Breaking News
Home / Laxminews 24x7 (page 1930)

Laxminews 24x7

ಮುರುಗೇಶ್ ನಿರಾಣಿ’ಗೆ ಸಿಎಂ ಸ್ಥಾನ ತಪ್ಪಿದ್ದರ ಬಗ್ಗೆ ಸ್ಪೋಟಕ ಮಾಹಿತಿ ಬಹಿರಂಗ ಪಡಿಸಿದ ‘ಜಯಮೃತ್ಯುಂಜಯ ಸ್ವಾಮೀಜಿ’.!

ಕೊಪ್ಪಳ : ಯಡಿಯೂರಪ್ಪ ನಂತ್ರ, ರಾಜ್ಯದ ಮುಖ್ಯಮಂತ್ರಿಯಾಗಿ ಮುರುಗೇಶ್ ನಿರಾಣಿ ಆಯ್ಕೆ ಆಗೇ ಬಿಟ್ಟರು ಎನ್ನುವಾಗ, ದಿಢೀರ್ ವಿದ್ಯಮಾನಗಳಲ್ಲಿ ಬಸವರಾಜ ಬೊಮ್ಮಾಯಿ ನೇಮಕ ಮಾಡಲಾಗಿತ್ತು. ಆದ್ರೇ.. ಹೀಗೆ ಮುರುಗೇಶ್ ನಿರಾಣಿಗೆ ಸಿಎಂ ಸ್ಥಾನ ತಪ್ಪಿದ್ದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರೇ ಕಾರಣ ಎಂಬುದಾಗಿ ಕೂಡಲಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.   ಇಂದು ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು …

Read More »

ಮಹಾತ್ಮಾ ಗಾಂಧೀಜಿ ಕುರಿತು ವಿವಾದಾತ್ಮ ಹೇಳಿಕೆ ನೀಡಿದ ಹಿಂದೂ ಮಹಾಸಭಾ ಮುಖಂಡನ ಬಂಧನ

ಹಿಂದೂಗಳ ಮೇಲೆ ನಡೆದ ದಾಳಿ ಖಂಡಿಸಿ ಗಾಂಧೀಜಿಯನ್ನೇ ಹತ್ಯೆ ಮಾಡಿದ್ದೇವೆ. ಇನ್ನು ನೀವು ಯಾವ ಲೆಕ್ಕ? ಎಂದು ಮಂಗಳೂರಿನಲ್ಲಿ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮಂಗಳೂರು: ಮಹಾತ್ಮಾ ಗಾಂಧೀಜಿಯವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ದೇವಾಲಯ ಕೆಡವಿದ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ಬೆದರಿಕೆ …

Read More »

ಪ್ರತಿಪಕ್ಷವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ: ಯಡಿಯೂರಪ್ಪ ಎಚ್ಚರಿಕೆ

ದಾವಣಗೆರೆ: ಮುಂದೆ ನಿರಂತರ ಚುನಾವಣೆಗಳು ಬರುತ್ತಿವೆ. ಪ್ರತಿಪಕ್ಷಗಳನ್ನು ಎಂದಿಗೂ ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಪಕ್ಷದ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ. ವಿರೋಧ ಪಕ್ಷಗಳು ಅವರದೇ ತಂತ್ರಗಾರಿಕೆ ಮಾಡ್ತಿದ್ದಾರೆ. ಅನೇಕ ಬಿಜೆಪಿ ಮುಖಂಡರನ್ನು ಕಾಂಗ್ರೆಸ್ ನಾಯಕರು ಸಂಪರ್ಕ ಮಾಡುತ್ತಿದ್ದಾರೆ. ಹೀಗಾಗಿ, 140 ಸ್ಥಾನಗಳನ್ನು ಗೆಲ್ಲುವ ಪ್ರಾಮಾಣಿಕ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸ್ವಲ್ಪ ಎದ್ದು ಕುಳಿತಿರುವುದರಿಂದ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ದಾವಣಗೆರೆಯ ಬಿಜೆಪಿ …

Read More »

ಮಹಾರಾಷ್ಟ್ರದ ಮಾಂತ್ರಿಕನಿಂದ ಕೃಷ್ಣಾ ಕಿತ್ತೂರಿನಲ್ಲಿ ವಾಮಾಚಾರ..!

ಬೆಳಗಾವಿ: ಪ್ರವಾಹದಿಂದ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಅಧಿವೇಶನ ಮುಗಿದ ಬಳಿಕ ಬಾಕಿ ಉಳಿದಿರುವ ಸಂತ್ರಸ್ತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಈ ಕುರಿತು ಮಾತನಾಡಿದ ಅವರು, ನೆರೆ ಪರಿಹಾರಕ್ಕಾಗಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಎದುರು ಸಂತ್ರಸ್ತರು ಧರಣಿ ನಡೆಸುತ್ತಿರುವ ವಿಚಾರದ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಅಧಿವೇಶನ ಮುಗಿದ ಬಳಿಕ ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಯಾದ ಮನೆಗಳ …

Read More »

ಮಹಾರಾಷ್ಟ್ರದ ಮಾಂತ್ರಿಕನಿಂದ ಕೃಷ್ಣಾ ಕಿತ್ತೂರಿನಲ್ಲಿ ವಾಮಾಚಾರ..

ಚಿಕ್ಕೋಡಿ: ರಾಜ್ಯದಲ್ಲಿ ಮೌಢ್ಯ ನಿಷೇಧವಿದ್ದರೂ ಹಾಡಹಗಲೇ ಮಹಾರಾಷ್ಟ್ರದ ಮಾಂತ್ರಿಕ ವಾಮಾಚಾರ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರು ಗ್ರಾಮದಲ್ಲಿ ನಡೆದಿದೆ. ಅಣ್ಣಪ್ಪಾ ಕಾಕನಕಿ ಎಂಬವರ ಮನೆ ಮುಂದೆ ಅಶೋಕ ಕಾಕನಕಿ ಮಹಾರಾಷ್ಟ್ರದಿಂದ ಮಾಂತ್ರಿಕನನ್ನು ಕರೆಸಿ ವಾಮಾಚಾರ ಮಾಡಿದ್ದಾರೆ ಎಂದು ಅಣ್ಣಪ್ಪಾ ಕಾಕನಕಿ ಕುಟುಂಬಸ್ಥರು ಆರೋಪಿಸಿದ್ದಾರೆ. ಮಹಾರಾಷ್ಟ್ರದ ತಾಂತ್ರಿಕ ಬಂದು ಮನಬಂದಂತೆ ಕುಣಿದು ವಾಮಾಚಾರ ಮಾಡಿರುವ ವೀಡಿಯೋ ವೈರಲ್ ಆಗಿದೆ. ಹಳದಿ ಭಂಡಾರ ಚೆಲ್ಲಿ, ನಿಂಬೆಹಣ್ಣು ಎಸೆದು …

Read More »

ಕಾನೂನು ತೊಡಕಿನ ಮಧ್ಯೆಯೂ ಶಾಂತಿ ಕದಡುವ ಕೆಲಸಕ್ಕೆ ಇತಿಶ್ರೀ ಹಾಡುವ ಕೆಲಸ ಮಾಡಿದ್ದೇನೆ : ಬೊಮ್ಮಾಯಿ

ಹಾವೇರಿ: ಕಾನೂನು ತೊಡಕಿನ ಮಧ್ಯೆಯೂ ಶಾಂತಿ ಕದಡುವ ಕೆಲಸಕ್ಕೆ ಇತಿಶ್ರೀ ಹಾಡುವ ಕೆಲಸ ಮಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ನಂಜನಗೂಡು ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಂಜನಗೂಡು ಘಟನೆ ನಡೆದ ಬಳಿಕ ಅನೇಕರ ಬಳಿ ಈ ಕುರಿತು ಚರ್ಚೆ ಮಾಡಿದ್ದೇನೆ. ಕಾನೂನು ತೊಡಕಿನ ಮಧ್ಯೆಯೂ ಶಾಂತಿ ಕದಡುವ ಕೆಲಸಕ್ಕೆ ಇತಿಶ್ರೀ ಹಾಡುವ ಕೆಲಸ ಮಾಡಿದ್ದೇನೆ. ಅಲ್ಲಿನ ಭಕ್ತರಿಗೆ ಘಾಸಿಯಾಗಿದೆ. ಅದನ್ನು ಸರಿದೂಗಿಸುವ ಕೆಲಸ ಮಾಡುತ್ತೇನೆ ಎಂದು …

Read More »

ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಯಡಿಯೂರಪ್ಪನವರ ಅಧಿಕಾರ ಹೋಗಿದೆ: ವಿಜಯಾನಂದ ಕಾಶಪ್ಪನವರ್

ಕೊಪ್ಪಳ: ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಮಾಜಿ ಸಿಎಂ ಯಡಿಯೂರಪ್ಪ ಅಧಿಕಾರ ಹೋಗಿದೆ ಎಂದು ಕೊಪ್ಪಳದಲ್ಲಿ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.   ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡ ಬಗ್ಗೆ ಮಾತನಾಡಿದ ಅವರು, ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಯಡಿಯೂರಪ್ಪ ಅವರ ಅಧಿಕಾರ ಹೋಗಿದೆ. ಮೀಸಲಾತಿ ಕೊಡ್ತೀನಿ ಎಂದು ಯಡಿಯೂರಪ್ಪ ಅವರು ಮೀಸಲಾತಿ ಕೊಡಲಿಲ್ಲ. ಅದೇ ಕಾರಣಕ್ಕಾಗಿಯೇ ಅವರ ಅಧಿಕಾರ ಹೋಯ್ತು. ಸ್ವಾಮೀಜಿ ಅವರ ಶಾಪವೇ ಯಡಿಯೂರಪ್ಪ ಅವರಿಗೆ ತಟ್ಟಿದೆ …

Read More »

ಅಪಘಾತದಿಂದ ಜೀವ ಉಳಿಸಲು ಅಂಗಲಾಚಿದ ಯುವಕ, ಯುವತಿ

ವಿಜಯಪುರ: ನಗರದಲ್ಲಿ ಹಿಟ್ ಆ್ಯಂಡ್ ರನ್ ಕೇಸ್ ನಡೆದಿದೆ. ಯಾರೋ ಬೈಕ್‍ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಪರಿಣಾಮ ಬೈಕ್ ಮೇಲಿಂದ ಬಿದ್ದು, ಗಾಯಗೊಂಡು ಯುವಕ, ಯುವತಿ ಒದ್ದಾಡಿದ್ದಾರೆ. ಅಲ್ಲದೆ ಸಹಾಯಕ್ಕಾಗಿ ಅಂಗಲಾಚಿದ ಹೃದಯವಿದ್ರಾವಕ ಘಟನೆ ನಡೆದಿದೆ.   ನಗರದ ಜುಮನಾಳ ರಸ್ತೆಯ ದದಾಮಟ್ಟಿ ಕ್ರಾಸ್ ಬಳಿ ಘಟನೆ ನಡೆದಿದೆ. ಕಾಪಾಡುವಂತೆ ಯುವಕ, ಯುವತಿ ಅಂಗಲಾಚುತ್ತಿದ್ದ ವಿಡಿಯೋ ವೈರಲ್ ಆಗಿದೆ. ರಸ್ತೆಯಲ್ಲಿ ಒದ್ದಾಡುತ್ತ, ಕಾಪಾಡಿ ಎಂದು ಬೈಕ್ ಸವಾರರಾದ ಸಚಿನ್, ಸುಜಾತಾ …

Read More »

ಮುಸ್ಲಿಂ ಯುವತಿಗೆ ಡ್ರಾಪ್ ಮಾಡಿದ್ದಕ್ಕೆ ಹಿಂದೂ ಯುವಕನಿಗೆ ಹಲ್ಲೆ; ಅರ್ಧ ದಿನದಲ್ಲಿ ಆರೋಪಿಗಳು ಅರೆಸ್ಟ್

ಬೆಂಗಳೂರು(ಸೆ.19): ತೆಲಂಗಾಣದ(Telangana) ನೈತಿಕ ಪೊಲೀಸ್​​ಗಿರಿ ಪ್ರಕರಣದ ಬೆನ್ನಲ್ಲೇ ಕರ್ನಾಟಕದಲ್ಲೂ ಅಂತಹದ್ದೇ ಘಟನೆ ಬೆಳಕಿಗೆ ಬಂದಿದೆ. ಕೆಲದಿನಗಳ ಹಿಂದೆ ತೆಲಂಗಾಣದ ನಿಜಾಮಾಬಾದ್​​ನಲ್ಲಿ ಮುಸ್ಲಿಂ ಯುವತಿ(Muslim Girl)ಯನ್ನು ಬೈಕ್​​ನಲ್ಲಿ ಕೂರಿಸಿಕೊಡಿದ್ದ ಹಿಂದೂ ಯುವಕನನ್ನು ಪುಂಡರ ಗುಂಪೊಂದು ಅಪಹರಿಸಿ, ಹಲ್ಲೆ ಮಾಡಿತ್ತು. ಅದರ ಬೆನ್ನಲ್ಲೇ ತೆಲಂಗಾಣ ಪೊಲೀಸರು 5 ಮಂದಿ ಯುವಕರನ್ನು ಬಂಧಿಸಿದ್ದರು. ಈಗ ಅದೇ ರೀತಿಯ ಘಟನೆ ಕರ್ನಾಟಕದಲ್ಲೂ(Karnataka) ನಡೆದಿದೆ. ಮುಸ್ಲಿಂ ಯುವತಿಯನ್ನು ತನ್ನ ಬೈಕ್ ನಲ್ಲಿ ಕೂರಿಸಿಕೊಂಡಿದ್ದ ಹಿಂದೂ ಯುವಕನ ಮೇಲೆ …

Read More »

2020 ರಲ್ಲಿ ದೇಶದಲ್ಲಿ ಬಾಲ್ಯ ವಿವಾಹಗಳ ಸಂಖ್ಯೆಯಲ್ಲಿ ಹೆಚ್ಚಳ: ಕರ್ನಾಟಕವೇ ಪ್ರಥಮ

ನವದೆಹಲಿ:ಇತ್ತೀಚಿನ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದತ್ತಾಂಶಗಳ ಪ್ರಕಾರ, 2020 ರಲ್ಲಿ, ಬಾಲ್ಯ ವಿವಾಹ ಪ್ರಕರಣಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ 50% ಹೆಚ್ಚಾಗಿದೆ. 2020 ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದತ್ತಾಂಶಗಳ ಪ್ರಕಾರ, ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಒಟ್ಟು 785 ಪ್ರಕರಣಗಳನ್ನು ದಾಖಲಿಸಲಾಗಿದೆ.ಕರ್ನಾಟಕವು ಅತಿ ಹೆಚ್ಚು 184 ಪ್ರಕರಣಗಳನ್ನು ದಾಖಲಿಸಿದೆ, ಅಸ್ಸಾಂ 138, ಪಶ್ಚಿಮ ಬಂಗಾಳ 98, ತಮಿಳುನಾಡು 77 ಮತ್ತು ತೆಲಂಗಾಣ 62 …

Read More »