Breaking News

Laxminews 24x7

ಡಬಲ್ ಎಂಟ್ರಿ ಹೊರತುಪಡಿಸಿ ಬೇರೆ ಫಾರಂ 7 ಅರ್ಜಿ ಪರಿಗಣಿಸದಂತೆ ಸೂಚನೆ: ಡಿಕೆಶಿ

ಬೆಂಗಳೂರು: ಡಬಲ್ ಎಂಟ್ರಿ ಹೊರತುಪಡಿಸಿ ಬೇರೆ ಫಾರಂ 7 ಅರ್ಜಿ ಪರಿಗಣಿಸದಂತೆ ರಾಜ್ಯ ಚುನಾವಣಾ ಆಯೋಗ  ಸೂಚನೆ ನೀಡಿದೆ ಎಂದು ಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ. ಚುನಾವಣಾ ಆಯೋಗದ ತೀರ್ಮಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮರಣ ಹಾಗೂ ಎರಡು ಬಾರಿ ನೋಂದಣಿ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಯಾವುದೇ ಫಾರಂ 7 ಅನ್ನು ಅನುಮೋದನೆ ಮಾಡುವಂತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತರು ರಾಜ್ಯದ ಎಲ್ಲಾ ತಹಸೀಲ್ದಾರ್ ಅವರಿಗೆ ನಿರ್ದೇಶನ ನೀಡಿದ್ದಾರೆ. …

Read More »

ಜಿಯೋ ಫೈನಾನ್ಸ್‌ನಿಂದ ಜಿಯೋ ಸಿಲ್ವರ್ ಕೊಡುಗೆ – 10 ರೂ.ನಿಂದ ಡಿಜಿಟಲ್ ಬೆಳ್ಳಿ ಖರೀದಿಸಿ!

ಮುಂಬೈ: 10 ರೂಪಾಯಿಗೆ ಬೆಳ್ಳಿ ಖರೀದಿಸ್ಬೇಕು ಅಂತಿದ್ದೀರಾ? ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಫೈನಾನ್ಸ್ ಈಗ ತನ್ನ ಆಪ್‌ನಲ್ಲಿ ‘ಜಿಯೋ ಸಿಲ್ವರ್’ ಎಂಬ ಹೊಸ ಸೇವೆಯನ್ನು ಪರಿಚಯಿಸಿದೆ. ಇದರ ಮೂಲಕ ಗ್ರಾಹಕರು ಕೇವಲ 10 ರೂಪಾಯಿಗಳಿಂದ ಅಪ್ಪಟ 99.9% ಶುದ್ಧತೆಯ ಡಿಜಿಟಲ್ ಬೆಳ್ಳಿಯಲ್ಲಿ ಹೂಡಿಕೆ ಮಾಡಬಹುದು. ಜಿಯೋ ಫೈನಾನ್ಸ್ ಆಪ್ ಮೂಲಕ ಸಾಲ, ವಿಮೆ, ಹೂಡಿಕೆ ಹಾಗೂ ಪೇಮೆಂಟ್ ಸೇವೆಗಳನ್ನು ಒದಗಿಸುತ್ತಿರುವ `ಜಿಯೋ ಫೈನಾನ್ಸ್ ಪ್ಲಾಟ್‌ಫಾರ್ಮ್ ಅಂಡ್ ಸರ್ವೀಸ್ ಲಿಮಿಟೆಡ್’ …

Read More »

ದೃಶ್ಯ ರೂಪ ಪಡೆದುಕೊಂಡ ವೀರಭೂಮಿ ಮ್ಯೂಸಿಯಂ

ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಅಪ್ರತಿಮ ಶೌರ್ಯ ಮೆರೆದು ಕ್ರಾಂತಿಯ ಕಿಡಿ ಹೊತ್ತಿಸಿದ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಅವರ ಅಮರ ತ್ಯಾಗಗಾಥೆ ಈಗ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿರುವ ‘ವೀರಭೂಮಿ ಮ್ಯೂಸಿಯಂ’ನಲ್ಲಿ ದೃಶ್ಯರೂಪ ಪಡೆದುಕೊಂಡಿದೆ. ಪ್ರಸಿದ್ಧ ಚಲನಚಿತ್ರ ನಿರ್ಮಾಪಕರು, ಛಾಯಾಗ್ರಾಹಕರು, ಲೇಖಕರು ಹಾಗೂ ಸೃಜನಶೀಲ ಕಥೆಗಾರರಾದ ಅನಿಲ್ ಅಣ್ಣಯ್ಯ ಅವರು ಸೆಪ್ಟೆಂಬರ್ 27ರ ಭಾನುವಾರದಂದು ನಂದಗಡದ 13 ಎಕರೆ ವಿಸ್ತೀರ್ಣದ ಈ ಪವಿತ್ರ ಭೂಮಿಗೆ ಭೇಟಿ ನೀಡಿದ್ದರು. ತಾವು …

Read More »

ಕನ್ನಡ ಶಾಸನಗಳು ಸಾಹಿತ್ಯ ಮತ್ತು ಸಂಸ್ಕೃತಿಯ ತವನಿಧಿ: ಡಾ. ಎಸ್.ಡಿ. ಕೆಂಗಲಗುತ್ತಿ

ಬಾಗಲಕೋಟೆ: ಕನ್ನಡ ನಾಡಿನ ಬಹುತೇಕ ಶಾಸನಗಳ ರಚನೆಗೆ ಧರ್ಮ ಹಾಗೂ ವೀರ ಮೌಲ್ಯಗಳು ಪ್ರೇರಣೆಯಾಗಿವೆ. ಇತಿಹಾಸದ ನಿಖರ ನಿರ್ಮಾಣಕ್ಕೆ ಶಾಸನಗಳು ಪ್ರಮುಖ ಆಧಾರಗಳಾಗಿದ್ದು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ತವನಿಧಿಗಳಾಗಿವೆ ಎಂದು ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಸ್.ಡಿ. ಕೆಂಗಲಗುತ್ತಿ ಹೇಳಿದರು. ನಗರದ ಬಿ.ವ್ಹಿ.ವ್ಹಿ.ಎಸ್. ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಮತ್ತು ಇತಿಹಾಸ ವಿಭಾಗಗಳ ವತಿಯಿಂದ ಗುರುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ …

Read More »

ಬೆಳಗಾವಿ ಮೇಯರ್, ಉಪಮೇಯರ್ ಬದಲಾವಣೆಗೆ ಆಗ್ರಹಿಸಿದ ಕನ್ನಡ ಸಂಘಟನೆಗಳು

ಬೆಳಗಾವಿ: ಕನ್ನಡಪರ ಸಂಘಟನೆಗಳ ಸತತ ಹೋರಾಟಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹತ್ವದ ಜಯ ಸಿಕ್ಕಿದೆ. ಮಹಾಜನ್ ಆಯೋಗದ ವರದಿಯೇ ಅಂತಿಮ ಎಂಬ ಕನ್ನಡಪರ ಗೊತ್ತುವಳಿಯನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸೆಪ್ಟೆಂಬರ್ 30ರಂದು ಅಂಗೀಕರಿಸಲಾಗಿದೆ. ಸುಮಾರು 25ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಕಳೆದ ಆರು ತಿಂಗಳಿಂದ ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕನ್ನಡ ಕ್ರಿಯಾಶೀಲ ಸಮಿತಿಯ ಅಧ್ಯಕ್ಷ ಅಶೋಕ್ ಚಂದರಗಿ ತಿಳಿಸಿದ್ದಾರೆ. 2005ರಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು …

Read More »

ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ವಾಗ್ದಾಳಿ: ಡಿಕೆಶಿ ವಿರುದ್ಧ ಸರಣಿ ಆರೋಪ

ಬೆಳಗಾವಿ: ರಾಜ್ಯ ಸರ್ಕಾರದ ಆಡಳಿತ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿ ಕುರಿತು ಬೆಳಗಾವಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗುತ್ತಿಗೆದಾರರ ಸಂಘದವರು ರಾಜ್ಯದಲ್ಲಿ ಸುಮಾರು ₹38 ಸಾವಿರ ಕೋಟಿ ಬಿಲ್ ಬಾಕಿ ಇದೆ ಎಂದು ಹೇಳುತ್ತಿದ್ದರೂ, ಈ ವಿಚಾರಕ್ಕೆ ಡಿ.ಕೆ. ಶಿವಕುಮಾರ್ ಅಸಡ್ಡೆಯ ಉತ್ತರ ನೀಡುತ್ತಿದ್ದಾರೆ ಎಂದು ಶೆಟ್ಟರ್ ಆರೋಪಿಸಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಸಾಲ ಮಾಡಲಾಗಿದೆ ಎಂದು ಹೇಳುವುದಾದರೆ, ಈಗ ನೀವು ಮುಖ್ಯಮಂತ್ರಿ …

Read More »

ಕಬ್ಬು ಬೆಳೆಗಾರರಿಗೆ ಮತ್ತೆ ಎಫ್‌ಆರ್‌ಪಿ ಹೆಚ್ಚಳ ಸಾಧ್ಯತೆ: ಸಂಜಯ ಪಾಟೀಲ್

ಬೆಳಗಾವಿ: ಎಂಎಸ್‌ಪಿ ಮತ್ತು ಕಬ್ಬಿನ ಬೆಲೆ ನಿಗದಿ ಮಾಡುವ ಎಫ್‌ಆರ್‌ಪಿ ಎರಡೂ ವಿಭಿನ್ನವಾಗಿದ್ದು, ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಈ ವರ್ಷವೂ ಎಫ್‌ಆರ್‌ಪಿ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಬಿಜೆಪಿ ಮಾಜಿ ಶಾಸಕ ಹಾಗೂ ಬಿಜೆಪಿ ವಿಭಾಗ ಪ್ರಭಾರಿ ಸಂಜಯ ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕ್ಕರೆ ಬೆಲೆ ಕುಸಿತದಿಂದಾಗಿ ಕಾರ್ಖಾನೆಗಳು ಹಾಗೂ ರೈತರಿಗೆ ಉಂಟಾಗುತ್ತಿದ್ದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು 2018ರಲ್ಲಿ ಕೇಂದ್ರ ಸರ್ಕಾರ ಸಕ್ಕರೆಗೆ ಎಂಎಸ್‌ಪಿ ಜಾರಿಗೊಳಿಸಿತು. ಎಂಎಸ್‌ಪಿ ಸಕ್ಕರೆಯ ಕನಿಷ್ಠ …

Read More »

ವಿಶ್ವ ಚಾಂಪಿಯನ್‌ಶಿಪ್‌ಗೆ ಬೆಳಗಾವಿಯ ಇಬ್ಬರು ಸ್ಕೇಟರ್‌ಗಳ ಆಯ್ಕೆ

ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಸ್ಕೇಟರ್‌ಗಳಾದ ದೇವೇನ್ ಬಾಮಣೆ ಮತ್ತು ಸೈರಾಜ್ ಮೆಂಡಕೆ ಅವರು ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಭುವನೇಶ್ವರ (ಒಡಿಶಾ) ಹಾಗೂ ಮೊಹಾಲಿ (ಚಂಡೀಗಢ)ದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ದೇವೇನ್ ಬಾಮಣೆ ಮತ್ತು ಸೈರಾಜ್ ಮೆಂಡಕೆ ಅವರು ಉತ್ತಮ ಪ್ರದರ್ಶನ ನೀಡಿ ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ದೇವೇನ್ ಬಾಮಣೆ ಅವರು ಕೆಎಲ್‌ಎಸ್ ಜಿಐಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಸೈರಾಜ್ ಮೆಂಡಕೆ ಅವರು ಆರ್‌ಎಲ್‌ಎಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಇಬ್ಬರೂ …

Read More »

ಚಾಕು ಅಲ್ಲ ಒಮಾನ್‌ ಪೈಲಟ್‌ ಮಚ್ಚರ್‌ಗೆ ಹೊಡೆದಿದ್ದು ಕೊಡಲಿಯಿಂದ!

ಟೆಲ್‌ ಅವೀವ್: ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ  ವಿಮಾನದಲ್ಲಿ ನಡೆದ ಉಗ್ರ ದಾಳಿಯ ವರದಿ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಕಾಕ್‌ಪಿಟ್‌ನಲ್ಲಿ ಸಹ ಪೈಲಟ್‌ಗೆ ತೀವ್ರ ಗಾಯಗೊಳಿಸಲು ಪೈಲಟ್‌ಗೆ ಚಾಕು ಹೇಗೆ ಸಿಕ್ಕಿತು? ವಿಮಾನ ನಿಲ್ದಾಣದಲ್ಲಿ ಆಯುಧವನ್ನು ತೆಗೆದುಕೊಂಡು ಹೋಗಲು ಅನುಮತಿ ಸಿಕ್ಕಿದ್ದು ಹೇಗೆ ಇತ್ಯಾದಿ ಪ್ರಶ್ನೆಗಳು ಎದ್ದಿತ್ತು. ಆದರೆ ಈಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಸುದ್ದಿ ಪ್ರಕಟವಾದ ಸಂದರ್ಭದಲ್ಲಿ ಒಮನ್‌ ಪೈಲಟರ್‌ ಭಾರತ ಮೂಲದ ಸ್ಮಿತ್‌ ಮಚ್ಚರ್ಮಡಚುವ ಚಾಕುನಿಂದ …

Read More »

KSRTC ಬಸ್, ಲಾರಿ ಮಧ್ಯೆ ಭೀಕರ ಅಪಘಾತ – ಬಸ್ ಚಾಲಕ ದುರ್ಮರಣ, ಹಲವರಿಗೆ ಗಾಯ

ಚಿತ್ರದುರ್ಗ: ಸರ್ಕಾರಿ ಬಸ್ಸೊಂದು ಲಾರಿಗೆ ಡಿಕ್ಕಿಯಾದ ಪರಿಣಾಮ ಬಸ್ ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ಚಿತ್ರದುರ್ಗದ ಕಣಿವೆ ಬಳಿ ನಡೆದಿದೆ. ಅಪಘಾತದಲ್ಲಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದೂ, ಮೃತರನ್ನು ನಾಗರಾಜ್ ನಾಯ್ಕ (52) ಎಂದು ಗುರುತಿಸಲಾಗಿದೆ. ಚಿತ್ರದುರ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್, ಕಣಿವೆ ಬಳಿ ಗೊಬ್ಬರದ ಚೀಲಗಳನ್ನು ತುಂಬಿಕೊಂಡು ಹೊರಟಿದ್ದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಬಸ್‌ನಲ್ಲಿದ್ದ ನಾಲ್ಕಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ …

Read More »