Breaking News
Home / Uncategorized / ಪ್ರಧಾನಿ ವಿಮಾನ ಹಾರಾಟ ಹಿನ್ನೆಲೆ; ಸಿಎಂ ವಿಮಾನಕ್ಕೆ ಬೆಳಗಾವಿಯಲ್ಲಿ ಅನುಮತಿ ನಿರಾಕರಣೆ

ಪ್ರಧಾನಿ ವಿಮಾನ ಹಾರಾಟ ಹಿನ್ನೆಲೆ; ಸಿಎಂ ವಿಮಾನಕ್ಕೆ ಬೆಳಗಾವಿಯಲ್ಲಿ ಅನುಮತಿ ನಿರಾಕರಣೆ

Spread the love

ಬೆಳಗಾವಿ: ಸಿಎಂ ಸಿದ್ದರಾಮಯ್ಯ ವಿಶೇಷ ವಿಮಾನಕ್ಕೆ ಬೆಳಗಾವಿ ವಿಮಾನ ನಿಲ್ದಾಣ ಎಂಟ್ರಿಗೆ ನಿರಾಕರಣೆ ಮಾಡಲಾಗಿದೆ.ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ವಿಮಾನ ಇದೇ ಏರ್​ಪೋರ್ಟ್​​ನಲ್ಲಿರುವ ಕಾರಣ ಸಿಎಂ ವಿಮಾನಕ್ಕೆ ಅನುಮತಿ ದೊರಕಿಲ್ಲ.

ಸಿಎಂ ಸಿದ್ದರಾಮಯ್ಯ ಅವರು ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಹೊರಟಿದ್ದರು. ಆದರೆ, ಅಲ್ಲಿ ಲ್ಯಾಂಡಿಂಗ್ ಗೆ ಅನುಮತಿ ಸಿಕ್ಕಿಲ್ಲ. ಬೆಳಗ್ಗೆ 11.05ಕ್ಕೆ ಬೆಂಗಳೂರಿನಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಿಎಂ ವಿಮಾನ ಬರಬೇಕಿತ್ತು. ಅಲ್ಲಿಂದ ಅವರು ಶಿರಸಿಗೆ ತೆರಳಲು ಯೋಜನೆ ಹಾಕಲಾಗಿತ್ತು. ಆದರೆ ಪಿಎಂ ವಿಮಾನ ಇರುವ ಕಾರಣ ಅಲ್ಲಿ ಅವಕಾಶ ಸಿಕ್ಕಿಲ್ಲ.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಬದಲಿಗೆ ಪಕ್ಕದ ಕೊಲ್ಲಾಪುರ ವಿಮಾನ ನಿಲ್ದಾಣದಲ್ಲಿ ಸಿಎಂ ವಿಮಾನ ಲ್ಯಾಂಡ್ ಆಗಲಿದೆ. ಮಧ್ಯಾಹ್ನ 12 ಗಂಟೆಗೆ ಕೊಲ್ಲಾಪುರದ ಛತ್ರಪತಿ ರಾಜಾರಾಮ್ ಮಹಾರಾಜ್ ವಿಮಾನ ನಿಲ್ದಾಣದಲ್ಲಿ ಅವರ ವಿಮಾನ ಇಳಿಯಲಿದೆ. ಬಳಿಕ ಹೆಲಿಕಾಪ್ಟರ್ ಮೂಲಕ ಕಾಗವಾಡ ತಾಲೂಕಿನ ಉಗಾರ್ ಖುರ್ದ ಗೆ ಅವರು ಹೋಗಲಿದ್ದಾರೆ.


Spread the love

About Laxminews 24x7

Check Also

ಪ್ರಜ್ವಲ್ ರೇವಣ್ಣ ನಾಪತ್ತೆ: ಹುಡುಕಿ ಕೊಟ್ಟವರಿಗೆ ನಗದು ಬಹುಮಾನ ಘೋಷಣೆ

Spread the loveಬೆಂಗಳೂರು, ಮೇ 10: ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದೆ ಎನ್ನಲಾದ ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್ ಪ್ರಕರಣವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ