Breaking News
Home / Laxminews 24x7 (page 2900)

Laxminews 24x7

ಓರ್ವನ ಕೊಲೆಗೆ ನೂರು ಜನ ಬಂದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಮುಂಬೈ/ಪುಣೆ: ಓರ್ವನ ಕೊಲೆಗೆ ನೂರು ಜನ ಬಂದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ದುಷ್ಕರ್ಮಿಗಳು ಸಾಲು ಸಾಲು ಬೈಕುಗಳಲ್ಲಿ ಹೋಗುತ್ತಿರೋದನ್ನ ವೀಡಿಯೋದಲ್ಲಿ ಗಮನಿಸಬಹುದು. ಯುವಕನ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಮಹಾರಾಷ್ಟ್ರದ ಪುಣೆಯ ನೆಹರೂ ನಗರದಲ್ಲಿ ಶುಕ್ರವಾರ ರಾತ್ರಿ 9.30ಕ್ಕೆ ಈ ಘಟನೆ ನಡೆದಿದೆ. 35 ವರ್ಷದ ನೀಲೇಶ್ ಸುಭಾಷ್ ಜಾಧವ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸುಭಾಷ್ …

Read More »

ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸು ಕಂಡವಳು ಖಿನ್ನತೆ ಮತ್ತು ಮಾನಸಿಕ ಅಸ್ವಸ್ಥರಾಗಿ ಮನೆಯನ್ನು ತೊರೆದಿದ್ದಾಳೆ

ಹೈದರಾಬಾದ್  : ನಮ್ಮ ದೇಶದಲ್ಲಿ ಹೆಚ್ಚಿನವರು ಐಎಎಸ್ ಅಧಿಕಾರಿ ಅಥವಾ ಇನ್ನಿತರ ಉನ್ನತ ಹುದ್ದೆ ಹೊಂದಬೇಕು ಎಂಬ ಕನಸು ಕಾಣುತ್ತಾರೆ. ಅದಕ್ಕಾಗಿ ಹಲವಾರು ವರ್ಷಗಳನ್ನು ವ್ಯಯಿಸುತ್ತಾರೆ. ಅದರಲ್ಲಿ ಕೆಲವರು ಯಶಸ್ವಿಯಾಗುತ್ತಾರೆ. ಇನ್ನು ಕೆಲವರು ಅದರಲ್ಲಿ ಸೋಲುತ್ತಾರೆ. ಅಂತಹ ಮಹಿಳೆಯ ಸ್ಟೋರಿ ನಿಮಗೆ ನೀಡುತ್ತಿದ್ದೇವೆ. ಹೈದರಾಬಾದ್ ಮೂಲದ ಮಹಿಳೆಯೊಬ್ಬರು ಬಹುರಾಷ್ಟ್ರೀಯ ಕಂಪನಿಯಲ್ಲಿ ಎಚ್‌ಆರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸು ಕಂಡು ಆ ಕೆಲಸವನ್ನು ತೊರೆಯುತ್ತಾರೆ. ಆದರೆ …

Read More »

ಮನೆ ಬಳಿ ನಿಂತಿದ್ದ ವ್ಯಕ್ತಿಯನ್ನು ಕೊಚ್ಚಿ ಕೊಲೆಗೈದ್ರು!

ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಕಲಬುರಗಿ ನದರದ ಕೈಲಾಶ್ ನಗರದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಶಿವಲಿಂಗಪ್ಪ ಭೂಶೆಟ್ಟಿ(53) ಎಂದು ಗುರುತಿಸಲಾಗಿದೆ. ಆಳಂದ ತಾಲೂಕಿನ ಕಜಗಂಚಿ ಗ್ರಾಮದ ನಿವಾಸಿಯಾಗಿರುವ ಶಿವಲಿಂಗಪ್ಪ ಕಲಬುರಗಿ ನಗರದ ಕೈಲಾಶ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಕಳೆದ ರಾತ್ರಿ ಮನೆ ಬಳಿ ನಿಂತಿದ್ದ ವೇಳೆ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ …

Read More »

ಕನ್ನಡಿಯಲ್ಲಿ ಬಿಂಬ ನೋಡಿ ಗುಂಡು ಹೊಡೆಯುತ್ತಾರೆ ಕೊಡಗಿನ ಮಹಿಳೆ

ಮಡಿಕೇರಿ: ವಿಶಿಷ್ಟ ಹಬ್ಬ ಆಚರಣೆಗಳ, ಉಡುಗೆ ತೊಡುಗೆ ಮತ್ತು ಸಂಪ್ರದಾಯಗಳಿಂದ ಕೊಡಗು ದೇಶದ ಗಮನ ಸೆಳೆದಿದೆ. ಇಲ್ಲಿ ಮಕ್ಕಳು ಹುಟ್ಟಿದರೆ ಗುಂಡು ಹಾರಿಸಿ ಸಂಭ್ರಮಿಸುತ್ತಾರೆ. ಅಂತ್ಯಸಂಸ್ಕಾರದ ವೇಳೆ ಗುಂಡು ಹಾರಿಸಿ ಶೋಕ ವ್ಯಕ್ತಪಡಿಸಲಾಗುತ್ತದೆ. ಇನ್ನು ಹಬ್ಬ ಹರಿದಿನಗಳೆಂದರೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗಳು ಸಾಮಾನ್ಯ. ಅದರೆ ಕೊಡಗಿನ ಮಹಿಳೆಯೊಬ್ಬರು ಕನ್ನಡಿಯಲ್ಲಿ ಬಿಂಬ ನೋಡಿ ಹಿಮ್ಮುಖವಾಗಿ ಕೋವಿಯಿಂದ ಶೂಟ್ ಮಾಡುವುದರಲ್ಲಿ ಪರಿಣಿತರಾಗಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಒಂಟಿಯಂಗಡಿ ಸಮೀಪದ ದೇವಣಗೇರಿಯ ನಿವಾಸಿ ಡೀನಾ …

Read More »

ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ- ಮತ್ತೆ ಜೈಲುವಾಸ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಜಾಮೀನು ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ. ರಾಗಿಣಿ ಮತ್ತು ಸಂಜನಾ ಸೇರಿದಂತೆ ಒಟ್ಟು ಆರೋಪಿಗಳು ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು. ಮಾದಕ ದ್ರವ್ಯ ವ್ಯಸನಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 4 ರಂದು ಸಿಸಿಬಿ ಪೊಲಿಸರು ಮೊದಲು ನಟಿ ರಾಗಿಣಿ ಮನೆ ಮೇಲೆ ದಾಳಿ ಮಾಡಿದ್ದರು. ರಾಗಿಣಿ ನಿವಾಸದ ಮೇಲೆ ದಾಳಿ ನಡೆಸಿದ್ದು ಅಧಿಕಾರಿಗಳು ವಿಚಾರಣೆಗಾಗಿ ನಟಿಯನ್ನ ಸಿಸಿಬಿ ಕಚೇರಿಗೆ …

Read More »

ಭೀಮಾತೀರದಲ್ಲಿ ಮತ್ತೆ ರಕ್ತಪಾತದ ಕಹಳೆ

ವಿಜಯಪುರ: ಕಳೆದ ಮೂರು ವರ್ಷಗಳಿಂದ ಶಾಂತವಾಗಿದ್ದ ಭೀಮಾತೀರದಲ್ಲಿ ಮತ್ತೆ ರಕ್ತಪಾತದ ಕಹಳೆ ಮೊಳಗಿದೆ. ನಿನ್ನೆ ಮಹಾದೇವ ಸಾಹುಕಾರ್ ಭೈರಗೊಂಡ ಹಾಗೂ ಸಹಚರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಐಜಿ ರಾಘವೇಂದ್ರ, ಈ ತನಿಖೆ ನೆನಪಿನಲ್ಲಿ ಉಳಿಯಲಿದೆ ಎಂದು ಹೇಳಿದ್ದಾರೆ. ಶೂಟೌಟ್ ನಡೆದಿದ್ದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಐಜಿ, ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಇಬ್ಬರು …

Read More »

ಬಿಜೆಪಿ ಕಾರ್ಯಕರ್ತರು ಧರಿಸಿದ್ದ ಕೇಸರಿ ಮಾಸ್ಕ್​ಗಳನ್ನ​ ಪೊಲೀಸರು ತೆಗೆಸಿದರು

ಬೆಂಗಳೂರು: ಆರ್​.ಆರ್​ ನಗರ ಉಪಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಈ ವೇಳೆ ಕೆಲವರು ಕೇಸರಿ ಮಾಸ್ಕ್​ ಧಾರಣೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಕನ್ಯಾಕುಮಾರಿ ಶಾಲೆಯ ಮತಗಟ್ಟೆ ಬಳಿ ಪ್ಯಾರಾಮಿಲಿಟರಿ ಫೋರ್ಸ್​ ಸಿಬ್ಬಂದಿ ಕೇಸರಿ ಬಣ್ಣದ ಮಾಸ್ಕ್​ ಧರಿಸಿದ್ದಕ್ಕೆ ಕಾಂಗ್ರೆಸ್​ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ರು. ಪಟ್ಟು ಹಿಡಿದು ಮಾಸ್ಕ್ ಬದಲಿಸುವಂತೆ ಮಾಡಿದ್ರು. ಇದರ ಬೆನ್ನಲ್ಲೇ ಮತಗಟ್ಟೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಧರಿಸಿದ್ದ ಕೇಸರಿ ಮಾಸ್ಕ್​ಗಳನ್ನ​ ಕೂಡ ಪೊಲೀಸರು ತೆಗೆಸಿದ್ದಾರೆ.

Read More »

ಗೌರಮ್ಮ ತಮ್ಮ ಸೊಸೆ ಕುಸುಮ ಬೆಂಬಲಕ್ಕೆ ನಿಂತಿದ್ದಾರೆ

ಬೆಂಗಳೂರು: ಕೆಲವೇ ಕೆಲವು ದಿನಗಳ ಹಿಂದಕ್ಕೆ ಹೋದರೆ.. ಅಂದ್ರೆ ರಾಜರಾಜೇಶ್ವರಿ ನಗರದ ಉಪ ಚುನಾವಣೆ ಘೋಷಣೆಯಾದಾಗ, ಕಾಂಗ್ರೆಸ್ ಪಕ್ಷ ಇನ್ನೂ ಕುಸುಮಗೆ ಟಿಕೆಟ್ ಕೊಟ್ಟಿರಲಿಲ್ಲ. ರಾಜಕೀಯಕ್ಕೆ ಕುಸುಮ ಇಳಿಯುತ್ತಾರೆ ಎಂಬ ಸುದ್ದಿ ತಿಳಿದ ಕೂಡಲೆ ಮಾಧ್ಯಮದ ಮುಂದೆ ಡಿ.ಕೆ.ರವಿ ತಾಯಿ ಕಿಡಿಕಾರಿದ್ದರು.ಮಗ ಸಾವನ್ನಪ್ಪಿದಾಗ ಮಣ್ಣು ಬಿಸಾಕಿ ಹೋದವಳು ಇಂದಿನವರೆಗೂ ಬಂದಿಲ್ಲ. ನನ್ನ ಮಗನ ದುಡ್ಡೆಲ್ಲ ನುಂಗಿ ನೀರು ಕುಡಿದ್ಲು. ಚುನಾವಣೆಗೆ ನಿಂತುಕೊಂಡರೂ ನನ್ನ ಮಗನ ಹೆಸರು ಫೋಟೋ ಹಾಕಬಾರದು. ಒಂದು …

Read More »

ಡಿಸೆಂಬರ್ 2ನೇ ವಾರದಲ್ಲಿ ಶಾಲೆ ಆರಂಬಿಸುವ ಸಾಧ್ಯತೆ

ಬೆಂಗಳೂರು : ಕೋವಿಡ್ 19 ಕಾರಣದಿಂದಾಗಿ ಕಳೆದ ಏಳು -ಎಂಟು ತಿಂಗಳಿನಿಂದ ಶಾಲಾ ಕಾಲೇಜು ತೆರೆದಿಲ್ಲ. ಇದೀಗಾ ಕೊರೋನಾ ಕೊಂಚ ಮಟ್ಟಿಗೆ ಇಳಿಮುಖದತ್ತ ಮುಖ ಮಾಡಿದೆ. ಆದ್ದರಿಂದ ಮತ್ತೆ ಶಾಲಾ ಕಾಲೇಜು ಓಪನ್ ಮಾಡಲು ಮಹತ್ವದ ಸಭೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ವಾರಾಂತ್ಯದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ನವೆಂಬರ್ 17ರಂದು ಪದವಿ ಕಾಲೇಜುಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಶಾಲಾ ಕಾಲೇಜುಗಳ ಆರಂಭದ …

Read More »

ಯೋಧನ ಕೇಸರಿ ಮಾಸ್ಕ್ ಬದಲಿಸಲು ಅನುಕೂಲ : ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಬೆಂಗಳೂರು : ರಾಜರಾಜೇಶ್ವರಿನಗರ ಉಪ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಇಂದು ನಡೆಯುತ್ತಿರುವಂತ ಮತದಾನದ ವೇಳೆ, ಮತಗಟ್ಟೆಯ ಕೇಂದ್ರದಲ್ಲಿ ಅರೆ ಸೇನಾಪಡೆಯ ಯೋಧರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೀಗೆ ನಿಯೋಜನೆಗೊಂಡಿದ್ದಂತ ಯೋಧರೊಬ್ಬರು ಕೇಸರಿ ಬಣ್ಣದ ಮಾಸ್ಕ್ ಧರಿಸಿದ್ದರು. ಇದನ್ನು ಮತ ಚಲಾವಣೆಗೆ ತೆರಳುವ ವೇಳೆ ಗಮನಿಸಿದಂತ ಯುವಕನೋರ್ವ ತರಾಟೆಗೆ ತೆಗೆದುಕೊಂಡನು. ತಾವು ಕೇಸರಿ ಮಾಸ್ಕ್ ಧರಿಸಿದ್ದೀರಿ. ದಯವಿಟ್ಟು ಕೇಸರಿ ಮಾಸ್ಕ್ ಬದಲಾಯಿಸಿ, ಬೇರೆಯ ಮಾಸ್ಕ್ ಧರಿಸುವಂತೆ ಸೂಚಿಸಿದರು. ಆದ್ರೇ ಅರೆ …

Read More »