Breaking News
Home / Uncategorized / ಬಿಜೆಪಿ ಕೋಟೆಯಲ್ಲಿ ಯಂಗ್ ಕಾರ್ಡ್ ಪ್ಲೇ ಮಾಡಿರುವ ಕಾಂಗ್ರೆಸ್‌

ಬಿಜೆಪಿ ಕೋಟೆಯಲ್ಲಿ ಯಂಗ್ ಕಾರ್ಡ್ ಪ್ಲೇ ಮಾಡಿರುವ ಕಾಂಗ್ರೆಸ್‌

Spread the love

 ಬಿಜೆಪಿ ಕೋಟೆಯಲ್ಲಿ ಯಂಗ್ ಕಾರ್ಡ್ ಪ್ಲೇ ಮಾಡಿರುವ ಕಾಂಗ್ರೆಸ್‌

ರ್ನಾಟಕದಲ್ಲಿ ಮೇ 7 ರಂದು 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಗಳ ಮೇಲೆ ಉಭಯ ಪಕ್ಷಗಳು ಚಿತ್ತವನ್ನು ನೆಟ್ಟಿವೆ. ಈ ಭಾಗದಲ್ಲಿ ಬಿಜೆಪಿ ತನ್ನ ಬೇರನ್ನು ಮತ್ತಷ್ಟು ಪಸರಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದ್ದು, ಕಾಂಗ್ರೆಸ್‌ ಹೊಸ ಮುಖಗಳೊಂದಿಗೆ ಚುನಾವಣೆಯ ಅಖಾಡಕ್ಕೆ ಇಳಿದಿದೆ.ಈ ಚುನಾವಣೆ ಉಭಯ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ.

 

ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿ ಮೊದಲಿನಿಂದಲೂ ತನ್ನ ಪ್ರಭಾವವನ್ನು ಹೊಂದಿದೆ. ಈ ಭಾಗದಲ್ಲಿ ತನ್ನ ಪ್ರಭಾವ ಮುಂದುರವರೆಸುವ ಆಶಯವನ್ನು ಬಿಜೆಪಿ ಹೊಂದಿದೆ. ಆದರೆ, ಕಾಂಗ್ರೆಸ್ ಭಾವಿ ನಾಯಕರನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ಚುನಾವಣೆಯನ್ನು ಬಳಸಿಕೊಂಡಿದೆ. ಬಿಜೆಪಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಹಾಲಿ ಸಂಸದ ಅಣ್ಣ ಸಾಹೇಬ್‌ ಜೊಲ್ಲೆಗೆ ಮಣೆ ಹಾಕಿದೆ. ಇನ್ನು ಕಾಂಗ್ರೆಸ್ ಈ ಭಾಗದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದೆ. ಸಚಿವ ಲಕ್ಷ್ಮಿ ಹೆಬ್ಬಾಳ್ಕರ್‌ ಮಗ ಮೃಣಾಲ್‌, ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಕಣದಲ್ಲಿದ್ದಾರೆ. ಹಿರಿತಲೆ ಹಾಗೂ ಯಂಗ್‌ ಸ್ಟರ್ಸ್‌ ನಡುವಿನ ಫೈಟ್‌ ರಾಜ್ಯದ ಚಿತ್ತ ಕದ್ದಿದೆ.

ಹಾಲಿ ಸಂಸದೆಗೆ ಟಿಕೆಟ್‌ ಮಿಸ್‌

ಸುರೇಶ್‌ ಅಂಗಡಿ ನಿಧನದ ಬಳಿಕ ಬೆಳಗಾವಿ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಮಂಗಳಾ ಅಂಗಡಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಅವರಿಗೆ ಟಿಕೆಟ್‌ ನೀಡಿಲ್ಲ. ಅವರ ಬದಲಿಗೆ ಮಾಜಿ ಸಿಎಂ ಜಗದೀಶ್‌ ಶೆಟ್ಟರ್ ಅಖಾಡ ಪ್ರವೇಶಿಸಿದ್ದಾರೆ. ಬೇರೆ ಕ್ಷೇತ್ರದವರಾದರೂ ಶೆಟ್ಟರ್‌ ಅವರಿಗೆ ಜಾತಿಯ ಬೆಂಬಲ ಕ್ಷೇತ್ರದಲ್ಲಿ ಸಿಗಲಿದೆ. ಇನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗ ಮೃಣಾಲ್‌ ಕಣದಲ್ಲಿದ್ದಾರೆ. ಸ್ವಂತ ಕ್ಷೇತ್ರದವರಾಗಿರುವ ಇವರಿಗೆ ಮತದಾರ ಬಹುಪರಾಕ್‌ ಹೇಳುತ್ತಾನಾ ಎಂಬುದು ದೊಡ್ಡ ಪ್ರಶ್ನೆ ಆಗಿದೆ.

ಮಾಜಿ ಸಿಎಂಗೆ ಒಲಿದ ಅದೃಷ್ಟ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 2019ರಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಭಾರೀ ಅಂತರದಲ್ಲಿ ಜಯ ಸಾಧಿಸಿತ್ತು. 2004 ರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದೆ. ಬಿಜೆಪಿ ಕಟ್ಟಿದ ಕೋಟೆಯಲ್ಲಿ ಕಾಂಗ್ರೆಸ್ ರಾಜನಂತೆ ಮೆರೆಯಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಈ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ ಐದು ಕ್ಷೇತ್ರದಲ್ಲಿ ಜಯ ಸಾಧಿಸಿದೆ.

 

 

ಈ ಹಿಡಿತವನ್ನು ಮುಂದುವರೆಸಲು ಕೈ ಪಾಳಯ ರಣ ತಂತ್ರವನ್ನು ಹೆಣೆದುಕೊಂಡಿದೆ. ಇನ್ನು ಸಚಿವರಾದ ಲಕ್ಷ್ಮಿ ಹೆಬಾಳ್ಕರ್ ಅವರು ಮರಾಠಿ ಮತಗಳನ್ನು ತಮ್ಮತ್ತ ಸೆಳೆಯಲು ಕೊಳ್ಳುವ ಕ್ಷಮತೆಯನ್ನು ಹೊಂದಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಈ ಬಾರಿ ಜಿದ್ದಾಜಿದ್ದಿನ ಫೈಟ್‌ ಕಾಣಲಿದೆ. ಅಲ್ಲದೆ ಆರಂಭದಲ್ಲಿ ಜಗದೀಶ್‌ ಶೆಟ್ಟರ್‌ ಬಿಜೆಪಿ ಅಭ್ಯರ್ಥಿ ಆಗಿದಕ್ಕೆ ಅಪಸ್ವರಗಳು ಕೇಳಿ ಬಂದಿದ್ದವು. ಮೇಲ್ನೋಟಕ್ಕಂತೂ ಇದು ತಣ್ಣಗಾಗಿದೆ. ಇದನ್ನೇ ಬಳಸಿಕೊಂಡು ಕಾಂಗ್ರೆಸ್‌ ಜಯವನ್ನು ಸಾಧಿಸಲು ಪ್ಲ್ಯಾನ್ ಮಾಡಿಕೊಂಡಿದೆ.

ತಾಯಿ ಕೇಂದ್ರಿ ಕೃತ ಪ್ರಚಾರ

ಮೃಣಾಲ್‌ ಚುನವಣಾ ಪ್ರಚಾರ ಸಂಪೂರ್ಣ ಸಚಿವೆ ಲಕ್ಷ್ಮಿ ಅವರನ್ನು ಕೇಂದ್ರಿ ಕೃತವಾಗಿದೆ. ತಾಯಿಯೇ ಮಗನಿಗೆ ರಾಜಕೀಯ ವ್ಯಾಖರಣಗಳನ್ನು ಪ್ರಚಾರದುದಕ್ಕು ಕಲಿಸುತ್ತಲೇ ಇದ್ದಾರೆ. ಇವರ ಈ ಅನುಭವ ಮುಂದಿನ ದಿನಗಳಲ್ಲಿ ಇವರಿಗೆ ಸಹಾಯ ಮಾಡಲಿದೆ.

ಎಷ್ಟು ಮತದಾರರು ಇದ್ದಾರೆ?

ಸುಮಾರು 22 ಲಕ್ಷ ಮತದಾರರನ್ನು ಹೊಂದಿರುವ ಲೋಕಸಭಾ ಕ್ಷೇತ್ರದಲ್ಲೂ ಲಿಂಗಾಯತರ ಮತವೇ ನಿರ್ಣಾಯಕ. ಶೇಕಡಾ 73 ರಷ್ಟು ಹಿಂದೂಗಳು ಹಾಗೂ ಶೇಕಡಾ 21 ರಷ್ಟು ಮುಸ್ಲಿಮರಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬುದು ರೋಚಕತೆ ಹೆಚ್ಚಿಸಿದೆ.

ಪ್ರತಿಷ್ಠಿಯ ಕಣವಾಗಿರುವ ಚಿಕ್ಕೋಡಿ

ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂಬ ರಣ ತಂತ್ರವನ್ನು ರೂಪಿಸಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಕ್ಯಾಂಪೇನ್‌ ತಾಯಿ ಕೇಂದ್ರಿ ಕೃತವಾದರೆ ಚಿಕ್ಕೋಡಿಯಲ್ಲಿ ತಂದೆಯ ನೆರಳಿನಲ್ಲಿ ಪ್ರಿಯಾಂಕ ಜಾರಕಿಹೊಳಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಯುವ ಮುಖಂಡರನ್ನು ಕಣಕ್ಕೆ ಇಳಿಸಿರುವ ಕಾಂಗ್ರೆಸ್‌ ಭವಿಷ್ಯದ ದೃಷ್ಟಿ ಸ್ಪಷ್ಟವಾಗಿ ಕಾಣುತ್ತೆ.

ಜಾರಕಿಹೊಳಿ ಮನೆತನದ ಕುಡಿ ಪ್ರಿಯಾಂಕಾ ಅವರನ್ನು ಗೆಲ್ಲಿಸ ಬೇಕೆಂದು ತಂದೆ ಸತಿಶ್‌ ಟೊಂಕ ಕಟ್ಟಿ ನಿಂತಿದ್ದಾರೆ. ಅಲ್ಲದೆ ತಮ್ಮ ಪ್ರಭಾವವನ್ನು ಬಳಸಿಕೊಂಡು ಈ ಕ್ಷೇತ್ರದ ಮತದಾರರನ್ನು ತಮ್ಮ ಪಕ್ಷತ್ತ ಸೆಳೆಯುವಲ್ಲಿ ಕಸರತ್ತು ನಡೆಸಿದ್ದಾರೆ. ಆದರೆ ಚಿಕ್ಕೋಡಿಯಲ್ಲೂ ದಶಕಗಳಿಂದ ಬಿಜೆಪಿ ಗೆಲುವು ದಾಖಲಿಸುತ್ತಾ ಬಂದಿದೆ. ಈ ಪರಂಪರೆಯನ್ನು ಬ್ರೇಕ್ ಮಾಡಲು ಕಾಂಗ್ರೆಸ್‌ ಮಾಸ್ಟರ್‌ ಪ್ಲ್ಯಾನ್‌ ಮಾಡಿದೆ.

ಅಣ್ಣಾ ಸಾಹೇಬ್‌ ಜೊಲ್ಲೆ ಹಾಲಿ ಸಂಸದರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ ಹಾಗೂ ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಈ ಪಕ್ಷಕ್ಕೆ ಪ್ಲಸ್‌ ಆಗುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲೂತಮ್ಮದೇ ಆದ ಹಿಡಿತವನ್ನು ಸಾಧಿಸಿರುವ ಜೊಲ್ಲೆ ಫ್ಯಾಮಿಲಿ, ಇದನ್ನೇ ಮುಂದುವರೆಸಲು ತಂತ್ರವನ್ನು ಹೂಡಿದೆ. ಎರಡೂ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಹೋರಾಟ ಇದ್ದು, ಮತದಾರನ ಪ್ರಭು ಯಾರಿಗೆ ಜೈ ಎನ್ನುತ್ತಾನೆ ಎಂಬುದಕ್ಕೆ ಜೂನ್ 4 ರಂದು ಉತ್ತರ ಲಭಿಸಲಿದೆ.


Spread the love

About Laxminews 24x7

Check Also

ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್ ಅವರಂತಹ ಸಿಎಂ ಬೇಕಿದೆ: ನೇಹಾ ಹಿರೇಮಠ್ ತಂದೆ ಹೇಳಿಕೆ

Spread the love ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಳೆದ ತಿಂಗಳು ನೇಹಾ ಪಾಟೀಲ್ ಕೊಲೆ ಕೇಸ್ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ