Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಗೋಕಾಕ್ ತಹಶೀಲ್ದಾರ್ ನೇತೃತ್ವದಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಗಳ ತೆರವು

ಗೋಕಾಕ್ ತಹಶೀಲ್ದಾರ್ ನೇತೃತ್ವದಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಗಳ ತೆರವು

Spread the love

ಘಟಪ್ರಭಾ : ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ರಿ.ಸ.ನಂ-120 ರಲ್ಲಿ ನೀರಾವರಿ ನಿಗಮಕ್ಕೆ ಸೇರಿದ ಜಾಗದಲ್ಲಿ ಅತಿಕ್ರಮಣವಾಗಿ ನಿರ್ಮಿಸಿದ್ದ ಮನೆಗಳನ್ನು ಶುಕ್ರವಾರದಂದು ಗೋಕಾಕ ತಹಶೀಲ್ದಾರ್ ಪ್ರಕಾಶ ಹೊಳೆಪ್ಪನವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

ನೀರಾವರಿ ನಿಗಮದ ಕಛೇರಿ ಹಿಂದುಗಡೆ ಇರುವ ರಿ.ಸ.ನಂ-120 ರಲ್ಲಿ ಇರುವ ನೀರಾವರಿ ಇಲಾಖೆಗೆ ಸೇರಿದ 82 ಎಕರೆ ಜಮೀನಿನ ಪೈಕಿ ಸುಮಾರು 30 ಎಕರೆ ಜಮೀನು ಅತಿಕ್ರಮಣವಾಗಿತ್ತು. ಸುಮಾರು 30ಕ್ಕೂ ಹೆಚ್ಚು ಅನಧಿಕೃತ ಮನೆಗಳು ತೆರವುಗೊಳಿಸುವ ಕಾರ್ಯ ಮುಂದುವರೆದಿದ್ದು, ಹತ್ತಾರು ಮನೆಗಳನ್ನು ನೆಲಸಮ ಮಾಡಲಾಗಿದೆ.

ಈ ಹಿಂದೆ ಇಲ್ಲಿ ಕಾರ್ಯನಿರ್ವಹಿಸಿದ ಕೆಲವು ಅಧಿಕಾರಿಗಳು ಹಾಗೂ ಮುಖಂಡರು ಅತಿಕ್ರಮಣಕಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೆ ಈ ಅತಿಕ್ರಮಣಕ್ಕೆ ಮುಖ್ಯ ಕಾರಣವೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇದರಲ್ಲಿ ಕೆಲವೊಂದಷ್ಟು ಜನ ಪ್ರಭಾವಿಗಳಿದ್ದರೂ ಸಹ ತಹಶೀಲ್ದಾರರು ಯಾವುದೇ ಮುಲಾಜು ಇಲ್ಲದೆ ಅತಿಕ್ರಮಣ ತೆರವು ಮಾಡಿದರು.

ಅನೇಕ ವರ್ಷಗಳಿಂದ ಅತಿಕ್ರಮಣವಾಗಿದ್ದರೂ ಸಹ ನಿದ್ರೆಯಲ್ಲಿದ್ದ ನೀರಾವರಿ ಇಲಾಖೆ ಅಧಿಕಾರಿಗಳು ಇತ್ತೀಚಿಗೆ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡು, ಪೋಲಿಸ್ ಅಧಿಕಾರಿಗಳ ಸಹಾಯದಿಂದ ಅತಿಕ್ರಮಣ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆರು ಜೆಸಿಬಿ ಹಾಗೂ ಐದು ಟ್ರ್ಯಾಕ್ಟರ್ ಗಳು ನೂರಾರು ಜನ ಸಿಬ್ಬಂದಿಗಳು ತೆರವು ಕಾರ್ಯಚರಣೆ ನಡೆಸಿದರು.

 

ತೆರವು ಕಾರ್ಯಾಚರಣೆಯಲ್ಲಿ ಬೈಲಹೊಂಗಲ ಡಿ.ಎಸ್.ಪಿ ಶಿವಾನಂದ ಕಟಗಿ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಘಟಪ್ರಭಾ ಸಿಪಿಐ ಶ್ರಿಶೈಲ ಬ್ಯಾಕೂಡ, ಮೂಡಲಗಿ ಪಿಎಸ್‌ಐ ಹಾಲಪ್ಪಾ ಬಾಲದಂಡಿ, ಪಿಎಸ್‌ಐ ಆರ್.ಎಸ್.ಖೋತ, ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ಧುಪದಾಳ ಗ್ರಾಮ ಲೆಕ್ಕಾಧಿಕಾರಿ ಎಂ.ಎಸ್.ಗಡಕರಿ, ನೀರಾವರಿ ಇಲಾಖೆಯ ಚೀಫ್ ಇಂಜಿನಿಯರ್ ಕಣಗಲಿ, ಹಾಗೂ ಸಿಬ್ಬಂದಿ ವರ್ಗವರು, ಮಹಿಳಾ ಹಾಗೂ ಪುರುಷ ಪೊಲೀಸ ಅಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

“ಅತಿಕ್ರಮಣ ತೆರವಿಗೆ ಮುಂದಾದ ಅಧಿಕಾರಿಗಳಿಗೆ ಅತಿಕ್ರಮಣಕಾರರಿಂದ ತೀವ್ರ ವಿರೋಧ ವ್ಯಕ್ತ ವಾಯಿತು, ಈಗಾಗಲೆ ಇಲ್ಲಿರುವ ಎಲ್ಲ ಅತಿಕ್ರಮಣಕಾರರಿಗೆ ಮುಂಚಿತವಾಗಿ ತೆರವುಗೊಳಿಸಲು ಸೂಚನೆ ನೀಡಿದ್ದರೂ ಸಹ ತೆರವು ಮಾಡದ ಕಾರಣ ಕೋರ್ಟ್ ಆದೇಶದಂತೆ ಅತೀಕ್ರಮಣ ತೆರವು ಮಾಡುವುದು ಅನಿವಾರ್ಯವಾಯಿತು”.
– ಪ್ರಕಾಶ ಹೊಳೆಪ್ಪನವರ, ತಹಶೀಲ್ದಾರರು ಗೋಕಾಕ.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ