Breaking News

Laxminews 24x7

ಪರಿಷ್ಕರಣೆ ಬಳಿಕ 1 ತಿಂಗಳಲ್ಲಿ 1.37 ಲಕ್ಷ ಮತದಾರರ ಹೆಚ್ಚಳ – ರಾಜ್ಯದಲ್ಲಿ 84,900 ಫಾರ್ಮ್‌ 7 ಸಲ್ಲಿಕೆ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಒಟ್ಟು ಮತದಾರರ ಸಂಖ್ಯೆ 4,49,81,740ಕ್ಕೆ ತಲುಪಿದೆ ಎಂದು ರಾಜ್ಯ ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಸೆಪ್ಟೆಂಬರ್ 25ರವರೆಗೆ ರಾಜ್ಯದಲ್ಲಿ 4,48,44,080 ಇದ್ದ ಮತದಾರರ ಸಂಖ್ಯೆ, ಪರಿಷ್ಕರಣೆ ಮತ್ತು ನೋಟಿಸ್ ಪ್ರಕ್ರಿಯೆಯ ಬಳಿಕ 1,37,660ರಷ್ಟು ಹೆಚ್ಚಾಗಿದೆ. ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಟ್ಟು 2,26,60,092 ಮಹಿಳಾ ಮತದಾರರಿದ್ದರೆ, ಪುರುಷ ಮತದಾರರ ಸಂಖ್ಯೆ 2,23,18,784 ಆಗಿದೆ. …

Read More »

ಕಿಡ್ನ್ಯಾಪ್‌ ನಾಟಕವಾಡಿ 90 ಲಕ್ಷಕ್ಕೆ ಡಿಮ್ಯಾಂಡ್‌ – ತಂದೆಗೆ ಯಾಮಾರಿಸಲು ಯತ್ನಿಸಿದ ಮಗ ಅರೆಸ್ಟ್‌

ಬೆಂಗಳೂರು: ಕಿಡ್ನ್ಯಾಪ್‌  ನಾಟಕವಾಡಿ ತಂದೆಗೆ 90 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಮಗನನ್ನು ಆರ್‌.ಆರ್‌ ನಗರ ಪೊಲೀಸರು  ಬಂಧಿಸಿದ್ದಾರೆ. ಮನೀಷ್ (40) ಬಂಧಿತ ಆರೋಪಿಯಾಗಿದ್ದಾನೆ. ಈತ ತನ್ನ ತಂದೆ ಮನೋಹರ್ ಪಟೇಲ್ (62) ಅವರಿಗೆ ಸ್ನೇಹಿತರ ಮೂಲಕ ತನ್ನದೇ ನಂಬರ್‌ನಿಂದ ವಾಟ್ಸಾಪ್ ಕರೆ ಮಾಡಿಸಿ, ನಿಮ್ಮ ಮಗನನ್ನು ಕಿಡ್ನ್ಯಾಪ್‌ ಮಾಡಿದ್ದೇವೆ ಎಂದು ಹೇಳಿಸಿದ್ದ. ಅಲ್ಲದೇ 90 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಿಂದಿನ ದಿನ ಹಣದ ವ್ಯವಹಾರಕ್ಕೆಂದು ರೈಲಿನಲ್ಲಿ …

Read More »

ಶಿಕಾರಿಗೆ ತೆರಳಿದ್ದಾಗ ಮಿಸ್‌ಫೈರ್ – ಯುವಕ ಸಾವು, ಮೂವರ ಬಂಧನ, ಮೂವರು ನಾಪತ್ತೆ

ಚಿಕ್ಕಮಗಳೂರು: ರಾತ್ರಿ ವೇಳೆ ಶಿಕಾರಿಗೆ  ತೆರಳಿದ್ದಾಗ ಮಿಸ್‌ಫೈರ್ ಆಗಿ ಯುವಕ ಸಾವನ್ನಪ್ಪಿರುವ ಘಟನೆ ಕೊಪ್ಪ  ತಾಲೂಕಿನ ಕಾಡಂಚಿನ ಗ್ರಾಮವಾದ ಕಡೇಮನೆಯಲ್ಲಿ ನಡೆದಿದೆ. ಗ್ರಾಮದ ಚೇತನ್ ಗುಂಡು ಬಿದ್ದು ಸಾವನ್ನಪ್ಪಿದ ಯುವಕ. ಸೆ.30 ರ ರಾತ್ರಿ 7 ಜನ ಸ್ನೇಹಿತರು ಅರಣ್ಯಕ್ಕೆ ಬೇಟೆ ತೆರಳಿದ್ದರು. ಬೇಟೆ ವೇಳೆ ಪ್ರಾಣಿ ಮೇಲೆ ಗುಂಡು ಹಾರಿಸುವಾಗ ಮಿಸ್ ಫೈರ್ ಆಗಿ ಜೊತೆಗಿದ್ದ ಚೇತನ್‌ಗೆ ಗುಂಡು ಬಿದ್ದಿದೆ. ಜೊತೆಗಿದ್ದ ಸ್ನೇಹಿತರು ಕೂಡಲೇ ಆತನನ್ನ ಜಯಪುರ ಆಸ್ಪತ್ರೆಗೆ …

Read More »

ಚುನಾವಣಾ ಆಯೋಗದ ಕಚೇರಿ ಮೆಟ್ಟಿಲಲ್ಲೇ ಸಿಎಂ, ಸಚಿವರ ಧರಣಿ; ಎಫ್‌ಐಆರ್‌ಗೆ ಪಟ್ಟು

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ ಅರ್ಹರ ಹೆಸರುಗಳನ್ನು ಕಾನೂನುಬಾಹಿರವಾಗಿ ಕೈಬಿಡಲಾಗುತ್ತಿದೆ ಎಂದು ಆರೋಪಿಸಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್‌  ಹಾಗೂ ಸಚಿವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ  ಕಚೇರಿಯಲ್ಲೇ ಧರಣಿ ಕುಳಿತ ಹಿನ್ನೆಲೆಯಲ್ಲಿ ತೀವ್ರ ರಾಜಕೀಯ ಹೈಡ್ರಾಮಾ ಸೃಷ್ಟಿಯಾಗಿದೆ. ನಕಲಿ ‘ಫಾರ್ಮ್-7’ ಸಲ್ಲಿಸಿ ಮತದಾರರ ಹೆಸರು  ಡಿಲೀಟ್ ಮಾಡಲು ಯತ್ನಿಸಿದವರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳು ಕಚೇರಿಯ ಮೆಟ್ಟಿಲುಗಳ ಮೇಲೆ ಕುಳಿತು ಧರಣಿ ಆರಂಭಿಸಿದ್ದಾರೆ. ಮುಖ್ಯಮಂತ್ರಿಗಳ ಜೊತೆಗೆ ಉಪಮುಖ್ಯಮಂತ್ರಿ, ಸಚಿವರಾದ …

Read More »

ಬಾಲಕೃಷ್ಣನ ಜೊತೆ ಸೈಕಲ್ ತಳ್ಳಿಕೊಂಡೇ 40 ಸಾವಿರ ಕಿಮೀ ಪಾದಯಾತ್ರೆ ಮಾಡಿದ ಗೀತಾ ಮಾತಾಜಿ!

ಚಿಕ್ಕಮಗಳೂರು: ಬೆಂಗಳೂರಿನ  ನೆಲಮಂಗಲ ಮೂಲದ ಗೀತಾ ಮಾತಾಜಿಯವರು  ಕಳೆದ ನಾಲ್ಕು ವರ್ಷಗಳಿಂದ ಬಾಲಕೃಷ್ಣನ ಜೊತೆ ಸೈಕಲ್ ತಳ್ಳಿಕೊಂಡು ದೇಶ-ಧರ್ಮಕ್ಕೆ ಒಳಿತಾಗಲೆಂದು 40 ಸಾವಿರಕ್ಕೂ ಅಧಿಕ ಕಿ.ಮೀ. ಪಾದಯಾತ್ರೆ ನಡೆಸುತ್ತಿದ್ದಾರೆ. ಗೀತಾ ಮಾತಾಜಿಯವರ ಈ ಅಪರೂಪದ ಭಕ್ತಿ ಪಯಣಕ್ಕೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ  ತಾಲೂಕಿನ ಕೊಟ್ಟಿಗೆಹಾರದ ಜನ ಕೂಡ ಕೈ ಮುಗಿದು ಅಭಿನಂದನೆ ಸಲ್ಲಿಸಿದ್ದಾರೆ. ಗೀತಾ ಮಾತಾಜಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆಯ ಮೂಲಕವೇ ಪ್ರಸಿದ್ಧ ಪುಣ್ಯ ಕ್ಷೇತ್ರಗಳಿಗೆ ತೆರಳಿ …

Read More »

ನೈಸ್‌ ವಿಚಾರವಾಗಿ ಡಿಕೆಶಿ ಭೇಟಿಯಾಗಿದ್ದು ಸತ್ಯ – ಸಿದ್ದಲಿಂಗ ಮಹಾಸ್ವಾಮಿಗಳಿಂದ ಸ್ಪಷ್ಟನೆ

ತುಮಕೂರು: ನೈಸ್ ರಸ್ತೆ  ವಿಚಾರವಾಗಿ ಸಿಎಂ ಡಿ.ಕೆ.ಶಿವಕುಮಾರ್  ಅವರನ್ನು ಭೇಟಿಯಾಗಿದ್ಧು ಸತ್ಯ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು  ಸ್ಪಷ್ಟನೆ ನೀಡಿದ್ದಾರೆ. ನೈಸ್ ವಿಚಾರ ಮತ್ತು ಬಿಡಿಎ ವಿಚಾರ ಇಟ್ಟುಕೊಂಡು ಹೋಗಿದ್ವಿ, ಅದು ಕ್ಯಾಬಿನೆಟ್‌ಲ್ಲಿ ತೀರ್ಮಾನ ಆಗಬೇಕಿತ್ತು ಹಾಗಾಗಿ ಸಿಎಂ ಅವರನ್ನು ಭೇಟಿ ಮಾಡಿದ್ದೇವೆ. ಅದಕ್ಕೆ ಸಿಎಂ ತುಂಬಾ ಸಂಸ್ಕಾರಯುತವಾಗಿ ʻಬುದ್ದಿ, ನೀವು ಯಾಕೇ ಬಂದ್ರಿ. ನಾನೇ ಅಲ್ಲಿಗೆ ಬರ್ತಿದ್ನಲ್ಲಾʼ ಎಂದರು. ನೈಸ್ ರಸ್ತೆಗೆ ನಮ್ಮ ಆಕ್ಷೇಪ ಇಲ್ಲ, …

Read More »

ಕೆಪಿಎಸ್‌ಸಿ ನೇಮಕಾತಿ ಅಕ್ರಮ- ಎಸ್‌ಐಟಿ ರಚನೆಗೆ ಸುಪ್ರೀಂ ತಡೆ

ನವದೆಹಲಿ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ  ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಮಹತ್ವದ ಆದೇಶಕ್ಕೆ ಸುಪ್ರೀಂ ಕೋರ್ಟ್  ಮಧ್ಯಂತರ ತಡೆ ನೀಡಿದೆ. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಇಂದು ನಡೆಸಿತು. ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ಪ್ರಕರಣ …

Read More »

ಶಾಲೆಗಳಲ್ಲಿದ್ದ ಉರ್ದು ಈಗ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಂದು ಬಿಟ್ಟಿದೆ: ಛಲವಾದಿ

ಬೆಂಗಳೂರು: ಶಾಲೆಗಳಲ್ಲಿದ್ದ ಉರ್ದು ಈಗ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಂದು ಬಿಟ್ಟಿದೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ  ಹೇಳೀದ್ದಾರೆ. ವಿಧಾನಸೌಧದಲ್ಲಿ ಉರ್ದು ಹಬ್ಬ ಆಚರಣೆಗೆ ವಿಧಾನ ಪರಿಷತ್ ಛಲವಾದಿ ನಾರಾಯಣಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತಾಡಿದ ಅವರು, ಎಂದೂ ಇಲ್ಲದ ಈ ಪದ್ದತಿಯನ್ನು ಯಾಕೆ ಮಾಡುತ್ತಿದ್ದೀರಿ? ಇದು ಓಲೈಕೆ ರಾಜಕಾರಣ ಅಲ್ಲವೇ?ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಕರ್ನಾಟಕದ ಗೌರವ ಕಳೆಯುವ ಕೆಲಸ ಮಾಡುತ್ತಿದೆ‌ ಅಂತ ಕಿಡಿಕಾರಿದರು. ಕಾಂಗ್ರೆಸ್ ಸರ್ಕಾರ ಎಂದರೆ …

Read More »

ಸಚಿವ ಬಾಲಕೃಷ್ಣ ನಕಲಿ ದಾಖಲೆ ಸೃಷ್ಟಿಸಿ 36 ಎಕರೆ ಜಾಗ ಕಬಳಿಸಿದ್ದಾರೆ: ಮಂಜುನಾಥ್

ಬೆಂಗಳೂರು: ಸಚಿವ ಬಾಲಕೃಷ್ಣ  ಸರ್ಕಾರಿ ಜಮೀನು ನಕಲಿ ದಾಖಲೆ ಸೃಷ್ಟಿ ಮಾಡಿ 36 ಎಕರೆ ಜಾಗ ಲೂಟಿ ಮಾಡಿದ್ದಾರೆ ಅಂತ ಮಾಜಿ ಶಾಸಕ ಮಾಗಡಿ ಮಂಜುನಾಥ್ ದಾಖಲಾತಿ ಸಮೇತ ಆರೋಪ ಮಾಡಿದ್ದಾರೆ. ಜೆಪಿ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು, ಸಚಿವ ಬಾಲಕೃಷ್ಣ ತಾವರೆಕೆರೆ ಕುರುಬಹಳ್ಳಿ ಬಳಿ 36 ಎಕರೆ ಜಮೀನು ಕಬಳಿಸಿದ್ದಾರೆ. ಅವರ ಹೆಂಡತಿ ಹೆಸರಿಗೆ 10 ಎಕರೆ ಮಾಡಿಸಿದ್ದಾರೆ. 26 ಎಕರೆ ಅವರ ಜೊತೆ ಇರೋ ವ್ಯಕ್ತಿ …

Read More »

ಕೊಡಗಿನಲ್ಲಿ ಮತ್ತೆ ಮಳೆಯ ಅಬ್ಬರ; ಗುಡುಗು-ಸಿಡಿಲಿನೊಂದಿಗೆ ಧಾರಾಕಾರ ಮಳೆ, ಹಲವೆಡೆ ಹಾನಿ

ಮಡಿಕೇರಿ: ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆ  ಇದೀಗ ಕೊಡಗು ಜಿಲ್ಲೆಯಲ್ಲಿ  ಮತ್ತೆ ಆರ್ಭಟಿಸಿದೆ. ಇಂದು ಮಧ್ಯಾಹ್ನದಿಂದ ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಸುಂಟಿಕೊಪ್ಪ, ಮುರ್ನಾಡು ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು-ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗಿದೆ. ಕೂಡಿಗೆ ಸುತ್ತಮುತ್ತ ಭಾರೀ ಮಳೆಯಾಗಿದ್ದು, ದಿಢೀರ್ ಸುರಿದ ಮಳೆಯಿಂದ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ರಸ್ತೆಗಳ ಮೇಲೆ ಮಳೆ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಕೆಲವೆಡೆ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಮಳೆಯ …

Read More »