Breaking News

Daily Archives: ಸೆಪ್ಟೆಂಬರ್ 22, 2021

ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್ ಪತ್ತೆಗೆ ‘ಬಿಗ್ ಟ್ವಿಸ್ಟ್’..! ಸುರಂಗದಲ್ಲಿ ಹೈಟೆಕ್ ವೇಶ್ಯಾವಾಟಿಕೆ

ತುಮಕೂರು : ಇಲ್ಲಿನ ರಿಂಗ್ ರಸ್ತೆಯ ಲಾಡ್ಜ್​ವೊಂದರ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಪೊಲೀಸರು ದಾಳಿ ನಡೆಸಿದ್ದು, ವೇಶ್ಯಾವಾಟಿಕೆ ನಡೆಸಲು ಕಳ್ಳಮಾರ್ಗವಾಗಿದ್ದ ಸುರಂಗವೊಂದನ್ನು ಪತ್ತೆಹಚ್ಚಿದ್ದಾರೆ. ಈ ಸುರಂಗದಲ್ಲಿ ಅಡಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸುರಂಗದೊಳಗೆ ಇಬ್ಬರು ಮಹಿಳೆ ಹಾಗೂ ಓರ್ವ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಅಡಗಿಕೊಂಡಿದ್ದರು ಎಂದು ತಿಳಿದುಬಂದಿದೆ. ಇತ್ತೀಚೆಗೆ ಈ ಲಾಡ್ಜ್ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್‌ಗಳು ಪತ್ತೆ ಆಗಿದ್ದವು. ವಿಷಯ ತಿಳಿದು …

Read More »

ಅಕ್ರಮವಾಗಿ ನಿರ್ಮಿಸಿರುವಂತ ಮಸೀದಿಗಳ ತೆರವಿಗೆ ಹೈಕೋರ್ಟ್ ಆದೇಶ

ಬೆಂಗಳೂರು: ಅಕ್ರಮವಾಗಿ ನಿರ್ಮಿಸಿರುವಂತ ಮಸೀದಿಗಳ ತೆರವಿಗೆ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಕುರಿತಂತೆ ಇಂದು ಹೈಕೋರ್ಟ್ ಗೆ ಸಲ್ಲಿಕೆಯಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ನ್ಯಾಯಪೀಠವು, ನಗರದ ಹೆಚ್ ಬಿ ಆರ್ ಲೇಔಟ್ ನಲ್ಲಿ ಮಸೀದಿ ನಿರ್ಮಾಣಕ್ಕೆ ಬಿಬಿಎಂಪಿಯಿಂದ ಅನುಮತಿ ಪಡೆಯದೇ ಇದ್ದರ ಕುರಿತಂತೆ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಬಿಬಿಎಂಪಿಯಿಂದ ನಿರ್ಮಾಣಕ್ಕೆ ಅನುಮತಿ, ನಕ್ಷೆ ಕೂಡ ಪಡೆಯದೇ ನಿರ್ಮಿಸುತ್ತಿದ್ದಂತ ನಿರ್ಮಾಣ ಹಂತದ ಮಸೀದಿ ತೆರವಿಗೆ ಕೋರ್ಟ್ ಬಿಬಿಎಂಪಿಗೆ ನಿರ್ದೇಶಿಸಿದೆ. ಅಂದಹಾಗೇ …

Read More »

ಕನ್ನಡ ಸಿನಿಮಾ ಮಾಡಲು ರಶ್ಮಿಕಾಗೆ ಟೈಮ್‌ ಇಲ್ವಂತೆ!

ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಯಾದ ನಟಿ ರಶ್ಮಿಕಾ ಮಂದಣ್ಣ ಈಗ ಕನ್ನಡಕ್ಕಿಂತ ಪರಭಾಷೆಯಲ್ಲೇ ಹೆಚ್ಚು ಬಿಝಿಯಾಗಿರುವ ನಟಿ. ಸದ್ಯ ತೆಲುಗಿನಲ್ಲಿ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ, ಇದರ ನಡುವೆಯೇ ಬಾಲಿವುಡ್‌ಗೂ ಅಡಿಯಿಟ್ಟಿದ್ದಾರೆ. ಇನ್ನು ತೆಲುಗು, ತಮಿಳು, ಹಿಂದಿ ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ರಶ್ಮಿಕಾ ಅಭಿನಯಿಸುತ್ತಿರುವ ಸಿನಿಮಾಗಳು ಒಂದರ ಹಿಂದೊಂದು ಅನೌನ್ಸ್‌ ಆಗುತ್ತಿದ್ದರೂ, ಕನ್ನಡದಲ್ಲಿ ಮಾತ್ರ ರಶ್ಮಿಕಾ ಅಭಿನಯಿಸಲಿರುವ ಸಿನಿಮಾಗಳ ಬಗ್ಗೆ ಯಾವುದೇ …

Read More »

ಭವಾನಿಪುರ ಉಪ ಚುನಾವಣೆ : ದೀದಿ ಗೆಲ್ಲೋದು ಖಚಿತ ಎಂದ ಕುಮಾರಸ್ವಾಮಿ

ಬೆಂಗಳೂರು : ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಮೀಪಿಸಿದ್ದು, ಇದೇ ಸೆಪ್ಟಂಬರ್ 30ರಂದು ಚುನುವಾಣೆ ನಿಗದಿಯಾಗಿದೆ. ಮತದಾನ ಅಕ್ಟೋಬರ್ 3ರರವರೆಗೆ ನಡೆಯಲಿದೆ. ಮಮತಾ ಬ್ಯಾನರ್ಜಿ ಸ್ಪರ್ಧೆ ನಡೆಸಿದ್ದು, ತಾವು ಮುಖ್ಯಮಂತ್ರಿಯಾಗಿ ಉಳಿಯಲು ಈ ಚುನಾವಣೆಯನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಮಾಜಿ ಸಿಎಂ ಕುಮಾರಸ್ವಾಮಿ, ಇಡೀ ಭಾರತದ ಗಮನ ಸೆಳೆದಿರುವ ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ …

Read More »

ದೀಪಿಕಾ ಪಡುಕೋಣೆ vs ಪಿವಿ ಸಿಂಧು : ಬ್ಯಾಡ್ಮಿಂಟನ್ ಆಡಿದ ತಾರೆಯರು

ಪಿ ವಿ ಸಿಂಧು ಎದುರು ದೀಪಿಕಾ ಪಡುಕೋಣೆ ಬ್ಯಾಡ್ಮಿಂಟನ್ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಪಿವಿ ಸಿಂಧು ಎರಡು ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿರುವ ಆಟಗಾರ್ತಿ. ಇವರ ಜೊತೆ ನಟಿ ದೀಪಿಕಾ ಬ್ಯಾಡ್ಮಿಂಟನ್ ಆಡಿರುವುದು ವಿಶೇಷವಾಗಿದೆ. ಇನ್ನು ಸಿಂಧು ಜೊತೆ ಆಟವಾಡಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಪಡುಕೋಣೆ ಶೇರ್ ಮಾಡಿಕೊಂಡಿದ್ದಾರೆ. ಇದು ನನ್ನ ನಿತ್ಯ ಜೀವನ.. ಕ್ಯಾಲೊರಿಯನ್ನು ಬರ್ನ್ ಮಾಡಲು ಸಿಂಧು ಜೊತೆ ಬ್ಯಾಡ್ಮಿಂಟನ್ ಆಟವಾಡಿದೆ …

Read More »

ಕೊಪ್ಪಳ: ದಲಿತ ಬಾಲಕ ದೇವಸ್ಥಾನ ಪ್ರವೇಶ ಮಾಡಿದ ಎಂದು ದಂಡ ಹಾಕಿದ್ದ ಐವರ ಬಂಧನ

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಚಂದ್ರ ದೂರು ಆಧರಿಸಿ ಕನಕಪ್ಪ ಪೂಜಾರಿ, ಹನುಮಗೌಡ, ಗವಿ ಸಿದ್ದಪ್ಪ ಮ್ಯಾಗೇರಿ, ವಿರುಪಾಕ್ಷಗೌಡ ಮ್ಯಾಗೇರಿ, ಹಾಗೂ ಶರಣಗೌಡ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೊಪ್ಪಳ: ಮಿಯಾಪೂರದಲ್ಲಿ ದಲಿತ ಬಾಲಕ ದೇವಸ್ಥಾನ ಪ್ರವೇಶಿದ್ದಕ್ಕೆ ದಂಡ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಕುಷ್ಟಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಐವರ ವಿಚಾರಣೆ ನಡೆಯುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಚಂದ್ರ ದೂರು …

Read More »

ಗ್ರಾಪಂ ಕಚೇರಿಯಲ್ಲಿ ಪ್ರಧಾನಿ ಮೋದಿ ಫೋಟೋ ಹಾಕಿದ್ದಕ್ಕೆ ಭುಗಿಲೆದ್ದ ವಿವಾದ: ನೊರನಕ್ಕಿ ಗ್ರಾಮದಲ್ಲಿ ಉದ್ವಿಗ್ನ

ಹಾಸನ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾವಚಿತ್ರ ಅಳವಡಿಕೆಗೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ತಾಲೂಕು ನೊರನಕ್ಕಿ ಗ್ರಾಮ ಪಂಚಾಯಿತಿಯಲ್ಲಿ ವಿವಾದ ಏರ್ಪಟ್ಟಿದ್ದು, ದೂರು- ಪ್ರತಿ ದೂರು ದಾಖಲಾಗಿದೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಗ್ರಾಪಂ ಕಚೇರಿಯಲ್ಲಿ ಸೆ.17ರಂದು ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ನಿಮಿತ್ತ ಫೋಟೋ ಹಾಕಲಾಗಿದೆ. ಇದಕ್ಕೆ ಜೆಡಿಎಸ್ ಬೆಂಬಲಿತ ಸದಸ್ಯರು ಹಾಗೂ ಅಧಿಕಾರಿ ವರ್ಗ ವಿರೋಧ ವ್ಯಕ್ತಪಡಿಸಿದೆ. ಮತ್ತೊಂದು ಕಡೆ ಬಿಜೆಪಿ …

Read More »

ಅಣ್ಣನ ಸಾವಿನ ಸುದ್ದಿ ಕೇಳಿ ಇಹಲೋಕ ತ್ಯಜಿಸಿದ ತಂಗಿ

ರಾಯಚೂರು: ಅಣ್ಣನ ಮೃತಪಟ್ಟ ಸುದ್ದಿ ಕೇಳುತ್ತಿದ್ದಂತೆ ಆಘಾತಕ್ಕೀಡಾಗಿ ತಂಗಿಯೂ ಸಾವನಪ್ಪಿದ ಮನಕಲಕುವ ಘಟನೆ ತಾಲೂಕಿನ ಹುಣಸಿಹಾಳಹುಡಾದಲ್ಲಿ ಮಂಗಳವಾರ ಜರುಗಿದೆ. ಹುಣಸಿಹಾಳಹುಡಾದ ನರಸಪ್ಪ ಹೀರಾ (65) ಅನಾರೋಗ್ಯದಿಂದ ನಗರದ ನವೀನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅಣ್ಣನ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ತಂಗಿ ಸಿದ್ದಮ್ಮ (50) ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಅಣ್ಣನ ಯೋಗಕ್ಷೇಮ ವಿಚಾರಿಸಲು ಸಿರವಾರದಿಂದ ಬಂದಿದ್ದರು. ಆಸ್ಪತ್ರೆಯಲ್ಲಿ ಅಣ್ಣ ಅಗಲಿದ್ದಾನೆಂಬ ಸುದ್ದಿ …

Read More »

ಅಪಾರ್ಟ್ಮೆಂಟ್​ನಲ್ಲಿ ಅಗ್ನಿ ದುರಂತ: ಸಿಲಿಂಡರ್ ಬಳಸುವಾಗ ಜನ ಮಾಡುವ ತಪ್ಪುಗಳೇನು..?

ಬೆಂಗಳೂರು: ಬೇಗೂರು ಠಾಣಾ ವ್ಯಾಪ್ತಿಯ ಅಶ್ರೀತ್ ಅಪಾರ್ಟ್‌ಮೆಂಟ್​ನಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ ಇಡೀ‌ ಸಿಲಿಕಾನ್ ಸಿಟಿ ಜನರನ್ನೇ ಶಾಕ್​ಗೆ ಒಳಗಾಗುವಂತೆ ಮಾಡಿದೆ. ನಿನ್ನೆ ಮಧ್ಯಾಹ್ನ ದೇವರ ಚಿಕ್ಕನಹಳ್ಳಿಯ ಅಶ್ರೀತ್ ಅಪಾರ್ಟ್‌ಮೆಂಟ್​ನ ಮೂರನೇ ಮಹಡಿಯಲ್ಲಿ ಸಂಭವಿಸಿರೋ ಫೈರ್ ಆಕ್ಸಿಡೆಂಟ್​ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.. ಲಕ್ಷ್ಮಿದೇವಿ ಅನ್ನೋ 82 ವರ್ಷದ ವೃದ್ಧೆ ಹಾಗೂ 51 ವರ್ಷದ ಭಾಗ್ಯ ರೇಖಾ ಅನ್ನೋ ಮಹಿಳೆ ಸಾವನ್ನಪ್ಪಿದ್ದಾರೆ. ಅಷ್ಟಕ್ಕೂ ಭೀಕರ ದುರಂತಕ್ಕೆ ಕಾರಣವೇನು? ಅಪಾರ್ಟ್ಮೆಂಟ್​ನಲ್ಲಿ ಸೇಫ್ಟಿ ಮೆಸರ್ಸ್ ಇರಲಿಲ್ವಾ? …

Read More »

ಗೌರಿ ಲಂಕೇಶ್ ಹತ್ಯೆ, ಮೇಲ್ಮನವಿ ತೀರ್ಪು ಕಾಯ್ದಿರಿಕೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ್ದ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪಿಯ ವಿರುದ್ದ ಸಂಘಟಿತ ಅಪರಾಧ ಪ್ರಕರಣವನ್ನು ಕೈಬಿಟ್ಟಿದ್ದನ್ನು ಪ್ರಶ್ನಿಸಿ ಗೌರಿ ಸಹೋದರಿ ಕವಿತಾ ಲಂಕೇಶ್ ಸಲ್ಲಿಸಿದ್ದ ಮೇಲ್ಮನವಿಯ ತೀರ್ಪನ್ನು ಮಂಗಳವಾರ ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ. ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ (ಕೋಕಾ) 2000ರ ಅಡಿ ಆರೋಪಿ ಮೋಹನ್ ನಾಯಕ್ ವಿರುದ್ಧ ದಾಖಲಿಸಿದ್ದ ಆರೋಪಗಳನ್ನು ಕೈಬಿಟ್ಟಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕವಿತಾ ಲಂಕೇಶ್ ಸಲ್ಲಿಸಿದ್ದ ಮೇಲ್ಮನವಿಯ …

Read More »