Breaking News
Home / 2021 / ಆಗಷ್ಟ್ (page 40)

Monthly Archives: ಆಗಷ್ಟ್ 2021

ಹೊಸಪೇಟೆ : ಹಂಪಿ‌ ನದಿ ತಟದಲ್ಲಿ ಬೃಹತ್ ಗಾತ್ರದ ಮೊಸಳೆ‌ ಪ್ರತ್ಯಕ್ಷ

ಹೊಸಪೇಟೆ : ದಕ್ಷಿಣಕಾಶಿ‌ ಖ್ಯಾತಿಯ ಹಂಪಿಯ ತುಂಗಭದ್ರಾ ನದಿಯಲ್ಲಿ‌ ಬೃಹತ್ ‌ಮೊಸಳೆಯೊಂದು ಬುಧವಾರ ಪ್ರತ್ಯಕ್ಷವಾಗಿದೆ. ಐತಿಹಾಸಿಕ ವಿರೂಪಾಕ್ಷ ದೇವಾಲಯದ ಬಳಿ ಹಾದು ಹೋಗಿರುವ ತುಂಗಭದ್ರಾ ನದಿಯ ಸ್ನಾನಘಟ್ಟದ ಸಮೀಪದ ನದಿ‌‌ ನಡುವಿನ ಬಂಡೆಗಲ್ಲಿನ ಮೇಲೆ ಮೊಸಳೆ ಪ್ರತ್ಯಕ್ಷವಾಗಿದೆ. ಸುಮಾರು ಅರ್ಧ ತಾಸಿಗೂ ಆಧಿಕ ಕಾಲ ಮೊಸಳೆ ಬಂಡೆ ಮೇಲೆ‌ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಸ್ಥಿತಿಯಲ್ಲಿ ಕಂಡು ಬಂದಿತು. ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಮೊಸಳೆ …

Read More »

2027 ರಲ್ಲಿ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿರುವ ನ್ಯಾಯಮೂರ್ತಿ ಬಿ.ವಿ ನಾಗರತ್ನ

ನವದೆಹಲಿ: 2027 ರಲ್ಲಿ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗುವ ಮೊದಲ ಮಹಿಳೆಯಾಗಲಿದ್ದಾರೆ ಎನ್ನಲಾಗಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು 2027 ರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗುವ ಮೊದಲ ಮಹಿಳೆಯಾಗಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದಲ್ಲಿ, ಸುಪ್ರೀಂ ಕೋರ್ಟ್ ಕೊಲಿಜಿಯಂ ಒಂಬತ್ತು ನ್ಯಾಯಾಧೀಶರ ಹೆಸರನ್ನು ಉನ್ನತ ನ್ಯಾಯಾಲಯದ ಮುಖ್ಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಿದೆ. ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರನ್ನು ಸಹ …

Read More »

ರಾಜ್ಯದ ಸರಣಿ ಚುನಾವಣೆಗಳಿಗೆ ಬಿಜೆಪಿ ತಂತ್ರ: ಹೊಸ ಬ್ರಾಂಡ್ ಅಂಬಾಸಿಡರ್ ಗಳನ್ನು ಸೃಷ್ಟಿಸುತ್ತಿದೆ ಜನಾಶೀರ್ವಾದ ಯಾತ್ರೆ!

ಚಿಕ್ಕಮಗಳೂರು : ರಾಷ್ಟ್ರೀಯ ನಾಯಕರ ಬಗ್ಗೆ ಅವಹೇಳನ ಸರಿಯಲ್ಲ, ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಇದಕ್ಕೆ ಪಕ್ಷ, ಜಾತಿ, ಧರ್ಮ ಭೇದವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಚಿಕ್ಕಮಗಳೂರಿಗೆ ಭೇಟಿ ನೀಡಿದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು ರಾಷ್ಟ್ರೀಯ ನಾಯಕರ ಬಗ್ಗೆ ಹುಕ್ಕಾ ಬಾರ್, ಎಣ್ಣೆ ಚರ್ಚೆ ವಿಚಾರವಾಗಿ ಮಾತನಾಡಿದ ಅವರು ರಾಷ್ಟ್ರೀಯ ನಾಯಕರು ಗೌರವಾನ್ವಿತರು ಅವರನ್ನು ನಾವು ಗೌರವ ಪೂರ್ವಕವಾಗಿ ನೋಡಬೇಕು ಇಲ್ಲಿ ಯಾವುದೇ ಪಕ್ಷ, …

Read More »

ಮಳೆ ಕಮ್ಮಿ ಆಗ್ತಿದ್ದಂತೆ ಸಮುದ್ರಕ್ಕೆ ಇಳಿದ ಹವ್ಯಾಸಿ ಮೀನುಗಾರರು

ಉಡುಪಿ: ಮುಂಗಾರು ಮಳೆಯ ಅಬ್ಬರ ಕಡಿಮೆಯಾದ ಕೂಡಲೇ ಅರಬ್ಬಿ ಸಮುದ್ರದಲ್ಲಿ ಹವ್ಯಾಸಿ ಮೀನುಗಾರಿಕೆ ಜೋರಾಗಿದೆ. ಗಾಳ ಹಾಕಿ ಮೀನು ಹಿಡಿಯುವ ಹವ್ಯಾಸ ಹೊಂದಿರುವ ಯುವಕರು ದೋಣಿಗಳ ಜೊತೆ ಅರಬ್ಬಿ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಉದ್ಯಾವರ ನಾಗೇಶ್ ಕುಮಾರ್ ಮತ್ತು ಅವರ ಗೆಳೆಯರ ತಂಡ ಅರಬ್ಬಿ ಸಮುದ್ರದಲ್ಲಿ ಗಾಳ ಹಾಕಿದಾಗ ಶಾರ್ಕ್ ಮೀನೊಂದು ಗಾಳಕ್ಕೆ ಸಿಲುಕಿತ್ತು. ಗಾಳಕ್ಕೆ ಸಿಲುಕಿದ ನಂತರ ಕೆಲಕಾಲ ಸೆಣೆಸಾಟ ನಡೆಸಿದೆ. ತುಳುವಿನಲ್ಲಿ ತಾಟೆ ಮೀನು ಎಂದು ಕರೆಯುತ್ತಾರೆ. ಇದು …

Read More »

ಗೃಹ ಬಳಕೆ ಸಿಲಿಂಡರ್​ ಬೆಲೆ ಮತ್ತೆ ಏರಿಕೆ TODAYS TOP NEWS

1. ಗೃಹ ಬಳಕೆ ಸಿಲಿಂಡರ್​ ಬೆಲೆ ಮತ್ತೆ ಏರಿಕೆ ಮೊದಲೇ ತೈಲ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಸರ್ಕಾರ ಮತ್ತೆ ಶಾಕ್​ಕೊಟ್ಟಿದೆ. ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಪೆಟ್ರೋಲಿಯಂ ಕಂಪನಿಗಳು ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಿಸಿದ್ದರಿಂದ ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 860 ರೂಪಾಯಿ ಆಗಿದೆ. ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 68 …

Read More »

ಡಿಸ್ಟರ್ಬ್​ ಮಾಡಬೇಡ ಅಮ್ಮಾ..’ ರೂಮಿಗೆ ತೆರಳಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಕಲಬುರಗಿ: ಪೋಷಕರಿಂದ ಆನ್ ಲೈನ್ ಕ್ಲಾಸ್​ಗೆ ತೊಂದರೆ ಆಯ್ತು ಅಂತ ಮನನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. 17 ವರ್ಷದ ಗುರುಚರಣ್ ಉಡುಪಾ ಆತ್ಮಹತ್ಯೆ ಮಾಡಿಕೊಂಡ ಯುವಕ. ಗುರುಚರಣ್ ಉಡುಪಿಯ ಪ್ರತಿಷ್ಠಿತ ಕಾಲೇಜ್​ನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ. ವಾಡಿ ಪಟ್ಟಣದ ಬಿರ್ಲಾ ಕ್ವಾಟರ್ಸ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಎರಡು ದಿನದ ಹಿಂದೆ ಆನ್​ಲೈನ್​ ಕ್ಲಾಸ್​ನಲ್ಲಿದ್ದಾಗ ಅವ್ರ ತಂದೆ ತಾಯಿ ಡಿಸ್ಟರ್ಬ್​ …

Read More »

ಗೃಹ ಖಾತೆಯ ಕಿರಿಕಿರಿ ನನಗೆ ಮಾತ್ರ ಗೊತ್ತಿದೆ. ಸರಿಯಾಗಿ ನಿದ್ರೆ ಮಾಡಲೂ ಆಗದ ಸ್ಥಿತಿ ನನ್ನದು: ಅರಗ ಜ್ಞಾನೇಂದ್ರ

ಶಿವಮೊಗ್ಗ:  ಗೃಹ ಖಾತೆಯ ಕಿರಿಕಿರಿ ನನಗೆ ಮಾತ್ರ ಗೊತ್ತಿದೆ. ಸರಿಯಾಗಿ ನಿದ್ರೆ ಮಾಡಲೂ ಆಗದ ಸ್ಥಿತಿ ನನ್ನದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅಳಲು ತೋಡಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮೊದಲು ಆರಾಮವಾಗಿದ್ದೆ. ಈಗ ಗೃಹ ಸಚಿವ ಸ್ಥಾನ ಅಲಂಕರಿಸಿದ ಮೇಲೆ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ರಾತ್ರಿಯೆಲ್ಲ ಪೊಲೀಸರು ಮಾಹಿತಿ ನೀಡಲು ಫೋನ್ ಮಾಡುತ್ತಾರೆ. ಹಾಗಂತ ಪಲಾಯನ ಮಾಡುವುದಿಲ್ಲ. ಕೊಟ್ಟ ಕುದುರೆಯನ್ನು ಇಳಿದರೆ ಶೂರನಾಗುವುದಿಲ್ಲ ಎಂಬ ಕಾರಣಕ್ಕೆ …

Read More »

ರದ್ದಾಗಿದ್ದ ಯೋಜನೆಯನ್ನು ಪುನರ್ ಮಂಜೂರು ಮಾಡಿಸಿ ಬೆಳಗಾವಿ ನಗರದ ಪ್ರತಿಯೊಂದು ಮನೆಗೂ 24 X 7 ನಿರಂತರವಾಗಿ ನೀರು ಪೂರೈಸುವ ಕಾಮಗಾರಿಗೆ ಚಾಲನೆ :

ಬೆಳಗಾವಿ –  ಬೆಳಗಾವಿ ನಗರದಲ್ಲಿ ನಾಲ್ಕು ದಿನಕ್ಕೊಮ್ಮೆ, ಕೆಲವು ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಬರುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡ ಶಾಸಕ ಅಭಯ ಪಾಟೀಲ ರದ್ದಾಗಿದ್ದ ಯೋಜನೆಯನ್ನು ಪುನರ್ ಮಂಜೂರು ಮಾಡಿಸಿ ಬೆಳಗಾವಿ ನಗರದ ಪ್ರತಿಯೊಂದು ಮನೆಗೂ 24 X 7 ನಿರಂತರವಾಗಿ ನೀರು ಪೂರೈಸುವ ಕಾಮಗಾರಿಗೆ  ಚಾಲನೆ ನೀಡಿದ್ದಾರೆ‌. ಮೂರು ವರ್ಷದ ಹಿಂದೆ ಈ ಯೋಜನೆ ರದ್ದಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾಗಿದ್ದು ಅಭಯ ಪಾಟೀಲ ಕೇಂದ್ರ ಸಚಿವರಾಗಿದ್ದ ದಿ.ಅನಂತಕುಮಾರ್ ಅವರ ನೆರವಿನಿಂದ, ಆಗಿನ …

Read More »

ಹುಬ್ಬಳ್ಳಿ: ಉಪ ನೋಂದಣಾಧಿಕಾರಿಗಳ ವರ್ಗಾವಣೆಗೆ ಪಟ್ಟು

ಹುಬ್ಬಳ್ಳಿ: ದಾಖಲೆಗಳ ನೋಂದಣಿಗೆ ಉಪ ನೋಂದಣಾಧಿಕಾರಿಗಳು ವಿನಾಕಾರಣ ಅಲೆದಾಡಿಸುತ್ತಾರೆ. ಅವರನ್ನು ವರ್ಗಾವಣೆ ಮಾಡುವ ತನಕ ಹುಬ್ಬಳ್ಳಿಯ ಉತ್ತರದ ಕಚೇರಿಯಲ್ಲಿ ಯಾವುದೇ ದಾಖಲೆಗಳ ನೋಂದಣೆ ಮಾಡಿಸುವುದಿಲ್ಲ ಎಂದು ವಿವಿಧ ಸಂಸ್ಥೆಯವರು ಮಂಗಳವಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಭಾರತೀಯ ರಿಯಲ್‌ ಎಸ್ಟೇಟ್‌ ನಿರ್ಮಾಣಗಾರರ ಸಂಘಗಳ ಒಕ್ಕೂಟ (ಕ್ರೆಡಾಯ್), ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ವಾಸ್ತುಶಿಲ್ಪ ಸಂಘ, ಸಿವಿಲ್‌ ಎಂಜಿನಿಯರ್‌ಗಳ ಸಂಘ ಮತ್ತು ದಸ್ತಾವೇಜು ಬರಹಗಾರರ ಸಂಘದವರು ಉಪ ನೋಂದಣಾಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. …

Read More »

ಆಟೊ ಚಾಲಕರಿಗೆ ಮಹತ್ವದ ಮಾಹಿತಿ : ಸೆ. 1 ರಿಂದ ಆಟೊಗಳಿಗೆ ಮೀಟರ್ ಕಡ್ಡಾಯ

ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ಸೆಪ್ಟೆಂಬರ್ 1 ರಿಂದ ಆಟೊ ಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ಹೊರಡಿಸಿದ್ದಾರೆ. ಕರಾವಳಿ ಸೇರಿ ರಾಜ್ಯದ ಹಲವೆಡೆ ಇನ್ನೂ 4 ದಿನ ಭಾರೀ ಮಳೆ : ಹೈ ಅಲರ್ಟ್ ಸೆಪ್ಟೆಂಬರ್ 1 ರಿಂದ ಜಿಲ್ಲೆಯಲ್ಲಿ ಆಟೊ ಗಳಿಗೆ ಮೀಟರ್ ಕಡ್ಡಾಯಗೊಳಿಸಲಾಗಿದ್ದು, ಎಲ್ಲಾ ಆಟೋ ಚಾಲಕ, ಮಾಲೀಕರು ತಮ್ಮ ಆಟೊಗಳಿಗೆ ಅನುಮತಿ ಇರುವ ಫ್ಲಾಗ್ ಮೀಟರ್ ಗಳನ್ನು ಅಳವಡಿಸಿಕೊಂಡು ದರಕ್ಕೆ …

Read More »