Breaking News

Daily Archives: ಸೆಪ್ಟೆಂಬರ್ 21, 2021

ಬೆಳಗಾವಿಯಲ್ಲಿ ಎಂಇಎಸ್‌ನಿಂದ ದಿನಕ್ಕೊಂದು ನಾಟಕ; ಭಾಷಾ ರಾಜಕಾರಣದ ಹೆಸರಲ್ಲಿ ವಿಷಬೀಜ ಬಿತ್ತಲು ಪ್ರಯತ್ನ

ಬೆಳಗಾವಿ: ಜಿಲ್ಲೆಯಲ್ಲಿ ಎಂಇಎಸ್‌ನಿಂದ (Maharashtra Ekikaran Samiti -MES) ದಿನಕ್ಕೊಂದು ವಿಚಾರದಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕವೂ ಪದೇಪದೇ ಸಾಮಾಜದ ಸ್ವಾತ್ಯವನ್ನು ಹಾಳು ಮಾಡುವ ಪ್ರಯತ್ನಗಳು ನಡೆಯುತ್ತಿದೆ ಎಂದು ಆರೋಪಗಳು ಕೇಳಿ ಬಂದಿವೆ. ಭಾಷಾ ರಾಜಕಾರಣದ ಹೆಸರಲ್ಲಿ ವಿಷಬೀಜ ಬಿತ್ತಲು ಪ್ರಯತ್ನ ಗಣೇಶ ವಿಸರ್ಜನೆ ವೇದಿಕೆ ಮೇಲೆ ಕನ್ನಡ ನಾಮಫಲಕವಷ್ಟೇ ಇದ್ದಿದ್ದಕ್ಕೆ ಎಂಇಎಸ್ ಖ್ಯಾತೆ ತೆಗೆದಿದೆ. ಇಷ್ಟೇ ಅಲ್ಲದೆ ಎಂಇಎಸ್ ಪುಂಡರ ವಿರುದ್ಧ …

Read More »

ಮೈಸೂರು ರಾಜಮನೆತನದ ಆನೆಗಳನ್ನು ಗುಜರಾತ್​ಗೆ ಕಳುಹಿಸಲು ನಿರ್ಧಾರ; ಕಾರಣ ಇಲ್ಲಿದೆ

ಮೈಸೂರು: ರಾಜಮನೆತನದ ಆನೆಗಳನ್ನು (Elephants) ಗುಜರಾತ್​ಗೆ ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಅರಮನೆಯಲ್ಲಿರುವ ಪ್ರತಿ ಆನೆಗಳನ್ನು ನಿರ್ವಹಣೆ ಮಾಡಲು ದಿನಕ್ಕೆ 10 ಸಾವಿರ ರೂ. ಖರ್ಚಾಗುತ್ತಿದೆ. ತಿಂಗಳಿಗೆ 6 ಆನೆಗಳ ನಿರ್ವಹಣೆಗೆ ಸುಮಾರು 18 ಲಕ್ಷ ರೂ. ವೆಚ್ಚವಾಗುತ್ತಿದೆ. ಹೀಗಾಗಿ ನಾಲ್ಕು ಆನೆಗಳನ್ನು ಗುಜರಾತ್​ಗೆ ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಸದ್ಯ ಆರು ಆನೆಗಳಿದ್ದು, ಇದರಲ್ಲಿ ನಾಲ್ಕು ಆನೆಗಳು ಗುಜರಾತ್​ಗೆ ಕಳುಹಿಸಲಾಗುತ್ತದೆ. ಇನ್ನುಳಿದ ಎರಡು ಆನೆಗಳು ಅರಮನೆಯಲ್ಲೇ ಉಳಿದುಕೊಳ್ಳಲಿವೆ. ಅರಮನೆ ಆನೆಗಳು ದಸರಾ …

Read More »

ಕಾರ್ಮಿಕ ಇಲಾಖೆ ಫುಡ್ ಕಿಟ್ ವಿತರಣೆಯಲ್ಲಿ ಅವ್ಯವಹಾರ, ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್

ಬೆಳಗಾವಿ: ಕಾರ್ಮಿಕ ಇಲಾಖೆ ಫುಡ್ ಕಿಟ್ ಅಕ್ರಮ ದಾಸ್ತಾನು ಆರೋಪ ಕೇಳಿ ಬಂದಿದೆ. ಫುಡ್ ಕಿಟ್ಗಳನ್ನು ಹಳೆ ಬೆಳಗಾವಿಯ ಸಾಯಿ ಭವನದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗುತ್ತಿದ್ದು ಲಾಕ್‌ಡೌನ್ ವೇಳೆ ಕಾರ್ಮಿಕರಿಗೆ ನೀಡಬೇಕಿದ್ದ ಫುಡ್ ಕಿಟ್ಗಳನ್ನು ಬಿಜೆಪಿ ಕಾರ್ಯಕರ್ತರ ಮನೆಗೆ ರವಾನೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಅವಧಿ ಮುಗಿದ ಫುಡ್ ಕಿಟ್ ವಿತರಣೆ ಪ್ರಶ್ನಿಸಿದ್ದಕ್ಕೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತೆ ಸರಳಾ ಸಾತಪೂತೆ ಬೆಳಗಾವಿಯ ಶಹಾಪುರ …

Read More »

ಸದನದಲ್ಲಿ ಬೆಲೆ ಏರಿಕೆ ಗದ್ದಲ: ಬಿಜೆಪಿಯದ್ದು ಲೂಟಿ ಸರ್ಕಾರ ಎಂದ ‘ಸಿದ್ದು’; ‘ಭೂತದ ಬಾಯಲ್ಲಿ ಭಗವದ್ಗೀತೆ’ ಎಂದು ವಿಪಕ್ಷಗಳಿಗೆ ಸಿಎಂ ಬೊಮ್ಮಾಯಿ ‘ಗುದ್ದು’

ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ಬೆಲೆ ಏರಿಕೆ ವಿಚಾರ ಮತ್ತೆ ಪ್ರತಿಧ್ವನಿಸಿದ್ದು, ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಪರಸ್ಪರ ವಾಕ್ಸಮರ, ವಾಗ್ದಾಳಿಗಳಿಗೆ ಕಾರಣವಾಗಿದೆ. ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಉತ್ತರಿಸಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದು ನಿಜ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ ಆದರೆ ಅದಕ್ಕೆ ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆಯಾಗಿರುವುದು ಮಾತ್ರ ಕಾರಣವಲ್ಲ, ಬೇರೆ ಬೇರೆ ಕಾರಣಗಳಿಂದ ಬೆಲೆ …

Read More »

ನಾವೇನು ಕಾಫಿ-ಟೀ ಕುಡಿಯಲು ಇಲ್ಲಿಗೆ ಬರಬೇಕಾ’: ಶಿವಲಿಂಗೇಗೌಡ

ನಾವೇನು ಕಾಫಿ-ಟೀ ಕುಡಿಯಲು ಇಲ್ಲಿಗೆ ಬರಬೇಕಾ’ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸ್ಪೀಕರ್​ ಸ್ಥಾನದಲ್ಲಿ ಕುಮಾರ್ ಬಂಗಾರಪ್ಪ ಅವರನ್ನು ಖಾರವಾಗಿ ಪ್ರಶ್ನಿಸಿದರು. ಬೆಂಗಳೂರು: ‘ನೀವು ಕೂತ್ಕೊ ಅಂದ್ರೆ ಕೈಮುಗಿದು ಕೂತು ಬಿಡ್ತೀನಿ. ನಮಗೂ ಮಾತಾಡೋಕೆ ಅವಕಾಶ ಕೊಡಿ. ನಾವೇನು ಕಾಫಿ-ಟೀ ಕುಡಿಯಲು ಇಲ್ಲಿಗೆ ಬರಬೇಕಾ’ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸ್ಪೀಕರ್​ ಸ್ಥಾನದಲ್ಲಿ ಕುಮಾರ್ ಬಂಗಾರಪ್ಪ ಅವರನ್ನು ಖಾರವಾಗಿ ಪ್ರಶ್ನಿಸಿದರು. ವಿಧಾನಸಭೆಯಲ್ಲಿ ಬೆಲೆ ಏರಿಕೆ ಬಗ್ಗೆ ನಡೆಯುತ್ತಿದದ ಚರ್ಚೆಗೆ ಉತ್ತರ …

Read More »

ನನ್ನ ಕ್ಷೇತ್ರದಲ್ಲಿ ಒಂದೇ ಒಂದು ಮನೆ ಕೊಡಿಸಲು ಸಾಧ್ಯವಾಗಿಲ್ಲ: ಸಿದ್ದರಾಮಯ್ಯ

ಬೆಂಗಳೂರು, ಸೆ. 20: `ಪ್ರತಿಪಕ್ಷ ನಾಯಕನಾಗಿ ನಾನು ಪ್ರತಿನಿಧಿಸುವ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ವರ್ಷಗಳಿಂದ ವಸತಿ ರಹಿತರಿಗೆ ಒಂದೇ ಒಂದು ಮನೆ ಕೊಡಿಸಲು ಸಾಧ್ಯವಾಗಿಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಪಕ್ಷೇತರ ಸದಸ್ಯ ಶರತ್ ಬಚ್ಚೇಗೌಡ ಕೇಳಿದ ಪ್ರಶ್ನೆಗೆ ವಸತಿ ಸಚಿವ ವಿ.ಸೋಮಣ್ಣ ನೀಡಿದ ಉತ್ತರದಿಂದ ಅಸಮಾಧಾನಗೊಂಡ ಅವರು, ನಾನು ಸಿಎಂ ಆಗಿದ್ದ 5 ವರ್ಷದ ಅವಧಿಯಲ್ಲಿ ಒಟ್ಟು 5ಲಕ್ಷ ಮನೆಗಳನ್ನು …

Read More »

ಕಲಬುರಗಿ ಪಾಲಿಕೆ; JDS ಜತೆ ಮೈತ್ರಿ ಮಾತುಕತೆಗೆ ಸಿದ್ದರಾಮಯ್ಯನೇ ಬರಲೀ ಎಂದು HDK ಪಟ್ಟು ಹಿಡಿದಿದ್ಯಾಕೆ?

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಪೂರ್ಣ ಬಹುಮತ ಸಿಗದೆ ಅತಂತ್ರವಾಗಿದೆ. ಕಾಂಗ್ರೆಸ್, ಬಿಜೆಪಿ ಯಾರೇ ಅಧಿಕಾರಕ್ಕೆ ಬರಬೇಕಾದರೂ ಜೆಡಿಎಸ್ ಬೆಂಬಲ ಅತ್ಯಗತ್ಯ. ಆದರೆ, ಜೆಡಿಎಸ್ (JDS) ಮೇಯರ್ ಸ್ಥಾನವನ್ನು ಯಾರು ಬಿಟ್ಟುಕೊಡುತ್ತಾರೋ ಅವರಿಗೆ ನಮ್ಮ ಬೆಂಬಲ ಎಂದು ಪಟ್ಟು ಹಿಡಿದಿದೆ. ಇನ್ನು ಜೆಡಿಎಸ್ನೊಂದಿಗೆ ಯಾವುದೇ ಕಾರಣಕ್ಕೂ ಮೈತ್ರಿ ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಹೇಳಿಕೆ ಹಿಂದೆಯೂ ಕೆಲವು ಲೆಕ್ಕಾಚಾರ ಇರುವುದನ್ನು ಅಲ್ಲಗಳೆಯುವಂತಿಲ್ಲ. ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ …

Read More »

ಉತ್ತರದ ಮತ್ತೊಂದು ಜೆಡಿಎಸ್‌ ವಿಕೆಟ್‌ ಪತನ?

ಹುಬ್ಬಳ್ಳಿ: ಜಾತ್ಯತೀತ ಜನತಾದಳ(ಜೆಡಿಎಸ್‌)ದಲ್ಲಿ ನಾಯಕರ ನಿರ್ಗಮನ ಪರ್ವ ಮುಂದುವರಿದಿದ್ದು, ಉತ್ತರ ಕರ್ನಾಟಕದ ಜೆಡಿಎಸ್‌ ನಾಯಕ, ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಅವರು ಜೆಡಿಎಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದಾರೆಯೇ? ಜೆಡಿಎಸ್‌ ವರಿಷ್ಠರ ಉದಾಸೀನತೆ, ಕ್ಷೇತ್ರದ ಜನತೆ ಆಶಯ, ಕೋನರಡ್ಡಿಯವರ ನಡೆ ಗಮನಿಸಿದರೆ ಅಂತಹ ಅನುಮಾನ ವ್ಯಕ್ತವಾಗುತ್ತಿದ್ದು, ಪಾಲಿಕೆ ಚುನಾವಣೆ ಸೋಲಿನ ನೆಪದಡಿ ಕೋನರಡ್ಡಿ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿರುವುದು ಈ ವಿದ್ಯಮಾನಕ್ಕೆ ಇಂಬು ನೀಡತೊಡಗಿದೆ. ಎನ್‌.ಎಚ್‌. …

Read More »

ಎರಡು ಬಾರಿ ರಾಜ್ಯ ಸಭಾ ಸ್ಥಾನವನ್ನು ತಿರಸ್ಕರಿಸಿದ್ದೇನೆ -ಸೋನು ಸೂದ್

ಬಹುಭಾಷಾ ನಟ ಸೋನು ಸೂದ್​ ತಾವು ಎರಡು ಬಾರಿ ರಾಜ್ಯ ಸಭಾ ಸ್ಥಾನವನ್ನು ತಿರಸ್ಕರ ಮಾಡಿದ್ದು, ರಾಜಕೀಯ ಪ್ರವೇಶಕ್ಕೆ ತಾವು ಇನ್ನು ಸಿದ್ಧರಾಗಿರಲ್ಲ ಎಂದು ಹೇಳಿದ್ದಾರೆ. ಐಟಿ ದಾಳಿ ನಡೆದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್​, ರಾಜಕೀಯ ಸೇರ್ಪಡೆ ಕುರಿತು ಎರಡು ಪಕ್ಷಗಳಿಂದ ಆಫರ್ ಬಂದಿದೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿರೋ ಅವರು, ಮಾನಸಿಕವಾಗಿ ನಾನು ಇನ್ನು ರಾಜಕೀಯಕ್ಕೆ ಸಿದ್ಧವಾಗಿಲ್ಲ. ಈಗ ನಾನು ಮಾಡುತ್ತಿರೋ ಕೆಲಸದಲ್ಲೇ …

Read More »

ಮೊದಲು ರೊಟ್ಟಿ ಮಾಡೋದು ಕಲಿತುಕೋ, ಆಮೇಲೆ ಪ್ರತಿಭಟನೆ ಮಾಡುವಿಯಂತೆ;: ಬಾಗಲಕೋಟೆ D.C.

ಬಾಗಲಕೋಟೆ: ಪ್ರತಿಭಟನಾನಿರತ ವಿದ್ಯಾರ್ಥಿನಿಯೊಬ್ಬಳಿಗೆ ‘ಮೊದಲು ರೊಟ್ಟಿ ಮಾಡೋದು ಕಲಿತುಕೋ, ಆಮೇಲೆ ಪ್ರತಿಭಟನೆ ಮಾಡುವಿಯಂತೆ’ ಎಂದು ಜಿಲ್ಲಾಧಿಕಾರಿಯೊಬ್ಬರು ಮಾತಿನಲ್ಲೇ ಕುಟುಕಿದ ಪ್ರಸಂಗವೊಂದು ನಡೆದಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ಮೈಸೂರಿನಲ್ಲಿನ ದೇಗುಲ ತೆರವು ಖಂಡಿಸಿ ಬಾಗಲಕೋಟೆಯಲ್ಲಿ ನಡೆಸಿದ್ದ ಪ್ರತಿಭಟನೆ ವೇಳೆ ಈ ಸನ್ನಿವೇಶ ಕಂಡುಬಂದಿದೆ. ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದವರು ಬಳಿಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲು ಹೋಗಿದ್ದಾರೆ. ಪ್ರತಿಭಟನಾಕಾರರು ಮನವಿ ಸಲ್ಲಿಸಿ ಮರಳುವ ಸಂದರ್ಭದಲ್ಲಿ …

Read More »