Breaking News
Home / ರಾಜಕೀಯ / ಮುಸ್ಲಿಂ ಯುವತಿಗೆ ಡ್ರಾಪ್ ಮಾಡಿದ್ದಕ್ಕೆ ಹಿಂದೂ ಯುವಕನಿಗೆ ಹಲ್ಲೆ; ಅರ್ಧ ದಿನದಲ್ಲಿ ಆರೋಪಿಗಳು ಅರೆಸ್ಟ್

ಮುಸ್ಲಿಂ ಯುವತಿಗೆ ಡ್ರಾಪ್ ಮಾಡಿದ್ದಕ್ಕೆ ಹಿಂದೂ ಯುವಕನಿಗೆ ಹಲ್ಲೆ; ಅರ್ಧ ದಿನದಲ್ಲಿ ಆರೋಪಿಗಳು ಅರೆಸ್ಟ್

Spread the love

ಬೆಂಗಳೂರು(ಸೆ.19): ತೆಲಂಗಾಣದ(Telangana) ನೈತಿಕ ಪೊಲೀಸ್​​ಗಿರಿ ಪ್ರಕರಣದ ಬೆನ್ನಲ್ಲೇ ಕರ್ನಾಟಕದಲ್ಲೂ ಅಂತಹದ್ದೇ ಘಟನೆ ಬೆಳಕಿಗೆ ಬಂದಿದೆ. ಕೆಲದಿನಗಳ ಹಿಂದೆ ತೆಲಂಗಾಣದ ನಿಜಾಮಾಬಾದ್​​ನಲ್ಲಿ ಮುಸ್ಲಿಂ ಯುವತಿ(Muslim Girl)ಯನ್ನು ಬೈಕ್​​ನಲ್ಲಿ ಕೂರಿಸಿಕೊಡಿದ್ದ ಹಿಂದೂ ಯುವಕನನ್ನು ಪುಂಡರ ಗುಂಪೊಂದು ಅಪಹರಿಸಿ, ಹಲ್ಲೆ ಮಾಡಿತ್ತು. ಅದರ ಬೆನ್ನಲ್ಲೇ ತೆಲಂಗಾಣ ಪೊಲೀಸರು 5 ಮಂದಿ ಯುವಕರನ್ನು ಬಂಧಿಸಿದ್ದರು. ಈಗ ಅದೇ ರೀತಿಯ ಘಟನೆ ಕರ್ನಾಟಕದಲ್ಲೂ(Karnataka) ನಡೆದಿದೆ. ಮುಸ್ಲಿಂ ಯುವತಿಯನ್ನು ತನ್ನ ಬೈಕ್ ನಲ್ಲಿ ಕೂರಿಸಿಕೊಂಡಿದ್ದ ಹಿಂದೂ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ವಿಡಿಯೋ ವೈರಲ್(Video Viral) ಆಗಿದೆ.

ಯುವತಿ ಹಾಗೂ ಆರೋಪಿಗಳು ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಮಾತನಾಡಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿ ಯುವತಿಯಿಂದ ಆಕೆಯ ಗಂಡನ ಫೋನ್ ನಂಬರ್ ಪಡೆದು ಮಾತನಾಡಿದ್ದಾನೆ. ಜೊತೆಗೆ ಆ ಯುವತಿಯನ್ನು ಬೈಕ್​ನಿಂದ ಕೆಳಗಿಳಿಸಿ ಆಟೋದಲ್ಲಿ ಹೋಗುವಂತೆ ಎಚ್ಚರಿಕೆ ನೀಡಿದ್ದಾರೆ. ಸುತ್ತ ಮುತ್ತ ಜನರಿದ್ದು, ಟ್ರಾಫಿಕ್ ಉಂಟಾದರೂ ಆ ಯುವತಿಯ ಸಹಾಯಕ್ಕೆ ಯಾರೂ ಸಹ ಬರಲಿಲ್ಲ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸುಮಾರು 9 ಗಂಟೆಗೆ ಈ ಘಟನೆ ನಡೆದಿದೆ.

ಇಬ್ಬರು ಆರೋಪಿಗಳ ಬಂಧನ

ಯುವತಿ ಕೂಡಲೇ ಸುದ್ದುಗುಂಟೆ ಪಾಳ್ಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೈಕೋ ಲೇ ಔಟ್​ ಎಸಿಸಪಿ ಕರಿಬಸವನಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಹಿಂದೂ ಯುವಕನ ಮೇಲೆ ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದನೆ

ಮುಸ್ಲಿಂ ಯುವತಿಗೆ ಡ್ರಾಪ್ ಕೊಟ್ಟ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿರೋ ಆರೋಪಿಗಳು, ಅವಾಚ್ಯ ಶಬ್ಧಗಳಿಂದಲೂ ನಿಂದಿಸಿದ್ದಾರೆ. ಕೆಲಸ ಮುಗಿಸಿ ಮನೆಗೆ ಹೋಗ್ತಾ ಇದೀನಿ ಅಂದ್ರೂ ಆರೋಪಿಗಳು ಅಮಾನುಷವಾಗಿ ನಡೆದುಕೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿರೋ ಸಿಸಿ ಕ್ಯಾಮೆರಾ ಹಾಗೂ ಮಹಿಳೆ ಹೇಳಿಕೆ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರ ಮುಂದೆ ಅತ್ತ ಆರೋಪಿಗಳು

ಸುದ್ದುಗುಂಟೆಪಾಳ್ಯ ಪೊಲೀಸರು ರಹಸ್ಯ ಸ್ಥಳದಲ್ಲಿ ಆರೋಪಿಗಳ ವಿಚಾರಣೆ ಮಾಡುತ್ತಿದ್ದಾರೆ. ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ಹಾಗೂ ಎಸಿಪಿ ಕರಿಬಸವನಗೌಡ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ”ವಿಡಿಯೋ ಮಾಡಿದ್ದು ತಪ್ಪಾಯ್ತು ಸಾರ್” ಎಂದು ಕಣ್ಣೀರು ಹಾಕಿದ್ದಾರೆ. ”ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದಿತ್ತು. ನಮ್ಮ ಸಮುದಾಯದ ಮಹಿಳೆ ಬೇರೆಯವರ ಜೊತೆ ಹೋಗ್ತಾ ಇರೋದಕ್ಕೆ ಹಾಗೆ ಮಾಡಿದೆ. ಇನ್ಮೇಲೆ ಯಾವುದೇ ಈ ತರ ತಪ್ಪು ಮಾಡಲ್ಲ” ಅಂತ ಕಣ್ಣೀರಿಟ್ಟಿದ್ದಾರೆ.

ಆರೋಪಿಗಳಿಗೆ ರಾತ್ರಿಯಿಡೀ ಹುಡುಕಿದ್ದ ಪೊಲೀಸರು

ವಿಡಿಯೋ ಮಾಡಿದ್ದ ಆರೋಪಿಗಳಿಗಾಗಿ ಖುದ್ದು ಎಸಿಪಿ, ಇನ್ಸ್ಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿ ರಾತ್ರಿಯಿಡೀ ಹುಡುಕಾಟ ನಡೆಸಿದ್ದರು. ಆರೋಪಿ ಬಳಸುತ್ತಿದ್ದ ಮೊಬೈಲ್ ನಂಬರ್ ಸಹ ಬೇರೆಯವರ ಹೆಸರಿನಲ್ಲಿ ಇತ್ತು. ವಿಡಿಯೋ ಮಾಡುವಾಗ ಮಹಿಳೆಯ ಗಂಡನಿಗೆ ಕಾಲ್ ಮಾಡಿದ್ದ ನಂಬರ್​​ನ ಜಾಡು ಹಿಡಿದಿದ್ದರು. ಅದು ಜೆ.ಪಿ ನಗರದ ನಿವಾಸಿಯೊಬ್ಬರ ಅಡ್ರಸ್ ತೋರಿಸಿತ್ತು. ನಂತ್ರ ಆತನನ್ನು ವಿಚಾರಣೆ ಮಾಡಿದಾಗ ಪ್ರಮುಖ ಆರೋಪಿ ಬಗ್ಗೆ ಮಾಹಿತಿ ಸಿಕ್ಕಿದೆ. ಇಂದು ಬೆಳಗಿನ ಜಾವ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

:Cheating Case: ಸೈಟ್ ಮಾರಾಟ ಮಾಡಿಕೊಡೋದಾಗಿ ಬೆಂಗಳೂರಿನ ನಿವೃತ್ತ ಎಸಿಪಿಗೆ ವಂಚನೆ; FIR ದಾಖಲು

ಮುಸ್ಲಿಂ ಯುವತಿಗೂ ಹಿಂದೂ ಹುಡಗನಿಗೂ ಏನು ಸಂಬಂಧ?

ಮುಸ್ಲಿಂ ಹುಡುಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ತಡವಾದ ಕಾರಣಕ್ಕೆ ತನ್ನ ಜೊತೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಜೊತೆ ಬರುತ್ತಿದ್ದರು. ಈ ವಿಚಾರ ಮಹಿಳೆಯ ಗಂಡನಿಗೂ ಗೊತ್ತಿತ್ತು. ಅದ್ರಂತೆ ನಿನ್ನೆಯೂ ಇಬ್ಬರು ಒಟ್ಟಿಗೆ ಬಂದಿದ್ದಾರೆ. ಸುಮಾರು ಎರಡು ಕಿಲೋ ಮೀಟರ್​​ವರೆಗೆ ಆರೋಪಿಗಳು ಯುವಕ-ಯವತಿಯನ್ನು ಫಾಲೋ ಮಾಡಿದ್ದಾರೆ. ಫಾಲೋ ಮಾಡ್ಕೊಂಡು ಬಂದು ಡೈರಿ ಸರ್ಕಲ್ ಬಳಿ ತಡೆದು, ಹಿಂದೂ ಹುಡುಗನಿಗೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುತ್ತಿರುವಾಗಲೇ ಆರೋಪಿ ಮಹಿಳೆಯ ಗಂಡನಿಗೆ ಕಾಲ್ ಮಾಡಿದ್ದಾನೆ. ಅದೇ ನಂಬರ್ ಹಿಡಿದು ಇಂದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು 26 ವರ್ಷ ಹಾಗೂ 24 ವರ್ಷದ ಆರೋಪಿಗಳು.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ