Breaking News
Home / ರಾಜಕೀಯ / ದೇಶಕ್ಕಾಗಿ 28 ಚಿನ್ನದ ಪದಕ ಗೆದ್ದವಳು ರಸ್ತೆ ಬದಿಯಲ್ಲಿ ಚಿಪ್ಸ್​ ಮಾರಾಟ ಮಾಡುತ್ತಿದ್ದಾಳೆ!

ದೇಶಕ್ಕಾಗಿ 28 ಚಿನ್ನದ ಪದಕ ಗೆದ್ದವಳು ರಸ್ತೆ ಬದಿಯಲ್ಲಿ ಚಿಪ್ಸ್​ ಮಾರಾಟ ಮಾಡುತ್ತಿದ್ದಾಳೆ!

Spread the love

ದೇಶಕ್ಕಾಗಿ ಹೋರಾಡುವುದು, ಒಲಿಂಪಿಕ್ಸ್​ನಲ್ಲಿ ಭಾಗವಹಿಸುವುದು ಅನ್ನೋದೆ ಹೆಮ್ಮೆಯ ಸಂಗತಿ. ಎಲ್ಲರಿಗೂ ಈ ಸೇವೆಯ ಮಾಡುವ ಭಾಗ್ಯ ದೊರಕುವುದಿಲ್ಲ. ಆದರೆ ನಿರಂತರ ಪರಿಶ್ರಮ ಮತ್ತು ದೇಶ ಪ್ರೇಮ ಇದ್ದವರಿಗೆ ಮಾತ್ರ ಇದು ಸಾಧ್ಯ. ಅದರೆ ಇಲ್ಲೊಂದು ಘಟನೆ ಮನಸ್ಸನ್ನೇ ಕರಗಿಸುತ್ತೆ. ಕಾರಣ ದೇಶಕ್ಕಾಗಿ 28 ಚಿನ್ನದ ಪದಕ ಗೆದ್ದ ಮಹಿಳೊಬ್ಬರು ಸದ್ಯದ ಜೀವನ ಸಾಗಿಸಲು ರಸ್ತೆ ಬದಿಯಲ್ಲಿ ಚಿಪ್ಸ್​ ಮಾರಾಟ ಮಾಡುತ್ತಿದ್ದಾರೆ!.

ದೇಶದ ಮೊದಲ ಪ್ಯಾರಾಶೂಟರ್​ ದಿಲ್ರಾಜ್​ ಕೌರ್​ ಬಗ್ಗೆ ಕೇಳಿರುತ್ತೀರಿ. ಭಾರತಕ್ಕೆ ಒಂದಲ್ಲಾ.. ಎರಡಲ್ಲಾ.. 28 ಚಿನ್ನದ ಪದಕ ಗೆದ್ದಿದ್ದಾರೆ. ಆದರೀಗ ಜೀವನ ನಿರ್ವಹಣೆಗಾಗಿ ಉತ್ತರಾಖಂಡದ ಡೆಹ್ರಾಡೂನ್​ನ ಗಾಂಧಿ ಪಾರ್ಕ್​​ ಬಳಿ ಬಿಸ್ಕತ್​​ ಮತ್ತು ಚಿಪ್ಸ್​ ಮಾರಾಟ ಮಾಡುತ್ತಿದ್ದಾರೆ. ದಿಲ್ರಾಜ್​ ಕೌರ್​​ 2005ರಲ್ಲಿ ಕ್ರೀಡಾ ಜೀವನ ಪ್ರಾರಂಭಿಸಿದರು. ಸುಮಾರು 15 ವರ್ಷಗಳ ಕಾಲ ಭಾರತವನ್ನು ಪ್ರತಿಸಿಧಿಸಿದರು. ಕಷ್ಟಗಳಿದ್ದರು ಅದನ್ನೆಲ್ಲಾ ಕ್ಯಾರೆ ಅನ್ನದೆ ಹೋರಾಡಿದರು. ರಾಷ್ಟ್ರೀಯ, ಅಂತರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಆದರೀಗ ವಿಕಲ ಅಂಗಗಳ ಜತೆ ಬದುಕುತ್ತಾ ದಿಲ್ರಾಜ್​ ಇವತ್ತು ಕಣ್ಣೀರು ಹಾಕಿಕೊಂಡು ಬದುಕುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ್ದ ದಿಲ್ರಾಜ್​ ಕೌರ್​ ತನ್ನ ಕಣ್ಣೀರ ಕಥೆ ಹಂಚಿಕೊಂಡಿದ್ದಾರೆ. ನಾನು ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ಯಾರಾಶೂಟರ್​​ ಆಗಿ ದೇಶಕ್ಕಾಗಿ ಈವರೆಗೆ 28 ಚಿನ್ನದ ಪದಕ, 8 ಬೆಳ್ಳಿ ಪದಕ ಮತ್ತು 3 ಕಂಚಿನ ಪದಕ ಪಡೆದಿದ್ದೇನೆ. ಆದರೀಗ ಜೀವನ ನಿರ್ವಹಣೆಗಾಗಿ ಬಿಸ್ಕತ್​ ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಇನ್ನು ತನ್ನ ಕಷ್ಟದ ಕುರಿತಾಗಿ ಪ್ಯಾರಾಶೂಟಿಂಗ್​ ಕ್ರೀಡಾ ಇಲಾಖೆಗೆ ತಿಳಿಸಿದಾಗ ಯಾವುದೇ ನೆರವು ಸಿಕ್ಕಿಲ್ಲ. ಯಾವುದಾದರು ಸರ್ಕಾರಿ ಉದ್ಯೋಗ ದೊರಕಿಸಿಕೊಡಿ ಎಂದರು ಕೆಲಸ ಸಿಕ್ಕಿಲ್ಲ ಎಂದು ​​ಬೇಸರ ತೋಡಿಕೊಂಡಿದ್ದಾರೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ