Breaking News
Home / 2021 / ಜೂನ್ / 25 (page 2)

Daily Archives: ಜೂನ್ 25, 2021

ಬಿಜೆಪಿ ಸೇರಲು ₹10 ಲಕ್ಷ ಪಾವತಿ: ಕಲೈ ಅರಸಿ ಆರೋಪ

ಹಾಸನ: ‘ಜೆಡಿಎಸ್‌ ತೊರೆದು ಬಿಜೆಪಿ ಸೇರುವಂತೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್‌.ಆರ್‌.ಸಂತೋಷ್ ತಮಗೆ ₹ 25 ಲಕ್ಷ ಆಮಿಷವೊಡ್ಡಿ, ಮುಂಗಡವಾಗಿ ₹10 ಲಕ್ಷ ನಗದು ನೀಡಿದ್ದಾರೆ’ ಎಂದು ಅರಸೀಕೆರೆ ನಗರಸಭೆ ಎರಡನೇ ವಾರ್ಡ್‌ ಸದಸ್ಯೆ ಕಲೈ ಅರಸಿ ಆರೋಪಿಸಿದರು. ಹತ್ತು ಲಕ್ಷ ರೂಪಾಯಿ ಹಣದ ಬಂಡಲ್‌ನೊಂದಿಗೆ ಶಾಸಕರಾದ ಎಚ್‌.ಡಿ.ರೇವಣ್ಣ, ಕೆ.ಎಂ.ಶಿವಲಿಂಗೇಗೌಡ ಜತೆ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸೇರುವಂತೆ ಒಂದು ವಾರದಿಂದ ಒತ್ತಡ ಇತ್ತು. ಶುಕ್ರವಾರ ರಾತ್ರಿ …

Read More »

ವಿಧಾನಸೌಧದ ಆವರಣದಲ್ಲಿ ಬಸವಣ್ಣನ ಪ್ರತಿಮೆ ನಿರ್ಮಾಣ

ಬೆಂಗಳೂರು, ಜೂನ್ 25; ಕರ್ನಾಟಕದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ ಆವರಣದಲ್ಲಿ ಬಸವಣ್ಣನ ಪ್ರತಿಮೆ ನಿರ್ಮಾಣವಾಗಲಿದೆ. ಪುತ್ಥಳಿ ನಿರ್ಮಾಣ ಮಾಡಲು ಕಡತವನ್ನು ಮಂಡನೆ ಮಾಡಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆದೇಶಿಸಿದ್ದಾರೆ. 9/6/2021ರಂದು ಮುಖ್ಯಮಂತ್ರಿಗಳು ಈ ಕುರಿತ ಟಿಪ್ಪಣಿಗೆ ಸಹಿ ಹಾಕಿದ್ದಾರೆ. ವಿಧಾನಸೌಧದ ಆವರಣದಲ್ಲಿ ಜಗಜ್ಯೋತಿ ಶ್ರೀ ಬಸವಣ್ಣನವರ ಪುತ್ಥಳಿಯನ್ನು ಸ್ಥಾಪಿಸಲು ಸೂಕ್ತ ಪ್ರಸ್ತಾವನೆಯೊಂದಿಗೆ ಕಡತವನ್ನು ಮಂಡಿಸಲು ಸೂಚನೆ ನೀಡಿದ್ದಾರೆ. 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವಕ್ಕೆ ಬುನಾದಿ …

Read More »

ಕ್ವೇಕರ್‌ನಿಂದ ಬೆಂಗಳೂರಿನ ಆಸ್ಪತ್ರೆಗಳಿಗೆ 10,000 ಓಟ್‌ಮೀಲ್ಸ್‌ ವಿತರಣೆ

ಬೆಂಗಳೂರು, ಜೂ 24, 2021: ಸ್ಥಳೀಯ ಆರೋಗ್ಯ ಸಮುದಾಯದ ಸ್ಫೂರ್ತಿ, ಧೈರ್ಯ ಮತ್ತು ಬದ್ಧತೆಗೆ ಗೌರವ ಸೂಚಿಸಲು ಮುಂದಾಗಿರುವ ಕ್ವೇಕರ್, ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಿಗೆ 10,000 ಓಟ್‌ಮೀಲ್ಸ್ ಅನ್ನು ವಿತರಿಸಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಉಪಸ್ಥಿತಿಯಲ್ಲಿ ಓಟ್‌ಮೀಲ್‌ಗಳನ್ನು ಆಸ್ಪತ್ರೆಗೆ ವಿತರಿಸಲಾಯಿತು. ವೈದ್ಯರು, ದಾದಿಯರು ಮತ್ತು ಸಂಪೂರ್ಣ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಸಮುದಾಯದ ಪ್ರತಿಯೊಬ್ಬ ಸದಸ್ಯರು ಹಲವಾರು ಕುಟುಂಬಗಳನ್ನು ಸುರಕ್ಷಿತವಾಗಿಡಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. …

Read More »

ಸರ್ಕಾರದ ವಿರುದ್ಧ ಗಂಭೀರ ಆರೋಪ; ರಾಜ್ಯಪಾಲರಿಗೆ ಎಚ್‌ಡಿಕೆ ಪತ್ರ

ಬೆಂಗಳೂರು, ಜೂನ್ 25; ಕರ್ನಾಟಕ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈಗಾಗಲೇ ಹಲವು ಬಾರಿ ಅವರು ಸರ್ಕಾರವನ್ನು ಅಧಿವೇಶನ ಕರೆಯಲು ಒತ್ತಾಯಿಸಿದ್ದಾರೆ. ಕರ್ನಾಟಕದಲ್ಲಿನ ಕೋವಿಡ್ ಸ್ಥಿತಿಗತಿ, ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪ, ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಕನ್ನಡ, ಕನ್ನಡಿಗ, ಕರ್ನಾಟಕದ ವಿಚಾರದಲ್ಲಿ ಆಗುತ್ತಿರುವ ಹಿನ್ನಡೆ ಕುರಿತು ಚರ್ಚಿಸಲು ಅಧಿವೇಶನ ಕರೆಯಬೇಕು ಎಂದು …

Read More »

ಬ್ರೇಕಿಂಗ್ : ಮಾಜಿ ಕಾರ್ಪೋರೇಟರ್ ಕೊಲೆ 24 ಗಂಟೆಯಲ್ಲೇ ಕೊಲೆಗಡುಕರು ಅರೆಸ್ಟ್!

ಬೆಂಗಳೂರು : ನಗರದ ಛಲವಾದಿ ಪಾಳ್ಯದ ಬಿಜೆಪಿಯ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹಂತಕರನ್ನು ಬಂದಿಸುವಲ್ಲಿ ಪೊಲೀಸರು ಯಶ ಕಂಡಿದ್ದಾರೆ. ಪೀಟರ್ ಮತ್ತು ಸೂರ್ಯ ಎಂಬ ಪ್ರಮುಖ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ಮುಂದಾದ ವೇಳೆ ಸೂರ್ಯ ಮತ್ತು ಪೀಟರ್ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಫೈರಿಂಗ್ ಮಾಡಿ ಆರೋಪಿಗಳನ್ನು ಸುಮನಹಳ್ಳಿ ಶನಿವಮಹಾತ್ಮ ದೇವಾಸ್ಥಾನದ ಬಳಿ ಬಂಧಿಸಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ …

Read More »

ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ರಮೇಶ ಜಾರಕಿಹೊಳಿ

ಮೈಸೂರು: ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಶುಕ್ರವಾರ, ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ವಿಶೇಷ ವಿಮಾನದಲ್ಲಿ ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ಅವರು ನೇರವಾಗಿ ಮಠಕ್ಕೆ ತೆರಳಿದರು. ಸಹೋದರ ಲಖನ್‌ ಜಾರಕಿಹೊಳಿ ಜತೆಗಿದ್ದರು. ಮಠಕ್ಕೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ‘ಸ್ವಾಮೀಜಿ ಅವರ ಪೂರ್ವಾಶ್ರಮದ ತಾಯಿ ಈಚೆಗೆ ನಿಧನರಾಗಿದ್ದು, ಸೌಜನ್ಯದ ಭೇಟಿಗೆ …

Read More »

ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಕಾರು

ಅತಿ ವೇಗವಾಗಿ ಹೋಗುತ್ತಿದ್ದ ಕಾರೊಂದು ಮೂರಡಿ ಎತ್ತರದ ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸರ್ಕಾಘಾಟ್‌ನಲ್ಲಿ ಜರುಗಿದೆ.   ಮೂರು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಮತ್ತೊಂದು ಕಾರು ರಸ್ತೆಯಿಂದ ಐದು ಮೀಟರ್‌ ದೂರದಲ್ಲಿರುವ ಮನೆಯೊಂದರ ಛಾವಣಿ ಮೇಲೆ ಹೋಗಿ ಕುಳಿತಿತ್ತು. ಬುಧವಾರ ಮಧ್ಯಾಹ್ನ ಈ ಘಟನೆ ಜರುಗಿದ್ದು, ಧರಂಪುರದಿಂದ ನೆರ್ಚೌಕ್‌ನತ್ತ ಸಾಗುತ್ತಿದ್ದ ಆಲ್ಟೋ ಕಾರೊಂದು ಹೀಗೆ ತಡೆ ಗೋಡೆ ಮೇಲೆ ಹೋಗಿ ಕುಳಿತುಬಿಟ್ಟಿದೆ. …

Read More »

ಕನ್ನಡಿಗ ಎಂದು ಪ್ರಕಾಶ್​ ರಾಜ್​ರನ್ನು ಹೊರಗೆ ಇಡುತ್ತಿರುವ ಟಾಲಿವುಡ್​; ‘ನಮ್ಮವನಲ್ಲ’ ಎಂದವರಿಗೆ ನಟನ ಉತ್ತರ ಏನು?

ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟ ಪ್ರಕಾಶ್​ ರಾಜ್​ (ಪ್ರಕಾಶ್​ ರೈ) ಅವರು ಬಹುಭಾಷೆಯಲ್ಲಿ ಫೇಮಸ್​. ಕನ್ನಡ ಮಾತ್ರವಲ್ಲದೆ ಹಿಂದಿ, ಮಲಯಾಳಂ, ತಮಿಳು, ತೆಲುಗಿನಲ್ಲಿಯೂ ಅವರು ನಟಿಸಿ ಗೆದ್ದಿದ್ದಾರೆ. ಅನೇಕ ವರ್ಷಗಳಿಂದ ಅವರು ಟಾಲಿವುಡ್​ ಮಂದಿಗೆ ಚಿರಪರಿಚಿತರು. ಆದರೆ ಈಗ ಏಕಾಏಕಿ ತೆಲುಗು ಚಿತ್ರರಂಗದ ಕೆಲವರು ‘ಪ್ರಕಾಶ್​ ರಾಜ್​ ನಮ್ಮವನಲ್ಲ’ ಎಂದು ಬೊಬ್ಬೆ ಹೊಡೆಯಲು ಆರಂಭಿಸಿದ್ದಾರೆ. ಇದಕ್ಕೆಲ್ಲ ಕಾರಣ ಆಗಿರುವುದು ಒಂದೇ ಒಂದು ಎಲೆಕ್ಷನ್​! ಟಾಲಿವುಡ್​ನ ಮೂವೀ ಆರ್ಟಿಸ್ಟ್​ ಅಸೋಸಿಯೇಷನ್​ (MAA) …

Read More »

ದೇಶಕ್ಕಾಗಿ 28 ಚಿನ್ನದ ಪದಕ ಗೆದ್ದವಳು ರಸ್ತೆ ಬದಿಯಲ್ಲಿ ಚಿಪ್ಸ್​ ಮಾರಾಟ ಮಾಡುತ್ತಿದ್ದಾಳೆ!

ದೇಶಕ್ಕಾಗಿ ಹೋರಾಡುವುದು, ಒಲಿಂಪಿಕ್ಸ್​ನಲ್ಲಿ ಭಾಗವಹಿಸುವುದು ಅನ್ನೋದೆ ಹೆಮ್ಮೆಯ ಸಂಗತಿ. ಎಲ್ಲರಿಗೂ ಈ ಸೇವೆಯ ಮಾಡುವ ಭಾಗ್ಯ ದೊರಕುವುದಿಲ್ಲ. ಆದರೆ ನಿರಂತರ ಪರಿಶ್ರಮ ಮತ್ತು ದೇಶ ಪ್ರೇಮ ಇದ್ದವರಿಗೆ ಮಾತ್ರ ಇದು ಸಾಧ್ಯ. ಅದರೆ ಇಲ್ಲೊಂದು ಘಟನೆ ಮನಸ್ಸನ್ನೇ ಕರಗಿಸುತ್ತೆ. ಕಾರಣ ದೇಶಕ್ಕಾಗಿ 28 ಚಿನ್ನದ ಪದಕ ಗೆದ್ದ ಮಹಿಳೊಬ್ಬರು ಸದ್ಯದ ಜೀವನ ಸಾಗಿಸಲು ರಸ್ತೆ ಬದಿಯಲ್ಲಿ ಚಿಪ್ಸ್​ ಮಾರಾಟ ಮಾಡುತ್ತಿದ್ದಾರೆ!. ದೇಶದ ಮೊದಲ ಪ್ಯಾರಾಶೂಟರ್​ ದಿಲ್ರಾಜ್​ ಕೌರ್​ ಬಗ್ಗೆ ಕೇಳಿರುತ್ತೀರಿ. …

Read More »

ದೆಹಲಿಗೆ ಹಾರಿದ ವಿಜಯೇಂದ್ರ: ಯಡಿಯೂರಪ್ಪ ಭೇಟಿಯಾದ ಭೂಪೇಂದ್ರ ಯಾದವ್!

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಗುರುವಾರ ದೆಹಲಿಗೆ ತೆರಳಿದ್ದಾರೆ. ಅವರ ದಿಢೀರ್‌ ದೆಹಲಿ ಭೇಟಿ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆಕಾರಣವಾಗಿದೆ. ಇತ್ತೀಚೆಗೆ ನಾಯಕತ್ವ ಬದಲಾವಣೆಯ ಕುರಿತು ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ರಾಜ್ಯಕ್ಕೆ ಆಗಮಿಸಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ವರದಿ ನೀಡಿದ್ದಾರೆ ಎಂದು ಹೇಳಲಾಗಿತ್ತು. ಇದೇ ಬೆಳವಣಿಗೆಗಳ ಕುರಿತು ಸಿಎಂ ಯಡಿಯೂರಪ್ಪ …

Read More »