Home / Laxminews 24x7 (page 1932)

Laxminews 24x7

ಥಿಯೇಟರ್​ನಲ್ಲಿ ಸ್ಟಾರ್​ವಾರ್​ ಶುರು​: ಪ್ರಭಾಸ್​​​, ಯಶ್​ಗೆ ಪೈಪೋಟಿ ನೀಡಲಿದೆಯಾ ಬಾಲಿವುಡ್​ ಸಿನಿಮಾ

ದೇಶದೆಲ್ಲೆಡೆ ಕೋವಿಡ್​ ಸೋಂಕು ಕಡಿಮೆಯಾಗಿದ್ದು, ದೈನಂದಿನ ಜೀವನಕ್ಕೆ ಜನಸಾಮಾನ್ಯರು ಈಗಾಗಲೇ ಮರಳಿದ್ದಾರೆ. ಸರ್ಕಾರ ಕೂಡ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಿಕೆ ಮಾಡುವ ಮೂಲಕ ಎಲ್ಲಾ ಉದ್ಯಮಗಳ ವಹಿವಾಟಿಗೆ ಅವಕಾಶ ನೀಡಲಾಗಿದೆ. ಇದೇ ವೇಳೆ ಸಿನಿ ಉದ್ಯಮ ಬಹುದಿನಗಳಿಂದ ಎದುರು ನೋಡುತ್ತಿದ್ದ ಚಿತ್ರರಂಗ ತೆರೆಯಲು ಕೂಡ ಈಗಾಗಲೇ ಮಹಾರಾಷ್ಟ್ರದಲ್ಲಿ ಅನುಮತಿ ನೀಡಿದ್ದು, ಕರ್ನಾಟಕದಲ್ಲಿ ಕೂಡ ಈ ಬಗ್ಗೆ ಶೀಘ್ರದಲ್ಲೇ ಹಸಿರು ನಿಶಾನೆ ಸಿಗಲಿದೆ. ಇದೇ ಹಿನ್ನಲೆ ಥಿಯೇಟರ್​ ರಿಲೀಸ್​ಗೆ ಕಾಯುತ್ತಿದ್ದ ಬಿಗ್​ …

Read More »

ಒಣಗಿಸಿದ ಜಿಂಕೆ ಮಾಂಸ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಹನೂರು: ಒಣಗಿಸಿದ್ದ ಜಿಂಕೆ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹಲಗಾಪುರ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಕಳ್ಳಿದೊಡ್ಡಿ ಗ್ರಾಮದ ರಾಮಾಚಾರಿ (64) ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಗಾಣಿಗಮಂಗಲ ಗ್ರಾಮದ ಸಣ್ಣಪ್ಪ ಪರಾರಿಯಾಗಿದ್ದಾನೆ. ಸಣ್ಣಪ್ಪ ಕಾವೇರಿ ವನ್ಯಜೀವಿ ವಿಭಾಗಕ್ಕೆ ಸೇರಿದ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಜಿಂಕೆಯನ್ನು ಭೇಟೆಯಾಡಿ ಅದರ ಮಾಂಸವನ್ನು ಒಣಗಿಸಿ ರಾಮಾಚಾರಿ ಎಂಬಾತನಿಗೆ ನೀಡಿದ್ದಾನೆ. ಬೈಕ್‍ನಲ್ಲಿ ಮಾಂಸ ಸಾಗಿಸುತ್ತಿದ್ದ ಖಚಿತ ಮಾಹಿತಿ …

Read More »

9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೈಲು ಶಿಕ್ಷೆಗೊಳಗಾಗಿದ್ದ ಅಪರಾಧಿ ಬಂಧನ

ಬೆಂಗಳೂರು: 9 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಅಪರಾಧಿಯೋರ್ವನನ್ನು ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಅಪರಾಧಿ ಆಂಥೋನಿ ರಾಜ್(44) ಬಂಧಿತ ಅಪರಾಧಿ. 2012ರಲ್ಲಿ ಅಪಘಾತ ಪ್ರಕರಣವೊಂದರಲ್ಲಿ ಆಂಥೋನಿ ರಾಜ್‌ಗೆ ಕೋರ್ಟ್ 10 ತಿಂಗಳು 15 ದಿನ ಜೈಲು ಶಿಕ್ಷೆ ಪ್ರಕಟಿಸಿತ್ತು. ಆದರೆ ಶಿಕ್ಷೆ ಪ್ರಕಟವಾದ ಬಳಿಕ ಆಂಥೋನಿ ರಾಜ್ ತಲೆಮರೆಸಿಕೊಂಡಿದ್ದ. ಇದೀಗ ಪೊಲೀಸರಿಂದ ಬಂಧನಕ್ಕೊಳಪಟ್ಟ ನಂತರ ಆಂಥೋನಿ ರಾಜ್​ಗೆ ಮತ್ತೆ ದಂಡ ಮತ್ತು ಜೈಲುಶಿಕ್ಷೆಯನ್ನು ಕೋರ್ಟ್ ವಿಧಿಸಿದೆ. 2010ರಲ್ಲಿ ಟ್ರಾಕ್ಟರ್ ಡ್ರೈವರ್ …

Read More »

ಬೆಳಗಾವಿ ಜನರ ಪ್ರೀತಿಗೆ ಬಿ.ಸಿ.ಪಾಟೀಲ್ ಸಂತಸ -“ರೈತರೊಂದಿಗೊಂದು ದಿನ” ಬಗ್ಗೆ ಕೌರವನ ಮಾತು

ಬೆಳಗಾವಿ: ಬೆಳಗಾವಿ ಜಿಲ್ಲೆಯ ರೈತರು ಜನರು ತೋರಿಸಿದ ಪ್ರೀತಿ ಸಂಸ್ಕೃತಿ ಹಳ್ಳಿ ಪದ್ಧತಿ ಕಂಡು ಸಂತಸವಾಗಿದೆ. ಇಲ್ಲಿ ಬಂದು “ರೈತರೊಂದಿಗೊಂದು ದಿನ”ಕಾರ್ಯಕ್ರಮ ಹಮ್ಮಿಕೊಂಡಿದ್ದು ನಿಜಕ್ಕೂ ಸಾರ್ಥಕವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬಿವಶಿ ಗ್ರಾಮದಲ್ಲಿ ನಡೆದ 11ನೇ ರೈತರೊಂದಿಗೊಂದು ದಿನ ಕಾರ್ಯಕ್ರಮಕ್ಕೆ ಆಗಮಿಸಿ ವೇದಿಕೆ ಮೇಲೆ ಮಾತನಾಡಿದ ಅವರು, ಕೃಷಿಯಲ್ಲಿ ಅಭಿವೃದ್ದಿಯಾದರೂ ಕೃಷಿಕರು ಅಭಿವೃದ್ದಿಯಾಗುತ್ತಿಲ್ಲ. ಹೀಗಾಗಿ ಇದಕ್ಕೆ ಕಾರಣ ಹುಡುಕಿ ಪರಿಹಾರ …

Read More »

ಪ್ಯಾಟ್ಸನ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಮತ್ತು ಪ್ಯಾಟ್ಸನ್ ಚಿಟ್ಸ ಪ್ರಾವೇಟ ಈ ಎರಡು ಸಂಸ್ಥೆಯಿಂದ ಸುಮಾರು 20 ಬಡ ಜನರ ಮೇಲೆ ಮೋಸ

ಬೆಳಗಾವಿ ನಗರದ ಸನ್ಮಾನ ಹೋಟೆಲ್ ಹಿಂಬದಿಯ ಎಮ್ ಜಿ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ಯಾಟ್ಸನ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಮತ್ತು ಪ್ಯಾಟ್ಸನ್ ಚಿಟ್ಸ ಪ್ರಾವೇಟ ಈ ಎರಡು ಸಂಸ್ಥೆಯಿಂದ ಸುಮಾರು 20 ಬಡ ಜನರ ಮೇಲೆ ಮೋಸಮಾಡಲಾಗುದೆ ಎಂದು ಆರೋಪಿಸಿ ಇಂದು ಸಹಾಯಕ ರಿಜಿಸ್ಟ್ರಾರ್ ಮತ್ತು ಉಪ ಸಹಾಯಕ ರಿಜಿಸ್ಟ್ರಾರ್ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ರೋಹಿತ್ ಚಿಮಟೆ ಪ್ಯಾಟ್ಸನ್ ಸಂಸ್ಥೆಯ ಅದ್ಯಕ್ಷರಾದ ಅನಿಲ ಪರಗೌಡಾ …

Read More »

ಮಹರ್ಷಿ ವಾಲ್ಮೀಕಿ ಜಯಂತಿ ವೇದಿಕೆಗೆ ಜಾರಕಿಹೊಳಿ ಬ್ರದರ್ಸ ತಂದೆ-ತಾಯಿ ಹೆಸರಿಡಿ

ಅಕ್ಟೋಬರ್ 10ರಂದು ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಸಿಪಿ ಡಾ.ವಿಕ್ರಮ್ ಆಮ್ಟೆ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಉಮಾ ಸಾಲಿಗೌಡರ ಸೇರಿದಂತೆ ಹಲವು ಅಧಿಕಾರಿಗಳು, ಎಸ್‍ಸಿ, ಎಸ್‍ಟಿ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಸಮಾಜದ ಮುಖಂಡ ಸುರೇಶ ಗವನ್ನವರ …

Read More »

ಸಿನಿಮಾ ಬ್ಲಾಕ್ ಟಿಕೆಟ್ ಮಾರುತ್ತಿದ್ದ ವಿಚಾರ ಬಹಿರಂಗ ಪಡಿಸಿದ ರವಿ ಡಿ. ಚನ್ನಣ್ಣನವರ್

ದಕ್ಷ, ಖಡಕ್ ಅಧಿಕಾರಿ ಎಂದೇ ಹೆಸರು ಪಡೆದಿರುವ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಇತ್ತೀಚಿಗೆ ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೊದಲ ಬಾರಿಗೆ ಸಿನಿಮಾ ಈವೆಂಟ್ ನಲ್ಲಿ ಕಾಣಿಸಿಕೊಂಡಿದ್ದ ರವಿ ಚನ್ನಣ್ಣನವರ್ ಆ ಸಮಯದಲ್ಲಿ ತನ್ನ ಹಳೆಯ ದಿನಗಳನ್ನು ಮೆಲುಕು ಹಾಕಿ ಅಚ್ಚರಿ ಮೂಡಿಸಿದರು. ರವಿ ಡಿ ಚನ್ನಣ್ಣನವರ್ ಅವರ ಬಗ್ಗೆ ಯಾರಿಗೂ ಗೊತ್ತಿರದ ಕೆಲವು ಇಂಟ್ರಸ್ಟಿಂಗ್ ಮಾಹಿತಿಯನ್ನು ಬಹಿರಂಗ ಪಡಿಸಿದರು. ಅನೇಕರಿಗೆ ಮಾದರಿಯಾಗಿರುವ ರವಿ ಡಿ ಚನ್ನಣ್ಣನವರ್ ಒಂದು …

Read More »

ಪೋಸ್ಟ್​ ಆಫೀಸ್​ನ ಈ ಸ್ಕೀಮ್​ನಲ್ಲಿ 50 ಸಾವಿರ ರೂಪಾಯಿ ಇಟ್ಟರೆ 3300 ರೂ. ಪೆನ್ಷನ್

ಪೋಸ್ಟ್​ ಆಫೀಸ್​ನ ಈ ತಿಂಗಳ ಆದಾಯ ಯೋಜನೆಯಲ್ಲಿ ರೂ. 50,000 ಹೂಡಿಕೆ ಮಾಡಿದರೆ ರೂ. 3300 ಪೆನ್ಷನ್ ಪಡೆಯಬಹುದು. ಹಣವನ್ನು ಹೂಡಿಕೆ ಮಾಡುವಾಗ ಪ್ರಮುಖವಾಗಿ ಎರಡು ವಿಷಯಗಳು ಮನಸ್ಸಿಗೆ ಬರುತ್ತವೆ: ಭದ್ರತೆ ಮತ್ತು ಯೋಗ್ಯವಾದ ಆದಾಯ. ಅಂಚೆ ಇಲಾಖೆ ಈ ಎರಡನ್ನೂ ಒದಗಿಸುವ ವಿವಿಧ ಉಳಿತಾಯ ಯೋಜನೆಗಳನ್ನು ನೀಡುತ್ತದೆ. ಈ ದಿನದ ಲೇಖನದಲ್ಲಿ ಒಂದು ಅತ್ಯುತ್ತಮ-ಯಶಸ್ವಿ ಯೋಜನೆ ಬಗ್ಗೆ ಹೇಳುತ್ತೇವೆ. ಅದು ಉತ್ತಮವಾದ ರಿಟರ್ನ್ಸ್ ನೀಡುತ್ತದೆ. ಒಮ್ಮೆ ಪೋಸ್ಟ್ ಆಫೀಸ್ …

Read More »

ಮೈಸೂರು ಅರಮನೆ ವಿದ್ಯುದ್ದೀಪ ಅಳವಡಿಸುವ ಕಾರ್ಯ ಶುರು

ಮೈಸೂರು :ಈ ಬಾರಿಯ ದಸರಾ ಕಾರ್ಯಕ್ರಮಗಳು ಅರಮನೆ ಆವರಣಗಷ್ಟೆ ಸೀಮಿತವಾಗಿರುವುದರಿಂದ ಅರಮನೆ ಸೇರಿದಂತೆ ಸುತ್ತಮುತ್ತ ಸಿದ್ಧತಾ ಕಾರ್ಯಗಳನ್ನು ಮಾಡಲಾಗುತ್ತಿದ್ದು, ಅರಮನೆಗೆ ಸುಣ್ಣ ಬಣ್ಣ ಬಳಿಯುವ ಮತ್ತು ಝಗಮಗಿಸಲು ವಿದ್ಯುತ್ ಬಲ್ಪ್ ಗಳನ್ನು ಅಳವಡಿಸುವ ಕಾರ್ಯವೂ ಸಮಾರೋಪಾದಿಯಲ್ಲಿ ಸಾಗುತ್ತಿದೆ. ಮೈಸೂರು ಅರಮನೆ ರಂಗು ತುಂಬುವುದೇ ವಿದ್ಯುತ್ ದೀಪಗಳು ಹಾಗಾಗಿ ದಸರಾ ಬರುತ್ತಿದ್ದಂತೆಯೇ ಅರಮನೆಗೆ ಅಳವಡಿಸಲಾಗಿರುವ ವಿದ್ಯುದ್ದೀಪಗಳನ್ನು ದುರಸ್ತಿ ಮಾಡುವ ಕಾರ್ಯ ನಡೆಯುತ್ತದೆ ಅದರಂತೆ ಈ ಬಾರಿಯೂ ನಡೆಯತ್ತಿದೆ. ಅರಮನೆ ದೀಪಾಲಂಕಾರ ದಸರಾದ …

Read More »

ಎಸ್‌ಟಿಪಿ ಸ್ಥಳಾಂತರ: ಲೋಕಾಯುಕ್ತ ತನಿಖೆಗೆ ಆದೇಶ

ಬೆಂಗಳೂರು: ಬೆಳಗಾವಿಯ ಅಲರವಾಡದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ) ನಿರ್ಮಾಣಕ್ಕೆ ₹2 ಕೋಟಿ ವೆಚ್ಚ ಮಾಡಿದ ಬಳಿಕ ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿರುವ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆಗೆ ಹೈಕೋರ್ಟ್‌ ಆದೇಶಿಸಿದೆ. ಬೆಳಗಾವಿ ನಿವಾಸಿಗಳಾದ ನಾರಾಯಣ ಬೈರು ಸಾವಂತ್ ಸೇರಿ ಐವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿತು. ಬೆಳಗಾವಿ ಪಾಲಿಕೆ ಆಯುಕ್ತರು ಸಲ್ಲಿಸಿದ್ದ …

Read More »