Breaking News

Daily Archives: ಸೆಪ್ಟೆಂಬರ್ 22, 2021

ಮೂರು ದಿನಗಳೊಳಗೆ ಸಂತ್ರಸ್ತರ ಮನೆಗಳ ಸಮೀಕ್ಷೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಕಳೆದ ಜುಲೈ ತಿಂಗಳಲ್ಲಿ ಸುರಿದ ಮಳೆ ಹಾಗೂ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡ ನದಿ ತೀರದ ಗ್ರಾಮಗಳ ಸಂತ್ರಸ್ತರು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಬುಧವಾರದಂದು ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದ ಆವರಣದಲ್ಲಿ ಅರಭಾವಿ ಕ್ಷೇತ್ರದ 21 ಗ್ರಾಮಗಳ ನದಿ ತೀರದ ಸಂತ್ರಸ್ತರು ಶಾಸಕರ ಬಳಿ ಅಳಲು ಮಂಡಿಸಿದರು. ನದಿ ತೀರದ ಗ್ರಾಮಗಳಾದ ಅಡಿಬಟ್ಟಿ, ಚಿಗಡೊಳ್ಳಿ, …

Read More »

ಧಾರ್ಮಿಕ ಕಟ್ಟಡ ರಕ್ಷಣೆ ವಿಧೇಯಕ ಅಂಗೀಕಾರ

ಸಾರ್ವಜನಿಕ ಸ್ಥಳ ಗಳಲ್ಲಿರುವ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮಸೂದೆ ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರವಾಗಿದೆ.”ಮೈಸೂರಿನಲ್ಲಿ 261 ಸ್ಥಳಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 161ನ್ನು ಸ್ಥಳಾಂತರಿಸಲಾಗಿದೆ” ಎಂದು ಚರ್ಚೆಯ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. “ಸರ್ಕಾರದ ಕಟ್ಟಡಗಳನ್ನು ಸರ್ಕಾರದ ಗಮನಕ್ಕೆ ಬಾರದೇ ಒಡೆಯಲು ಸಾಧ್ಯವಿಲ್ಲ. ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದು ಈ ಮಸೂದೆ ತರಲಾಗಿದೆ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಆಡಳಿತದ ಸಂದರ್ಭ ಎಲ್ಲವನ್ನೂ ತೆರವುಗೊಳಿಸಿಲ್ಲ. ಹಿಂದಿನ ಸರ್ಕಾರಗಳ ಅವಧಿಯ …

Read More »

ಹಂಪಿ ಎಲ್ಲಿ ಹೆಲಿಟೂರಿಸಂ ಆರಂಭಿಸಲು ರಾಜ್ಯ ಸರ್ಕಾರ ನಿರ್ಧಾರ

ಹಂಪಿ: ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಪ್ರಮುಖ ಯೋಜನೆಗಳಲ್ಲಿ ಹೆಲಿ ಟೂರಿಸಂ ಕೂಡ ಒಂದಾಗಿದ್ದು, ಯೋಜನೆಯ ಆರಂಭಿಕ ಭಾಗವಾಗಿ ಹಂಪಿಯನ್ನು ಆಯ್ಕೆ ಮಾಡಿಕೊಂಡಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಹಂಪಿಯಲ್ಲಿ ಹೆಲಿ ಟೂರಿಸಂ ಆರಂಭವಾಗಲಿದೆ ಎಂದು ವರದಿಗಳು ತಿಳಿಸಿವೆ.ಅಕ್ಟೋಬರ್ ಆರಂಭದಲ್ಲಿ ವಿಶ್ವವಿಖ್ಯಾತ ಹಂಪಿಯಲ್ಲಿ ಹೆಲಿ-ಟೂರಿಸಂ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈಗಾಗಲೇ ಜಿಲ್ಲಾ ಉಸ್ತವಾರಿ ಸಚಿವ ಆನಂದ್ ಸಿಂಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಯೋಜನೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು …

Read More »

ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಬೆಳಗಾವಿ:  ಅಥಣಿಯ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹಾಗೂ ಕಚೇರಿಯ ಮ್ಯಾನೇಜರ್ – ಇಬ್ಬರೂ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಭ್ರಷ್ಟಾಚಾರ ನಿರ್ಮೂಲನಾ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಂದ್ರ ಇಂದ್ರಪ್ಪ ಪರಣಾಕರ ಹಾಗೂ ಮ್ಯಾನೇಜರ್ ದೀಪಕ ಕೃಷ್ಣಾಜಿ ಕುಲಕರ್ಣಿ ಇವರು ಗುತ್ತಿಗೆದಾರ ಒಬ್ಬರಿಂದ ರೂ. 68,000 ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಎಸಿಬಿಯಿಂದ …

Read More »

ಸೆಪ್ಟಂಬರ್ 28ರಿಂದ ಯಲ್ಲಮ್ಮ ದರ್ಶನಕ್ಕೆ ಅವಕಾಶ

ಬೆಳಗಾವಿ – ಭಕ್ತರ ಬಹುನಿರೀಕ್ಷಿತ, ಬುಹರಾಜ್ಯಗಳ ಭಕ್ತರ ಆರಾಧ್ಯ ದೇವತೆ ಸವದತ್ತಿ ಯಲ್ಲಮ್ಮ ದರ್ಶನಕ್ಕೆ ಮುಹೂರ್ತ ನಿಗದಿಯಾಗಿದೆ. ಸೆಪ್ಟಂಬರ್ 28ರಿಂದ ಯಲ್ಲಮ್ಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, 16 ಷರತ್ತನ್ನು ವಿಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Read More »

ಶ್ರೀ ಸನತ್ ಜಾರಕಿಹೊಳಿ ಅವರಿಗೆ ಹುಟ್ಟಹಬ್ಬದ ಶುಭಾಶಯ ತಿಳಿಸಿದ ಬಸವರಾಜ ಸಾಯನ್ನವ ರ

ಇಂದು ಜಾರಕಿಹೊಳಿ ಕುಟುಂಬದಲ್ಲಿ ಸಂಭ್ರಮದ ದಿನ ಇಂದು ಜಾರಕಿಹೊಳಿ ಕುಟುಂಬದಲ್ಲಿ ಹುಟ್ಟು ಹಬ್ಬದ ಸಂಭ್ರಮ ಭೀಮಶಿ ಜಾರಕಿಹೊಳಿ ಅವರ ಸುಪುತ್ರ ಹಾಗೂ ಗೋಕಾಕ ಲಕ್ಷ್ಮಿ ಎಜುಕೇಷನ್ ಟ್ರಸ್ಟ್ ವ್ಯವ್ಥಾಪಕ ನಿರ್ದೇಶಕ ರಾದ ಶ್ರೀ ಸನತ್ ಜಾರಕಿಹೊಳಿ ಅವರ್ ಹುಟ್ಟುಹಬ್ಬದ ಸಂಭ್ರಮ. ಹೌದು ಇಂದು ಸುಮಾರು ಜನ ಇವರ ಒಂದು ಜನ್ಮ ದಿನಕ್ಕೆ ಶುಭಕೋರಿದರು ಹಾಗೂ ಗೋಕಾಕ ನಗರದ ಎಪಿಎಂಸಿ ನಿರ್ದೇಶಕ ರಾದ ಬಸವರಾಜ್ ಸಾಯನ್ನವರ್ ಅವರು ಇಂದು ಅವರಿಗೆ ಶುಭ …

Read More »

ಮದ್ಯದಂಗಡಿ ವಿರೋಧಿಸಿ ಬೃಹತ್‌ ಪ್ರತಿಭಟನೆ

ಚಿಕ್ಕಮಗಳೂರು: ಕಡೂರು ತಾಲೂಕುಎಮ್ಮೆದೊಡ್ಡಿ ಗ್ರಾಮದಲ್ಲಿ ಗ್ರಾಮಸ್ಥರವಿರೋಧದ ನಡುವೆ ಪ್ರಭಾವಿಗಳುಅಕ್ರಮವಾಗಿ ಮದ್ಯದಂಗಡಿ ತೆರೆದಿದ್ದು, ಅಬಕಾರಿಮತ್ತು ಪೊಲೀಸ್‌ಇಲಾಖೆಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ನಗರದಲ್ಲಿಬೃಹತ್‌ ಪ್ರತಿಭಟನೆ ನಡೆಸಿದರು. ಮಂಗಳವಾರ ನಗರದ ತಾಪಂಕಚೇರಿಯಿಂದ ಆಜಾದ್‌ ಪಾರ್ಕ್‌ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆನಡೆಸಿದ ಗ್ರಾಮಸ್ಥರು. ಮದ್ಯದಂಗಡಿತೆರವುಗೊಳಿಸುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಾತನಾಡಿದಪ್ರತಿಭಟನಾಕಾರರು, ಎಮ್ಮೆದೊಡ್ಡಿಗ್ರಾಪಂ ವ್ಯಾಪ್ತಿಯಲ್ಲಿ 18 ಗ್ರಾಮಗಳಿದ್ದು,ಬಹುತೇಕ ಜನರು ಎಮ್ಮೆದೊಡ್ಡಿಗ್ರಾಮವನ್ನೇ ಅವಲಂಬಿಸಿದ್ದಾರೆ.   ಈ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟಪಂಗಡಕ್ಕೆ ಸೇರಿದ ಜನರು ಹೆಚ್ಚಿನಸಂಖ್ಯೆಯಲ್ಲಿ ವಾಸವಿದ್ದು ಕೂಲಿಕಾರ್ಮಿಕರು ಹೆಚ್ಚಿದ್ದಾರೆ …

Read More »

ಬಸ್‌ ಸೌಲಭ್ಯ ಒದಗಿಸುವಂತೆ ಆಗ್ರಹ: ಮಳೆಯಲ್ಲೇ ವಿದ್ಯಾರ್ಥಿನಿಯರ ಪ್ರತಿಭಟನೆ

ಸೇಡಂ: ತಾಲ್ಲೂಕಿನ ಮಲ್ಲಾಬಾದ್ ಮಾರ್ಗದಿಂದ ಬೊಂದೆಂಪಲ್ಲಿ ಗ್ರಾಮಕ್ಕೆ ಬಸ್ ಒದಗಿಸುವಂತೆ ಮುಧೋಳ ಬಸ್ ನಿಲ್ದಾಣದಲ್ಲಿ ಮಂಗಳವಾರ ಶಾಲಾ ವಿದ್ಯಾರ್ಥಿನಿಯರು ಸುರಿಯುತ್ತಿರುವ ಮಳೆಯಲ್ಲಿಯೇ ಬಸ್‌ ತಡೆದು ಪ್ರತಿಭಟನೆ ನಡೆಸಿದರು. ಶಾಲಾ-ಕಾಲೇಜು ಆರಂಭವಾಗಿ ಅನೇಕ ದಿನಗಳಾಗುತ್ತಾ ಬಂದಿವೆ. ಈವರೆಗೂ ಬಸ್ ಆರಂಭವಾಗಿಲ್ಲ. ಬಸ್ ಓಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡಿದ್ದೇವೆ. ಆದರೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗಿಲ್ಲ. ಶಾಲಾ-ಕಾಲೇಜುಗಳು ನಿತ್ಯವು ನಡೆಯುತ್ತಿವೆ. ಖಾಸಗಿ ವಾಹನಗಳಿಗೆ ಹಣ ಕೊಟ್ಟು ಬರಲು ಸಾಧ್ಯವಾಗುತ್ತಿಲ್ಲ. ನಮ್ಮಂತಹ ಮಧ್ಯಮ ವರ್ಗದವರು ಶಾಲೆಗೆ …

Read More »

ಮನೆ ನಿರ್ಮಾಣಕ್ಕೆ ಆಗ್ರಹಿಸಿ ಮಳೆಯನ್ನೂ ಲೆಕ್ಕಿಸದೇ ಡಿಸಿ ಕಛೇರಿ ಎದುರು ಮಹಿಳೆಯರ ಪ್ರತಿಭಟನೆ

ವಿಜಯಪುರ : ಮನೆ ನಿರ್ಮಾಣಕ್ಕೆ ಆಗ್ರಹಿಸಿ ಕೊಲ್ಹಾರ ಪಟ್ಟಣದ ಕೊಳಚೆ ಪ್ರದೇಶದ ಮಹಿಳೆಯರು ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನೆ ಆರಂಭಿಸಿದ್ದಾರೆ. ಬುಧವಾರ ನಗರದಲ್ಲಿನ ಜಿಲ್ಲಾಧಿಕಾರಿ ಕಛೇರಿಗೆ ಆಗಮಿಸಿದ 50-60 ಜನರಿದ್ದ ಕೊಲ್ಹಾರ ಸ್ಲಂ ನಿವಾಸಿ ಮಹಿಳೆಯರು ಭಾರೀ ಮಳೆಯಲ್ಲೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೋಲ್ಹಾರ ಪಟ್ಟಣದಲ್ಲಿ ಕಳೆದ 25 ವರ್ಷಗಳಿಂದ ಸುಮಾರು 300 ಕುಟುಂಬಗಳು ವಾಸವಾಗಿರುವ ತಮನ್ನು ಸ್ಥಳ ಖಾಲಿ ಮಾಡುವಂತೆ ಪಟ್ಟಣ ಪಂಚಾಯತ ಅಧಿಕಾರಿಗಳು ಸೂಚಿಸಿದ್ದನ್ನು ವಿರೋಧಿಸಿ …

Read More »

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 26,964 ಕೋವಿಡ್ ಪ್ರಕರಣ ಪತ್ತೆ : 34,167 ಮಂದಿ ಗುಣಮುಖ

ನವ ದೆಹಲಿ : ಭಾರತದಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ 26,964 ಹೊಸ ಪ್ರಕರಣಗಳು ಪತ್ತೆಯಾಗಿದ್ದು 383 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ (ಸೆಪ್ಟೆಂಬರ್ 22) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ. ಕಳೆದ 24ಗಂಟೆಗಳಲ್ಲಿ ಕೋವಿಡ್ ಸೋಂಕಿನಿಂದ 383 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಕೋವಿಡ್ ನಿಂದ ಒಟ್ಟು 4,45,768 ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಇದೆ ಅವಧಿಯಲ್ಲಿ 34,167 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಇದರೊಂದಿಗೆ ಒಟ್ಟು 3,27,83,741 …

Read More »