Breaking News
Home / 2021 / ಆಗಷ್ಟ್ (page 69)

Monthly Archives: ಆಗಷ್ಟ್ 2021

ಮಾಜಿ ಸಿಎಂ ಯಡಿಯೂರಪ್ಪಗೆ ಸಂಪುಟ ದರ್ಜೆಯ ಸ್ಥಾನ; ಸರ್ಕಾರದಿಂದ ಅಧಿಕೃತ ಆದೇಶ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಸಂಪುಟ ದರ್ಜೆ ಸಚಿವರ ಸೌಲಭ್ಯ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿ ಅಧಿಕಾರಾವಧಿ ಇರುವವರೆಗೆ ಬಿ.ಎಸ್. ಯಡಿಯೂರಪ್ಪನವರಿಗೆ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ನೀಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಈ ಆದೇಶ ಹೊರಡಿಸಲಾಗಿದ್ದು, ಇನ್ಮುಂದೆ ಬಿ.ಎಸ್.ವೈ.ಗೆ ಸಚಿವರಿಗೆ ಸಿಗುವ ಎಲ್ಲಾ ಸೌಲಭ್ಯ ಹಾಗೂ ಅಧಿಕಾರ ಕೂಡ ಸಿಗಲಿದೆ.

Read More »

ಈ ಬಾರಿಯೂ ಸರಳ ದಸರಾ ಆಚರಣೆಗೆ ಚಿಂತನೆ: ಎಸ್.ಟಿ. ಸೋಮಶೇಖರ್

ಮೈಸೂರು, ಆಗಸ್ಟ್ 7: “ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿಯೂ ಸರಳವಾಗಿ ಆಚರಿಸಲು ಚಿಂತಿಸಲಾಗಿದೆ,” ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು. ಸಹಕಾರ ಮತ್ತು ಮೈಸೂರು ಜಿಲ್ಲಾ ಕೋವಿಡ್ ಸೋಂಕು ನಿಯಂತ್ರಣ ಹಾಗೂ ಪ್ರವಾಹ ಪರಿಸ್ಥಿತಿ ನಿಯಂತ್ರಣ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್, ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲ್ಲೂಕು ಬಾವಲಿ ಚೆಕ್‌ಪೋಸ್ಟ್‌ ಪರಿಶೀಲನೆ ವೇಳೆ ದಸರಾ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಸಚಿವ ಸೋಮಶೇಖರ್ …

Read More »

ಬಿಎಸ್​ವೈ-ಬೊಮ್ಮಾಯಿ ಇಬ್ಬರೂ ನನಗೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ: ಎಂಟಿಬಿ ನಾಗರಾಜ್​ ಆಕ್ರೋಶ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಆನಂದ್​ ಸಿಂಗ್​ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದರು. ಇದೀಗ ಎಂಟಿಬಿ ನಾಗರಾಜ್​ ಕೂಡ ಇದೇ ಹಾದಿ ತುಣಿದಿದ್ದು, ಇನ್ನೆರಡು ದಿನದಲ್ಲಿ ಮುಂದಿನ ನಿರ್ಧಾರ ಪ್ರಕಟಿಸುವೆ ಎಂದು ಟ್ವೀಟ್​ ಮೂಲಕ ಎಚ್ಚರಿಸಿದ್ದಾರೆ. ನಾನು ಕೇಳಿರೋದೇ ಒಂದು, ಕೊಟ್ಟಿರೋದೇ ಮತ್ತೊಂದು. ನನಗೆ ಕೊಟ್ಟಿರುವ ಖಾತೆಯನ್ನು ಬದಲಾವಣೆ ಮಾಡಬೇಕೆಂದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ …

Read More »

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಪ್ರಯತ್ನ ದ್ವೇಷದ ರಾಜಕಾರಣ: ಸಿದ್ದರಾಮಯ್ಯ

ಬೆಂಗಳೂರು: ‘ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ಪ್ರಯತ್ನ ದ್ವೇಷದ ರಾಜಕಾರಣವಾಗುತ್ತದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಇಂದಿರಾ ಕ್ಯಾಂಟೀನ್‍ಗೆ ಅನ್ನಪೂರ್ಣ ಎಂಬ ಹೆಸರಿಡಬೇಕೆಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ರಸ್ತೆ, ಕ್ರೀಡಾಂಗಣ, ಸರ್ಕಾರಿ ಸಂಸ್ಥೆಗಳಿಗೆ ರಾಷ್ಟ್ರೀಯ ನಾಯಕರ ಹೆಸರು ನಾಮಕರಣ ಮಾಡುವುದು ಮೊದಲಿನಿಂದಲೂ ನಡೆದು ಬಂದಿರುವ ಪದ್ಧತಿ. ಬೆಂಗಳೂರಿನ ಮೇಲ್ಸೇತುವೆಗೆ ದೀನದಯಾಳ್ ಉಪಾಧ್ಯಾಯ, ನಗರ ಸಾರಿಗೆಗೆ ವಾಜಪೇಯಿ, …

Read More »

ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ಮಾಡ್ತಿರುವ ನಿಮ್ಹಾನ್ಸ್ ಹಾಸ್ಪಿಟಲ್ ನ ಕಾಂಟ್ರಾಕ್ಟ್ ಸಿಬ್ಬಂದಿ

ಬೆಂಗಳೂರು:ನಿಮ್ಹಾನ್ಸ್ ಹಾಸ್ಪಿಟಲ್ ನ ಕಾಂಟ್ರಾಕ್ಟ್ ಸಿಬ್ಬಂದಿಗಳು ಕೆಲಸದ ಟೈಮಿಂಗ್ ವಿಚಾರವಾಗಿ ನಿಮ್ಹಾನ್ಸ್ ಹಾಸ್ಪಿಟಲ್ ಒಳಗೆ ಪ್ರತಿಭಟನೆ ನಡೆಸಿದರು. ಸಿಬ್ಬಂದಿಗಳು ರೇಡಿಯಾಲಜಿ ಡಿಪಾರ್ಟ್ಮೆಂಟ್ ನಲ್ಲಿ ಹೌಸ್ ಕೀಪಿಂಗ್ ಹಾಗೂ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಬಹುತೇಕ ಸಿಬ್ಬಂದಿ ಹೆಣ್ಣು ಮಕ್ಕಳು ಆಗಿರುವುದರಿಂದ ರಾತ್ರಿ ವೇಳೆ ಕೆಲಸ ಮಾಡುವುದು ತೊಂದರೆ ಆಗುತ್ತಿದೆ. ಹೀಗಾಗಿ ಸಂಜೆ ಏಳು ಗಂಟೆಯವರೆಗೆ ಕೆಲಸ ಮಾಡಲು ಕೇಳಿದರು ಇದಕ್ಕೆ ಒಪ್ಪದ ಹಾಸ್ಪಿಟಲ್ ವಿರುದ್ದ ಒಂದು ತಿಂಗಳಿನಿಂದ ಮಳೆ ಬಿಸಿಲು …

Read More »

ಜೋಗ: ಅಧಿಕಾರಿಗಳ ಹಾಗೂ ಪ್ರವಾಸಿಗರ ಸಂಘರ್ಷ

ಕಾರ್ಗಲ್: ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ದೃಢೀಕರಣ ಕಡ್ಡಾಯಗೊಳಿಸಿರುವ ಜಿಲ್ಲಾಧಿಕಾರಿ ಆದೇಶ ಶುಕ್ರವಾರ ಸಂಘರ್ಷಕ್ಕೆ ಕಾರಣವಾಗಿತ್ತು. ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಯಿಂದ ಬಂದಿದ್ದ ಭಾರಿ ಸಂಖ್ಯೆಯ ಪ್ರವಾಸಿಗರು, ‘ಆರ್‌ಟಿಪಿಸಿಆರ್ ಪರೀಕ್ಷಾ ವರದಿ ಕಡ್ಡಾಯ ಎಂದು ಸರ್ಕಾರ ಘೋಷಣೆ ಮಾಡಿಲ್ಲ. ಈ ಬಗ್ಗೆ ಎಲ್ಲಿಯೂ ಮುಂಚಿತವಾಗಿ ಮಾಹಿತಿ ನೀಡಿಲ್ಲ. ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವ ಆಶಯದಿಂದ ನೂರಾರು ಕಿ.ಮೀ. ದೂರದಿಂದ ನಿರೀಕ್ಷೆಯೊಂದಿಗೆ ಬರುವ ನಮಗೆ ನಿರಾಸೆ ಮೂಡಿಸಿದಂತಾಗಿದೆ. …

Read More »

ಮುಖ್ಯಮಂತ್ರಿಗಳ ಆಪ್ತ ಸಹಾಯಕ ಮತ್ತು ಭದ್ರತಾ ಸಿಬ್ಬಂದಿಯ ಮೇಲೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಗರಂ

ಬೆಂಗಳೂರು,ಆ.7- ನನಗೆ ಇನ್ಸಲ್ಟ್ ಮಾಡ್ತೀರಾ? ಎಂದು ಮುಖ್ಯಮಂತ್ರಿಗಳ ಆಪ್ತ ಸಹಾಯಕ ಮತ್ತು ಭದ್ರತಾ ಸಿಬ್ಬಂದಿಯ ಮೇಲೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ರೇಗಾಡಿದ್ದಾರೆಂದು ಮಾಹಿತಿ ಸಿಕ್ಕಿದೆ. ಆರ್.ಟಿ.ನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ಶಾಸಕ ರೇಣುಕಾಚಾರ್ಯ ಆಗಮಿಸಿದ್ದರು. ಈ ವೇಳೆ ಅವರನ್ನು ಪೊಲೀಸರು ತಡೆದಿದ್ದರು. ಇದರಿಂದ ಕೋಪಗೊಂಡ ರೇಣುಕಾಚಾರ್ಯ,ಪೊಲೀಸರು ಹಾಗೂ ಸಿಎಂ ಆಪ್ತ ಸಹಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗ್ತಿದೆ. ನಾನೊಬ್ಬ ಶಾಸಕ, ನನಗೆ ಇನ್ಸಲ್ಟ್ ಮಾಡ್ತೀರಾ? ಇದು ಎರಡನೇ ಸಲ ಈ …

Read More »

ನಿತ್ಯವೂ ಜೆಡಿಎಸ್ ಜತೆ ನಾವು ಗುದ್ದಾಡಿದ್ರೆ, ಇನ್ನೊಬ್ರು ಅಡ್ಜಸ್ಟ್​ಮೆಂಟ್ ಮಾಡ್ಕೋತಾರೆ: ಸಿಎಂ ವಿರುದ್ಧ ಪ್ರೀತಂಗೌಡ ಗರಂ

ಹಾಸನ: ಮುಖ್ಯಮಂತ್ರಿಯಾದ 24 ಗಂಟೆಯೊಳಗೆ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಏಕೆ ಹೋಗಬೇಕಿತ್ತು ಎಂದು ಕಾರ್ಯಕರ್ತರು ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಚರ್ಚಿಸುತ್ತೇನೆಂದು ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿದರು. ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಹೊಂದಾಣಿಕೆ ರಾಜಕಾರಣ ‌ಮಾಡಲ್ಲ. ಮುಂದೆ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಇದೆ. ಮುಖ್ಯಮಂತ್ರಿಗಳೇ ನಮ್ಮ ಜೇಬಿನಲ್ಲಿದ್ದಾರೆ ಎಂದು ಫಸ್ಟ್ ಫ್ಯಾಮಿಲಿ ಆಫ್ …

Read More »

ಜಾವೆಲಿನ್ ಥ್ರೋನಲ್ಲಿ ಚಿನ್ನಕ್ಕೆ ಗುರಿಯಿಟ್ಟ ನೀರಜ್ ಚೋಪ್ರಾ ಭಾರತದಒಲಿಂಪಿಕ್ಸ್ ನಲ್ಲಿ 13 ವರ್ಷಗಳ ಬಳಿಕ ಚಿನ್ನದ ಪದಕ ಗೆದ್ದಿತು.

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಬಂಗಾರದ ಬರ ನೀಗಿದೆ. ಪುರುಷರ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಬಂಗಾರದ ಪದಕ ಗೆದ್ದು ಕೊಂಡಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಆರಂಭದಿಂದಲೇ ಉತ್ತಮ ಪ್ರದರ್ಶನ ತೋರಿದರು. ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಎಸೆದ ನೀರಜ್, ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಜಾವೆಲಿನ್ ಎಸೆದರು. ಆದರೆ ಮೂರನೇ ಪ್ರಯತ್ನದಲ್ಲಿ ನೀರಜ್ 76.79 ಮೀಟರ್ ಎಸೆದರು. ನಾಲ್ಕನೇ ಸುತ್ತಿನಲ್ಲಿ ಫೌಲ್ ಆಯಿತು. …

Read More »

ನಗ್ನವಾಗಿದ್ದಾಗ ನನ್ನ ಖಾಸಗಿ ಭಾಗ ತೋರಿಸಿದ್ರು; ರಾಜ್​​ ಕುಂದ್ರಾ ವಿರುದ್ಧ ನಟಿ ಆರೋಪ

ಪೋರ್ನ್​​ ಸಿನಿಮಾ ನಿರ್ಮಾಣ ಆರೋಪ ಪ್ರಕರಣದಲ್ಲಿ ಜೈಲಿನಲ್ಲಿರುವ ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್​​ ಕುಂದ್ರಾ ಬಗ್ಗೆ ಮತ್ತೊಂದು ಅಚ್ಚರಿ ವಿಚಾರವೀಗ ಬೆಳಕಿಗೆ ಬಂದಿದೆ. ರಾಜ್​​​​ ಕುಂದ್ರಾ ಅಶ್ಲೀಲ ಸಿನಿಮಾಗಳಲ್ಲಿ ಸಂಬಂಧಪಟ್ಟವರ ಅನುಮತಿ ಪಡೆಯದೆ ಹಲವು ನಟಿಯರು ಮತ್ತು ಮಾಡೆಲ್​​ಗಳ ಖಾಸಗಿ ಭಾಗಗಳನ್ನು ಬಳಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಮುಂಬೈ ಪೊಲೀಸರು ರಾಜ್​​ ಕುಂದ್ರಾ ಬಂಧನ ಮಾಡಿದ ಬೆನ್ನಲ್ಲೇ ಹೀಗೆ ಹಲವು ನಟಿಯರು …

Read More »