Breaking News

Daily Archives: ಸೆಪ್ಟೆಂಬರ್ 18, 2021

ಗಾಂಧೀಜಿಯನ್ನೇ ಬಿಟ್ಟಿಲ್ಲ, ಇನ್ನು ನೀವ್ಯಾವ ಲೆಕ್ಕ? ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ವಿವಾದಾತ್ಮಕ ಹೇಳಿಕೆ

ಮಂಗಳೂರು: ಹಿಂದೂಗಳ ಮೇಲೆ ನಡೆದ ದಾಳಿ ಖಂಡಿಸಿ ಗಾಂಧೀಜಿಯನ್ನೇ ಹತ್ಯೆ ಮಾಡಿದ್ದೇವೆ. ಇನ್ನು ನೀವು ಯಾವ ಲೆಕ್ಕ? ಎಂದು ಮಂಗಳೂರಿನಲ್ಲಿ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೇ ದೇವಸ್ಥಾನ ಕೆಡವಿದ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ. ನಾವು ಗಾಂಧೀಜಿಯನ್ನೇ ಬಿಟ್ಟಿಲ್ಲ ಸ್ವಾಮಿ, ಹಿಂದೂಗಳ ಮೇಲೆ ನಡೆದ ದಾಳಿ ಖಂಡಿಸಿ ಗಾಂಧೀಜಿಯನ್ನೇ ಹತ್ಯೆ ಮಾಡಿದ್ದೇವೆ. ಹೀಗಿರುವಾಗ ನಿಮ್ಮ ವಿಚಾರದಲ್ಲಿ ಅಲೋಚನೆ ಮಾಡಕ್ಕೆ ಅಗಲ್ಲ ಅಂತೀರಾ? …

Read More »

ನಿಯಮ ಉಲ್ಲಂಘಿಸಿ ಪಂಚಾಯಿತಿ ಕಟ್ಟಡ ನಿರ್ಮಾಣ ಕಾಮಗಾರಿ

ಹೊಸಪೇಟೆ (ವಿಜಯನಗರ): ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಾಲ್ಲೂಕಿನ ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು ಆರೋಪಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಪುಷ್ಪಾವತಿ ದೇವರಮನೆ, ವಿ, ಶಾಂತಾ, ಭುವನೇಶ್ವರಿ, ಶಿವರಾಜ ವೆಂಕೋಬಪ್ಪ, ಮುಖಂಡರಾದ ಕೋರಿ ಫಕೀರಪ್ಪ, ಮೂಕಪ್ಪ, ಎನ್‌. ನಾರಾಯಣಪ್ಪ ಶನಿವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಹೊಸ ಕಾಮಗಾರಿ ಕೈಗೆತ್ತಿಗೊಳ್ಳಬೇಕಾದರೆ ತಾಲ್ಲೂಕು ಪಂಚಾಯಿತಿ …

Read More »

ಬೈಲಹೊಂಗಲ : ಗ್ರಾಮ ಪಂಚಾಯತ್ ಸದಸ್ಯನಿಗೆ ಕಪಾಳ ಮೋಕ್ಷ ಮಾಡಿದ ಪಿಡಿಓ

ಬೈಲಹೊಂಗಲ : ಗ್ರಾ.ಪಂ ಸದಸ್ಯನೋರ್ವನಿಗೆ ಪಿಡಿಓ ಓರ್ವನು ಕ್ಷುಲ್ಲಕ ಕಾರಣಕ್ಕೆ ಕಪಾಳ ಮೋಕ್ಷ ಮಾಡಿ ಘಟನೆ ತಾಲೂಕಿನ ನಾಗನೂರ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ. ನಾಗನೂರ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ಉಣಕಲ್ಲ ಎಂಬವರಿಗೆ ನಾಗನೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವಿನಾಶ ಅಂಗರಗಟ್ಟಿ ಅವರು ಕಪಾಳಮೋಕ್ಷ ಮಾಡಿದ್ದಾರೆ. ಘಟನೆ ವಿವರ : ನಾಗನೂರು ಗ್ರಾಮದ ಓರ್ವ ವ್ಯಕ್ತಿಯ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳ ಬಗ್ಗೆ ಪಿಡಿಓ ಅವರನ್ನು ಸದಸ್ಯ ಬಸವರಾಜ ಉಣಕಲ್ಲ …

Read More »

ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಹೆಸರಲ್ಲಿ ನಕಲಿ ಖಾತೆ ತೆರೆದು ವಂಚನೆ: ಖದೀಮರ ಬಂಧನ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಹೆಸರಲ್ಲಿ ನಕಲಿ ಖಾತೆ ತೆರೆದು, ವಂಚಿಸುತ್ತಿದ್ದ ಮೂವರನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ಮುಜಾಹಿದ್, ಇಕ್ಬಾಲ್ ಮತ್ತು ಆಸಿಫ್ ಬಂಧಿತರಾಗಿದ್ದು, ಉಳಿದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಜಾಲತಾಣಗಳಲ್ಲಿ ಪುರುಷರನ್ನು ಪರಿಚಯ ಮಾಡಿಕೊಂಡು ಅವರ ಜತೆ ಸಲುಗೆಯಿಂದ ಮಾತಾಡಿ, ಅವರ ಬೆತ್ತಲೆ ವಿಡಿಯೋವನ್ನು ಸೆರೆಹಿಡಿದು ಈ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡುತ್ತಿತ್ತು ಎಂದು ತಿಳಿದುಬಂದಿದೆ. ಸೈಬರ್ ಖದೀಮರು ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಸೋಗಿನಲ್ಲಿ …

Read More »

ಎಸಿಬಿ ಅಧಿಕಾರಿಗಳು ಇನ್ಸ್​ಪೆಕ್ಟರ್ ರಾಘವೇಂದ್ರ ಹಾಗೂ ಮಧ್ಯವರ್ತಿ ರಾಘವೇಂದ್ರನನ್ನು ಟ್ರ್ಯಾಪ್ ಮಾಡಿ ರೆಡ್​​ ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ಬೆಂಗಳೂರು: 2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಚಿಕ್ಕಜಾಲ ಠಾಣೆಯ ಇನ್ಸ್ಪೆಕ್ಟರ್ (Inspector) ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಚಿಕ್ಕಜಾಲ ಠಾಣೆ ಇನ್ಸ್​ಪೆಕ್ಟರ್ ರಾಘವೇಂದ್ರ ಎಂಬುವವರು ಜಮೀನು ತಕರಾರು ಸಂಬಂಧ 10 ಲಕ್ಷ ರೂ. ಹಣ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಎರಡು ಬಾರಿ ತಲಾ ನಾಲ್ಕು ಲಕ್ಷ ಪಡೆದಿದ್ದರು. ಈಗಾಗಲೇ ಒಟ್ಟು 8 ಲಕ್ಷ ರೂ. ಲಂಚವನ್ನು ಇನ್ಸ್​ಪೆಕ್ಟರ್ ರಾಘವೇಂದ್ರ ಪಡೆದಿದ್ದಾರೆ. 3ನೇ ಬಾರಿ ಕೊನೆಯ ಕಂತಾಗಿ …

Read More »

ನಕಲಿ ಪೊಲೀಸ್​ ಹಾವಳಿ: ಕೈಯಲ್ಲಿ ದೊಣ್ಣೆ ಹಿಡಿದು ಪ್ರತಿಭಟನೆಗೆ ನಿಂತ ವಿದ್ಯಾರ್ಥಿಗಳು

ಧಾರವಾಡ: ಪೊಲೀಸರ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಎಸ್ಕೇಪ್​ ಆದ ಘಟನೆ ನಗರದ ವಿವೇಕಾನಂದ ವೃತ್ತದ ಬಳಿ ನಡೆದಿದೆ.   ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ ಓಡಿ ಹೋಗಿರೋ ಅಪರಿಚಿತ ವ್ಯಕ್ತಿಗಳ ವಿರುದ್ಧ ಪಿಜಿ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ದು ಕೈಯಲ್ಲಿ ದೊಣ್ಣೆ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರ ಜೊತೆ ವಿದ್ಯಾರ್ಥಿಗಳು ಹಾಗೂ ಸ್ಥಳಿಯರ ನಡುವೆ ಮಾತಿನ …

Read More »

ಹಸುಗೂಸಿನ ತಾಯನ್ನು ಕಸಿದ ಕರೊನಾ: 5 ತಿಂಗಳ ಬಾಣಂತಿ ಸಾವು

ಶಿವಮೊಗ್ಗ: ಕರೊನಾ ಸೋಂಕಿಗೆ ಒಳಗಾಗಿದ್ದ ಐದು ತಿಂಗಳ ಬಾಣಂತಿಯೊಬ್ಬರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಸುಗೂಸಿನಿಂದ ದೂರವಾಗಿದ್ದು ಬರೋಬ್ಬರಿ ಮೂರು ತಿಂಗಳು ಜೀವಕ್ಕಾಗಿ ಹೋರಾಡಿದ ಭದ್ರಾವತಿ ತಾಲೂಕಿನ ದಿಗ್ಗೇನಹಳ್ಳಿಯ ಸುಪ್ರಿಯಾ(35) ಮೃತರು. ಸುಪ್ರಿಯಾ ಅವರಿಗೆ ಕರೊನಾ ಸೋಂಕು ದೃಢಪಟ್ಟಿದ್ದ ಕಾರಣಕ್ಕೆ ಜೂನ್ 19 ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಸತತ ಮೂರು ತಿಂಗಳು ಆಸ್ಪತ್ರೆಯಲ್ಲೇ ಇಟ್ಟುಕೊಂಡು ಚಿಕಿತ್ಸೆ ನೀಡಲಾಗಿತ್ತು. ಕೆಲ ದಿನಗಳ ಹಿಂದೆ ಸೋಂಕು ಉಲ್ಬಣಗೊಂಡಾಗ ಅವರನ್ನು ಐಸಿಯುಗೆ …

Read More »

3 ತಿಂಗಳಲ್ಲಿ ಎಲ್ಲರ ಮನೆಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ : ಸಚಿವ ಸುಧಾಕರ್

ಬೆಂಗಳೂರು,ಸೆ.18- ಮುಂದಿನ ಮೂರು ತಿಂಗಳಲ್ಲಿ ಎಲ್ಲರ ಮನೆಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ತಲುಪಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಒಂದೂವರೆ ಕೋಟಿ ಜನರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ನೀಡಲಾಗಿದ್ದು, ಆರೋಗ್ಯ ಇಲಾಖೆ ಮೂರು ತಿಂಗಳಲ್ಲಿ ಪ್ರತಿ ಕುಟುಂಬಕ್ಕೂ ಆರೋಗ್ಯ ಕಾರ್ಡ್ ನೀಡುವ ಗುರಿ ಹಮ್ಮಿಕೊಂಡಿದ್ದು, ಇನ್ನು ಎರಡೂವರೆ ಕೋಟಿ ಕಾರ್ಡ್‍ಗಳನ್ನು ನೀಡಲಾಗುವುದು ಎಂದರು. ಪ್ರಧಾನಿ ನರೇಂದ್ರಮೋದಿ …

Read More »

ಉಸಿರಾಟದ ತೊಂದರೆಯಿಂದ ಚಿಕ್ಕಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಕೆಮ್ಮು, ನೆಗಡಿ, ಕಫ ಮತ್ತು ಜ್ವರ ಬಂದರೆ ನಿಷ್ಕಾಳಜಿ ತೋರದಂತೆ ವೈದ್ಯರ ಸೂಚನೆ

ಹುಬ್ಬಳ್ಳಿ: ಕೊವಿಡ್ ಬಳಿಕ ಮಕ್ಕಳನ್ನು ನ್ಯುಮೋನಿಯಾ ಕಾಡುತ್ತಿದ್ದು, ಒಂದೇ ವಾರದಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 7 ಮಕ್ಕಳು ಸಾವನ್ನಪ್ಪಿದ್ದಾರೆ. ನ್ಯಮೋನಿಯಾದಿಂದ ಬಳಲುತ್ತಿರುವ 163 ಮಕ್ಕಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿಲಾಗುತ್ತಿದೆ. ಸದ್ಯ ಕಿಮ್ಸ್‌ನ ಮಕ್ಕಳ ವಿಭಾಗದ ಬೆಡ್‌ಗಳು ಸಂಪೂರ್ಣ ಭರ್ತಿಯಾಗಿದ್ದು, 1 ವರ್ಷದ 95 ಮಕ್ಕಳಿಗೆ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 23 ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಸಿರಾಟದ ತೊಂದರೆಯಿಂದ ಚಿಕ್ಕಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಕೆಮ್ಮು, ನೆಗಡಿ, …

Read More »

ಮಕ್ಕಳಲ್ಲಿ ವೈರಲ್ ಸೋಂಕು: ಸಿಲಿಕಾನ್ ಸಿಟಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಹಾಗೂ ಐಸಿಯೂ ಬೆಡ್ ಭರ್ತಿ

ಬೆಂಗಳೂರು: ಕೊರೊನಾ ಮೂರನೇ ಅಲೆಗೂ ಮುನ್ನವೇ ಸಿಲಿಕಾನ್ ಸಿಟಿಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಹಾಗೂ ಐಸಿಯೂ ಬೆಡ್ಗಳು ಭರ್ತಿಯಾಗಿದ್ದು, ಕಳೆದ ಒಂದು ವಾರದಿಂದ ಮಕ್ಕಳಲ್ಲಿ ವೈರಲ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಬೆಡ್ಗಳು ಬಹುತೇಕ ಭರ್ತಿಯಾಗಿದೆ. ಕೆಸಿ ಜನರಲ್, ವಿಕ್ಟೋರಿಯಾ, ಬೌರಿಂಗ್ ವಾಣಿ ವಿಲಾಸ್ ಸೇರದಂತೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಇನ್ನು ಕೆಸಿ ಜನರಲ್ ಆಸ್ಪತ್ರೆಗೆ ನಿತ್ಯ 140-150 ಮಕ್ಕಳು ದಾಖಲಾಗುತ್ತಿದ್ದು, ಮಕ್ಕಳಿಗಾಗಿ 36 …

Read More »