Home / Laxminews 24x7 (page 2892)

Laxminews 24x7

ಜಾರಕಿಹೋಳಿ ಕುಟುಂಬ, ಕತ್ತಿ ಕುಟುಂಬ ಹಾಗು ಲಕ್ಷಣ ಸವದಿ ಈ ಮೂವರು ಇಡಿ ಬೆಳಗಾವಿ ಜಿಲ್ಲೆಯನ್ನೇ ತಮ್ಮ ಹಿಡಿತದಲ್ಲಿ ಇಟ್ಟುಕೊಂಡ ನಾಯಕರು.

ಚಿಕ್ಕೋಡಿ: ಜಾರಕಿಹೋಳಿ ಕುಟುಂಬ, ಕತ್ತಿ ಕುಟುಂಬ ಹಾಗು ಲಕ್ಷಣ ಸವದಿ ಈ ಮೂವರು ಇಡಿ ಬೆಳಗಾವಿ ಜಿಲ್ಲೆಯನ್ನೇ ತಮ್ಮ ಹಿಡಿತದಲ್ಲಿ ಇಟ್ಟುಕೊಂಡ ನಾಯಕರು. ಹಾಗಾಗಿಯೇ ಜನ ಇವರನ್ನ ಜಿಲ್ಲೆಯ ಸಾಹುಕಾರರು ಎಂದೇ ಕರೆಯುತ್ತಾರೆ. ಜಿಲ್ಲೆಯಲ್ಲಿ ತಮ್ಮದೆ ಆದ ಹಿಡಿತ ಹೊಂದಿರುವ ಈ ಮೂವರು ನಾಯಕರು ತಮ್ಮದೆ ರಾಜಕೀಯ ಲೆಕ್ಕಾಚಾರಗಳನ್ನ ಹಾಕಿ ರಾಜಕೀಯ ಮಾಡುತ್ತ ಬಂದಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯೂ ಅಷ್ಟೇ. ಈ ಮೂವರು ನಾಯಕರು ಒಂದೇ ಪಕ್ಷದಲ್ಲಿ ಇದ್ದರೂ …

Read More »

ಹಾಸನಾಂಬೆ ದೇವಿ ದರ್ಶನಕ್ಕೆ ಕೊನೆಯ ದಿನವಾಗಿದ್ದು, ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹಾಸನಾಂಬೆ ದರ್ಶನ ಪಡೆದಿದ್ದಾರೆ.

ಹಾಸನ : ಇಂದು ಹಾಸನಾಂಬೆ ದೇವಿ ದರ್ಶನಕ್ಕೆ ಕೊನೆಯ ದಿನವಾಗಿದ್ದು, ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹಾಸನಾಂಬೆ ದರ್ಶನ ಪಡೆದಿದ್ದಾರೆ. ಇಂದು ಬೆಳಗ್ಗೆ 6.45 ರ ಸುಮಾರಿಗೆ ಪತ್ನಿ ಜೊತೆ ಹಾಸನಾಂಬೆ ದೇಗುಲಕ್ಕೆ ಆಗಮಿಸಿದ ಅವರು, ದೀಪಾವಳಿ ಹಬ್ಬದ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ಇಂದು ಹಾಸನಾಂಬೆ ದರ್ಶನಕ್ಕೆ ಕೊನೆಯ ದಿನವಾಗಿದೆ. ಈ ಬಾರಿ ನವೆಂಬರ್ 5 ರಿಂದ ದೇವಾಲಯದ ಬಾಗಿಲು ತೆರೆಯಲಾಗಿದ್ದು, ಇಂದು ಮಧ್ಯಾಹ್ನ 12 …

Read More »

ಕರ್ನಾಟಕದಲ್ಲಿ ಮರಾಠಿ ಪ್ರಾಧಿಕಾರ ರಚನೆಯಿಂದ ಕನ್ನಡಿಗರಿಗೆ ಅನ್ಯಾಯ: ಸಿಎಂ ಗೆ ರಾಜೀನಾಮೆ ಆಗ್ರಹ

ಬೆಂಗಳೂರು : ಏಕಾಏಕಿ ಕರ್ನಾಟಕದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮರಾಠಿಗರ ಮತ ಸೆಳೆಯುವ ಏಕೈಕ ಉದ್ದೇಶದಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಮುಂದಾಗಿದೆ ಎಂದು ಆರೋಪಿಸಿವೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದು, ಮರಾಠಿ ಪ್ರಾಧಿಕಾರ ರಚನೆಯಿಂದ ಕನ್ನಡಿಗರಿಗೆ ಅನ್ಯಾಯವಾಗಿದೆ. ಈ ಕೂಡಲೇ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ವಾಟಾಳ್ …

Read More »

ಸಂಬಳದ ನಿರೀಕ್ಷೆಯಲ್ಲಿರುವ ಕೆಎಸ್ ಆರ್ ಟಿಸಿ ನೌಕರರಿಗೆ ಇನ್ನೊಂದು ವಾರದಲ್ಲಿ ವೇತನ ಪಾವತಿ ಮಾಡಲಾಗುವುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ.

ಬೆಳಗಾವಿ : ಸಂಬಳದ ನಿರೀಕ್ಷೆಯಲ್ಲಿರುವ ಕೆಎಸ್ ಆರ್ ಟಿಸಿ ನೌಕರರಿಗೆ ಇನ್ನೊಂದು ವಾರದಲ್ಲಿ ವೇತನ ಪಾವತಿ ಮಾಡಲಾಗುವುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪಾವಳಿ ಹಬ್ಬದಂದು ಕತ್ತಲಲ್ಲಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರಿಗೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿರುವುದು ಗಮನಕ್ಕೆ ಬಂದಿದೆ. ಹಬ್ಬದ ಸಂದರ್ಭದಲ್ಲಿ ಅವರಿಗೆ ಮುಂಚಿತವಾಗಿ ಹಣ ನೀಡಬೇಕಾಗಿತ್ತು. ಸಾರಿಗೆ ಇಲಾಖೆ ಸಿಬ್ಬಂದಿ ಸಾಮಾನ್ಯ ಕುಟುಂಬದಿಂದ ಬಂದವರು. ಮುಂಚಿತವಾಗಿ ಸಂಬಳ ನೀಡದಕ್ಕೆ ವಿಷಾದ …

Read More »

ಉಪಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ವಿಚಾರ ಇನ್ನೂ ಸ್ಪಷ್ಟ ಆಗಿಲ್ಲ.

ಪಟ್ನಾ: ಉಪಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ವಿಚಾರ ಇನ್ನೂ ಸ್ಪಷ್ಟ ಆಗಿಲ್ಲ. 2005ರಿಂದಲೂ (2013-17ರ ಅವಧಿ ಬಿಟ್ಟು) ಸುಶೀಲ್ ಕುಮಾರ್‌ ಮೋದಿ ಅವರು ಉಪಮುಖ್ಯಮಂತ್ರಿ ಆಗಿದ್ದರು. ಈ ಬಾರಿ, ಅವರನ್ನೇ ಆ ಹುದ್ದೆಯಲ್ಲಿ ಮುಂದುವರಿಸುವ ಬಗ್ಗೆ ಒಮ್ಮತ ಏರ್ಪಟ್ಟಿಲ್ಲ. ಕತಿಹಾರ್‌ ಶಾಸಕ ತಾರಕೇಶ್ವರ ಪ್ರಸಾದ್‌ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ರೇಣು ದೇವಿ ಅವರು ಉಪನಾಯಕಿ ಆಗಲಿದ್ದಾರೆ. ಈ ಇಬ್ಬರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ …

Read More »

ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲಿನಲ್ಲಿ ಕಣ್ಣೀರು

ಬೆಳಗಾವಿ: ಕುಟುಂಬದವರೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ, ಇದೀಗ ಜೈಲಿನಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಅವರು, ವಿಚಾರಣಾಧೀನ ಕೈದಿಯಾಗಿ ಹಿಂಡಲಗಾ ಕಾರಾಗೃಹದಲ್ಲಿ ಕಾಲ ಕಳೆಯುತ್ತಿದ್ದಾರೆ. ಧಾರವಾಡದ ತನ್ನ ಡೇರಿಯಲ್ಲಿ ಪ್ರತಿ ದೀಪಾವಳಿಯನ್ನೂ ಮನೆಯವರೊಂದಿಗೆ ಬೆರೆತು ಭರ್ಜರಿಯಾಗಿ ಆಚರಿಸುತ್ತಿದ್ದ ಸಂದರ್ಭ ನೆನೆದು ಶನಿವಾರ ರಾತ್ರಿ ಜೈಲು ಸಿಬ್ಬಂದಿ ಬಳಿ ಬೇಸರ ತೋಡಿಕೊಂಡಿದ್ದಾರೆ. ‘ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನನ್ನನ್ನು ನೋಡಲು ಕುಟುಂಬದವರು …

Read More »

ಐತಿಹಾಸಿಕ ದೇಗುಲ. ವರ್ಷದ ಹನ್ನೆರಡು ತಿಂಗಳು ಆ ದೇಗುಲದ ಗುಹೆಯಲ್ಲಿ ನೀರು ತುಂಬಿ ತುಳುಕುತ್ತಾ ಇತ್ತು.

ಬೀದರ್: ಅದು ಐತಿಹಾಸಿಕ ದೇಗುಲ. ವರ್ಷದ ಹನ್ನೆರಡು ತಿಂಗಳು ಆ ದೇಗುಲದ ಗುಹೆಯಲ್ಲಿ ನೀರು ತುಂಬಿ ತುಳುಕುತ್ತಾ ಇತ್ತು. ನೀರಿದ್ರಷ್ಟೇ ಆ ದೇಗುಲದ ಒಳಗೆ ಹೋಗಿ ಭಕ್ತರು ದರ್ಶನ ಪಡೆಯಬಹುದು. ಆದ್ರೆ ಈಗ ದೇಗುಲಕ್ಕೆ ಜಲಕಂಟಕ ಎದುರಾಗಿದೆ. ಐತಿಹಾಸಿಕ ಉಗ್ರನರಸಿಂಹ ದೇವಸ್ಥಾನ. ಬೀದರ್ ಜಿಲ್ಲೆಯಲ್ಲಿರುವ ಈ ಐತಿಹಾಸಿಕ ದೇಗುಲ ಸುಮಾರು 1200ವರ್ಷಗಳಷ್ಟು ಹಳೆಯದಾದ ಪುರಾತನ ದೇವಸ್ಥಾನ. ಈ ದೇವಸ್ಥಾನದ ವಿಶೇಷ ಅಂದ್ರೆ ಸುಮಾರು ಮುನ್ನೂರು ಮೀಟರ್ ಉದ್ದದ ಎದೆ ಎತ್ತರದ …

Read More »

ದಿನ ಕಳೆದಂತೆ ಚೋಟಾ ಮುಂಬೈನಲ್ಲಿ ಬಡಾ ಮುಂಬೈಯನ್ನೂ ಮೀರಿಸುವಂತೆ ರೌಡಿಗಳ ಅಟ್ಟಹಾಸ ಎಲ್ಲೆ ಮೀರಿದೆ.

ಹುಬ್ಬಳ್ಳಿ: ದಿನ ಕಳೆದಂತೆ ಚೋಟಾ ಮುಂಬೈನಲ್ಲಿ ಬಡಾ ಮುಂಬೈಯನ್ನೂ ಮೀರಿಸುವಂತೆ ರೌಡಿಗಳ ಅಟ್ಟಹಾಸ ಎಲ್ಲೆ ಮೀರಿದೆ. ಕ್ಷುಲ್ಲಕ ಕಾರಣಕ್ಕೆ ಮಚ್ಚು ಲಾಂಗುಗಳು ಕಾಣಿಸಿಕೊಳ್ಳುತ್ತಿದೆ. ಇತ್ತೀಚೆಗೆ ಹಾಡಗಲೇ ಗುಂಡಿನ ದಾಳಿ ನಡೆದಿದ್ದು, ಇನ್ನೂ ಹಸಿಯಾಗಿರುವಾಗ್ಲೇ ಈಗ ಮತ್ತೋಂದು ಗುಂಪು ದಾದಾಗಿರಿ ನಡೆಸಿದೆ. ಇತ್ತೀಚೆಗೆ ಅವಳಿನಗರದಲ್ಲಿ ಎಲ್ಲವೂ ಸರಿಯಿಲ್ಲಾ ಅನ್ನೋದಕ್ಕೆ ಸಾಕಷ್ಟು ದುರ್ಘಟನೆಗಳು ಸಾಕ್ಷಿಯಾಗುತ್ತಿವೆ. ಹಾಡಹಗಲೇ ಫೈರಿಂಗ್. ಜನರ ಶಾಂತಿ ಕದಡುತ್ತಿರುವ ಕೊಲೆಗಳು. ಹೀಗೆ ಹುಬ್ಬಳ್ಳಿಯಲ್ಲಿ ಜನರು ನಡುಗುತ್ತಿದ್ದಾರೆ. ಈ ನಡುವೆ ಹುಬ್ಬಳ್ಳಿಯ …

Read More »

ಗೋಕಾಕ ಬಳಿ ಭೀಕರ ರಸ್ತೆ ಅಪಘಾತ ನಾಲ್ವರು ದುರ್ಮರಣ…

      ಗೋಕಾಕ: ಟಾಟಾ ಎಸಿ ಮತ್ತು ಕಾರು ಮಧ್ಯ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ಸ್ಥಳದಲ್ಲಿ‌ ನಾಲ್ವರು ಮೃತಪಟ್ಟ ಘಟನೆ ತಾಲೂಕಿನ ಸಂಕೇಶ್ವರ – ನರಗುಂದ ರಾಜ್ಯ ಹೆದ್ದಾರಿ ಮಮದಾಪೂರ ಕ್ರಾಸ್ ದ ಬಳಿ ನಡೆದಿದೆ. ಟಾಟಾ ಎಸಿ ಹಾಗೂ ಇಂಡಿಕಾ ಕಾರ್ ಮಧ್ಯ ಡಿಕ್ಕಿ ಸಂಭವಿಸಿ ಓರ್ವ ಯುವಕ , ಇಬ್ಬರು ಮಹಿಳೆಯರು , ಒಂದು ಹೆಣ್ಣುಮಗು ಸೆರಿ ನಾಲ್ಕು ಜನ ದುರ್ಮರಣ ಗೊಂಡಿದ್ದು, ಮೂವರು …

Read More »

ಮರಾಠ ಸಮುದಾಯ ಓಲೈಸುವ ಸಲುವಾಗಿ50 ಕೋಟಿಇದು ಉಪಚುನಾವಣೆ ತಂತ್ರ ನಾವು ಸುಮನಿರಲ್ಲ ಪ್ರತಿಭಟನೆ ಮಾಡ್ತೀವಿ :ಸಾ.ರಾ. ಗೋವಿಂದ

ಬೆಂಗಳೂರು: ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ 50 ಕೋಟಿ ರೂಪಾಯಿ ಅನುದಾನ ನೀಡಿರುವುದನ್ನು ನಾನು ವಿರೋಧಿಸುತ್ತೇನೆ ಎಂದು ಸಾ.ರಾ ಗೋವಿಂದ್ ಅವರು ಹೇಳಿದ್ದಾರೆ. ಅವರು, ಸಿಎಂ ನಿರ್ಧಾರವನ್ನು ಖಂಡಿಸಿ ನಾಡಿದ್ದು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ಮಾಡುತ್ತೇವೆ. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ, ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿ ಎಂದು ಮನವಿ ಮಾಡಿದರು. . 2020-21ರಲ್ಲಿ ಕನ್ನಡ ಅನುಷ್ಟಾನ ಮತ್ತು ಅಭಿವೃದ್ಧಿಗಾಗಿ ಪ್ರಯತ್ನ ಮಾಡೋಣ …

Read More »