Breaking News

Laxminews 24x7

ರನ್ಯಾ ರಾವ್ ಪ್ರಕರಣ – ಸಿಸಿಟಿವಿ ದೃಶ್ಯ ನೀಡಲು ಹೈಕೋರ್ಟ್ ಸೂಚನೆ

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿ  ನೀಡುವಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್  ಇತ್ಯರ್ಥಪಡಿಸಿದೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯಿತು. ರನ್ಯಾ ಪರ ವಕೀಲ ವೈ.ಎಲ್.ಮಹೇಶ್ ವಾದ ಮಂಡಿಸಿ, 2025ರ ಜುಲೈ 15ರಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಸಿಐಎಸ್‌ಎಫ್ ಕಮಾಂಡೆಂಟ್ ಸರಿಯಾಗಿ ಪಾಲಿಸಿಲ್ಲ. ಹೀಗಾಗಿ, 2025ರ ಮಾರ್ಚ್ …

Read More »

ಕರ್ನಾಟಕ ಬಂದ್‌ಗೆ ರಾಜ್ಯ ರೈತ ಸಂಘಟನೆ ಬೆಂಬಲ – ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯ

ರಾಮನಗರ: ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡಿನ ಧೋರಣೆಯನ್ನು ಖಂಡಿಸಿ ಗುರುವಾರ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜಿಲ್ಲೆಯ ರೈತ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿವೆ. ಕಾವೇರಿ ಜಲಾನಯನ ಪ್ರದೇಶದ ಸಂಕಷ್ಟದ ನಡುವೆಯೂ ತಮಿಳುನಾಡು ಪದೇ ಪದೇ ಕಿರಿಕಿರಿ ಉಂಟುಮಾಡುತ್ತಿರುವುದಕ್ಕೆ ಕೃಷಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಬಾರದು ಎಂದು ಆಗ್ರಹಿಸಿರುವ ರೈತ ನಾಯಕರು, ಈ ವಿಚಾರದಲ್ಲಿ ರಾಜ್ಯ ಸರ್ಕಾರ ತಮಿಳುನಾಡಿಗೆ …

Read More »

ರಾಮಮಂದಿರ ಟ್ರಸ್ಟ್‌ ಸಿಇಒ ನೇಮಕಕ್ಕೆ ಸಂದರ್ಶನ ಮುಕ್ತಾಯ

ಲಕ್ನೋ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ  ಮೊದಲ ಸಿಇಒ ಹುದ್ದೆಗೆ ಸಂದರ್ಶನ ಪ್ರಕ್ರಿಯೆ ಇಂದು ಮುಕ್ತಾಯಗೊಂಡಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಟ್ರಸ್ಟ್‌, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಆಯ್ಕೆಗಾಗಿ ರಚಿಸಲಾದ ಶೋಧನಾ ಸಮಿತಿಯು ಸಂದರ್ಶನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಘೋಷಿಸಲು ಸಂತೋಷಪಡುತ್ತದೆ. ಆಗಸ್ಟ್ 11 ಮತ್ತು 12 ರಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಆವರಣದಲ್ಲಿ ಅಂತಿಮ ಸುತ್ತಿನ …

Read More »

ತಮಿಳುನಾಡಿಗೆ ಆಗಸ್ಟ್‌ ತಿಂಗಳ ನೀರಿನ ಪಾಲು ಬಿಡುಗಡೆ ಸಾಧ್ಯವಿಲ್ಲ: ಸುಪ್ರೀಂಗೆ ಕರ್ನಾಟಕ ಪ್ರತಿಕ್ರಿಯೆ

ನವದೆಹಲಿ: ತಮಿಳುನಾಡಿಗೆ ನೀರು ಹರಿಸುವ ವಿಚಾರವಾಗಿ ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಪ್ರತಿಕ್ರಿಯೆ ಸಲ್ಲಿಸಿದೆ. ತಮಿಳುನಾಡು ಸಲ್ಲಿಸಿದ ಅರ್ಜಿಗೆ ಕರ್ನಾಟಕ ಪ್ರತಿಕ್ರಿಯೆ ದಾಖಲು ಮಾಡಿದೆ. ಎಲ್-ನಿನೊ ಪರಿಣಾಮದಿಂದ ಪ್ರಸ್ತುತ ವರ್ಷ ಮಳೆಯ ಕೊರತೆಯಾಗಿದೆ. ಮಳೆಯ ಕೊರತೆ ನಡುವೆ ನೀರು ಹರಿಸಲು CWRC ಶಿಫಾರಸು ಮಾಡಿದೆ. ಈ ಶಿಫಾರಸನ್ನು CWMA ಅನುಮೋದಿಸಿದೆ. 12 ಸಾವಿರ ಕ್ಯೂಸೆಕ್ ನೀರು ಹರಿಸಲು ರಾಜ್ಯಕ್ಕೆ ಸಾಧ್ಯವಿಲ್ಲ ಎಂದು ರಾಜ್ಯ ವಾದಿಸಿದೆ. ಜೂನ್-ಜುಲೈ ತಿಂಗಳ ಬಾಕಿ ನೀರಿನ ಜೊತೆಗೆ ಆಗಸ್ಟ್ …

Read More »

ಅಮಿತ್‌ ಶಾ ಉಪನ್ಯಾಸ ಕೇಳೋಕೆ ಆಸಕ್ತಿಯಿಲ್ಲ, ಅವ್ರು ರಾಜೀನಾಮೆ ನೀಡಲೇಬೇಕು: ರಾಹುಲ್‌ ಗಾಂಧಿ ಬಿಗಿ ಪಟ್ಟು

ನವದೆಹಲಿ: ʻಬಲೂನ್‌ ಒಡೆದುಹೋಗಿದೆ. ಈಗ ಕೊನೆಯ ಕ್ಷಣದಲ್ಲಿ ಮತ್ತೆ ಗಾಳಿ ತುಂಬಲು ಪ್ರಯತ್ನಿಸುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿಗೆ ಆದೇಶ ನೀಡಿದ್ದು ಯಾರು? ಅಮಿತ್‌ ಶಾ  ಆದೇಶ ನೀಡಿದ್ದರೆ ಅವರು ರಾಜೀನಾಮೆ ಕೊಡಬೇಕು, ಏಕೆಂದ್ರೆ ಅವರೇ ಹೊಣೆಗಾರರು. ಈ ವಿಷಯ ಗಮನಕ್ಕೆ ಬಂದಿಲ್ಲ ಎಂದರೂ ರಾಜೀನಾಮೆ ನೀಡಬೇಕು. ಏಕೆಂದ್ರೆ ಅವರು ಅಸಮರ್ಥರು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಲೇವಡಿ ಮಾಡಿದರು. ಕೇಂದ್ರ ಗೃಹ ಸಚಿವ ಅಮಿತ್‌ …

Read More »

ಮಲೇರಿಯಾ ಆತಂಕ; 30ಕ್ಕೂ ಅಧಿಕ ಪ್ರಕರಣಗಳು ಧೃಡ

ಮಂಗಳೂರು: ಮಳೆಯ ಕಣ್ಣಾಮುಚ್ಚಾಲೆ ಆಟ ಜನರಿಗೆ ಪ್ರಾಣ ಸಂಕಟ ತಂದಿದೆ. ಮಂಗಳೂರು ನಗರದಲ್ಲಿ ಮಲೇರಿಯಾದಂತಹ ಮಾರಕ ರೋಗ ಹಬ್ಬುತ್ತಿದ್ದು, ಮೂವತ್ತಕ್ಕೂ ಅಧಿಕ ಪ್ರಕರಣಗಳು ಕಾಣಿಸಿಕೊಂಡಿದೆ. ಮಲೇರಿಯಾ ಹರಡುವಿಕೆ ಆರೋಗ್ಯ ಇಲಾಖೆಗೆ ತಲೆನೋವಾಗಿದ್ದು, ಮಲೇರಿಯಾ ತಡೆಗಟ್ಟಲು ಜಿಲ್ಲಾ ಆರೋಗ್ಯ ಇಲಾಖೆ ಈಗ ಜನಜಾಗೃತಿಗೆ ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದ್ದಂತೆ ಮಲೇರಿಯಾ ಪ್ರಕರಣವೂ ಹೆಚ್ಚುತ್ತಿದೆ. ಹೊರ ರಾಜ್ಯಗಳಿಂದ ಕಟ್ಟಡ ಹಾಗೂ ಇತರ ಕಾಮಗಾರಿಗಳಿಗೆ ಆಗಮಿಸುವ ಕಾರ್ಮಿಕರಲ್ಲಿ ಪ್ರಕರಣಗಳ …

Read More »

ಡಿಸಿಎಂ ಹುದ್ದೆ ಹೈಕಮಾಂಡ್ ಅಂತಿಮ ನಿರ್ಧಾರ

ಬೆಳಗಾವಿ: ಮುಂಬರುವ ಚುನಾವಣೆ, ಪಕ್ಷ ಸಂಘಟನೆ ಹಿತದೃಷ್ಟಿಯಿಂದ ನನಗೆ ಹಾಗೂ ಸಚಿವ ಎಂ.ಬಿ. ಪಾಟೀಲಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಕುರಿತು ವರಿಷ್ಠರು ಚರ್ಚೆ ನಡೆಸಿರುವುದು ನಿಜ. ಹೀಗಾಗಿ ಹೈಕಮಾಂಡ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಬೇಡಿಕೆ ಇಟ್ಟಿಲ್ಲ.ಪಕ್ಷವೇ ನಮ್ಮನ್ನು ಗುರುತಿಸಿ ಜವಾಬ್ದಾರಿ ನೀಡಬೇಕು. ಅಲ್ಲಿಯೇವರೆಗೆ ಯಾವುದೇ ರೀತಿಯ ಒತ್ತಡ ಹೇರುವುದಿಲ್ಲ. ಸಮಯ ಬಂದಾಗ …

Read More »

ಯುವಕರು ರಕ್ತದಾನಕ್ಕೆ ಮುಂದಾಗಬೇಕು

ಬೆಳಗಾವಿ: ಪದ್ಮಶ್ರೀ ಡಾ.ಪ್ರಭಾಕರ ಕೋರೆ ಅವರ ೭೯ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ರಕ್ತದಾನ ಶಿಬಿರವು ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ, ಯುವಕರು ರಕ್ತದಾನಕ್ಕೆ ಮುಂದಾಗಬೇಕು ಎಂದು ಕೆಎಲ್‌ಇ ಕೃಷಿ ವಿಜ್ಞಾನ ಮಹಾವಿದ್ಯಾಲಯದ ಡೀನ್ ಡಾ.ಬಿ.ಡಿ.ಬಿರಾದಾರ ಕರೆ ಮಾಡಲು. ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದಲ್ಲಿ ಕೆಎಲ್‌ಇ ಕೃಷಿ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಕೆಎಲ್‌ಇ ಡಾ.ಪ್ರಭಾಕರ ಕೋರೆ …

Read More »

ಅಪ್ರಾಪ್ತ ವಾಹನ ಚಲಾವಣೆಗೆ ತಾಯಿಗೆ ದಂಡ

ಚಿಕ್ಕೋಡಿ : ಬಾಲಕನಿಗೆ ದ್ವಿಚಕ್ರ ವಾಹನ ಓಡಿಸಲು ಅವಕಾಶ ನೀಡಿದ ನಿಪ್ಪಾಣಿ ಪಟ್ಟಣದ ನಿವಾಸಿ ಸುಪ್ರಿಯಾ ವಿಠಲ ಬಾಗೆ ಅವರಿಗೆ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ 25 ಸಾವಿರ ರೂ.ದಂಡ ವಿಧಿಸಿದೆ. ಈಚೆಗೆ ಬಾಲಕನನ್ನು ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಲಾವಣೆ ಮಾಡಿದ್ದರ ಕುರಿತು ನಿಪ್ಪಾಣಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಬಾಲಕ ವಾಹನ ಓಡಿಸಲು ಅವಕಾಶ ನೀಡಿದ ತಾಯಿಗೆ ದಂಡ ವಿಧಿಸಿ …

Read More »

ಲೋಕಸಭೆ ಬಳಿಕ ಇಂದು ರಾಜ್ಯಸಭೆಯಲ್ಲೂ ಕೇರಳದ ಹೆಸರು ಮರುನಾಮಕರಣ ಮಸೂದೆ ಅಂಗೀಕಾರ

ನವದೆಹಲಿ: ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಮರು ನಾಮಕರಣ ಮಾಡುವ ಮಸೂದೆಯೂ ಲೋಕಸಭೆ ಬಳಿಕ ಬುಧವಾರ(ಆ. 12) ರಾಜ್ಯಸಭೆಯಲ್ಲೂ ವಿರೋಧ ಪಕ್ಷದ ಸದಸ್ಯರ ಘೋಷಣೆಗಳು ಮತ್ತು ಪ್ರತಿಭಟನೆಗಳ ನಡುವೆ ಯಾವುದೇ ಚರ್ಚೆಯಿಲ್ಲದೆ ಅಂಗೀಕಾರವಾಗಿದೆ. ಮಂಗಳವಾರ ‘ಕೇರಳ(ಹೆಸರು ಬದಲಾವಣೆ) ಮಸೂದೆ-2026’ ಅನ್ನು ಯಾವುದೇ ಚರ್ಚೆಯಿಲ್ಲದೆ ಲೋಕಸಭೆ ಅಂಗೀಕರಿಸಿತ್ತು. 2024ರಲ್ಲಿ ಕೇರಳ ವಿಧಾನಸಭೆಯು ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ನಿರ್ಣಯವನ್ನು ಅಂಗೀಕರಿಸಿತು. ರಾಜ್ಯವನ್ನು ಸಾಮಾನ್ಯವಾಗಿ ಮಲಯಾಳಂನಲ್ಲಿ ‘ಕೇರಳಂ’ ಎಂದು ಕರೆಯಲಾಗುತ್ತದೆಯಾದರೂ, ಸಂವಿಧಾನದಲ್ಲಿ …

Read More »