Breaking News
Home / 2021 / ಆಗಷ್ಟ್ (page 71)

Monthly Archives: ಆಗಷ್ಟ್ 2021

ಮಹಿಳಾ ಮತ್ತು ಮಕ್ಕಳ ಖಾತೆ ಕೊಡದೆ ಡಿಮೋಷನ್ ಮಾಡಿದ್ದಾರೆ ಅನ್ನಿಸುದಿಲ್ಲವೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದ ಸಚಿವೆ ಹಾಗೇನೂ ಇಲ್ಲ ಎಂದು ಜಾರಿಕೊಂಡರು.

ಮುದ್ದೇಬಿಹಾಳ: ಮುಖ್ಯಮಂತ್ರಿಗಳು ಕೊಟ್ಟಿರುವ ಹಜ್ ಮತ್ತು ವಕ್ಫ್ ಇಲಾಖೆ ಸಚಿವ ಸ್ಥಾನ ತೃಪ್ತಿ ನೀಡಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು. ಮುದ್ದೇಬಿಹಾಳದಲ್ಲಿ ಪ್ರವಾಹ ನಂತರದ ಪರಿಸ್ಥಿತಿ ವೀಕ್ಷಣೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನಗೆ ಯಾವ ಖಾತೆ ಕೊಟ್ಟರೂ ನಿಭಾಯಿಸುವ ಸಾಮರ್ಥ್ಯ ಇದೆ ಎಂದರು. ನಿಮಗೆ ಮಹಿಳಾ ಮತ್ತು ಮಕ್ಕಳ ಖಾತೆ ಕೊಡದೆ ಡಿಮೋಷನ್ ಮಾಡಿದ್ದಾರೆ ಅನ್ನಿಸುದಿಲ್ಲವೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಸಮರ್ಪಕ ಉತ್ತರ …

Read More »

ನಾನು ಬಯಸಿದ ಖಾತೆಯೇ ಬೇರೆ, ನನಗೆ ಸಿಕ್ಕಿದ್ದೇ ಬೇರೆ: ಸಚಿವ ಆನಂದ್ ಸಿಂಗ್ ಅಸಮಾಧಾನ

ಬೆಂಗಳೂರು: ನನಗೆ ನಿರೀಕ್ಷೆ ಮಾಡಿದ ಖಾತೆಯನ್ನು ಸಿಎಂ ಬೊಮ್ಮಾಯಿಯವರು ಕೊಟ್ಟಿಲ್ಲ, ನಾನು ಬೇರೆ ಉತ್ತಮ ಖಾತೆಯನ್ನು ನಿರೀಕ್ಷೆ ಮಾಡಿದ್ದೆ ಎಂದು ಸಚಿವರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಬಯಸಿದ ಖಾತೆಯೇ ಬೇರೆ, ನನಗೆ ಸಿಕ್ಕಿದ್ದೇ ಬೇರೆ ಎಂದು ಆನಂದ್ ಸಿಂಗ್ ಅವರು ಅಸಮಾಧಾನ ಹೊರಹಾಕಿದ್ದು, ಈ ಬಗ್ಗೆ ನಾಳೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಾತನಾಡುತ್ತೇನೆ, ನೋಡೋಣ ಏನಾಗುತ್ತದೆ, ಆ ಮೇಲೆ ಏನು ಮಾಡುವುದು ಎಂದು …

Read More »

ಯಾರಿಗೆ ಯಾವ ಖಾತೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಉಮೇಶ್​ ಕತ್ತಿ- ಅರಣ್ಯ, ಆಹಾರ ಎಸ್. ಅಂಗಾರ- ಮೀನುಗಾರಿಕೆ ಜೆ.ಸಿ. ಮಾಧುಸ್ವಾಮಿ- ಸಣ್ಣ ನೀರಾವರಿ, ಕಾನೂನು ಸಂಸದೀಯ ವ್ಯವಹಾರ ಅರಗ ಜ್ಞಾನೇಂದ್ರ- ಗೃಹ ಇಲಾಖೆ ಡಾ. ಅಶ್ವತ್ಥ ನಾರಾಯಣ- ಉನ್ನತ ಶಿಕ್ಷಣ, ಐಟಿಬಿಟಿ ಆನಂದ್​ ಸಿಂಗ್- ಪರಿಸರ, ಪ್ರವಾಸೋದ್ಯಮ ಸಿಸಿ ಪಾಟೀಲ್- ಲೋಕೋಪಯೋಗಿ ಇಲಾಖೆ ಕೋಟಾ ಶ್ರೀನಿವಾಸ ಪೂಜಾರಿ- ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಪ್ರಭು ಚೌಹಾಣ್​- ಪಶು ಸಂಗೋಪನೆ ಮುರುಗೇಶ್ ನಿರಾಣಿ- ಬೃಹತ್ ಕೈಗಾರಿಕೆ ಶಿವರಾಮ್ ಹೆಬ್ಬಾರ್​- ಕಾರ್ಮಿಕ …

Read More »

ಶ್ರೀಮಂತ ಪಾಟೀಲಗೆ ಸಚಿವ ಸ್ಥಾನ ನೀಡಲು ಆಗ್ರಹ

ಬೆಂಗಳೂರು: ಮರಾಠಾ ಸಮುದಾಯವನ್ನು ಪ್ರತಿನಿಧಿಸುವ ಏಕೈಕ ಶಾಸಕರಾಗಿರುವ ಶ್ರೀಮಂತ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅಖಿಲ ಕರ್ನಾಟಕ ಕ್ಷತ್ರಿಯ ಮರಾಠಾ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಒಕ್ಕೂಟದ ವತಿಯಿಂದ ಶುಕ್ರವಾರ ನಡೆದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್‌ ಅಧ್ಯಕ್ಷ ರಾಣೋಜಿರಾವ್‌ ಸಾಠೆ, ‘ಶ್ರೀಮಂತ ಪಾಟೀಲ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಕಾರಣರಾದವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಿಂದ ಅವರನ್ನು ಕೈಬಿಟ್ಟಿರುವುದರಿಂದ …

Read More »

ಮತ್ತೆ ಸಿಡಿಯಲಿದೆಯಾ ಬೆಳಗಾವಿ ಸಾಹುಕಾರ್ ಬಾಂಬ್?

ಬೆಂಗಳೂರು, : ನಾಯಕತ್ವ ಬದಲಾವಣೆಯಾದ ಬಳಿಕ ಮತ್ತೆ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಹಿಂದೆ ಮೈತ್ರಿ ಸರ್ಕಾರ ಪತನವಾಗುವಾಗ ಆಯಕ್ಟಿವ್ ಆಗಿದ್ದವರು ಈಗ ಮತ್ತೆ ಆಯಕ್ಟಿವ್ ಆಗಿರುವುದು ಅಚ್ಚರಿಗೆ ಕಾರಣವಾಗಿದೆ. ಜೆಡಿಎಸ್-ಕಾಂಗ್ರೆಸ್ ತೊರೆದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಮೂಲ ಕಾರಣರಾಗಿದ್ದವರಿಗೆ ಈಗ ಅಧಿಕಾರವಿಲ್ಲದಂತಾಗಿದೆ. ಇದೇ ಸಂದರ್ಭದಲ್ಲಿ ಗುರುವಾರ ರಾತ್ರಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮಹತ್ವವ ಸಭೆ ನಡೆದಿದೆ. ಮುಂಬೈ ಮಿತ್ರ ಮಂಡಳಿಯ ಸದಸ್ಯರು ಈ ಸಭೆಯಲ್ಲಿ …

Read More »

ಇನ್ನೂ ಹಂಚಿಕೆಯಾಗದ ಖಾತೆ: ಸಿಎಂ ಬೊಮ್ಮಾಯಿ ನಿವಾಸದ ಬಳಿ ತಡರಾತ್ರಿವರೆಗೂ ಕಾದು ಕುಳಿತಿದ್ದ ನೂತನ ಸಚಿವರು!

ಬೆಂಗಳೂರು: ನೂತನ ಸಚಿವರಿಗೆ ಶೀಘ್ರದಲ್ಲೆ ಖಾತೆ ಹಂಚಿಕೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರಾದರೂ ಈ ಪ್ರಕ್ರಿಯೆ ಅಷ್ಟು ಸಲೀಸಾಗಿ ನಡೆಯುವಂತೆ ಕಾಣುತ್ತಿಲ್ಲ. ಪ್ರಮುಖ ಖಾತೆಗಾಗಿ ಸಂಪುಟದ ಸದಸ್ಯರು ಒತ್ತಡ ತರುತ್ತಿರುವುದೇ ಇದಕ್ಕೆ ಕಾರಣವಾಗಿದೆ. ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿ ಎರಡು ದಿನ ಕಳೆದರೂ ಖಾತೆ ಹಂಚಿಕೆಯಾಗಿಲ್ಲ, ಸಿಎಂ ಬೊಮ್ಮಾಯಿ ಈಗಾಗಲೇ 29 ಸಚಿವರಿಗೂ ಖಾತೆ ಹಂಚಿಕೆ ಪಟ್ಟಿ ತಯಾರುಮಾಡಿ ಕಳುಹಿಸಿದ್ದರೂ ಇನ್ನೂ ಅದಕ್ಕೆ ಅನುಮೋದನೆ ಸಿಕ್ಕಿಲ್ಲ. ಹೊಸದಾಗಿ …

Read More »

ಮನೆ ಸೋರುತ್ತಿರುವುದರಿಂದ ನೆರವು ಕೇಳಲು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಅಜ್ಜಿಯ ನೋವಿಗೆ ಸ್ಪಂದಿಸಲು ಸ್ವತಃ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸಭೆ ಬಿಟು ಅಜ್ಜಿ ನೋವಿಗೆ ಸ್ಪಂದಿಸಿದ ಬೆಳಗಾವಿ ಡಿಸಿ

ಬೆಳಗಾವಿ: ಮನೆ ಸೋರುತ್ತಿರುವುದರಿಂದ ನೆರವು ಕೇಳಲು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಅಜ್ಜಿಯ ನೋವಿಗೆ ಸ್ಪಂದಿಸಲು ಸ್ವತಃ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಗುರುವಾರ ಸಭೆ ಬಿಟ್ಟು ಬಂದು ಮನವಿ ಆಲಿಸಿ ಕೂಡಲೇ ಕ್ರಮಕ್ಕೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿ ಮಾನವೀಯತೆ ಮೆರೆದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಆರೋಗ್ಯ ಇಲಾಖೆಗೆ ಸಂಬಂಧಿಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಇದ್ದರು. ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕಚೇರಿಯ ಹೊರ ಭಾಗದಲ್ಲಿ ಗಣಪತಿ ಗಲ್ಲಿಯ …

Read More »

ಲಾರಿ ಚಾಲಕನ ಅಜಾಗರೂಕತೆ ಓವರ್ ಟೇಕ್ ಮಾಡುವ ಭರದಲ್ಲಿ ಕಾರಿಗೆ ಡಿಕ್ಕಿ

ಅಂಕೋಲಾ : ಕಾರು ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ರಾ.ಹೆ. 63 ಹೆಬ್ಬುಳ ಬಳಿ ಶುಕ್ರವಾರ ನಡೆದಿದೆ. ಗದಗ ಜಿಲ್ಲೆಯ ಪಂಚಾಕ್ಷರಿನಗರದ ವಸಂತ ದಾಕಪ್ಪ ಅಕ್ಕಿ(73) ಮೃತ ದುರ್ದೈವಿ, ಕಾರಿನಲ್ಲಿದ್ದ ಉಳಿದ ಮೂವರಿಗೆ ಗಂಭಿರ ಗಾಯಗಳಾಗಿದ್ದು ಅವರಿಗೆ ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯೇ ಈ ಅವಘಡಕ್ಕೆ ಕಾರಣ …

Read More »

ಖಾತೆ ಹಂಚಿಕೆಗೂ ಮುನ್ನ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ

ತುಮಕೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡರು. ಜತೆಗೆ ಮಠದ ಸಿದ್ಧಲಿಂಗ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಠದಲ್ಲಿಯೇ ಪ್ರಸಾದ ಸೇವಿಸಿದರು. ಇಂದೇ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇನೆ ಎಂದು ಈಮುನ್ನ ತಿಳಿಸಿದ್ದ ಅವರು ಸಿದ್ದಗಂಗಾ ಮಠದಿಂದ ಬೆಂಗಳೂರಿಗೆ ಹಿಂದುರಿಗಿದ ನಂತರ ಖಾತೆ ಹಂಚಿಕೆ ಮಾಡುವುದಾಗಿ ಸುದ್ದಿಗಾರರಿಗೆ ತಿಳಿಸಿದರು. ಸಿದ್ದಗಂಗಾ ಮಠಕ್ಕೆ …

Read More »

ಗೋಕಾಕ್ ತಹಶೀಲ್ದಾರ್ ನೇತೃತ್ವದಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಗಳ ತೆರವು

ಘಟಪ್ರಭಾ : ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ರಿ.ಸ.ನಂ-120 ರಲ್ಲಿ ನೀರಾವರಿ ನಿಗಮಕ್ಕೆ ಸೇರಿದ ಜಾಗದಲ್ಲಿ ಅತಿಕ್ರಮಣವಾಗಿ ನಿರ್ಮಿಸಿದ್ದ ಮನೆಗಳನ್ನು ಶುಕ್ರವಾರದಂದು ಗೋಕಾಕ ತಹಶೀಲ್ದಾರ್ ಪ್ರಕಾಶ ಹೊಳೆಪ್ಪನವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ನೀರಾವರಿ ನಿಗಮದ ಕಛೇರಿ ಹಿಂದುಗಡೆ ಇರುವ ರಿ.ಸ.ನಂ-120 ರಲ್ಲಿ ಇರುವ ನೀರಾವರಿ ಇಲಾಖೆಗೆ ಸೇರಿದ 82 ಎಕರೆ ಜಮೀನಿನ ಪೈಕಿ ಸುಮಾರು 30 ಎಕರೆ ಜಮೀನು ಅತಿಕ್ರಮಣವಾಗಿತ್ತು. ಸುಮಾರು 30ಕ್ಕೂ ಹೆಚ್ಚು ಅನಧಿಕೃತ ಮನೆಗಳು ತೆರವುಗೊಳಿಸುವ ಕಾರ್ಯ ಮುಂದುವರೆದಿದ್ದು, …

Read More »