Breaking News

ಉತ್ತರಕನ್ನಡ

ದಾಂಡೇಲಿಯ ಗಣೇಶನಗರದ ಅವಿವಾಹಿತ ಯುವಕ ನಾಪತ್ತೆ

ದಾಂಡೇಲಿ : ಸ್ಥಳೀಯ ಗಣೇಶನಗರದ ಅವಿವಾಹಿತ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದ್ದು, ಈ ಬಗ್ಗೆ ನಗರ ಪೊಲೀಸ್ ಠಾಣೆಯಿಂದ ಮಾಹಿತಿ ಲಭ್ಯವಾಗಿದೆ. ಖಾಸಗಿ ಕೋರಿಯರ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಸ್ಥಳೀಯ ಗಣೇಶನಗರದ ನಿವಾಸಿ 27 ವರ್ಷ ವಯಸ್ಸಿನ ಪ್ರವೀಣ್ ತೆಗ್ಗಿ ಎಂಬಾತನೆ ನಾಪತ್ತೆಯಾದ ಯುವಕನಾಗಿದ್ದಾನೆ. ಈತ ಜುಲೈ 3 ರಂದು ಯಾವುದೋ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆ ಬಿಟ್ಟು ಹೋದವನು ಈವರೆಗೆ ಮನೆಗೆ ಬಂದಿಲ್ಲ. ಈತನ ಕುಟುಂಬಸ್ಥರು ಹಾಗೂ ಸ್ನೇಹಿತರು ಆತನನ್ನು …

Read More »

ಪ್ರೇಮ ವಿಫಲ ಅಗಿದೆ ಎಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಹಳಿಯಾಳದ ಪ್ರೇಮಿಗಳು

ಪ್ರಿಯತಮೆಗೆ ಬೇರೆ ಮದುವೆ ಮಾಡಿದ್ದ ಪೋಷಕರು : ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು ಹಳಿಯಾಳದ ಪ್ರೇಮಿಗಳಿಬ್ಬರು ದರುಣವವಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಜರುಗಿದೆ ಕಳೆದ ಶುಕ್ರವಾರ ಹಳಿಯಾಳ ಪಟ್ಟಣದ ಜ್ಯೋತಿ ಸುರೇಶ್ ಅಂತ್ರೊಳಕರ್ ಹಾಗೂ ರಿಕೇಶ್ ಸುರೇಶ್ ಮಿರಶಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಅದರೆ ಚಿಕೆತ್ಸೆ ಪಲಕಾರಿ ಆಗದೆ ಇಂದು ಮುಂಜಾನೆ ಕಿಮ್ಸ್ ನಲ್ಲಿ ಸಾವನ್ನಪ್ಪಿದ್ದಾರೆ   ಜ್ಯೋತಿ ಹಾಗೂ ರಿಕೇಶ …

Read More »

ಅಂಕೋಲಾ : ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದು ಓರ್ವ ಸಾವು, ಇನ್ನೋರ್ವ ಗಂಭೀರ

ಅಂಕೋಲಾ : ಬೈಕ್ ಮತ್ತು ಟಿಪ್ಪರ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟು ಸಹಸವಾರ ಗಂಭೀರ ಗಾಯಗೊಂಡ ಘಟನೆ ಹಾರವಾಡ ಕ್ರಾಸ್ ಬಳಿ ಶುಕ್ರವಾರ ನಡೆದಿದೆ. ತಾಲೂಕಿನ ಹೊನ್ನಳ್ಳಿ ನಿವಾಸಿ ರವಿ ಲೋಕು ಗೌಡ( 29) ಮೃತಪಟ್ಟ ವ್ಯಕ್ತಿ. ಬೇಲೇಕೇರಿ ಸಿಬರ್ಡ್ ಕಾಲೊನಿ ನಿವಾಸಿ ಹರೀಶ ಒಮು ಗೌಡ (28) ಗಂಭೀರ ಗಾಯಗೊಂಡು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಟಿಪ್ಪರ್ ಚಾಲಕ ಅನಿಸ್ ಅಲಿ …

Read More »

ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ

ಉತ್ತರಕನ್ನಡ: ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಗುರುವಾರ ಸಂಜೆ ನಡೆದಿದೆ. ಕಿರವತ್ತಿ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಹುಬ್ಬಳ್ಳಿಯಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಗುರುತಿನ್ನೂ ಪತ್ತೆಯಾಗಿಲ್ಲ. ಮೃತರು ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಎಂದು ತಿಳಿದುಬಂದಿದೆ. ಕಾರು …

Read More »

ಶ್ರೀ ಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಶಿರಸಿ ಮಾರುಕಟ್ಟೆ ಪೊಲೀಸರು

ಶಿರಸಿ: ಅಕ್ರಮವಾಗಿ ಶ್ರೀ ಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಶಿರಸಿ ಮಾರುಕಟ್ಟೆ ಪೊಲೀಸರು ಈರ್ವರನ್ನು ಬಂಧಿಸಿ ಅವರಿಂದ ಸುಮಾರು ೨೬ ಸಾವಿರ ರೂಪಾಯಿ ಶ್ರೀಗಂಧವನ್ನು ಹಾಗೂ ಸಾಗಿಸಲು ಬಳಸಿದ ಬೈಕ್ ನ್ನು ವಶಪಡಿಸಿಕೊಂಡಿರುವ ಘಟನೆ ನಗರದ ಕರಿಗುಂಡಿ ರಸ್ತೆಯಲ್ಲಿ ನಡೆದಿದೆ.  ಶಿರಸಿ – ಕರಿಗುಂಡಿ ರಸ್ತೆಯ ಲಿಡ್ಕರ್ ಕಾಲೋನಿ ಕ್ರಾಸ್ ಹತ್ತಿರ ಮೊಟಾರ್ ಸೈಕಲ್ ನಂ ಕೆ.ಎ ೧೫ ಆರ್ ೧೪೯೯ ರ ಮೇಲೆ  ಇರ್ಷಾದ್ …

Read More »

ಕೋಯ್ನಾ ಡ್ಯಾಂನಿಂದ ನೀರು ಬಿಟ್ಟಿಲ್ಲ. ಸುಳ್ಳು ಸುದ್ದಿ ಹಬ್ಬಿಸಬೇಡಿ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದೆ. ಕಳೆದ ಎರಡು ದಿನಕ್ಕೆ ಹೋಲಿಸಿದ್ರೆ ಮಳೆ ಪ್ರಮಾಣ ಕಡಿಮೆ ಆಗಿದೆ. ಆದ್ರೆ ಕೃಷ್ಣೆಯಲ್ಲಿ ಅಬ್ಬರ ಮಾತ್ರ ಕಡಿಮೆ ಆಗಿಲ್ಲ. ದೂದ್‍ಗಂಗಾ ಹಾಗೂ ಹೀರಣ್ಯಕೇಶಿ ನದಿಗಳು ಮಾತ್ರ ಸ್ವಲ್ಪ ಶಾಂತಗೊಂಡಿವೆ. ಕೋಯ್ನಾ ಡ್ಯಾಂನಿಂದ ನೀರು ಬಿಟ್ಟಿಲ್ಲ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ನೀರಾವರಿ ಅಧಿಕಾರಿಗಳು ಮನವಿ ಮಾಡ್ಕೊಂಡಿದ್ದಾರೆ. https://m.facebook.com/story.php?story_fbid=187610026057095&id=105350550949710 ಚಿಕ್ಕೋಡಿ ಉಪವಿಭಾಗದ ಎಂಟು ಸೇತುವೆಗಳು ಮುಳುಗಡೆಯಾಗಿವೆ ಇವೆ. ಇಲ್ಲಿ …

Read More »

ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಕಾರವಾರ: ಕೊರೊನಾ ಸೋಂಕಿಗೆ ಒಳಗಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಕಾರವಾರ ಮೆಡಿಕಲ್ ಕಾಲೇಜಿನ ಕೋವಿಡ್-19 ವಾರ್ಡ್ ನಲ್ಲಿ ಶಿರಸಿ ತಾಲೂಕಿನ 76 ವರ್ಷದ ವೃದ್ಧ ಹಾಗೂ ಭಟ್ಕಳದ 65 ವರ್ಷದ ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಶಿರಸಿ ತಾಲೂಕಿನ 76 ವರ್ಷದ ವೃದ್ಧ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಕೊರೊನಾ ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಯಿಂದ ಕ್ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು ಆದರೆ …

Read More »

ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಸ್ಥಾನ ಸೀಲ್‍ಡೌನ್……….

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 21 ಹೊಸ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇತ್ತ ಶಿರಸಿಯ ಮಾರಿಕಾಂಬಾ ದೇವಸ್ಥಾನವನ್ನು ಒಂದು ವಾರ ಸೀಲ್‍ಡೌನ್ ಮಾಡಲಾಗಿದೆ. ಶಿರಸಿಯ ಮಾರಿಕಾಂಬಾ ದೇವಸ್ಥಾನದ ಪಕ್ಕದಲ್ಲೇ ವಾಸವಿದ್ದ ವ್ಯಕ್ತಿಗೂ ಕೊರೊನಾ ಪಾಸಿಟಿವ್ ವರದಿಯಾಗಿದ್ದು, ಈತ ಪ್ರತಿ ದಿನ ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುತಿದ್ದ ಎನ್ನಲಾಗಿದೆ. ಹೀಗಾಗಿ ಈತನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈಗ ದೇವಸ್ಥಾನವನ್ನು ಸೀಲ್‍ಡೌನ್ ಮಾಡುವ ನಿರ್ಧಾರಕ್ಕೆ ಮಾಡಲಾಗಿದೆ. ಶಿರಸಿ …

Read More »

ಸಾರಿಗೆ ಸಿಬ್ಬಂದಿ ಕರ್ತವ್ಯ ಪ್ರಜ್ಞೆ- ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಿದ ವಿದ್ಯಾರ್ಥಿಗಳು!

ಕಾರವಾರ: ಗಾಳಿ ಮಳೆಗೆ ದಾರಿಗೆ ಅಡ್ಡಲಾಗಿ ಬಿದ್ದಿದ್ದ ಮರವೊಂದನ್ನು ಸಾರಿಗೆ ಸಿಬ್ಬಂದಿಯೇ ತೆರವುಗೊಳಿಸಿದ್ದು, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳನ್ನು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪುವಂತೆ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಾಣ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಗುರುವಾರದಿಂದ ಜಿಲ್ಲೆಯಾದ್ಯಂತ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾಣ ಮೂಲಕ ಕುಮಟಾ ತೆರಳುವ ರಸ್ತೆಯಲ್ಲಿ ಬೃಹತ್ ಮರವೊಂದು ಅಡ್ಡಲಾಗಿ ಬಿದ್ದಿತ್ತು. ಈ ವೇಳೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಮಕ್ಕಳನ್ನು …

Read More »

KSRTCಗೂ ಕಾಲಿಟ್ಟ ಕೊರೊನಾ- ಯಲ್ಲಾಪುರದಿಂದ ಬೆಂಗ್ಳೂರಿಗೆ ಬಂದ ಕಂಡಕ್ಟರ್‌ಗೆ ಪಾಸಿಟಿವ್

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಷ್ಟು ದಿನ ಹೊರ ದೇಶ ಹಾಗೂ ರಾಜ್ಯದಿಂದ ಬಂದವರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗುತ್ತಿತ್ತು. ಆದರೆ ಇದೀಗ ಅಂತರ್ ಜಿಲ್ಲಾ ಪ್ರಯಾಣ ಮಾಡಿದ ಬಸ್ ಕಂಡಕ್ಟರ್‌ಗೆ ಪಾಸಿಟಿವ್ ದೃಢವಾಗಿದ್ದು ಜಿಲ್ಲೆಯ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಬೆಂಗಳೂರಿನ ಬಿಎಂಟಿಸಿ ಬಸ್ಸಿನಲ್ಲಿ ಸವಾರಿ ಮಾಡುತ್ತಿರುವ ಚೀನಾ ಮಾರಿ ಈಗ ಕೆಎಸ್‌ಆರ್‌ಟಿಸಿ ಬಸ್ಸಿಗೂ ಕಾಲಿಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದ ನಿರ್ವಾಹಕನಿಗೆ ಕೊರೊನಾ ಸೋಂಕು ದೃಢವಾಗಿದೆ. …

Read More »