Breaking News
Home / Laxminews 24x7 (page 2890)

Laxminews 24x7

ನ್ಯಾಯ ಎಲ್ಲಿದೆ…? ಅಂತಾ ಇವರು ಕೇಳುತ್ತಿದ್ದಾರೆ….!

ಬೆಳಗಾವಿ- ಗಂಡ,ಹೆಂಡತಿ,ಇಬ್ಬರು ಹೆಣ್ಣು ಮಕ್ಕಳೊಂದಿದೆ ಬೆಳಗಾವಿಯ ಡಿಸಿ ಕಚೇರಿಯ ಎದುರು ಕುಳಿತುಕೊಂಡಿದ್ದಾರೆ.ನ್ಯಾಯ ಎಲ್ಲಿದೆ ಅಂತಾ ಕೇಳುತ್ತಿದ್ದಾರೆ. ನ್ಯಾಯ ಸಿಗೋವರೆಗೂ ಅಹೋರಾತ್ರಿ ಧರಣಿ ಮಾಡುತ್ತೇವೆ,ಅಲ್ಲಿಯವರೆಗೆ ಇಲ್ಲಿಯೇ ಕುಳಿತುಕಿಳ್ಳುತ್ತೇವೆ ಅಂತ,ಈ ಕುಟುಂಬ ಡಿಸಿ ಕಚೇರಿ ಎದುರು ಧರಣಿ ಆರಂಭಿಸಿದೆ. ರಾಯಬಾಗ ತಾಲ್ಲೂಕಿನ, ನರಸಲಾಪೂರ ಗ್ರಾಮದ ಸಂಗೀತಾ ಬಂಡು ಚಾವರೆ ಕುಟುಂಬ ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.ಈವರ ಪಾಲಿಗೆ ಬರುವ ಜಮೀನು ಮತ್ತು ಆಸ್ತಿಯನ್ನು,ಇವರ ಸಮಂಧಿಕರು ಮಾಡಿಕೊಡುತ್ತಿಲ್ಲ,ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎನ್ನುವ ಕಾರಣಕ್ಕಾಗಿ ನಮಗೆ …

Read More »

ಬೆಳಗಾವಿಯ ನಿವಾಸಿ ಈಗ ಅಮೇರಿಕಾದ ಸಂಸದ

  ಅಜ್ಜನ ಕಡೆ ಮಾಸ್ಕ್ ಯಾವ ತರಾ ಇದೆ ಈ ವಿಡಿಯೋ ಕೊನೇವರಿಗೆ ನೀವು ನೋಡ್ಲೆ ಬೇಕು…….           ಬೆಳಗಾವಿ- ಬೆಳಗಾವಿಯ ನಿವಾಸಿಯೊಬ್ಬ ಅಮೇರಿಕಾದ ಸಂಸದನಾಗಿ ಆಯ್ಕೆಯಾಗಿದ್ದಾನೆ. ಬೆಳಗಾವಿ ಶಹಾಪೂರ ಪ್ರದೇಶದ ಮೀರಾಪೂರ ಗಲ್ಲಿಯ ನಿವಾಸಿ ಶ್ರೀನಿವಾಸ ಥಾಣೆದಾರ ಈಗ ಅಮೆರಿಕಾ ದೇಶದ ಸೆನೆಟ್ ಮೆಂಬರ್ ಆಗಿ ಆಯ್ಕೆಯಾಗಿದ್ದಾರೆ. ಚಿಂತಾಮಣರಾವ ಶಾಲೆಯಲ್ಲಿ ಹೈಸ್ಕೂಲ ಕಲೆತಿರುವ ಶ್ರೀನಿವಾಸ ಥಾಣೆದಾರ್ ಅಮೇರಿಕಾದಲ್ಲಿ ಕೆಮಿಕಲ್ ಉದ್ಯಮಿಯಾಗಿದ್ದಾರೆ.

Read More »

ಕಾದಾಟದಲ್ಲಿ ಬಾಲ ಕಳೆದುಕೊಂಡು ನೋವು ತಾಳಲಾರದೆ ನೀರಲ್ಲಿಯೇ ನಿಂತ ಸಲಗ

ಚಾಮರಾಜನಗರ: ಕಾದಾಟದಲ್ಲಿ ಬಾಲ ಕಳೆದುಕೊಂಡ ಆನೆ ನೋವು ತಾಳಲಾರದೆ ನದಿಗಿಳಿದು ನೀರಲ್ಲಿಯೇ ನಿಂತ ಘಟನೆ ಚಾಮರಾಜನಗರದ ಕಾವೇರಿ ವನ್ಯ ಜೀವಿ ವ್ಯಾಪ್ತಿಯಲ್ಲಿ ನಡೆದಿದೆ. ಕಾವೇರಿ ವನ್ಯಧಾಮದ ಭೀಮೇಶ್ವರಿ ಕಳ್ಳಭೇಟೆ ಶಿಬಿರದ ಬಳಿ ಈ ಘಟನೆ ನಡೆದಿದ್ದು, ಬಾಲ ತುಂಡಾಗಿ ಗಾಯವಾಗಿರುವ ಆನೆ ನೊಣಗಳ ಹಾವಳಿ ಹಾಗೂ ನೋವು ತಾಳಲಾರದೆ ನದಿಗಿಳಿದಿದೆ. ಈ ಆನೆಗೆ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿದೆ. ಗಾಯಗೊಂಡಿರುವ ಆನೆ ಮೇಲೆ ನಿಗಾ ಇಟ್ಟಿರುವ ಅರಣ್ಯ ಸಿಬ್ಬಂದಿ …

Read More »

ಭಾರತೀಯ ಪ್ರಯಾಣಿಕರಿಗೆ ನಿಷೇಧ ಹೇರಿದ ಚೀನಾ

ನವದೆಹಲಿ: ಕೊರೊನಾ ವೈರಸ್ ಹುಟ್ಟಿಗೆ ಕಾರಣವಾಗಿರುವ ಚೀನಾ, ಇದೀಗ ಭಾರತೀಯ ಪ್ರಯಾಣಿಕರಿಗೆ ನಿಷೇಧ ಹೇರುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಈ ಮೂಲಕ ಕೊರೊನಾ ನೆಪವೊಡ್ಡಿ ಭಾರತೀಯರ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಚೀನೀ ರಾಯಭಾರ ಕಚೇರಿ ಈ ಕುರಿತು ಸ್ಪಷ್ಟಪಡಿಸಿದ್ದು, ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ತಾತ್ಕಾಲಿಕವಾಗಿ ನಿಷೇಧ ಹೇರಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ಚೀನಾದ ಅಧೀಕೃತ ವಿಸಾ ಅಥವಾ ನಿವಾಸ ಪರವಾನಗಿ …

Read More »

ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಸ್ಥಾನಗಳಿಗೆಬಿ.ಕೆ.ಮಾಡೆಲ್ ಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆ ಚುನಾವಣೆ

ಬೆಳಗಾವಿ : ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದ್ದು , ಜಿಲ್ಲೆಯ ಬಿಜೆಪಿ, ಕಾಂಗ್ರೆಸ್ ನಾಯಕರು ನಡೆಸಿದ ತಂತ್ರಗಾರಿಕೆ ಫಲಿತಾಂಶ ತಿಳಿಯಲಿದೆ ನಗರದ ಬಿ.ಕೆ.ಮಾಡೆಲ್ ಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆ ಚುನಾವಣೆ ನಡೆಯಲಿದೆ. ಈಗಾಗಲೇ ಒಟ್ಟು 16 ಸ್ಥಾನಗಳ ಪೈಕಿ 13 ಸ್ಥಾನಗಳು ಅವಿರೋಧ ಆಯ್ಕೆಯಾಗಿದೆ.  ಎಲ್ಲ ಸ್ಥಾನಗಳನ್ನು ಅವಿರೋಧ ಆಯ್ಕೆ ಗೊಳಿಸಬೇಕೆಂದು ಬಿಜೆಪಿ ನಾಯಕರು ಕಸರತ್ತು ನಡೆಸಿದರು,  ಆದರೆ ಅದು ಸಾಧ್ಯವಾಗಲಿಲ್ಲ. …

Read More »

ಮತ ಎಣಿಕೆ ನಿಲ್ಲಿಸುವಂತೆ ಟ್ರಂಪ್‌ ಆಗ್ರಹ – ಗೂಂದಲದ ಗೂಡಾಯ್ತು ಚುನಾವಣೆ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೊಂದಲದ ಗೂಡಾಗಿ ಪರಿಣಮಿಸಿದೆ. ಎಲೆಕ್ಟೊರಲ್ ಮತಗಳ ಎಣಿಕೆಯಲ್ಲಿ ಜೋ ಬೈಡನ್ ಸ್ಪಷ್ಟ ಮುನ್ನಡೆ ಸಾಧಿಸಿದ್ದು, ಮ್ಯಾಜಿಕ್ ಫಿಗರ್ 270ರ ಸನಿಹದಲ್ಲಿದ್ದಾರೆ. ಸದ್ಯ ಜೋ ಬೈಡನ್‍ಗೆ 264 ಮತ ಬಿದ್ದಿದ್ರೆ, ಟ್ರಂಪ್‍ಗೆ 214 ಮತಗಳಷ್ಟೇ ಬಂದಿವೆ. ಇಲ್ಲಿಯವರೆಗೆ 45 ರಾಜ್ಯಗಳ ಫಲಿತಾಂಶ ಹೊರಬಿದ್ದಿದ್ದು, ಪೆನ್ಸಿಲ್ವೇನಿಯಾ, ಜಾರ್ಜಿಯಾ, ನಾರ್ತ್ ಕರೋಲಿನಾ, ನೆವಾಡ, ಅಲಸ್ಕಾ ರಾಜ್ಯಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದೆ. ಈ ಐದರ ಪೈಕಿ ಮೂರರಲ್ಲಿ ಟ್ರಂಪ್ …

Read More »

ಆನ್‍ಲೈನ್ ಕ್ಲಾಸ್‍ನಲ್ಲಿ ಶಿಕ್ಷಕನಿಗೆ ‘ದಿಸ್ ಮ್ಯಾನ್ ಸೋ ಸೆಕ್ಸಿ’ ಎಂದ ವಿದ್ಯಾರ್ಥಿನಿ

ವಾಷಿಂಗ್‍ಟನ್: ಆನ್‍ಲೈನ್ ಕ್ಲಾಸ್‍ನಲ್ಲಿ ವಿದ್ಯಾರ್ಥಿನಿ ಶಿಕ್ಷಕನಿಗೆ ಸೆಕ್ಸಿ ಎಂದು ಕರೆದಿರುವ ವೀಡಿಯೋ ಟಿಕ್‍ಟಾಕ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟಿಕ್‍ಟಾಕ್ ನಲ್ಲಿ 50 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, 8 ಸಾವಿರಕ್ಕೂ ಹೆಚ್ಚು ಕಮೆಂಟ್ ಬಂದಿವೆ. ಕೊರೊನಾ ಹಿನ್ನೆಲೆ ಸರ್ಕಾರಗಳು ಆನ್‍ಲೈನ್ ತರಗತಿಗಳಿಗೆ ಹೆಚ್ಚು ಒತ್ತು ನೀಡುತ್ತಿವೆ. ವಿದೇಶಗಳಲ್ಲಿ ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ವರ್ಚುವಲ್ ತರಗತಿಗಳು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಆನ್‍ಲೈನ್ ಕ್ಲಾಸ್ ಗಳನ್ನು ರೆಕಾರ್ಡ್ ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ. …

Read More »

ಮಸೀದಿಗಳಲ್ಲಿ ಹಾಕಿರುವ ಧ್ವನಿವರ್ಧಕ ತೆರವಿಗೆ ಸೂಚನೆ ನೀಡಿಲ್ಲ – ಕರ್ನಾಟಕ ಪೊಲೀಸ್ ಸ್ಪಷ್ಟನೆ

ಬೆಂಗಳೂರು: ರಾಜ್ಯಾದ್ಯಂತ ಮಸೀದಿಗಳಲ್ಲಿ ಅಳವಡಿಸಿರುವ ಅನಧಿಕೃತ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ ಎನ್ನಲಾದ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ. ಇದು ಫೇಕ್ ನ್ಯೂಸ್ ಆಗಿದ್ದು, ಪ್ರವೀಣ್ ಸೂದ್ ಅವರು ಆದೇಶ ಹೊರಡಿಸಿದ್ದಾರೆ ಎಂಬಂತೆ ಲೆಟರ್ ಹೆಡ್ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಸಂಬಂಧ ಕರ್ನಾಟಕ ಸ್ಟೇಟ್ ಪೊಲೀಸ್ ಫ್ಯಾಕ್ಟ್ ಚೆಕ್ ವೆಬ್‍ಸೈಟ್ ಇದೊಂದು ಸುಳ್ಳು ಸುದ್ದಿಯಾಗಿದೆ ಎಂದು ತಿಳಿಸಿದೆ. ರಾಜ್ಯ ಪೊಲೀಸ್ …

Read More »

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾಗಳತ್ತ ಮುಖ

ಬೆಂಗಳೂರು: ಸಹೋದರ ಚಿರಂಜೀವಿ ಸರ್ಜಾ ಅಗಲಿಕೆಯ ಬಳಿಕ ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇಂದು ಹೊಸ ಸಿನಿಮಾವೊಂದಕ್ಕೆ ಮುಹೂರ್ತ ನೆರವೇರಿಸಿದ್ದಾರೆ. ಹೌದು. ಧ್ರುವ ನಟನೆಯ ಹೊಸ ಸಿನಿಮಾ ‘ದುಬಾರಿ’ಯ ಚಿತ್ರೀಕರಣ ಆರಂಭವಾಗಲಿದೆ. ಇಂದು ಬೆಳಗ್ಗೆ ಬೆಂಗಳೂರಿನ ನವರಂಗ್ ಬಳಿ ಇರುವ ವರಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ಪೂಜೆ ನೆರವೇರಿಸಿದ್ದಾರೆ. ಮುಹೂರ್ತ ಪೂಜೆಯಲ್ಲಿ ನಟ ಧ್ರುವ ಸರ್ಜಾ, ನಿರ್ದೇಶಕ ನಂದಕಿಶೋರ್, ನಟಿ ತಾರಾ, ದೊಡ್ಡಣ್ಣ ಹಾಗೂ …

Read More »

ಕೆಪಿಸಿಸಿ ಅಧ್ಯಕ್ಷ ದಿಢೀರ್ ದೆಹಲಿಗೆ – ಸಿದ್ದು ವಿರುದ್ಧ ದೂರು ಕೊಡ್ತಾರಾ ಡಿಕೆಶಿ..?

ಬೆಂಗಳೂರು: ಉಪ ಚುನಾವಣೆ ನಡೆದ ಎರಡೇ ದಿನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. 2 ಕ್ಷೇತ್ರಗಳ ಫಲಿತಾಂಶ ಬರೋದಕ್ಕೆ ಇನ್ನೂ ನಾಲ್ಕು ದಿನ ಬಾಕಿ ಇರುವಂತೆ ಕೆಪಿಸಿಸಿ ಅಧ್ಯಕ್ಷರ ದಿಢೀರ್ ದೆಹಲಿ ಪ್ರವಾಸ ಅಚ್ಚರಿ ಮೂಡಿಸಿದೆ. ಉಪ ಚುನಾವಣೆಯ ಹೊತ್ತಲ್ಲಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಹೇಳಿಕೆಗಳ ಬಗ್ಗೆ ಹೈಕಮಾಂಡ್‍ಗೆ ದೂರು ನೀಡುವ ನಿರೀಕ್ಷೆ ಇದೆ. ಇದರಿಂದ ಪಕ್ಷದಲ್ಲಿ ಸಮನ್ವಯತೆ …

Read More »