Breaking News
Home / 2021 / ಸೆಪ್ಟೆಂಬರ್

Monthly Archives: ಸೆಪ್ಟೆಂಬರ್ 2021

ರಾಜ್ಯದ 31ನೇ ಜಿಲ್ಲೆ ವಿಜಯನಗರ ಜಿಲ್ಲೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಉದ್ಘಾಟಿಸಲಿದ್ದಾರೆ.

ಬೆಂಗಳೂರು – ರಾಜ್ಯದ 31ನೇ ಜಿಲ್ಲೆ ವಿಜಯನಗರ ಜಿಲ್ಲೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಉದ್ಘಾಟಿಸಲಿದ್ದಾರೆ. ಶನಿವಾರ ಸಂಜೆ 6 ಗಂಟೆಗೆ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಭವ್ಯ ಸಮಾರಂಭದಲ್ಲಿ ವಿಜಯ ನಗರ ಜಿಲ್ಲೆ ಅಧಿಕೃತವಾಗಿ ಅಸ್ಥಿತ್ವಕ್ಕೆ ಬರಲಿದೆ. ಸಚಿವ ಆನಂದ ಸಿಂಗ್ ಅವರ ಒತ್ತಾಸೆಯಂತೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿಜಯನಗರ ಜಿಲ್ಲೆಯನ್ನು ಘೋಷಣೆ ಮಾಡಿದ್ದರು. ರಡ್ಡಿ ಸಹೋದರರ ವಿರೋಧದ ಮಧ್ಯೆಯೂ ವಿಜಯನಗರ ಜಿಲ್ಲೆ ಘೋಷಣೆಯಾಗಿದೆ. ಆನಂದ ಸಿಂಗ್ ಕಾಂಗ್ರೆಸೇ್ ತೊರೆದು …

Read More »

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಿಯಮ ಬಾಹಿರ ನೇಮಕಾತಿ: ಶುರುವಾಯ್ತು ಆತಂಕ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇದೀಗ ಸಹಾಯಕ ಪ್ರಾಧ್ಯಾಪಕರ ವಜಾಗೊಳಿಸುವ ಪರ್ವ ಆರಂಭವಾಗಿದೆ. ನೇಮಕಾತಿ ಸಂದರ್ಭದಲ್ಲಿ ನಿಯಮ ಬಾಹಿರವಾಗಿ ನೇಮಕಾತಿ ನಡೆದಿದೆ ಅಂತಾ ಅನೇಕರು ಹೈಕೋರ್ಟ್ ಮೊರೆ ಹೋಗಿದ್ದರಿಂದ ಇದೀಗ ಕೋರ್ಟ್ ಈ ಬಗ್ಗೆ ಆದೇಶಗಳನ್ನು ನೀಡುತ್ತಿದೆ. ಇದರಿಂದ ಕೆಲವರಿಗೆ ಕೆಲಸ ಕಳೆದುಕೊಳ್ಳುವ ಆತಂಕ ಶುರುವಾಗಿದೆ. ಈ ಮಧ್ಯೆ ಕೋರ್ಟ್ ಆದೇಶದಿಂದ ವಜಾಗೊಳ್ಳುವ ಆತಂಕದಲ್ಲಿರುವ ಸಹಾಯಕ ಪ್ರಾಧ್ಯಾಪಕರು ವಿಭಾಗೀಯ ಪೀಠದಿಂದ ತಡೆ ತರುತ್ತಿದ್ದಾರೆ. ಕಠಿಣ ಶಬ್ದಗಳಲ್ಲಿ ನಿಯಮ ಬಾಹಿರ ನೇಮಕಾತಿ ಬಗ್ಗೆ …

Read More »

ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಜನಪ್ರತಿನಿಧಿಯಾಗುವ ಅವಕಾಶ

ಬೆಳಗಾವಿ: ಯುಪಿಎ ಅಧಿಕಾರ ಅವಧಿಯಲ್ಲಿ ಮಾಧ್ಯಮಗಳಲ್ಲಿ ಭೂಮಿಯ ತಳಭಾಗದಿಂದ ಆಗಸದವರೆಗೆ ಹಗರಣಗಳನ್ನು ನೋಡುವುದೇ ಆಗಿತ್ತು. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಳೆದ ಏಳು ವರ್ಷ ಭ್ರಷ್ಟಾಚಾರ ರಹಿತ ಅಭಿವೃದ್ಧಿಪರ ಯೋಜನೆಗಳ ಕಾಲವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಹೇಳಿದ್ದಾರೆ. ಮೋದಗಾ ಗ್ರಾಮದ ರಾಧಾಕೃಷ್ಣ ಸಭಾಭವನದಲ್ಲಿ ಜರುಗಿದ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶವನ್ನು ಲೂಟಿ ಮಾಡಿದ ಯುಪಿಎ ಸರ್ಕಾರ ಕೇವಲ …

Read More »

ಗೌತಮ್ ಅದಾನಿಯ ಒಂದು ದಿನದ ಗಳಿಕೆಯೇ 1,002 ಕೋಟಿ ರೂಪಾಯಿ!

ಭಾರತದ 119 ನಗರಗಳ 1,007 ವ್ಯಕ್ತಿಗಳ ಸಂಪತ್ತು ಒಂದು ಸಾವಿರ ಕೋಟಿ ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಾಗಿದೆ. ಭಾರತದಲ್ಲಿರುವ ಶ್ರೀಮಂತ ವ್ಯಕ್ತಿಗಳು, ಕುಟುಂಬಗಳ ಸಂಪತ್ತಿನಲ್ಲಿ ಬಾರಿ ಏರಿಕೆಯಾಗಿದೆ. ಕೊರೊನಾದ ಮಧ್ಯೆಯೂ ಶ್ರೀಮಂತರ ಸಂಪತ್ತಿನಲ್ಲಿ ಏರಿಕೆಯಾಗಿರುವುದು ವಿಶೇಷ. ಯಾವ್ಯಾವ ಕಂಪನಿಗಳು ಪ್ರತಿ ನಿತ್ಯ ಎಷ್ಟೆಷ್ಟು ಕೋಟಿ ರೂಪಾಯಿ ಹಣ ಗಳಿಸುತ್ತಿವೆ ಎಂದು ಕೇಳಿದರೇ ನಿಮಗೆ ಶಾಕ್ ಆಗಬಹುದು. ಗೌತಮ್ ಅದಾನಿಯ ಪ್ರತಿ ನಿತ್ಯದ ಆದಾಯ ಬರೋಬ್ಬರಿ 1,002 ಕೋಟಿ ರೂಪಾಯಿ. ಇದೇ …

Read More »

ಕೊನೆಗೂ ನನಸಾಯ್ತು ಬಿಎಂಟಿಸಿಯ ಬಹು ವರ್ಷಗಳ ಕನಸು..!

ಬೆಂಗಳೂರು: ಬಿಎಂಟಿಸಿಯ ಬಹು ವರ್ಷಗಳ ಕನಸು ಇಂದು ನನಸಾಗಿದೆ. ಮೊದಲ ಎಲೆಕ್ಟ್ರಿಕ್ ಬಸ್ ಇಂದು ಬಿಎಂಟಿಸಿಗೆ ಸೇರ್ಪಡೆಯಾಗಿದೆ. ಸಾರಿಗೆ ಸಚಿವ ಶ್ರೀರಾಮುಲು ಮೊದಲ ಎಲೆಕ್ಟ್ರಿಕ್ ಬಸ್ ​ಅನ್ನು ಅನಾವರಣ ಮಾಡಿದ್ದು, ಕೆಂಗೇರಿ ಡಿಪೋದಲ್ಲಿ ಮೊದಲ ವಿದ್ಯುತ್ ಚಾಲಿತ ಬಸ್ ಅನಾವರಣಗೊಂಡಿದೆ.     ಬೆಂಗಳೂರು ಸ್ಮಾರ್ಟ್​ ಸಿಟಿ ಯೋಜನೆಯಡಿ ಮೆಟ್ರೋ ಫೀಡರ್​​ ಸೇವೆಗಾಗಿ 90 ಹವಾನಿಯಂತ್ರಿತ ಎಲೆಕ್ಟ್ರಿಕ್​​ ಬಸ್​ಗಳನ್ನು ಒಟ್ಟು ವೆಚ್ಚದ ಒಪ್ಪಂದ (ಜಿಸಿಸಿ) ಆಧಾರದಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆ …

Read More »

ಕೆಲಸದಿಂದ ತೆಗೆದಿದ್ದಕ್ಕೆ ಗ್ರಾ.ಪಂ ಅಧ್ಯಕ್ಷರ ಟೇಬಲ್​ ಎದುರೇ ನೇಣಿಗೆ ಶರಣಾದ ನೌಕರ

ಗದಗ: ಕೆಲಸದಿಂದ ತೆಗೆದಿದ್ದಕ್ಕೆ ಮನನೊಂದು ನೌಕರನೋರ್ವ ಗ್ರಾಮ ಪಂಚಾಯತ್​ ಕಚೇರಿಯಲ್ಲಿಯೇ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಹೊಳಗುಂದಿ (28) ಆತ್ಮಹತ್ಯೆ ಶರಣಾದ ಸಿಬ್ಬಂದಿ. ಮೃತ ಮಲ್ಲಪ್ಪ ಸ್ಥಳೀಯ ಗ್ರಾಮ ಪಂಚಾಯತ್​ನಲ್ಲಿ ವಾಟರ್​ ಮ್ಯಾನ್​ ಆಗಿ ಕೆಲಸ ನಿರ್ವಹಿಸುತ್ತಿದ್ದು ಇತ್ತೀಚಿಗೆ ಆತನನ್ನು ಕೆಲಸದಿಂದ ಬಿಡಿಸಲಾಗಿತ್ತು ಎನ್ನಲಾಗಿದೆ.     ಇದರಿಂದ ಮನನೊಂದ ಮಲ್ಲಪ್ಪ ಕಚೇರಿಯಲ್ಲಿ ಅಧ್ಯಕ್ಷರು ಕೂರುವ ಟೇಬಲ್​ ಮುಂದೆಯೇ ನೇಣಿಗೆ ಶರಣಾಗಿದ್ದಾನೆ. …

Read More »

ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ನೈತಿಕ ಹಕ್ಕು ಸಿದ್ದರಾಮಯ್ಯಗಿಲ್ಲ : ಮಹಾಂತೇಶ್ ಕವಟಗಿಮಠ

ಚಿಕ್ಕೋಡಿ: ಜಾತಿ-ಜಾತಿ ಹಾಗೂ ಧರ್ಮ-ಧರ್ಮದ ನಡುವೆ ದ್ವೇಷವನ್ನು ಹುಟ್ಟುಹಾಕುವ ಕಾರ್ಯವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಚಿಕ್ಕೋಡಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ, ವಿವಿಧ ಕಾಮಗಾರಿಗಳಿಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಜೊತೆಗೂಡಿ ಉದ್ಘಾಟನೆ ನೆರವೇರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ …

Read More »

ಪಾದಯಾತ್ರೆ ಶಾಪದಿಂದ ಬಿಎಸ್‍ವೈ ಅಧಿಕಾರ ಕಳೆದುಕೊಂಡರು: ಕಾಶಪ್ಪನವರ್

ದಾವಣಗೆರೆ: ಪಂಚಮಸಾಲಿ ಸಮಾಜದ ಮೀಸಲಾತಿಗಾಗಿ ಹಮ್ಮಿಕೊಂಡಿದ್ದ ಪಾದಯಾತ್ರೆ ಶಾಪದಿಂದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಶಾಪದ ಹೇಳಿಕೆಯನ್ನು ನೀಡಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಸಂದರ್ಭದಲ್ಲಿ ನಾನು ಹೇಳಿಕೆ ನೀಡಿದ್ದೆ 2ಎ ಮೀಸಲಾತಿಗಾಗಿ ಶ್ರೀಗಳಿಗೆ ಪಾದಯಾತ್ರೆ ಮಾಡುವಂತೆ ಮಾಡಿದ್ದರು. ಆದರೂ, ಅವರು ನೀಡಿದ ಮಾತನ್ನು ಉಳಿಸಿಕೊಳ್ಳಲಿಲ್ಲ. ಅದೇ ಕಾರಣಕ್ಕೆ ಶ್ರೀಗಳ ಪಾದಯಾತ್ರೆ ಶಾಪ ಅವರಿಗೆ ತಟ್ಟಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ …

Read More »

ವಿದ್ಯಾಕಾಶಿಯಲ್ಲಿ ಒಂದೇ ವಾರದಲ್ಲಿ ಎರಡು ಬಾರ್‌ನಲ್ಲಿ ಕಳ್ಳತನ

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಒಂದೇ ವಾರದಲ್ಲಿ ಎರಡು ಬಾರ್‍ನಲ್ಲಿ ಕಳ್ಳತನದ ಘಟನೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ನಗರದ ತೇಜಸ್ವಿನಗರದಲ್ಲಿ ಎಂಎಸ್‍ಐಎಲ್ ನಲ್ಲಿ ಕಳ್ಳತನ ಮಾಡಿದ್ದರು. ಎಂಎಸ್‍ಐಎಲ್ ನಲ್ಲಿದ್ದ 65 ಸಾವಿರ ನಗದು ಹಾಗೂ ಮದ್ಯದ ಬಾಟಲ್ ಗಳನ್ನು ಕಳ್ಳತನ ಮಾಡಿದ್ದರು. ಈಗ ಮತ್ತೇ ಧಾರವಾಡ ನಗರದ ಸಪ್ತಾಪೂರದಲ್ಲಿ ತ್ರಿವೇಣಿ ಎಂಬ ಬಾರ್ ನಲ್ಲಿಯೂ ಕಳ್ಳತನ ಮಾಡಲಾಗಿದೆ. ಬಾರ್ ನ ಶಟರ್ ಮುರಿದು ಚಾಲಾಕಿ ಕಳ್ಳರು ತಮ್ಮ ಕೈಚಳಕ …

Read More »

ಹಾವೇರಿ: ಬದಲಾಯ್ತು ಅವೈಜ್ಞಾನಿಕ ಆಮ್ಲಜನಕ ಪೈಪ್‌ಲೈನ್‌!

ಹಾವೇರಿ: ಕೋವಿಡ್‌ 2ನೇ ಅಲೆಯ ಮರಣ ಪ್ರಮಾಣದಲ್ಲಿ ರಾಜ್ಯದಲ್ಲೇ ಹಾವೇರಿ ಜಿಲ್ಲೆ (ಶೇ 2.92) ಮುಂಚೂಣಿಯಲ್ಲಿದೆ. ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾದ ‘ಅವೈಜ್ಞಾನಿಕ ಆಮ್ಲಜನಕ ಪೈಪ್‌ಲೈನ್‌’ ಅನ್ನು ಪರಿಣತ ತಜ್ಞವೈದ್ಯರ ತಂಡದ ಸಲಹೆಯಂತೆ ಜಿಲ್ಲಾಸ್ಪತ್ರೆಯಲ್ಲಿ ಬದಲಾವಣೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಹಾವೇರಿ ಜಿಲ್ಲೆಯಲ್ಲಿ ಕೋವಿಡ್‌ ಒಂದು ಮತ್ತು ಎರಡನೇ ಅಲೆಯಿಂದ ಒಟ್ಟು 646 ಮಂದಿ ಮೃತಪಟ್ಟಿದ್ದಾರೆ. ಈ ಸಾವುಗಳ ಸಂಖ್ಯೆ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆ ಇದ್ದರೂ, ಶೇಕಡಾವಾರು ಮರಣ …

Read More »