Breaking News

Daily Archives: ಸೆಪ್ಟೆಂಬರ್ 18, 2021

ದೇಶದಲ್ಲಿ ಅತೀ ಹೆಚ್ಚು ಲಸಿಕೆ ನೀಡುವುದರಲ್ಲಿ ದ್ವಿತೀಯ ಸ್ಥಾನ‌ ಗಳಿಸಿದ ಹೆಮ್ಮೆ ಬೆಳಗಾವಿ ಜಿಲ್ಲೆಗೆ: ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ:  ಸೆಪ್ಟೆಂಬರ್​ 17 ರಂದು ನಡೆದ ಮೆಗಾ‌ ಲಸಿಕಾ ಮೇಳದಲ್ಲಿ ಇಡೀ ದೇಶದಲ್ಲಿಯೇ ಬೆಳಗಾವಿ ಜಿಲ್ಲೆಯು ಎರಡನೇ ಸ್ಥಾನ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 4,09,977 ಲಸಿಕೆ ನೀಡುವ ಮೂಲಕ ಪ್ರಥಮ ಸ್ಥಾನ ಪಡೆದಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸೆಪ್ಟೆಂಬರ್​ 17 ರಂದು‌‌ ಒಂದೇ ದಿನದಲ್ಲಿ 2,57,604 ಲಸಿಕೆ ನೀಡುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ. ಬೆಳಗಾವಿ ಜಿಲ್ಲೆಯು …

Read More »

ನಾವು ಸತ್ರೂ ಲಸಿಕೆ ಹಾಕಿಸಿಕೊಳ್ಳಲ್ಲ; ವಿಡಿಯೋ ಫುಲ್ ವೈರಲ್

ಕೊಪ್ಪಳ: ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಇರುವ ಅಸ್ತ್ರವೆಂದರೆ ಅದು ಕೊರೊನಾ ಲಸಿಕೆ. ಆದರೆ ಕೊರೊನಾ ಲಸಿಕೆ ಪಡೆಯಲು ವ್ಯಕ್ತಿಯೊಬ್ಬರು ಹಿಂದೇಟು ಹಾಕಿರುವ ಘಟನೆ ಕೊಪ್ಪಳ ತಾಲೂಕಿನ ಇರಕಲ್ ಗಡ ಗ್ರಾಮದಲ್ಲಿ ನಡೆದಿದೆ. ಲಸಿಕೆ ಪಡೆಯುವುದರಿಂದ ಏನು ಪ್ರಯೋಜನ ಅಂತ ವ್ಯಕ್ತಿ ಪ್ರಶ್ನೆ ಮಾಡಿದ್ದಾರೆ. ಅಧಿಕಾರಿಗಳು ಎಷ್ಟೇ ಮನವೊಲಿಸಿದರೂ ಲಸಿಕೆ ಪಡೆಯಲು ವ್ಯಕ್ತಿ ನಿರಾಕರಣೆ ಮಾಡಿದ್ದು, ಗಲಾಟೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ನಾವು ಹೀಗೆ ಸಾಯಲಿ, ಲಸಿಕೆ ಹಾಕಿಸಿಕೊಳ್ಳುವುದಿಲ್ಲ …

Read More »

ಇಲ್ಲಿನ ಎಲ್ಲ ವಿದ್ಯಾರ್ಥಿಗಳು ದಿನನಿತ್ಯ ಎಲ್ಲಾ ವಿದ್ಯಾರ್ಥಿಗಳು 18 ಕಿ.ಮೀ. ದೂರ ಪ್ರಯಾಣ ಮಾಡಿದರಷ್ಟೇ ಶಾಲಾ ಕಾಲೇಜು ಗಳಿಗೆ ತಲುಪಲು ಸಾಧ್ಯ.

ಬಸ್ ಸೌಲಭ್ಯ ವಂಚಿತ ವಿದ್ಯಾರ್ಥಿಗಳು *ಇಲ್ಲಿನ ಎಲ್ಲ ವಿದ್ಯಾರ್ಥಿಗಳು ದ ಮೂಡಲಗಿ ತಾಲೂಕಿನ ಪಿಜಿ ಹುಣಶಾಳ ಗ್ರಾಮದಲ್ಲಿ: ಸಾರಿಗೆ ಸಂಸ್ಥೆ ಬಸ್‌ ಸಕಾಲಕ್ಕೆ ಆಗಮಿಸದೇ ಇರುವುದರಿಂದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗೆ ಸಮಯಕ್ಕೆ ಸರಿಯಾಗಿ ತಲುಪಲಾಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕೋವಿಡ್‌ ಮಾರ್ಗಸೂಚಿ ತೆರವಾದ ನಂತರ ಗ್ರಾಮೀಣ ಪ್ರದೇಶದಲ್ಲಿ ಬಸ್‌ಗಳ ಸೇವೆ ಅಪರೂಪವಾಗಿದೆ. ಮುಖ್ಯ ರಸ್ತೆಗಳು ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಕಡೆಯಲ್ಲೂ ಪೂರ್ಣ ಪ್ರಮಾಣದಲ್ಲಿ ಬಸ್‌ ಸೇವೆ ಆರಂಭಗೊಂಡಿಲ್ಲ. ಇದರಿಂದ …

Read More »

2 ವರ್ಷದ ಕಂದಮ್ಮನೊಂದಿಗೆ ಮನೆಬಿಟ್ಟಿದ್ದ ತಾಯಿ.. ಇಬ್ಬರ ಮೃತದೇಹ ಬಾವಿಯಲ್ಲಿ ಪತ್ತೆ

ಚಿಕ್ಕೋಡಿ: ತಾಯಿ ಹಾಗೂ ಮಗುವಿನ ಮೃತ ದೇಹ ತೆರೆದ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದೇವಾಪೂರಹಟ್ಟಿ ಗ್ರಾಮದಲ್ಲಿ ನಡೆದಿದೆ. ದೇವಾಪೂರಹಟ್ಟಿ ಗ್ರಾಮದ ರುಕ್ಮವ್ವ ಹಳಿಂಗ (38) ಹಾಗೂ ಮಗಳು ಅನ್ವಿತಾ ಹಳಿಂಗ (2) ಸಾವನ್ನಪ್ಪಿದರ ದುರ್ದೈವಿಗಳಾಗಿದ್ದು, ದೇವನಕಟ್ಟಿ ಗ್ರಾಮದ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಗುರುವಾರ ಸಾಯಂಕಾಲ ಮನೆಯಿಂದ ಮಹಿಳೆ ರುಕ್ಮವ್ವ ತನ್ನ ಎರಡು ವರ್ಷದ ಮಗಳೊಂದಿಗೆ ಹೊರ ಬಂದಿದ್ದರು ಎನ್ನಲಾಗಿದೆ. ಆದರೆ ತಾಯಿ, ಮಗುವಿನ ಸಾವಿನ …

Read More »

ವಿಷ್ಣುವರ್ಧನ್ ಜನ್ಮದಿನ: ವಿಷ್ಣು ದಾದಾಗೆ​ ಸೆಲೆಬ್ರಿಟಿಗಳು ವಿಶ್​ ಮಾಡ್ತಿರೋದು ಹೀಗೆ..

ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ವಿಷ್ಣುವರ್ಧನ್​ ಜೊತೆ ತಾವಿರುವ ಫೋಟೋಗಳನ್ನು ಶೇರ್​ ಮಾಡಿಕೊಂಡು ಸಾಹಸ ಸಿಂಹನಿಗೆ ವಿಶ್​ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್​, ರಮೇಶ್​ ಅರವಿಂದ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಂದ ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯಗಳು ಹರಿದುಬರುತ್ತಿವೆ. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದವರು ನಟ ವಿಷ್ಣುವರ್ಧನ್​. ಅಭಿಮಾನಿಗಳ ಪಾಲಿನ ‘ಸಾಹಸ ಸಿಂಹ’ನಾಗಿ ಅವರು ತೆರೆಮೇಲೆ ಮಿಂಚಿದರು. 200 ಸಿನಿಮಾಗಳಲ್ಲಿ ನಟಿಸಿ ಬಣ್ಣದ ಲೋಕದಲ್ಲಿ ಅಮರರಾದರು. ಇಂದು (ಸೆ.18) ವಿಷ್ಣುವರ್ಧನ್​ ಜನ್ಮದಿನ. ಅವರು ಭೌತಿಕವಾಗಿ ಬದುಕಿದಿದ್ದರೆ …

Read More »

ದರ್ಶನ್ ಮಾಲೀಕತ್ವದ ಫಾರ್ಮ್ ಹೌಸ್‌ನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ

ಮೈಸೂರು: ನಟ ದರ್ಶನ್ ಮಾಲೀಕತ್ವದ ಫಾರ್ಮ್ ಹೌಸ್‌ನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಿ. ನರಸೀಪುರ ರಸ್ತೆಯಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಕೆಲಸ‌ ಮಾಡಿಕೊಂಡಿದ್ದ ಶಿವಮೊಗ್ಗ ಮೂಲದ ಕುಟುಂಬವೊಂದರ ಅಪ್ರಾಪ್ತೆ ಮೇಲೆ ಸೋಮವಾರ ರಾತ್ರಿ ಅದೇ ತೋಟದಲ್ಲಿ ಕುದುರೆಗೆ ಲಾಳ ಹೊಡೆಯುವ ಕೆಲಸ ಮಾಡಿಕೊಂಡಿದ್ದ ಕಾರ್ಮಿಕ ಅತ್ಯಾಚಾರ ಎಸಗಿದ್ದಾನೆ. ಘಟನೆ ಬಗ್ಗೆ ಬಾಲಕಿ ಪೋಷಕರಿಗೆ ಮೂರು ದಿನಗಳ ಬಳಿಕ ತಿಳಿಸಿದ್ದು, ಪೋಷಕರಿಗೆ ವಿಷಯ ತಿಳಿದ ಕೂಡಲೇ ಸ್ಥಳೀಯ …

Read More »

ಆರ್ಡರ್ ಮಾಡಿದ ಬರ್ಗರ್ ನಲ್ಲಿ ಸಿಕ್ತು ಮನುಷ್ಯನ ಕೈ ಬೆರಳು

ಆನ್ ಲೈನ್ ಶಾಪಿಂಗ್ ಮಾಡುವಾಗ ಒಮ್ಮೊಮ್ಮೆ ಮೋಸಗಳು ಆಗುತ್ತದೆ. ನಾವು ಆರ್ಡರ್ ಮಾಡಿದ್ದೇ ಒಂದು..ಬಂದಿರೋದೇ ಒಂದು ಆಗಿರುತ್ತದೆ. ಆದರೆ ಈ ಸುದ್ದಿ ಕೇಳಿದ್ರೆ ಮಾತ್ರ ನೀವು ಬೆಚ್ಚಿ ಬೀಳ್ತೀರಾ..! ಹೌದು, ಮಹಿಳೆಯೊಬ್ಬರು ಆರ್ಡರ್ ಮಾಡಿದ ಬರ್ಗರ್​ನಲ್ಲಿ ಮನುಷ್ಯನ ಬೆರಳು ಸಿಕ್ಕು ಬೆಚ್ಚಿಬೀಳಿಸಿದ ಘಟನೆ ಬೊಲಿವಿಯಾದಲ್ಲಿ ವರದಿಯಾಗಿದೆ. ಮಹಿಳೆಯೊಬ್ಬರು ರೆಸ್ಟೋರೆಂಟ್ ನಿಂದ ಬರ್ಗರ್ ಆರ್ಡರ್ ಮಾಡಿದ್ದಾರೆ, ಆದರೆ ಮನೆಗೆ ಬಂದ ಪಾರ್ಸೆಲ್ ತೆಗೆದುನೋಡಿದಾಗ ಮಹಿಳೆ ಹೌ ಹಾರಿದ್ದಾಳೆ. ಆರ್ಡರ್ ಮಾಡಿದ ಬರ್ಗರ್ …

Read More »

ನಮ್ಮ ರಕ್ಷಣೆಗಾಗಿ ತಲ್ವಾರ್, ಕತ್ತಿಯಂತಹ ಶಸ್ತ್ರಗಳನ್ನು ಇಡಬೇಕು : ಪ್ರಚೋದನಕಾರಿ ಹೇಳಿಕೆ ಪ್ರಮೋದ್ ಮುತಾಲಿಕ್

ಧಾರವಾಡ: ಮತ್ತೆ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಕ್ಕೆ ಕಾರಣರಾಗಿದ್ದಾರೆ. ಎಲ್ಲಾ ದೇವರುಗಳ ಕೈಯಲ್ಲಿ ಶಸ್ತ್ರಗಳಿವೆ, ದೇವರಿಗೆ ನಮಸ್ಕರಿಸುವಾಗ ಪ್ರತಿದಿನ ಶಸ್ತ್ರಾಸ್ತ್ರಗಳನ್ನು ನೋಡುತ್ತೇವೆ. ಆದರೆ ನಮ್ಮ ಮನೆಗಳಲ್ಲಿ ಈಗ ಒಂದೇ ಒಂದು ಶಸ್ತ್ರಗಳು ಇಲ್ಲದಂತಾಗಿದೆ. ನಮ್ಮ ರಕ್ಷಣೆಗಾಗಿ ತಲ್ವಾರ್, ಕತ್ತಿಯಂತಹ ಶಸ್ತ್ರಗಳನ್ನು ಇಡಬೇಕು ಎಂದು ಹೆಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಮುತಾಲಿಕ್ ಹೇಳಿಕೆ ಇದೀಗ ಭಾರಿ ವೈರಲ್ ಆಗಿದ್ದು ವಿವಾದಕ್ಕೆ ಕಾರಣವಾಗಿದೆ. ನಾಳೆ ಬೀದಿ ಕಾಳಗಗಳು ನಡೆಯುತ್ತೆ. …

Read More »

ದೇವಾಲಯ ತೆರವು ಮುಂದುವರಿಸಿದರೆ ಅಧಿಕಾರಿಗಳ ಹೆಣ ಎತ್ತುತ್ತೇವೆ: ಸತೀಶ್‌ ಪೂಜಾರಿ

ದಾವಣಗೆರೆ: ‘ರಾಜ್ಯದಲ್ಲಿ ದೇವಾಲಯಗಳ ತೆರವು ಕಾರ್ಯಾಚರಣೆ ಮುಂದುವರಿಸಿದರೆ ನಡುಬೀದಿಯಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಸೇರಿ ಅಧಿಕಾರಿಗಳ ಹೆಣ ಎತ್ತುತ್ತೇವೆ’ ಎಂದು ಹಿಂದೂ ಜಾಗರಣ ವೇದಿಕೆಯ ಶಿವಮೊಗ್ಗ ವಿಭಾಗದ ಪ್ರಧಾನ ಕಾರ್ಯದರ್ಶಿ ಸತೀಶ್‌ ಪೂಜಾರಿ ಹೇಳಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹುಚ್ಚಗಳ್ಳಿ ಮಹಾದೇವಮ್ಮ ಭೈರವೇಶ್ವರ ಮಂದಿರವನ್ನು ತೆರವುಗೊಳಿಸಿರುವುದನ್ನು ಖಂಡಿಸಿ ನಗರದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಅವರ ಈ ಹೇಳಿಕೆಯ ವಿಡಿಯೊ ಶುಕ್ರವಾರ ಎಲ್ಲೆಡೆ ಹರಿದಾಡಿದೆ. ಈ ಕುರಿತು  ಪ್ರತಿಕ್ರಿಯಿಸದ ಸತೀಶ್‌ …

Read More »

ಧರ್ಮಗಳಿಗೆ ನೋವುಂಟು ಮಾಡಿದರೆ ಒಳ್ಳೆಯಾಗುವುದಿಲ್ಲ: ಶೋಭಾ ಕರಂದ್ಲಾಜೆ

ಉಡುಪಿ: ಯಾವುದೇ ಸಮುದಾಯ ಅಥವಾ ಧರ್ಮಗಳಿಗೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗುವುದಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ದೇವಸ್ಥಾನ ಧ್ವಂಸ ವಿಚಾರದಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆಯ ವಿಚಾರವಾಗಿ ಉಡುಪಿಯಲ್ಲಿ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಶ್ರದ್ಧಾ ಕೇಂದ್ರಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಅಕ್ರಮ ಸ್ಥಳಗಳಲ್ಲಿ ಶ್ರದ್ಧಾ ಕೇಂದ್ರಗಳು ನಿರ್ಮಾಣವಾಗಿದ್ದರೆ ಪೂರ್ವ ಸೂಚನೆ ನೀಡಬೇಕು. ತೆರವುಗೊಳಿಸುವುದು …

Read More »