ ನಿಯಮ ಮುಂದುವರಿಯಲ್ಲಿದ್ದು, ರಂಜಾನ್ ಹಬ್ಬಕ್ಕೂ ಇದರಿಂದ ವಿನಾಯಿತಿ ಇಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. ಇಂದು ಸಂಜೆ ಭಟ್ಕಳಕ್ಕೆ ಆಗಮಿಸಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು. ಭಟ್ಕಳದ ತಂಜೀಂ ಸಂಸ್ಥೆ ರಂಜಾನ್ ಹಬ್ಬಕ್ಕಾಗಿ ತಮಗೆ ದಿನದಲ್ಲಿ ಕನಿಷ್ಟ 2 ಗಂಟೆಯಾದರೂ ವಿನಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. ಮನವಿಯನ್ನು ನಯವಾಗಿ ತಿರಸ್ಕರಿಸಿದ …

Read More »

ವಿಶ್ವದ ಅಪರೂಪದ ಮೂಷಿಕ ಜಿಂಕೆ ರಕ್ಷಣೆ ಮಾಡಿದ ಕರಾವಳಿ ಕಾವಲುಪಡೆ ಪೊಲೀಸರು

ಕಾರವಾರ: ವಿಶ್ವದಲ್ಲೇ ಅತೀ ವಿರಳವಾದ ಮೂಷಿಕ ಜಿಂಕೆಯನ್ನು ಅಂಕೋಲದ ಅರಬ್ಬಿ ಸಮುದ್ರಲ್ಲಿ ಬೇಲಿಕೇರಿ ಕರಾವಳಿ ಕಾವಲುಪಡೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಕ್ರಮ ಗೋವಾ ಮದ್ಯ ತಡೆಗಟ್ಟುವ ನಿಟ್ಟಿನಲ್ಲಿ ಗಸ್ತಿನಲ್ಲಿದ್ದ ಪೊಲೀಸ್ ನಿರೀಕ್ಷಕ ಶ್ರೀಧರ್ ಎಸ್.ಆರ್ ನೇತೃತ್ವದ ಕರಾವಳಿ ಕಾವಲು ಪಡೆ ಈ ಜಿಂಕೆಯನ್ನು ರಕ್ಷಿಸಿದೆ. ಪೊಲೀಸರ ತಂಡ ಅಂಕೋಲ ತಾಲೂಕಿನ ಹಾರವಾಡದ ಕೋಡಾರ ಗುಡ್ಡದ ಬಳಿಯ ಸಮುದ್ರದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮೂಷಿಕ ಚಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಯವರಿಗೆ …

Read More »

ಕಾರವಾರ:ಕೊರೊನಾ ಸೋಂಕಿನಿಂದ ಗುಣಮುಖ ಜಿಲ್ಲಾಡಳಿತ, ವೈದ್ಯರು ಹಾಗೂ ಪೊಲೀಸರಿಗೆ ಧನ್ಯವಾದ

ಕಾರವಾರ: ಮಹಾಮಾರಿ ಕೊರೊನಾ ಸೋಂಕಿನಿಂದ ಗುಣಮುಖಗೊಂಡು ಮತ್ತೆ ಹೊಸ ಜೀವನ ಪಡೆದುಕೊಂಡ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಇಬ್ಬರು ನಿವಾಸಿಗಳು ತಮ್ಮ ಸಂತೋಷ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆಯೇ ಕಾರವಾರದ ನೌಕಾನೆಲೆಯಲ್ಲಿರುವ ಪತಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಸೋಂಕಿತ ರೋಗಿ ಸಂಖ್ಯೆ 36 ಹಾಗೂ ಇಂದು ಡಿಸ್ಚಾರ್ಜ್ ಆಗಿರುವ ಸೋಂಕಿತ ರೋಗಿ ಸಂಖ್ಯೆ 98 ಮತ್ತೆ ಆರೋಗ್ಯವಂತರಾಗಿ ಮರಳಿರುವುದಕ್ಕೆ ದೇವರು, ಜಿಲ್ಲಾಡಳಿತ, ವೈದ್ಯರು ಹಾಗೂ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ. ದೇವರ ದಯೆಯಿಂದ …

Read More »

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ

; ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬುದು ಕೊಂಚ ನಿಟ್ಟುಸಿರು ಬಿಡುವ ವಿಚಾರ. ಜಿಲ್ಲೆಯ ಒಂಬತ್ತನೇ ಕೊರೊನಾ ಸೋಂಕಿತ ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ರೋಗಿ ನಂಬರ್ 98 ಕಾರವಾರದ ನೌಕಾ ನೆಲೆಯ ಪತಾಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಭಟ್ಕಳದ 26 ವರ್ಷದ ಯುವಕ ದುಬೈನಿಂದ ಮಾರ್ಚ್ 20 ರಂದು ಭಟ್ಕಳಕ್ಕೆ ಆಗಮಿಸಿದ್ದನು. ದುಬೈನಿಂದ ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಾರವಾರದ …

Read More »

ಕಾರವಾರ: ಲಂಚದ ಆಸೆಗೆ ಬಿದ್ದ ಪೊಲೀಸರು ಇಲಾಖೆ ಜೀಪಿನಲ್ಲಿಯೇ ಕೆಲವರನ್ನು ಗಡಿದಾಟಿಸಲು ಮುಂದಾಗಿ ಟಾಸ್ಕ್ ಪೋರ್ಸ್ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ

ಕಾರವಾರ: ಲಂಚದ ಆಸೆಗೆ ಬಿದ್ದ ಪೊಲೀಸರು ಇಲಾಖೆ ಜೀಪಿನಲ್ಲಿಯೇ ಕೆಲವರನ್ನು ಗಡಿದಾಟಿಸಲು ಮುಂದಾಗಿ ಟಾಸ್ಕ್ ಪೋರ್ಸ್ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ. ಇಂತಹದೊಂದು ಘಟನೆ ನಡೆದಿರುವುದು ಕುಮಟಾ ತಾಲೂಕಿನ ಗೋಕರ್ಣದಲ್ಲಿ. ಕೆಲ ದಿನಗಳ ಹಿಂದೆ ಗೋಕರ್ಣದಿಂದ ಹುಬ್ಬಳ್ಳಿಗೆ ತೆರಳಿದ ಮೂವರು ಜೆಸಿಬಿ ಡ್ರೈವರ್​ಗಳು ಲಾಕ್ ಡೌನ್​ನಿಂದಾಗಿ ಸಿಲುಕಿಕೊಂಡಿದ್ದರು ಎನ್ನಲಾಗಿದೆ. ಆದರೆ ಮರಳಿ ಬರಲು ಯೋಚಿಸುತ್ತಿರುವಾಗ ಹುಬ್ಬಳ್ಳಿ ಠಾಣೆಯೊಂದರ ಪೊಲೀಸರೊಂದಿಗೆ ವ್ಯವಹಾರ ಕುದುರಿಸಿದ್ದಾರೆ. ಅದರಂತೆ ಒಪ್ಪಿದ ಅಧಿಕಾರಿಗಳು ತಮ್ಮದೇ ಜೀಪಿನಲ್ಲಿ ಮೂವರನ್ನು ಮಹಿಳಾ ಪೇದೆಯೊಂದಿಗೆ …

Read More »

ಕುಮಟಾ ಪಟ್ಟಣದ ವೈನ್ ಶಾಪ್‍ನಲ್ಲಿ ಕಳ್ಳತನ,43 ಸಾವಿರ ವಿವಿಧ ಬ್ರಾಂಡ್ ಮದ್ಯಗಳನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ.

ಕಾರವಾರ: ಲಾಕ್‍ಡೌನ್‍ನಿಂದ ಮದ್ಯ ಮಾರಾಟ ಸಹ ಬಂದ್ ಆಗಿದೆ. ಇದರಿಂದ ಮದ್ಯ ಪ್ರಿಯರಿಗಂತೂ ನುಂಗಲಾರದ ತುತ್ತಾಗಿದೆ. ಇದರಿಂದ ಮದ್ಯಕ್ಕಾಗಿ ಪಟ್ಟಣದ ವೈನ್ ಶಾಪ್ ಒಂದಕ್ಕೆ ಕಳ್ಳರು ಕನ್ನ ಹಾಕಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಕುಮಟಾ ಪಟ್ಟಣದ ಎಪಿಎಂಸಿ ಬಳಿ ಇರುವ ಅಲ್ಫಾ ವೈನ್ ಶಾಪ್‍ನಲ್ಲಿ ಕಳ್ಳತನ ಮಾಡಲಾಗಿದೆ. ವೈನ್ ಶಾಪ್‍ನ ಶಟರ್ ಒಡೆದು ಕಳ್ಳತನ ಮಾಡಲಾಗಿದೆ. ಒಟ್ಟು 43,665 ರೂಪಾಯಿ ಮೌಲ್ಯದ ವಿವಿಧ ಬ್ರಾಂಡ್ ಮದ್ಯಗಳನ್ನ ಕಳ್ಳರು ಕದ್ದು …

Read More »

ಕಾರವಾರದಲ್ಲಿ ಮಾರಾಟವಾಗುತ್ತಿದೆ ಗೋವಾ ಎಣ್ಣೆ; ಕಾಡುಗಳ ಮೂಲಕ ನಡೆಯುತ್ತಿದೆ ಮದ್ಯ ದಂಧೆ

ಕಾರವಾರ(ಏ.18): ಒಂದನೇ ಹಂತದ ಲಾಕ್ ಡೌನ್ ಮುಗಿದು ಎರಡನೇ ಹಂತದ ಲಾಕ್ ಡೌನ್ ಘೋಷಣೆ ಆಗಿ ಈಗ ಮೂರು ದಿನ ಕಳೆದಿದೆ. ಇದರ  ನಡುವೆ ಮದ್ಯದ ಅಂಗಡಿ ಆರಂಭಿಸಬೇಕೆಂದು ಸಾವಿರಾರು ಜನರ ಮನವಿ ಒಂದೆಡೆ ಆದರೆ, ಗೋವಾ- ಕಾರವಾರ ಗಡಿ ಭಾಗದಲ್ಲಿ ಮಾತ್ರ ಅವ್ಯಾಹತವಾಗಿ ಮದ್ಯ ಸಾಗಾಟ ನಡೆಯುತ್ತಿದ್ದು, ಇಲ್ಲಿ ಕುಡುಕರ ದಾಹ ತಣಿವಾಗುತ್ತಿದೆ. ಒಂದೆಡೆ ಲಾಕ್ ಡೌನ್ ಇರುವುದರಿಂದ ಅಗತ್ಯ ವಸ್ತು ಹೊರತ ಪಡಿಸಿ ಬೇರಾವದು ವಸ್ತು ಮಾರಾಟ …

Read More »

ಕೊರೊನಾ ವೈರಸ್ ನಿಂದ ಇಡೀ ಭಾರತ ಲಾಕ್ ಡೌನ್ ಆಗಿದ್ದು ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಸರ್ಕಾರ ಹೊರಡಿಸಿರುವ ನಿಷೇಧಾಜ್ಞೆ ಪಾಲಿಸುತ್ತಿದ್ದಾರೆ.

ಶಿರಸಿ – ಕೊರೊನಾ ವೈರಸ್ ನಿಂದ ಇಡೀ ಭಾರತ ಲಾಕ್ ಡೌನ್ ಆಗಿದ್ದು ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಸರ್ಕಾರ ಹೊರಡಿಸಿರುವ ನಿಷೇಧಾಜ್ಞೆ ಪಾಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಒಂದು ಸಂಸ್ಥೆ ವಿಶೇಷವಾಗಿ ಆರೋಗ್ಯ ಸಮಸ್ಯೆಗೆ ಒಳಗಾದ ಅಸಹಾಯಕರಿಗೆ ಹಾಗೂ ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಉಚಿತ ಆರೋಗ್ಯ ಸೇವೆ ನೀಡಲು ರಾಜ್ಯದಲ್ಲೇ ಮೊದಲು ಟೀಮ್ ಸಂಜೀವಿನಿ ಎಂಬ ಸಂಚಾರಿ ಆರೋಗ್ಯ ಬೈಕ್ ಘಟಕ ಸ್ಥಾಪಿಸಿದ್ದು ಇದೀಗ ಆ ಟೀಂ ನೇರವಾಗಿ ಮನೆ …

Read More »

ಕಾರವಾರದಲ್ಲಿ ಸೋಂಕಿತರು ಗುಣಮುಖ – ನಾಲ್ವರು ಡಿಸ್ಚಾರ್ಜ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಪತಂಜಲಿ ನೌಕಾನೆಲೆ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ ನಾಲ್ವರು ಗುಣಮುಖರಾಗಿದ್ದು, ಇಂದು ಅವರನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಭಟ್ಕಳ ಮೂಲದ ಎಂಟು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ತಕ್ಷಣ ಜಿಲ್ಲಾಡಳಿತ ಅವರಿಗೆ ಭಟ್ಕಳ ತಾಲೂಕು ಆಸ್ಪತ್ರೆಯಿಂದ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ …

Read More »